ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ರವಿ ಕನ್ಯಾ ರಾಶಿಯನ್ನು ಪ್ರವೇಶ ಮಾಡಲಿದ್ದುಈ ರಾಶಿಯವರು ಎಚ್ಚರ ವಹಿಸಿ!

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿ, ಪುನರ್ವಾಸು ನಕ್ಷತ್ರದ ಸೆಪ್ಟೆಂಬರ್ 17ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ದಿನ ಭವಿಷ್ಯ - ಬುಧವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

-

Profile Pushpa Kumari Sep 17, 2025 8:00 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿ, ಪುನರ್ವಾಸು ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ರವಿ ಕನ್ಯಾ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದು ಎಲ್ಲ ರಾಶಿಗಳಿಗೂ ಹಲವು ರೀತಿಯಲ್ಲಿ ಪರಿಣಾಮ ಬೀರಲಿದೆ. ಮೇಷ ರಾಶಿ ಅವರಿಗೆ ಅತೀ ಉತ್ತಮವಾದ ಗೋಚರದ ದಿನ ವಾಗಿದೆ‌. ಶತ್ರುಗಳಿಂದ ಗೆಲುವು, ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಹೊಸದಾದ ಮಿತ್ರರ ಆಗಮನ ಇದೆ. ಆದರೆ ಕೆಲಸ ಕಾರ್ಯದಲ್ಲಿ ಅತೀಯಾದ ಆತ್ಮವಿಶ್ವಾಸ ಒಳ್ಳೆಯದು ಅಲ್ಲ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಈ ಗೋಚರ ಅಷ್ಟು ಸುಖಕರವಾಗಿ ಇರುವುದಿಲ್ಲ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಅದೇ ರೀತಿ ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಉಂಟಾಗ ಬಹುದು. ಮಕ್ಕಳಿದ್ದ ಪೋಷಕರಿಗೆ ಇಂದು ಮನಸ್ಸಿಗೆ ಬೇಸರವಾಗಬಹುದು. ನಿಮ್ಮ ಅಹಂಕಾರ ಕೂಡ ನಿಮ್ಮ ಕೆಲಸಗಳಿಗೆ ತೊಂದರೆ ಉಂಟು ಮಾಡಬಹುದು.‌ ಹಾಗಾಗಿ ವಿನಯತೆಯಿಂದ ನಡೆದುಕೊಳ್ಳಲು ಪ್ರಯತ್ನಮಾಡಿ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ಗೋಚರ ಅಷ್ಟು ಶುಭಕರವಾಗಿಲ್ಲ. ಮನೆಯಲ್ಲಿ ಸ್ವಲ್ಪ ತೊಂದರೆಗಳು ಉಂಟಾಗಬಹುದು. ನೀವು ವಾಸಿಸುವ ಸ್ಥಳದಲ್ಲಿ ಅನೇಕ ತೊಂದರೆಯನ್ನು ಎದುರಿಸಬಹುದು. ವಾಹನ ಇರುವವರಿಗೆ , ಕೋರ್ಟ್ ವ್ಯವಹಾರ ಮಾಡು ವವರಿಗೆ ಕಷ್ಟವಾಗಬಹುದು. ತಾಯಿಯ ಆರೋಗ್ಯದ ಬಗ್ಗೆಯೂ ಗಮನ ವಹಿಸಿ

ಕಟಕ ರಾಶಿ: ಕಟಕ ರಾಶಿ ಅವರಿಗೆ ಇದು ಅತೀ ಉತ್ತಮವಾದ ಗೋಚರ ವಾಗಲಿದೆ. ಸೋಷಿಯಲ್ ಮೀಡಿಯಾ,ಪತ್ರಿಕೋದ್ಯಮ ಇತ್ಯಾದಿ ಕಡೆ ಕೆಲಸ ಮಾಡುವವರಿಗೆ ಉತ್ತಮ ದಿನವಾಗಲಿದೆ. ಆರೋಗ್ಯದಲ್ಲೂ ನೆಮ್ಮದಿ ಸಿಗಲಿದ್ದು ಮನಸ್ಸಿಗೆ ನೆಮ್ಮದಿ ಜೊತೆಗೆ ಬಂಧು ಮಿತ್ರರಿಂದ ಒಳ್ಳೆಯ ದಾಗಲಿದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಉತ್ತಮ‌ದಿನ ಅಲ್ಲ . ಮನೆಯಲ್ಲಿ ಖುಷಿ ಇರುವುದಿಲ್ಲ. ಇಷ್ಟು ದಿನ ಬುಧ ಗೋಚರ ಅನುಕೂಲ ವಾಗಿತ್ತು. ಈಗ ಮುಖ್ಯವಾದ ವಿಚಾರದಲ್ಲಿ ದೊಡ್ಡ ವರಿಂದ ನಿಮಗೆ ಕಿರಿ ಕಿರಿ ಇರಬಹುದು.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಒಂದು ವರ್ಷದ ನಂತರ ರವಿ ನಿಮ್ಮ ಮನೆಗೆ ಪ್ರವೇಶ ಮಾಡ್ತಾ ಇದ್ದು ಎಲ್ಲರೂ ನಿಮ್ಮ ಮೇಲೆ ಒಂದು ಕಣ್ಣೀಡಬಹುದು. ಬೇರೆಯವರು ನಿಮ್ಮನ್ನು ನೋಡುವ ರೀತಿ ಬದಲಾಗಬಹುದು.ಹಾಗಾಗಿ ಎಲ್ಲರ ಜೊತೆ ವಿನಯದಿಂದ ವರ್ತಿಸಲು ಪ್ರಯತ್ನ ಮಾಡಿ.

