ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ; ವಿಶಾಖ ನಕ್ಷತ್ರದ ಅಧಿಪತಿ ಗುರುವಿನಿಂದ ಯಾವ ರಾಶಿಗೆ ಶುಭ ಫಲವಾಗಲಿದೆ?

ಇಂದು ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ದ್ವಿತೀಯ ತಿಥಿ, ವಿಶಾಖ ನಕ್ಷತ್ರದ ಅಕ್ಟೋಬರ್ 23ನೇ ತಾರೀಖಿನ ಈ ದಿನದಂದು ವಿಶಾಖ ನಕ್ಷತ್ರದ ಅಧಿಪತಿ ಗುರುವು ವಕ್ರಿಯಾಗಿದ್ದು ಈ ದಿನದದಂದು ಬಹುತೇಕ ರಾಶಿಗೆ ಸಾಕಷ್ಟು ವಿಚಾರದಲ್ಲಿ ಗೊಂದಲ ಉಂಟಾಗಲಿದೆ. ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Daily Horoscope

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ದ್ವಿತೀಯ ತಿಥಿ, ವಿಶಾಖ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಮೇಷ ರಾಶಿ ಅವರಿಗೆ ಉತ್ತಮ ದಿನವಾಗಿದೆ‌. ಮನಸ್ಸಿಗೆ ಸಾಕಷ್ಟು ವಿಚಾರದಲ್ಲಿ ನೆಮ್ಮದಿ ಪ್ರಾಪ್ತವಾಗಲಿದೆ. ಅಂದು ಕೊಂಡ ಕೆಲಸ ಕಾರ್ಯಕ್ಕೆ ಸಣ್ಣ ಪುಟ್ಟ ಅಡೆ ತಡೆ ಬರುವ ಸಾಧ್ಯತೆ ಇದೆ. ಕೆಲ ಅನಿರೀಕ್ಷಿತ ಘಟನೆ ಮನಸ್ಸಿಗೆ ಕ್ಲೇಶ ಉಂಟು ಮಾಡಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ‌.‌ ಮನಸ್ಸಿಗೆ ನೆಮ್ಮದಿ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ನಿಮಗೆ ಸಿಗಲಿದೆ. ಅಂದುಕೊಂಡ ಬಹುತೇಕ ಕೆಲಸ ಪೂರ್ಣವಾಗಲಿದೆ. ಈ ದಿನ ಅನ್ಯರಿಂದ ನಿಮಗೆ ಬೇಕಾದ ಸಹಕಾರ ಸಿಗಲಿದೆ. ಆತ್ಮವಿಶ್ವಾಸ ತುಂಬಾ ಚೆನ್ನಾಗಿ ವೃದ್ಧಿಯಾಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ಮಿಶ್ರ ಫಲ ಇರಲಿದೆ. ಅನೇಕ ವಿಚಾರದಲ್ಲಿ ಆಪ್ತರೊಡನೆ ಕ್ಲೇಶ ಉಂಟಾಗಲಿದೆ. ಬಳಿಕ ತಾಳ್ಮೆಯಿಂದ ಯೋಚಿಸಿ ಮುನ್ನಡೆದರೆ ಎಲ್ಲ ಸಮಸ್ಯೆ ಪರಿಹಾರ ಆಗಲಿದೆ. ಸ್ನೇಹಿತರ ಅನಿರೀಕ್ಷಿತ ಆಗಮನ ಮನಸ್ಸಿಗೆ ಖುಷಿ ನೀಡಲಿದ್ದು ಈ ದಿನ ಬಹಳ ಉತ್ತಮವಾಗಿ ಇರಲಿದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಈ ದಿನ ಅತ್ಯುತ್ತಮವಾದ ದಿನವಾಗಿದೆ. ಈ ಹಿಂದೆ ಇದ್ದ ಸಮಸ್ಯೆ ಬಗೆಹರಿಯಲಿದೆ. ಸಂಸಾರ, ಪ್ರೀತಿ ,ಪ್ರೇಮ ಇತ್ಯಾದಿ ವಿಚಾರದಲ್ಲಿ ಸಾಕಷ್ಟು ಗಮನ ಹರಿಸಿ ಮುನ್ನಡೆದರೆ ಉತ್ತಮ. ಯಾವುದೆ ವಿಚಾರವನ್ನು ನಿರ್ಲಕ್ಷಿಸುವ ಮನೋಭವನೆ ಬಿಟ್ಟರೆ ದಿನಾಂತ್ಯಕ್ಕೆ ಶುಭವಾಗಲಿದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಬಹಳ ಉತ್ತಮ ದಿನವಾಗಿದೆ. ಸಿಂಹ ರಾಶಿಯಲ್ಲೇ ಶುಕ್ರ ಪ್ರವೇಶಿಸುವುದರಿಂದ ಶತ್ರುಗಳ ವಿರುದ್ಧ ವಿಜಯ ಪ್ರಾಪ್ತವಾಗಲಿದೆ. ಹೊಸ ಮಿತ್ರರಿಂದ ಸಂತಸದ ದಿನ ಕಳೆಯಲಿದ್ದೀರಿ. ಈ ದಿನ ಬಹಳ ಸಂತೋಷ ನೆಮ್ಮದಿ ನಿಮಗೆ ಪ್ರಾಪ್ತಿಯಾಗಲಿದೆ. ಹಬ್ಬದ ಸಮಯ ವಾದ್ದರಿಂದ ಅನಿರೀಕ್ಷಿತ ವ್ಯಕ್ತಿಗಳ ಆಗಮನ ಮನಸ್ಸಿಗೆ ಖುಷಿ ನೀಡಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಮಿಶ್ರ ಫಲವಿದೆ‌. ಸಂಸಾರ ತಾಪತ್ರಯ ಇತ್ಯಾದಿ ಸಮಸ್ಯೆ ಇರಲಿದೆ. ಮನೆಯಲ್ಲಿ ಸಣ್ಷ ಪುಟ್ಟ ವಿಚಾರಕ್ಕೂ ವೈಮನಸ್ಸು ಮೂಡಲಿದೆ. ಆದರೆ ಯೋಚಿಸಿ ಮುನ್ನಡೆದರೆ ಯಾವುದೆ ಸಮಸ್ಯೆ ಇರಲಾರದು. ಈ ದಿನ ನಿಮ್ಮ ಕೆಲಸ ಕಾರ್ಯಕ್ಕೆ ತೊಡಕಾಲಿದೆ. ವ್ಯಾಪಾರ ವ್ಯವಹಾರದಲ್ಲಿ ಅಧಿಕ ಮುತುವರ್ತಿ ವಹಿಸಿದರೆ ನಷ್ಟ ತಪ್ಪಿಸಬಹುದು.

