ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಈ ಎಲ್ಲ ರಾಶಿಯವರಿಗೆ ಇಂದು ಅದೃಷ್ಟ ಖುಲಾಯಿಸಲಿದೆ

ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ಪಂಚಮಿ ತಿಥಿ ಭರಣಿ ನಕ್ಷತ್ರದ ಇಂದಿನ ಅಧಿಪತಿ ಶುಕ್ರ. ಸೆಪ್ಟೆಂಬರ್‌12ನೇ ತಾರೀಖಿನ ಈ ದಿನದ ‌ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Daily Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ಭರಣಿ ನಕ್ಷತ್ರದ ಇಂದು (ಸೆಪ್ಟೆಂಬರ್‌ 12) ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ (Daily Horoscope) ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಈ ರಾಶಿಯಲ್ಲೇ ಚಂದ್ರ ಇರುವುದರಿಂದ ಯಾವ ರೀತಿಯಲ್ಲಿ ಇತರರ ಜತೆ ಹೊಂದಿಕೊಳ್ಳುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ಅದೇ ರೀತಿ ಎರಡು ದಿನಗಳ ಹಿಂದೆ ಇದ್ದ ನೋವು, ಕಷ್ಟ ಎಲ್ಲವೂ ಪರಿಹಾರವಾಗಲಿದೆ. ಆದರೂ ಕೂಡ ಯಾವ ರೀತಿ ವ್ಯವಹಾರ ಮಾಡುತ್ತೀರಿ ಅನ್ನುವುದು ಮುಖ್ಯವಾಗುತ್ತದೆ.

ವೃಷಭ ರಾಶಿ: ವೃಷಭ ರಾಶಿಯಲ್ಲಿರುವವರಿಗೆ‌ ಇಂದು ಸ್ವಲ್ಪ ಕಷ್ಟದ ದಿನ ಆಗಲಿದೆ. ಇಂದು ಯಾವುದೇ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ. ನಿಮ್ಮ ಮಿತೃತ್ವಗಳಲ್ಲಿ ಕೂಡ ಒಡಕು ಉಂಟಾಗಬಹುದು.‌ ಮುಖ್ಯವಾದ ಇಮೇಲ್ ರವಾನೆ, ಸಂದೇಶ ಕಳುಹಿಸುವುದು ಯಾವುದಕ್ಕೂ ಇವತ್ತು ‌ಉತ್ತಮ ದಿನವಲ್ಲ. ನಾಳೆ ಮುಖ್ಯವಾದ ಕೆಲಸಗಳನ್ನು ಪೂರ್ಣಗೊಳಿಸಿ.

ಮಿಥುನ ರಾಶಿ: ಮಿಥುನ ರಾಶಿಯವರಿಗೂ ಇಂದು ಉತ್ತಮ ದಿನವಾಗಲಿದ್ದು ಇಷ್ಟಾರ್ಥ ಸಿದ್ಧಿಯಾಗಲಿದೆ. ಗುಂಪು ಕೆಲಸಗಳಿಂದ ನಿಮಗೆ ಧನಾಗಮನ ಆಗಲಿದೆ. ಬೇಕಾದಂತಹ ಎಲ್ಲ ಕೆಲಸ ಕಾರ್ಯಗಳು ನಿಮಗೆ ಪ್ರಾಪ್ತಿಯಾಗುತ್ತದೆ.‌