ತುಲಾ ರಾಶಿ: ತುಲಾ ರಾಶಿಯವರಿಗೆ ರವಿ ನಿಮ್ಮ ವ್ಯಯಸ್ಥಾನಕ್ಕೆ ಬರಲಿದ್ದು ಮಿತ್ರರು ನಿಮ್ಮಿಂದ ದೂರ ಆಗಬಹುದು. ನಿಮ್ಮ ಸಹೋದ್ಯೋಗಿ, ಸ್ನೇಹಿತರು ನಿಮ್ಮಿಂದ ದೂರ ಆಗಬಹುದು. ಮುಖ್ಯ ವಾದ ಮಿತ್ರತ್ವದಲ್ಲಿ ಒಡಕು ಉಂಟಾಗಬಹುದು. ಆದ್ದರಿಂದ ಬಹಳ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಅತ್ಯುತ್ತಮವಾದ ದಿನ ಆಗಲಿದೆ. ಈಗಾಗಲೇ ಕೆಲಸ ಕಾರ್ಯದಲ್ಲಿ ಪ್ರಮೋಷನ್ ಇತ್ಯಾದಿ ಪಡೆದುಕೊಂಡುತ್ತೀರಿ. ಕೆಲಸ ಕಾರ್ಯದಲ್ಲಿ ಯಶಸ್ಸು, ಮಿತ್ರರು ಕೂಡ ನಿಮ್ಮ ಜೊತೆ ಖುಷಿಯಾಗಿ ಸಮಯ ಕಳೆಯುತ್ತಾರೆ. ಇಷ್ಟಾರ್ಥ ಸಿದ್ದಿಯಾಗಲಿದೆ.

ಇದನ್ನು ಓದಿ:Vastu Tips: ಮಲಗುವಾಗ ತಲೆ ಯಾವ ದಿಕ್ಕಿಗೆ ಇಟ್ಟರೆ ಶುಭ ಗೊತ್ತೇ?

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಬಹಳ ಉತ್ತಮ ದಿನವಾಗಿದೆ. ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಎಲ್ಲ ಸಮಸ್ಯೆಗಳು ಬಗೆಹರಿದು ಮುಂದಿನ ಹೆಜ್ಜೆಯನ್ನು ನೀವು ಇಡಬಹುದು.

ಮಕರ ರಾಶಿ: ಮಕರ ರಾಶಿ ಅವರಿಗೆ ಹಿಂದಿನ ಎರಡು ತಿಂಗಳಿನಲ್ಲಿ ಪಾರ್ಟ್ನರ್ ಶಿಪ್ ವ್ಯವಹಾರ ದಲ್ಲಿ ಇದ್ದ ತೊಂದರೆಗಳು ಬಗೆ ಹರಿಯಲಿದ್ದು ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಭಾಗ್ಯ ಸ್ಥಾನಕ್ಕೆ ರವಿ ಬಂದಿರುವುದರಿಂದ ಸ್ವಲ್ಪ ಒಳ್ಳೆಯ ಬದಲಾವಣೆ ಆಗಲಿದೆ. ಆದರೂ ವಿನಯತೆ ಯಿಂದ ಎಲ್ಲರ ಜೊತೆ ಇರಬೇಕು.

ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಸ್ವಲ್ಪ ಕಷ್ಟಕರವಾದ ದಿನ ಆಗಲಿದೆ. ಮನೆಯಲ್ಲಿ ಪ್ರೀತಿ ಪಾತ್ರರಿಂದ ನೆಮ್ಮದಿ ಇರುವುದಿಲ್ಲ. ಹಾಗಾಗಿ ಮಾತು ಕಡಿಮೆ ಮಾಡಿ ಧ್ಯಾನಧಿಗಳ ಮೂಲಕ ಸಮಯ ಕಳೆದರೆ ಉತ್ತಮ.

ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಸ್ವಲ್ಪ ಕ್ಷಿಷ್ಟಕರವಾದ ಗೋಚರವಾಗಲಿದೆ. ಮುಖ್ಯ ವಾದ ಮಿತ್ರರು ನಿಮ್ಮನ್ನು ಬಿಟ್ಟು ಹೋಗಬಹುದು. ಪಾರ್ಟ್ನರ್ ಶೀಪ್ ವ್ಯವಹಾರದಲ್ಲಿ ತೊಂದರೆ ಆಗಬಹುದು. ಹಾಗಾಗಿ ಉತ್ತಮ ಸ್ನೇಹಿತರ ಭಾಂದವ್ಯ ಬೆಳೆಸಿಕೊಳ್ಳಿ. ಇದರಿಂದ ನಿಮಗೆ ಒಳ್ಳೆಯದಾಗಲಿದೆ.