ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Astro Tips: ಶನಿವಾರ ಆಂಜನೇಯನಿಗೆ ಈ ವಸ್ತುಗಳನ್ನು ಅರ್ಪಿಸಿ, ನಿಮ್ಮ ಕಷ್ಟಗಳೆಲ್ಲ ಪರಿಹಾರಗೊಳ್ಳುತ್ತವೆ!

ಶನಿವಾರ ಆಂಜನೇಯನ ಆರಾಧನೆಯ ದಿನ. ಈ ದಿನ ಹನುಮಾನ್ ಪೂಜೆ ಮಾಡುವುದರಿಂದ, ವಾಯುಪುತ್ರನ ಮಂತ್ರಗಳ ಪಠಣದಿಂದ ಆತನ ಅನುಗ್ರಹವನ್ನು ಪಡೆದುಕೊಳ್ಳಬಹುದು. ಶನಿವಾರ ಆಂಜನೇಯನ ಯಾವ ಮಂತ್ರಗಳನ್ನು ಪಠಿಸಬೇಕು? ಏನು ಮಾಡಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ಮಾಹಿತಿ ಇಲ್ಲಿದೆ.

ಹನುಮಾನ್ ದೇವರು

ಬೆಂಗಳೂರು: ಶನಿವಾರ (Saturday) ಆಂಜನೇಯ ಸ್ವಾಮಿಗೆ(Lord Anjaneya) ಅರ್ಪಿತವಾದ ದಿನ. ಈ ದಿನ ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ವಾಯು ಪುತ್ರನನ್ನು ವಿವಿಧ ರೀತಿಯಲ್ಲಿ ಪೂಜಿಸಲಾಗುತ್ತದೆ. ಇಂದು, ಹನುಮಾನ್ ಸ್ವಾಮಿಯ ಆಶೀರ್ವಾದವನ್ನು ಪಡೆಯಲು ಕೆಲವು ಶಕ್ತಿಶಾಲಿ ಪರಿಹಾರಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಸಂಪತ್ತು ಮತ್ತು ಸಮೃದ್ಧಿಗಾಗಿ ಅಂಜನಿ ಪುತ್ರನನ್ನು ಮೆಚ್ಚಿಸಲು ಈ ಪರಿಹಾರಗಳನ್ನು ಮಾಡಿ. ಇದಲ್ಲದೆ, ಇದಲ್ಲದೇ ಭಜರಂಗಿಗೆ ಲಡ್ಡು ಮತ್ತು ಬೆಣ್ಣೆಯನ್ನು ನೈವೇದ್ಯವಾಗಿ ಅರ್ಪಿಸಬೇಕು.


ಈ ದಿನ ಕೆಲವು ಪರಿಹಾರಗಳನ್ನು ತೆಗೆದುಕೊಂಡರೆ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯು ನೆಲೆಯಾಗುತ್ತದೆ ಎಂದು ಹೇಳಲಾಗಿದೆ.ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಮತ್ತು ಅದನ್ನು ಪರಿಹರಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಈ ನಿಯಮಗಳನ್ನು ಪಾಲಿಸಿ.

ಹಾಗಾದ್ರೆ ಶನಿವಾರದಂದು ಹನುಮಾನ್‌ ದೇವರನ್ನು ಸಂತೃಪ್ತಿಗೊಳಿಸಲು ನಾವು ಯಾವ ಪರಿಹಾರ (Astro Tips) ಮಾಡಬೇಕು..? ಯಾವ ನಿಯಮ ಪಾಲಿಸಬೇಕು..? ಎಂಬ ಮಾಹಿತಿ ಇಲ್ಲಿದೆ.

ಹನುಮಾನ್ ಚಾಲೀಸಾ ಪಠಿಸಿ
ಶನಿವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸಾವನ್ನು 11 ಬಾರಿ ಪಠಿಸಿ. ಗುಲಾಬಿ ಹಾರವನ್ನು ಅರ್ಪಿಸಿ, ಮಲ್ಲಿಗೆ ಎಣ್ಣೆ ದೀಪ ಹಚ್ಚಿ ಹೀಗೆ ಮಾಡುವುದರಿಂದ, ಹನುಮಂತನ ವಿಶೇಷ ಅನುಗ್ರಹವನ್ನು ಪಡೆಯಬಹುದು. ಜೊತೆಗೆ ನಿಮ್ಮ ಮೇಲೆ ದುಷ್ಟ ಶಕ್ತಿ ದೃಷ್ಟಿ ಬೀಳದಂತೆ ಕಾಯುತ್ತದೆ.

