ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮಕ್ಕಳ ಗಮನದ ಮೇಲೆ ಪರಿಣಾಮ ಬೀರುವ ಸಣ್ಣ ತಪ್ಪು ಯಾವುದು ಗೊತ್ತೇ?

ಮನೆಯಲ್ಲಿ ನಾವು ಇಡುವ ಕೆಲವೊಂದು ವಸ್ತುಗಳು ಸರಿಯಾದ ಸ್ಥಳದಲ್ಲಿ ಇಲ್ಲದೇ ಇದ್ದರೆ ಅದರ ನಕಾರಾತ್ಮಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಈಗ ಎಲ್ಲರ ಮನೆಯಲ್ಲೂ ಇನ್ವರ್ಟರ್ ಇದೆ. ವಿದ್ಯುತ್ ಬೆಳಕಿನ ಕಡಿತವನ್ನು ತಪ್ಪಿಸಲು ನಾವು ಇಡುವ ಇನ್ವರ್ಟರ್ ಮಕ್ಕಳ ಮೇಲೆ ಪರಿಣಾಮ ಬಿರುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಈ ಬಗ್ಗೆ ವಾಸ್ತು ಶಾಸ್ತ್ರ ಹೇಳುವುದೇನು? ಇಲ್ಲಿದೆ ಮಾಹಿತಿ.

ಇನ್ವರ್ಟರ್‌ನಿಂದ  ಮಕ್ಕಳ ಗಮನದ ಮೇಲೆ ದುಷ್ಪರಿಣಾಮ

-

ಬೆಂಗಳೂರು: ಮನೆಯಲ್ಲಿ (Vastu for home) ಶಾಂತಿ, ಸಾಮರಸ್ಯ ಇರಬೇಕು ಎಂಬುದು ಎಲ್ಲರ ಬಯಕೆ. ಕುಟುಂಬದ ಪ್ರತಿಯೊಬ್ಬ ಸದಸ್ಯರು ತಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕು ಎಂದು ಬಯಸುತ್ತೇವೆ. ಆದರೆ ಕೆಲವೊಮ್ಮೆ ಮನೆಯಲ್ಲಿ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಜೀವನದಲ್ಲಿ ಸಮೃದ್ಧಿ ಮತ್ತು ಯಶಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ವಿದ್ಯುತ್ ಬೆಳಕಿನ ಕಡಿತದಿಂದ ಉಂಟಾಗುವ ಸಮಸ್ಯೆಯನ್ನು ತಪ್ಪಿಸಲು ಈಗ ಪ್ರತಿಯೊಂದು ಮನೆಯಲ್ಲೂ ಇನ್ವರ್ಟರ್ (Vastu for Inverter) ಇದ್ದೇ ಇರುತ್ತದೆ. ಆದರೆ ಇದು ಮನೆಯಲ್ಲಿರುವ ಮಕ್ಕಳ ಗಮನದ ಮೇಲೆ ಪರಿಣಾಮ ಬಿರುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎನ್ನುತ್ತಾರೆ ವಾಸ್ತು (vastu shastra) ತಜ್ಞರು.

ಮನೆಯ ಪ್ರತಿಯೊಂದು ದಿಕ್ಕು ಕೂಡ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಉತ್ತರ ದಿಕ್ಕು ಸಂಪತ್ತನ್ನು ಪ್ರತಿನಿಧಿಸುವಂತೆ ಪೂರ್ವ ದಿಕ್ಕು ಸಕಾರಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಪಶ್ಚಿಮ ಮತ್ತು ನೈಋತ್ಯ ದಿಕ್ಕು ಶಿಕ್ಷಣ ಮತ್ತು ಉಳಿತಾಯದೊಂದಿಗೆ ಸಂಬಂಧ ಹೊಂದಿದೆ. ಹೀಗಾಗಿ ಈ ದಿಕ್ಕಿನಲ್ಲಿ ಇರಿಸುವ ವಸ್ತುಗಳ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ.

ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ತಪ್ಪಾದ ಸ್ಥಳದಲ್ಲಿ ಇರಿಸುವುದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳ ಅಧ್ಯಯನಕ್ಕೂ ತೊಂದರೆಯಾಗಬಹುದು. ವಿದ್ಯುತ್ ಬೆಳಕಿನ ಅನುಕೂಲಕ್ಕಾಗಿ ಬಳಸುವ ಇನ್ವರ್ಟರ್ ಅನ್ನು ಈ ವಲಯದಲ್ಲಿ ಇರುವುದರಿಂದ ಸಾಕಷ್ಟು ತೊಂದರೆ ಎದುರಾಗಬಹುದು. ಶಿಕ್ಷಣ, ವೃತ್ತಿ ಕ್ಷೇತ್ರದಲ್ಲಿ ಬೆಳವಣಿಗೆ ಮತ್ತು ಪ್ರಗತಿಗೆ ಅಡ್ಡಿಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಪಶ್ಚಿಮ ಮತ್ತು ನೈಋತ್ಯ ದಿಕ್ಕಿನಲ್ಲಿ ಇನ್ವರ್ಟರ್ ಇರಿಸುವುದರಿಂದ ಉಳಿತಾಯದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ ಪಶ್ಚಿಮ ಮತ್ತು ನೈಋತ್ಯ ದಿಕ್ಕಿನ ವಲಯವು ಉಳಿತಾಯಕ್ಕೆ ಸಂಬಂಧಿಸಿದೆ. ಇಲ್ಲಿ ಇನ್ವರ್ಟರ್ ಇಡುವುದರಿಂದ ಹಣಕ್ಕೆ ಸಂಬಂಧಿಸಿದ ಸಕಾರಾತ್ಮಕ ಶಕ್ತಿ ಬರಿದಾಗುತ್ತದೆ. ವೆಚ್ಚಗಳು ಹೆಚ್ಚಾಗಿ ಹಣಕಾಸಿನ ಒತ್ತಡ ಮತ್ತು ಅಸಮತೋಲನವನ್ನು ಉಂಟುಮಾಡುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಇದು ಪರಿಣಾಮ ಬೀರುತ್ತದೆ. ಪಶ್ಚಿಮ ಮತ್ತು ನೈಋತ್ಯ ದಿಕ್ಕು ಶಿಕ್ಷಣ ಮತ್ತು ಏಕಾಗ್ರತೆಯೊಂದಿಗೆ ಸಂಬಂಧ ಹೊಂದಿದೆ. ಇಲ್ಲಿ ಇರಿಸಲಾಗಿರುವ ಭಾರವಾದ ವಿದ್ಯುತ್ ವಸ್ತುಗಳು ಮಕ್ಕಳ ಗಮನದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ದೀರ್ಘಕಾಲ ಅಧ್ಯಯನ ಮಾಡಿದರೂ ಸಹ ಅವರು ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ.

ಸಂಬಂಧಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಪಶ್ಚಿಮ ಮತ್ತು ನೈಋತ್ಯ ದಿಕ್ಕು ಜೀವನದಲ್ಲಿ ಹೊಂದಾಣಿಕೆಯನ್ನು ಪ್ರತಿನಿಧಿಸುತ್ತದೆ. ಈ ದಿಕ್ಕಿನಲ್ಲಿ ಇನ್ವರ್ಟರ್ ಇರಿಸುವುದರಿಂದ ಕಷ್ಟಕಾಲದಲ್ಲಿ ಕುಟುಂಬ ಸದಸ್ಯರಿಂದ ಬೆಂಬಲದ ಕೊರತೆಯನ್ನು ಎದುರಿಸಬೇಕಾಗಬಹುದು. ಇದರಿಂದ ಕೆಲಸದ ಜೀವನ ಮತ್ತು ವ್ಯವಹಾರಗಳ ಪ್ರಗತಿ ನಿಧಾನವಾಗುವುದು. ನಂಬಿಕೆ, ಸಹಕಾರ ಕಡಿಮೆಯಾಗುವುದು.

ಏನು ಮಾಡಬೇಕು?

ಇನ್ವರ್ಟರ್ ಅನ್ನು ಮನೆಯ ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಇರಿಸಿದ್ದರೆ ಅದನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಿ. ಇದಕ್ಕೆ ಸೂಕ್ತವಾದ ಜಾಗವೆಂದರೆ ಮನೆಯ ಈಶಾನ್ಯ ಅಥವಾ ಆಗ್ನೇಯ ವಲಯವಾಗಿದೆ.

ಇದನ್ನೂ ಓದಿ: Vastu Tips: ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು ಯಾಕೆ ಗೊತ್ತೇ?

ಒಂದು ವೇಳೆ ಸ್ಥಳಾಂತರಿಸಲು ಸಾಧ್ಯವಾಗದಿದ್ದರೆ ಇನ್ವರ್ಟರ್ ಬಳಿ ಸಣ್ಣ ಹಿತ್ತಾಳೆ ಅಥವಾ ತಾಮ್ರದ ಪಿರಮಿಡ್ ಅಥವಾ ನೀಲಿ ಸ್ಫಟಿಕ ಚೆಂಡನ್ನು ಇರಿಸಿ. ಗೋಡೆಗೆ ತಿಳಿ ಕಂದು ಅಥವಾ ಬಿಳಿ ಬಣ್ಣಗಳನ್ನು ಬಳಿಯಿರಿ. ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಇದರಿಂದ ಮನೆಯಲ್ಲಿ ಶಕ್ತಿಯ ಸಮತೋಲನವನ್ನು ಮಾಡಿಕೊಳ್ಳಬಹುದು.