ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಈ ದಿನ ಈ ರಾಶಿಯವರಿಗೆ ಗುರುವಿನಿಂದ ಒಳಿತು

ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ಅಷ್ಟಮಿ ತಿಥಿ, ಪುನಾರ್ವಸು ನಕ್ಷತ್ರ, ಅಕ್ಟೋಬರ್‌ 14ನೇ ತಾರೀ‌ಕಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Horoscope

ಬೆಂಗಳೂರು: ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಕೃಷ್ಣ ಪಕ್ಷದ, ಅಷ್ಠಮಿ ತಿಥಿ, ಅಕ್ಟೋಬರ್ 14ನೇ ತಾರೀಕಿನ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಪುನರ್ವಸು ನಕ್ಷತ್ರದ ಅಧಿಪತಿ ಗುರು ಆಗಿದ್ದಾನೆ. ಹೀಗಾಗಿ ಎಲ್ಲ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ‌. ಮೇಷ ರಾಶಿಯವರು ಮನೆಯ ವಿಚಾರದ ಬಗ್ಗೆ ಮತ್ತು ತಾಯಿಯ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.‌ ಆದರೂ ಮನಸ್ಸಿಗೆ ಸ್ವಲ್ಪ ನೆಮ್ಮದಿ ಇರುತ್ತದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ನಿಮಗೆ ಹೆಚ್ಚಿನ ಗೌರವ ಇಂದು ಪ್ರಾಪ್ತಿಯಾಗಲಿದೆ.‌ ಅಂದುಕೊಂಡದ್ದೆಲ್ಲ ನೆರವೇರಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಅತ್ಯುತ್ತಮ ದಿನವಾಗಲಿದೆ. ಮನೆಯಲ್ಲಿ ಅತೀ ಹೆಚ್ಚಿನ ಸಂತೋಷ ಸಿಗಲಿದ್ದು ಆಧ್ಯಾತ್ಮಿಕ ವಾತಾವರಣ ಇರಲಿದೆ ಮತ್ತು ಶುಭಕಾರ್ಯ ಆಗಲಿದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ. ದೇವಾಲಯ, ದೇವಸ್ಥಾನಗಳಿಗೆ ನೀವು ಭೇಟಿ ನೀಡಬಹುದು‌.‌ ಎಲ್ಲರ ಆಶೀರ್ವಾದ ನಿಮ್ಮ ಮೇಲೆ ಇದೆ ಎನ್ನುವ ಧನ್ಯತಾ ಮನೋಭಾವ ಮೂಡಬಹುದು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟದ ದಿನ. ನಿಮ್ಮ ಮುಖ್ಯವಾದ ಗುರು ವ್ಯಯ ಸ್ಥಾನದಲ್ಲಿ ಇರುವುದರಿಂದ ತೊಂದರೆ ಆಗಬಹುದು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಅದೇ ರೀತಿ ಧನಾಗಮನ ಕೂಡ ಉಂಟಾಗುವ ಸಾಧ್ಯತೆ ಇದೆ.

ಇದನ್ನು ಓದಿ:Vastu Tips: ಮಲಗುವ ಕೋಣೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ತಿಳಿಯುವುದು ಹೇಗೆ?

ತುಲಾ ರಾಶಿ: ತುಲಾ ರಾಶಿಯಲ್ಲಿರುವವರಿಗೆ ಕಾರ್ಯ ಕ್ಷೇತ್ರದಲ್ಲಿ ತೊಂದರೆ ಉಂಟಾಗಲಿದೆ.‌ ಆದರಿಂದ ಎಲ್ಲ ಕೆಲಸನ್ನು ಜವಾಬ್ದಾರಿಯುತವಾಗಿ ನಿಭಾಯಿಸಿಕೊಳ್ಳುವುದು ಒಳ್ಳೆಯದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉತ್ತಮ ದಿನ. ಆದರೂ ಇಂದು ಭಗವಂತನ ಆಶೀರ್ವಾದ ಬಹಳ ಮುಖ್ಯವಾಗುತ್ತದೆ.‌ ನಿಮ್ಮ ಕೆಲಸ ಕಾರ್ಯಗಳನ್ನು ಮುಂಚಿತವಾಗಿಯೇ ಮುಗಿಸುವುದು ಒಳ್ಳೆಯದು. ಹಿರಿಯರ ಆಶೀರ್ವಾದ ಕೂಡ ಇಂದು ಪಡೆದುಕೊಳ್ಳಬೇಕು.

ಧನಸ್ಸು ರಾಶಿ: ಧನಸ್ಸು ರಾಶಿಯವರ ಮನಸ್ಸಿಗೆ ಕ್ಷೇಷ ಇರಲಿದೆ. ಆದ್ದರಿಂದ ಇಂದು ಧ್ಯಾನಾದಿಗಳನ್ನು ಮಾಡುವ ಮೂಲಕ ಸಮಯ ಕಳೆಯಬೇಕು.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನ. ಅದೇ ರೀತಿ ದಾಂಪತ್ಯದಲ್ಲಿ ನೆಮ್ಮದಿ ಸಿಗಲಿದೆ. ಹಾಗೆಯೇ ವ್ಯವಹಾರದಲ್ಲೂ ಒಳ್ಳೆಯದಾಗಲಿದೆ. ಮನಸ್ಸಿಗೆ ಖುಷಿ ನೆಮ್ಮದಿ ಸಿಗಲಿದೆ.

ಕುಂಭರಾಶಿ: ಕುಂಭ ರಾಶಿಯವರಿಗೆ ಒಳ್ಳೆಯ ದಿನ. ನಿಮಗೆ ಗೌರವ ಪ್ರಾಪ್ತಿಯಾಗಲಿದೆ. ನಿಮ್ಮನ್ನು ವಿರೋಧಿಸುವವರನ್ನು ನೀವು ಹಿಮ್ಮಟ್ಟಿಸಲಿದ್ದೀರಿ.

ಮೀನ ರಾಶಿ: ಮೀನ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನ. ಆದರೂ ನಿಮ್ಮ ಬುದ್ದಿ ಶಕ್ತಿ ಹಾಗೂ ಭಕ್ತಿ ಎಲ್ಲವನ್ನೂ ಸಾಧಿಸಬಹುದು.‌

ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ

View all posts by this author