ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಕುಜ ವೃಶ್ಚಿಕ‌ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದು ಈ ರಾಶಿಗೆ ಭಾರೀ ಒಳಿತಾಗಲಿದೆ!

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ಪಂಚಮಿ ತಿಥಿ, ಮೂಲ ನಕ್ಷತ್ರದ ಅಕ್ಟೋಬರ್ 27 ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾ ಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ಮೂಲ ನಕ್ಷತ್ರದ ಈ ದಿನ ಕುಜ ವೃಶ್ಚಿಕ‌ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದಾನೆ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಮೇಷರಾಶಿ ಅವರಿಗೆ ನಿಮ್ಮ‌ ಸ್ಪಷ್ಟ ಸ್ಥಾನವನ್ನು ಬಿಟ್ಟು ಸಪ್ತಮ ಸ್ಥಾನಕ್ಕೆ ಕುಜ ಬರ್ತಾ ಇರುವುದರಿಂದ ಮುಖ್ಯವಾದ ಬಿಸೆನೆಸ್ ವ್ಯವಹಾರದಲ್ಲಿ ಒಡಕು ಉಂಟಾಗಬಹುದು. ನಿಮ್ಮ ಸಂಬಂಧ ಗಳಲ್ಲಿ ಸ್ವಲ್ಪ ತೊಂದರೆ ಆಗಬಹುದು.‌ ಜನಗಳ ಜೊತೆ ಬೆರೆಯುವಾಗ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನ ವಾಗಿದೆ‌.‌ ಸಾಮಾಜಿಕ ವ್ಯವಹಾರದಲ್ಲಿ ನೀವು ಮುನ್ನಡೆಯನ್ನು ಕಾಣುತ್ತೀರಿ. ನಿಮ್ಮ ಕೆಲಸ ಕಾರ್ಯಗಳಿಗೆ ಯಾವುದೇ ಅಡೆತಡೆಗಳು ಬರುವುದಿಲ್ಲ.‌ ಆದರೆ ವಾಹನಗಳಲ್ಲಿ ಪ್ರಯಾಣ ಮಾಡುವಾಗ ಜಾಗರೂಕತೆಯಿಂದ ಪ್ರಯಾಣ ಮಾಡಬೇಕು.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ಕಷ್ಟಕರವಾದ ದಿನವಾಗಿದೆ. ಪ್ರೀತಿ,ಪ್ರೇಮ ಹಾಗೂ ಹಣಕಾಸಿನ ವಿಚಾರದಲ್ಲಿ ಕುಜ ನಿಮಗೆ ತೊಂದರೆ ಉಂಟು ಮಾಡಬಹುದು.‌ ಬೆಸೆನೆಸ್ ವ್ಯವಹಾರದಲ್ಲಿ ಇರುವವರಿಗೂ ಲಾಸ್ ಆಗುವ ಸಾಧ್ಯತೆ ಇರಲಿದೆ. ಹಾಗಾಗಿ ಹುಷಾರಾಗಿ ಕೆಲಸ ಕಾರ್ಯಗಳನ್ನು ಮಾಡಬೇಕಾಗುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಚತುರ್ಥ ಭಾವಕ್ಕೆ ಕುಜ ಬರುತ್ತಿದ್ದಾನೆ.‌ ಇದರಿಂದ ಆಸ್ತಿ ಪಾಸ್ತಿ ಹಾಗೂ ಹಣಕಾಸಿನ ವಿಚಾರದಲ್ಲಿ ತೊಂದರೆ ಆಗಬಹುದು.‌ ನೀವು ವಾಸ ಮಾಡುವ ಮನೆ ಹಾಗೂ ಜನಗಳಿಂದ ಜಾಗರೂಕತೆಯಿಂದ ಇರಬೇಕಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕುಜ ತೃತೀಯ ಭಾವಕ್ಕೆ ಪ್ರವೇಶ ಮಾಡ್ತಾ ಇದ್ದಾನೆ.‌ ಹೀಗಾಗಿ ನಿಮಗೆ ಆತ್ಮವಿಶ್ವಾಸ ತುಂಬಾ ಹೆಚ್ಚಾಗಿ ಇರಲಿದೆ. ಅದೇ ರೀತಿ ಸಾಮಾಜಿಕ ಕೆಲಸದಲ್ಲಿ ಗೆಲುವು ಸಿಗಲಿದೆ.‌ ಸಂಬಂಧಿಕರು- ಬಂಧು ವರ್ಗದವರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸೋಷಿಯಲ್ ಮೀಡಿಯಾ, ಟಿವಿ,ರೇಡಿಯೋ ಇತ್ಯಾದಿ ಕೆಲಸ ಮಾಡೋರಿಗೂ ಉತ್ತಮ ಸಮಯವಾಗಿದೆ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಮನೆಯಲ್ಲಿ ಸ್ವಲ್ಪ ಕಿರಿ ಕಿರಿ ಉಂಟಾಗಬಹುದು.‌ ಅದರ ಜೊತೆ ಹಣದ ತೊಂದರೆಯೂ ಕಾಡಬಹುದು. ನಿಮ್ಮ ಸಂತೋಷಕ್ಕೆ ಬೇರೆಯವರಿಂದ ದಕ್ಕೆ ಬರಬಹುದು.‌ ಆದರೆ ಎಲ್ಲರ ಜೊತೆ ವಿನಯತೆಯಿಂದ ವರ್ತಿಸಬೇಕು.