ತುಲಾ ರಾಶಿ: ತುಲಾದಿನ ಕಾರ್ಯಕ್ಷೇತ್ರದಲ್ಲಿ ಇಂದು ಸ್ವಲ್ಪ ಕಷ್ಟಕರವಾದ ದಿನ ಎಂದು ಹೇಳಬಹುದು.ವ್ಯಾಪಾರ , ವ್ಯವಹಾರ ಹಾಗೂ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಯೋಚಿಸಬೇಕಾದ ಪರಿಸ್ಥಿತಿ ಬರಲಿದೆ. ಸಂಸಾರ, ಸ್ನೇಹಯುತ ಸಂಬಂಧ ವ್ಯವಹಾರದಲ್ಲಿ ಈ ದಿನ ಬಹಳ ಚೆನ್ನಾಗಿ ಇರಲಿದೆ. ಕೆಲವು ಹೊಸ ವ್ಯಾಪಾರ ವ್ಯವಹಾರಕ್ಕೆ ಸದ್ಯಕ್ಕೆ ಹೂಡಿಕೆ ಮಾಡದಿದ್ದರೆ ಉತ್ತಮ.

ಇದನ್ನು ಓದಿ:Vastu Tips: ಶಾಂತಿ, ಸಮೃದ್ಧಿಗಾಗಿ ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸಿ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ದಿನ ಬಹಳ ಅಶುಭವಾದ ದಿನವಾಗಿದೆ. ಮನಸ್ಸಿಗೆ ಅಷ್ಟಾಗಿ ನೆಮ್ಮದಿ ಇರಲಾರದು. ಮುಖ್ಯವಾದ ಕೆಲಸ ಕಾರ್ಯದ ವಿಚಾರದಲ್ಲಿ ಈ ದಿನ ಮಾಡುವುದು ಬಹಳ ತೊಂದರೆ ಉಂಟಾಗಲಿದೆ. ವ್ಯಾಪಾರ, ವ್ಯವಹಾರ , ಕುಟುಂಬ ಸಂಬಂಧಗಳಿಂದ ಅನೇಕ ವಿಚಾರ ದಲ್ಲಿ ಒತ್ತಡ ಇತರ ಸಮಸ್ಯೆ ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳುವುದು ಬೇಡ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಕಷ್ಟಕರವಾದ ದಿನವಾಗಿದೆ. ಈ ದಿನ ಅನಿರೀಕ್ಷಿತ ಧನಾಗಮ ಆಗಲಿದೆ. ಆದರೆ ಕೆಲವಹ ಮಿತ್ರರಿಂದ ಸಂಬಂದ ಹಾಳಾಗಿ ವೈಮನಸ್ಸು ಉಂಟಾಗಲಿದೆ. ಅನಗತ್ಯ ಜಗಳ, ಮನಸ್ಥಾಪ, ಮಾನಹಾನಿಯಾಗುವ ಸಂಭವ ಇದೆ. ಹೀಗಾಗಿ ಆದಷ್ಟು ಜಾಗರೂಕತೆ ಯಿಂದ ಈ ದಿನ ಇರಬೇಕು.

ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಅತ್ಯುತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಕೆಲಸ ಕಾರ್ಯ ಎಲ್ಲವೂ ಈಗ ಸರಾಗವಾಗಿ ಆಗಲಿದೆ. ಹಳೆಯ ವೈಮನಸ್ಸು ಎಲ್ಲವೂ ದೂರಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ದಾಂಪತ್ಯ, ಸ್ನೇಹ ಸಂಬಂಧಗಳು ಇಂದು ಬಹಳ ಚೆನ್ನಾಗಿ ಇರಲಿದೆ. ನಿಮ್ಮ ಪ್ರೀತಿ ಪಾತ್ರ ರೊಂದಿಗೆ ವ್ಯವಹರಿಸಿದ್ದ ಕಾರಣ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಈ ದಿನ ಬೇರೆಯವರ ಸಹಕಾರ ಇದ್ದರೆ ಮಾತ್ರವೇ ನಿಮಗೆ ಭಾಗ್ಯೋದಯವಾಗಲಿದೆ. ಹೀಗಾಗಿ ಯಾರೊಂದಿಗೂ ವೈಮಸ್ಸು ತೋರದೆ ಚೆನ್ನಾಗಿ ಇರುವುದನ್ನು ಕಲಿಯಬೇಕು. ಅನಗತ್ಯ ವೈಮನಸ್ಸು ಗಳು ಉಂಟಾಗಿ ಕುಟುಂಬ , ಸ್ಮೇಹಿತರಿಂದ ಅನಗತ್ಯ ಮಾನಸಿಕ ಹಿಂಸೆ ಆಗಬಹುದು.

ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಮಿಶ್ರ ಫಲ ಇರಲಿದೆ. ಮನಸ್ಸಿಗೆ ಸಾಕಷ್ಟು ಗೊಂದಲ ವಾಗಲಿದೆ. ಮುಖ್ಯ ನಿರ್ಧಾರ ಕೈಗೊಳ್ಳುವುದು ಬೇಡ. ವ್ಯಾಪಾರ ವ್ಯವಹಾರ ಇತರ ಮಾತುಕತೆ ಯಲ್ಲಿ ತುಂಬಾ ಜಾಗರೂಕತೆಯಿಂದ, ವೀವೆಕಯುತವಾಗಿ ವ್ಯವಹರಿಸಬೇಕು. ಹಳೆ ಗೊಂದಲ, ಕ್ಲೇಶಗಳು ಪರಿಹಾರವಾಗಲಿದೆ. ಯೋಗ , ಧ್ಯಾನ ಮಾಡಿ ಮನಸ್ಸನ್ನು ಹತೋಟಿಯಲ್ಲಿಟ್ಟರೆ ಬಹಳಷ್ಟು ಉತ್ತಮ.