Vastu Tips: ಶಾಂತಿ, ಸಮೃದ್ಧಿಗಾಗಿ ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸಿ
ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಈ ಬಾರಿ ಮನೆಗೆ ಸುಖ, ಶಾಂತಿ, ಸಮೃದ್ಧಿಯನ್ನು ಆಹ್ವಾನಿಸಲು ಕೆಲವೊಂದು ಅಶುಭ ವಸ್ತುಗಳನ್ನು ಮನೆಯಿಂದ ದೂರವಿರಿಸಬೇಕು ಹಾಗೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಅಂತಹ ವಸ್ತುಗಳು ಯಾವುದು, ಯಾಕೆ ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

-

ಬೆಂಗಳೂರು: ಕತ್ತಲೆಯಿಂದ ಬೆಳಕಿನೆಡೆಗೆ, ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಪ್ರತಿಬಿಂಬಿಸುವ ಹಬ್ಬ ದೀಪಾವಳಿ (Vastu about deepavali) ಎಂದರೆ ಎಲ್ಲರಿಗೂ ಸಂಭ್ರಮ. ಈ ವೇಳೆ ಮನೆಗೆ (Vastu for home) ಸುಖ, ಶಾಂತಿ, ಸಮೃದ್ಧಿಯನ್ನು ಆಹ್ವಾನಿಸಲು ದೇವಿ ಲಕ್ಷ್ಮೀಯನ್ನು (Vastu for money) ಪೂಜಿಸುವುದು ವಾಡಿಕೆ. ಆದರೆ ಕೆಲವೊಂದು ಅಶುಭ ವಸ್ತುಗಳು ಮನೆಯಲ್ಲಿದ್ದರೆ ಸುಖ, ಶಾಂತಿ, ಸಮೃದ್ಧಿಯನ್ನು ಆಹ್ವಾನಿಸುವುದು ಸಾಧ್ಯವಿಲ್ಲ. ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಮನೆಯಿಂದ ಕೆಲವು ವಸ್ತುಗಳನ್ನು ದೂರವಿರಿಸಬೇಕು ಹಾಗೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎನ್ನುತ್ತಾರೆ ವಾಸ್ತು ತಜ್ಞರು.
ದೀಪಾವಳಿಯಲ್ಲಿ ಲಕ್ಷ್ಮೀಯನ್ನು ಮನೆಗೆ ಆಹ್ವಾನಿಸಲು ಮನೆಯನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಮನೆಯಲ್ಲಿ ಬಳಕೆಯಾಗದ ಅಥವಾ ಅನಗತ್ಯ ವಸ್ತುಗಳಿದ್ದರೆ ಅವುಗಳನ್ನು ತೆಗೆದುಹಾಕಿ. ಮನೆಯ ಪ್ರತಿಯೊಂದು ಮೂಲೆಗಳನ್ನು ಚೆನ್ನಾಗಿ ಗುಡಿಸಿ.
ಮುರಿದ ಪಾತ್ರೆಗಳು, ಗಡಿಯಾರ, ಕನ್ನಡಿ ಅಥವಾ ಪೀಠೋಪಕರಣಗಳಿದ್ದರೆ ಅದು ಮನೆಗೆ ಅಶುಭ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಅದನ್ನು ಮನೆಯಿಂದ ಹೊರಗೆ ಹಾಕುವುದು ಒಳ್ಳೆಯದು. ಆರ್ಥಿಕ ತೊಂದರೆಗಳನ್ನು ಆಹ್ವಾನಿಸುವ ಈ ವಸ್ತುಗಳನ್ನು ಸಾಧ್ಯವಾದರೆ ದುರಸ್ತಿ ಮಾಡಲು ಕೊಡಿ. ಹೊರಗೆ ಹಾಕಿ.