ಇದನ್ನು ಓದಿ:Vastu Tips: ಮಕ್ಕಳ ಗಮನದ ಮೇಲೆ ಪರಿಣಾಮ ಬೀರುವ ಸಣ್ಣ ತಪ್ಪು ಯಾವುದು ಗೊತ್ತೇ?

ತುಲಾ ರಾಶಿ: ತುಲಾ ರಾಶಿ ಅವರಿಗೆ ಎರಡುವರೆ ವರ್ಷಗಳ ನಂತರ ಕುಜ ನಿಮ್ಮ ರಾಶಿಗೆ ಬರ್ತಾ ಇದ್ದಾನೆ.‌ ಇದರಿಂದ ನಿಮಗೆ ಕೋಪ, ಮುಂಗಾಪ ಹೆಚ್ಚಾಗಬಹುದು. ಬಹಳ ಸಮಾಧಾನದಿಂದ ನೀವು ಇರಬೇಕಾಗುತ್ತದೆ. ಮಿತೃತ್ವದಲ್ಲಿ ಒಡಕು ಕೂಡ ಉಂಟಾಗಬಹುದು.‌

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಎರಡು ವರ್ಷಗಳ ನಂತರ ಕುಜ ವ್ಯಯ ಭಾವಕ್ಕೆ ಬರ್ತಾ ಇದ್ದಾನೆ. ಹೀಗಾಗಿ ನಿಮಗೆ ಆರೋಗ್ಯದಲ್ಲಿ ಏರು ಪೇರು ಆಗಬಹುದು. ಆರ್ಥಿಕ ತೊಂದರೆ ಕೂಡ ನೀವು ಎದುರಿಸಬೇಕಾಗಬಹುದು.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಉತ್ತಮ ದಿನವಾಗಿದೆ. ಇಷ್ಟಾರ್ಥ ಸಿದ್ದಿ ಯಾಗಲಿದ್ದು ಧನ ಆಗಮನ ಕೂಡ ಆಗಲಿದೆ. ಮಿತ್ರರಿಂದಲೂ ನಿಮಗೆ ಒಳಿತು ಆಗಲಿದೆ. ಗುಂಪು ಕೆಲಸದಿಂದ ಯಶಸ್ಸು ಸಿಗಲಿದೆ.

ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಅತ್ಯುತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಅದೇ ರೀತಿ ಧನಾಗಮನ ವಾಗಲಿದೆ. ನಿಮ್ಮ ಅಂದು ಕೊಂಡ ಕೆಲಸ ಕಾರ್ಯ ಎಲ್ಲವೂ ಈಗ ಸರಾಗವಾಗಿ ಆಗಲಿದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಉತ್ತಮವಾಗಿದೆ. ಬೇರೆಯವರ ಅಕ್ಕರೆ, ಸಹಕಾರ ಎಲ್ಲವೂ ನಿಮಗೆ ಪ್ರಾಪ್ತಿ ಯಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಭಾಗ್ಯೋದಯವಾದ ದಿನ ವಾಗಲಿದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಕುಜ ನಿಮ್ಮ ಅಷ್ಟಮ ಸ್ಥಾನ ಕ್ಕೆ ಬರಲಿದ್ದಾನೆ‌‌. ಲೌಕಿಕ ಫಲಗಳು ಇಂದು ದೊರೆ ಯುವುದಿಲ್ಲ.ಆದರೆ ಆಧ್ಯಾತ್ಮಿಕ ವಾಗಿ ನೀವು ಯಶಸ್ಸು ಅನ್ನು ಕಾಣುತ್ತೀರಿ.