ಅರಳಿ ಎಲೆಗಳನ್ನು ಅರ್ಪಿಸಿ
ನೀವು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರೆ ಶನಿವಾರದಂದು ಆಂಜನೇಯ ಸ್ವಾಮಿಗೆ 11 ಅರಳಿ ಮರದ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ಬಳಿಕ ಅದರ ಮೇಲೆ ಸಿಂಧೂರದಿಂದ ಶ್ರೀರಾಮ ಎಂದು ಬರೆಯಿರಿ. ಹೀಗೆ ಹನ್ನೊಂದು ಎಲೆಗಳ ಮೇಲೆಯೂ ಬರೆದು ಮಾಲೆ ಮಾಡಿ ಅಂಜನಿ ಪುತ್ರನಿಗೆ ಅರ್ಪಿಸಿ. ಈ ಪರಿಹಾರ ಕ್ರಮವನ್ನು ಮಾಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಲಿದ್ದು, ಸಂಪತ್ತು ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ.

ಈ ಸುದ್ದಿಯನ್ನು ಓದಿ: Vastu Tips: ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಿದರೆ ಒಳ್ಳೆಯದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ


ಸಾಸಿವೆ ಎಣ್ಣೆ
ಶನಿವಾರದಂದು ಹನುಮಾನ್ ಸ್ವಾಮಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸುವುದರಿಂದ ಶೀಘ್ರವಾಗಿ ಅವನ ಕೃಪೆಗೆ ಪಾತ್ರರಾಗ ಬಹುದಾಗಿದ್ದು, ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.

ಸಿಂಧೂರ
ಹನುಮನಿಗೆ ತುಂಬಾ ಪ್ರಿಯವಾದ ವಸ್ತುಗಳಲ್ಲಿ ಸಿಂಧೂರ ತುಂಬಾ ಪ್ರಿಯವಾದ ವಸ್ತುವಾಗಿದ್ದು ಆಂಜನೇಯ ಸ್ವಾಮಿಗೆ ಶನಿವಾರದಂದು ಸಿಂಧೂರವನ್ನು ಅರ್ಪಿಸುವುದರಿಂದ ಶೀಘ್ರವಾಗಿ ಅವನ ಅನುಗ್ರಹವನ್ನು ಪಡೆಯಬಹುದಾಗಿದ್ದು, ಈ ಪರಿಹಾರದಿಂದ, ನಿಮ್ಮ ಕೆಲಸದಲ್ಲಿನ ಪ್ರತಿಯೊಂದು ಅಡಚಣೆಯು ಸುಲಭವಾಗಿ ನಿವಾರಣೆಯಾಗುತ್ತದೆ.

ಈ ಮಂತ್ರಗಳನ್ನು ಅರ್ಪಿಸಿ

1. ಓಂ ಹಂ ಹನುಮತೇ ನಮಃ

2. ಅತುಲಿತಬಲಧಾಮಂ ಹೇಮಶೈಲಾಭದೇಹಂ ದನುಜವನಕೃಶಾನುಂ ಜ್ಞಾನಿನಾಮಗ್ರಗಣ್ಯಮ್‌|

3.ಸಕಲಗುಣನಿಧಾನಂ ವಾನರಾಣಾಮಧೀಶಂ ರಘುಪತಿಪ್ರಿಯಭಕ್ತಂ ವಾತಜಾತಂ ನಮಾಮಿ||

4. "ಓಂ ಅಂಜನಿಸುತಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ತನ್ನೋ ಮಾರುತಿ ಪ್ರಚೋದಯಾತ್‌"

5. ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ

6. ಮನೋಜವಂ ಮರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಂ ವರಿಷ್ಠಮ್ ।

ವಾತಾತ್ಮಜಂ ವಾನರಯೂತಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ॥