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಒಂದು ತಿಂಗಳಿನಿಂದ ಮಾಡಿದ ಕೆಲಸಗಳಿಗೆ ಗೌರವ ಪ್ರಾಪ್ತಿಯಾಗುತ್ತದೆ. ಉತ್ತಮವಾದ ಫಲಗಳು ನಿಮಗೆ ಒದಗಿ ಬರಲಿದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಭಾಗ್ಯದ ದಿನ ಆಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆದರೂ ಹಿರಿಯರ, ಭಗವಂತನ ಆಶೀರ್ವಾದ ಪೂರ್ಣ ಫಲವನ್ನು ನೀವು ಪಡೆಯಬಹುದು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟದ ದಿನ ಆಗಲಿದೆ. ಮುಖ್ಯವಾದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ. ನಿಮ್ಮ ಪ್ರೀತಿ ಪಾತ್ರರಿಂದ ಯಾವುದೇ ರೀತಿಯ ಸಹಕಾರಗಳು ಪ್ರಾಪ್ತಿಯಾಗುವುದಿಲ್ಲ. ಆದ್ದರಿಂದ ಧ್ಯಾನ ದಿಗಳನ್ನು ಮಾಡುವ ಮೂಲಕ ಸಮಯ ಕಳೆಯಬೇಕು. ಎರಡು ದಿನಗಳ ಬಳಿಕ ಎಲ್ಲವೂ ಸರಿ ಹೋಗಲಿದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಉತ್ತಮ ದಿನ ಆಗಲಿದೆ. ನಿಮ್ಮ ಪ್ರೀತಿ ಪಾತ್ರರಿಂದ ಎಲ್ಲ ರೀತಿಯ ಸಹಕಾರ ಪ್ರಾಪ್ತಿಯಾಗಲಿದೆ. ಆದ್ದರಿಂದ ನಿಮ್ಮ ಮನಸ್ಸಿಗೆ ಆನಂದ ಉಂಟಾಗುತ್ತದೆ. ದಾಂಪತ್ಯ ಜೀವನದಲ್ಲೂ ನೀವು ಸುಖವನ್ನು ನೋಡಬಹುದು.

ಇದನ್ನು ಓದಿ:Vastu Tips: ಪಿತೃ ದೋಷ ನಿವಾರಣೆಗೆ ಈ ವಾಸ್ತು ಸಲಹೆ ಪಾಲಿಸಿ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ಉತ್ತಮ ದಿನ ಆಗಿದೆ. ನಿಮ್ಮ ಆತ್ಮವಿಶ್ವಾಸ ಬಹಳ ಚೆನ್ನಾಗಿ ಇದ್ದು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಮುಂದುವರಿಯುತ್ತೀರಿ. ಮುಖ್ಯವಾದ ಕೆಲಸಗಳಲ್ಲಿ ಜಯವನ್ನು ಕೂಡ ಕಾಣುತ್ತೀರಿ.

ಧನಸ್ಸು ರಾಶಿ: ಧನಸ್ಸು ರಾಶಿಯವರು ಇಂದು ನಿಮ್ಮ ಬುದ್ದಿ ಶಕ್ತಿಯಿಂದ ಎಲ್ಲವನ್ನು ಗೆಲ್ಲಬಹುದು. ಆದರೆ ನಿಮ್ಮ ಮಾತಿನಿಂದ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯ ಆಗುವುದಿಲ್ಲ. ಆದ್ದರಿಂದ ನಿಮ್ಮ ಮಾತಿನಿಂದ ಮಿತೃತ್ವಗಳಲ್ಲಿ ಒಡಕು ಕೂಡ ಉಂಟಾಗಬಹುದು.

ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟದ ದಿನ ಆಗಲಿದೆ. ನಾನಾ ರೀತಿಯ ಯೋಚನೆಗಳು ಕಾಡುತ್ತವೆ. ಸಂಸಾರದ ಬಗ್ಗೆಯೂ ಹೆಚ್ಚಿನ ಯೋಚನೆ ಮೂಡುತ್ತದೆ. ತಾಯಿಯ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ.

ಕುಂಭ ರಾಶಿ: ಕುಂಭ ರಾಶಿಗೆ ಉತ್ತಮ ದಿನ ಆಗಲಿದೆ. ನಿಮ್ಮ ಆತ್ಮವಿಶ್ವಾಸ ಇಂದು ತುಂಬಾನೇ ಚೆನ್ನಾಗಿ ಇರಲಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವವರಿಗೆ ಬಹಳ ಒಳ್ಳೆಯ ದಿನ ಆಗಲಿದೆ. ನೀವು ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರಲಿವೆ.

ಮೀನರಾಶಿ: ಮೀನರಾಶಿಯವರು ಇಂದು ಸಂಸಾರದ ಬಗ್ಗೆ ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾಗುತ್ತದೆ. ಹಣಕಾಸಿನ ವ್ಯವಹಾರ ಬಗ್ಗೆಯೂ ಮುಂದಾಲೋಚನೆ ಮಾಡ ಬೇಕಾಗುತ್ತದೆ. ಎಲ್ಲ ರಾಶಿಯವರು ನಿತ್ಯ ಭಗವಂತನ ಆರಾಧನೆ, ಧ್ಯಾನ ಮಾಡುವ ಮೂಲಕ ಉತ್ತಮ ಫಲ ಪಡೆಯಬಹುದು.

ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ

View all posts by this author