ಮುಳ್ಳಿನ ಗಿಡಗಳು ಮನೆಯೊಳಗೆ ಇದ್ದರೆ ಅದನ್ನು ತೆಗೆದುಹಾಕುವುದು ಒಳ್ಳೆಯದು. ಸಾಮಾನ್ಯವಾಗಿ ಮನೆಯಲ್ಲಿ ಇರಿಸಲಾಗುವ ಪಾಪಾಸುಕಳ್ಳಿಯಂತಹ ಮುಳ್ಳು ಸಸ್ಯಗಳನ್ನು ದೀಪಾವಳಿ ಹಬ್ಬದ ವೇಳೆ ಲಕ್ಷ್ಮೀ ದೇವಿಯನ್ನು ಆಹ್ವಾನಿಸಲು ಮನೆಯಿಂದ ದೂರ ಇಡುವುದು ಉತ್ತಮ. ಮುಳ್ಳಿನ ಸಸ್ಯಗಳು ಘರ್ಷಣೆಗಳನ್ನು ಉಂಟು ಮಾಡುತ್ತದೆ. ಕುಟುಂಬದ ಸಾಮರಸ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರ ಬದಲಾಗಿ ತುಳಸಿ, ಮನಿ ಪ್ಲಾಂಟ್ ಗಳಂತಹ ಅದೃಷ್ಟ ಸಸ್ಯಗಳನ್ನು ಇರಿಸಬಹುದು.
ಇದನ್ನೂ ಓದಿ: Vastu Tips: ಮನೆಯಲ್ಲಿ ಖಾಲಿ ಬಿಡಬಾರದ ಸ್ಥಳ ಯಾವುದು, ಏಕೆ ಗೊತ್ತೇ?
ಯುದ್ಧ, ದುಃಖದ ಅಥವಾ ಹಿಂಸೆಯನ್ನು ಪ್ರತಿಬಿಂಬಿಸುವ ಚಿತ್ರಗಳು, ವಿಗ್ರಹಗಳು ಮನೆಯಲ್ಲಿದ್ದರೆ ಅವುಗಳನ್ನು ತೆಗೆದು ಹಾಕಿ. ಇವು ಮನಸ್ಸಿನ ಶಾಂತಿಯನ್ನು ಭಂಗಗೊಳಿಸುತ್ತವೆ. ಇವುಗಳ ಬದಲಿಗೆ ಶಾಂತ ಮತ್ತು ಆಧ್ಯಾತ್ಮಿಕ ಚಿತ್ರಗಳನ್ನು ಅಳವಡಿಸಿ.
ದೀಪಾವಳಿ ಆಚರಣೆ ವೇಳೆ ಆಹಾರ ಧಾನ್ಯಗಳ ಡಬ್ಬಿ, ಪಾತ್ರೆಗಳು, ಬೀರುಗಳಲ್ಲಿ ವಸ್ತುಗಳನ್ನು ತುಂಬಿ ಇಡಿ. ಇವುಗಳನ್ನು ಖಾಲಿಯಾಗಿರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಇವುಗಳು ತುಂಬಿದ್ದರೆ ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ಇದರಿಂದ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ ಎನ್ನಲಾಗುತ್ತದೆ.
ಇದನ್ನೂ ಓದಿ: Vastu Tips: ಜೀವನದ ಪ್ರಗತಿಯನ್ನು ನಿರ್ಧರಿಸುತ್ತದೆ ಕೈ ಗಡಿಯಾರ
ಮನೆಯ ಒಳಗೆ, ಹೊರಗೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಎಲ್ಲಾದರೂ ಜೇಡರ ಬಲೆಗಳು ಇದ್ದರೆ ತೆಗೆದು ಹಾಕಿ. ಕಸದ ರಾಶಿಗಳಿದ್ದರೆ ವಿಲೇವಾರಿ ಮಾಡಿ. ಇದು ಮನೆಗೆ ಸಮೃದ್ಧಿಯನ್ನು ಬರದಂತೆ ತಡೆಯುತ್ತದೆ.
ದೀಪಾವಳಿ ಹಬ್ಬದ ವೇಳೆ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ಸಿಹಿ ಕೊಡಲು ಮರೆಯದಿರಿ. ಇದು ಲಕ್ಷ್ಮೀ ದೇವಿಯನ್ನು ಸಂತುಷ್ಟಿಗೊಳಿಸುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ವೃದ್ಧಿಯಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.