ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಇಂದು ಈ ಎಲ್ಲ ರಾಶಿಯವರಿಗೆಲ್ಲ ಅದೃಷ್ಟವೋ ಅದೃಷ್ಟ

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿ, ಮೃಗಶಿರ ನಕ್ಷತ್ರದ ಈ ದಿನದಂದು ಬುಧ ಕನ್ಯಾ ರಾಶಿಯನ್ನು ಪ್ರವೇಶಿಸುತ್ತಿದ್ದು, ಬಹುತೇಕ ರಾಶಿಯಲ್ಲಿ ಅನೇಕ ಬದಲಾವಣೆ ಆಗಲಿದೆ. ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಇಂದು ಈ ಎಲ್ಲ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ

Horoscope -

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿ, ಮೃಗಶಿರ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ಉತ್ತಮ ದಿನ. ಶತ್ರುನಾಶ, ಶತ್ರು ದ್ವಂಸ ಇಂದು ಆಗಲಿದ್ದು, ನಿಮ್ಮ ಶತ್ರುಗಳಿಂದ ಎಲ್ಲವನ್ನು ನೀವು ಗೆಲ್ಲುತ್ತೀರಿ. ಆದರೇ ಯಾವುದೇ ಕೆಲಸದಲ್ಲಿ ಅತೀ ಆತ್ಮವಿಶ್ವಾಸ ಬೇಡ, ಆದ್ದರಿಂದ ಬಹಳ ಹುಷಾರಾಗಿ ಎಲ್ಲರ ಜತೆ ಮಾತನಾಡಬೇಕು. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಗೋಚರ ಕಷ್ಟವಾಗಿದೆ. ನಿಮ್ಮ ದಾಂಪತ್ಯ, ಪ್ರೀತಿ ಪ್ರೇಮ ವಿಚಾರದಲ್ಲಿ ಬಹಳಷ್ಟು ತೊಂದರೆ ಕಾಡಲಿದೆ.‌ ನೀವು ಆಡಿದ ಮಾತುಗಳೆಲ್ಲವೂ ಇತರರಿಗೆ ಇಂದು ತಪ್ಪಾಗಿಯೇ ಕಾಣುತ್ತದೆ. ಮಕ್ಕಳಿರುವ ಪೋಷಕರಿಗೂ ಇಂದು ಕಷ್ಟದ ದಿನವಾಗಲಿದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಖರ್ಚು ಆಗುವ ಸಾಧ್ಯತೆ ಕೂಡ ಇದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಈ ದಿನ ಬಹಳ ಉತ್ತಮವಾಗಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆಸ್ತಿ- ಪಾಸ್ತಿ ವಿಚಾರದಲ್ಲಿ ಸುಖ, ಸೌಖ್ಯ ಮನಸ್ಸಿಗೆ ನೆಮ್ಮದಿ ಎಲ್ಲವೂ ಸಿಗಲಿದೆ. ಸುಖದ ಸ್ಥಾನಕ್ಕೆ ಬುಧನ ಪ್ರವೇಶ ಇರಲಿದ್ದು ಮನೆಯಲ್ಲಿ ಅತೀ ಹೆಚ್ಚಿನ ನೆಮ್ಮದಿ, ಸಂಸಾರದಲ್ಲಿ ಸುಖ, ಸಂತೋಷ ಒದಗಿ ಬರಲಿದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಬುಧನ ಗೋಚರ ಬಹಳಷ್ಟು ಕಷ್ಟವಾಗಲಿದೆ. ಈ ದಿನ ಅತ್ಯುತ್ತಮ ದಿನವಾಗಿರುವುದಿಲ್ಲ. ಮನಸ್ಸಿನ ನೆಮ್ಮದಿ ಹಾಳಾಗಲಿದ್ದು, ಮಾತಿನಿಂದ ನೀವು ಬೇರೆಯವರನ್ನು ಗೆಲ್ಲಲು ಸಾಧ್ಯ ಇಲ್ಲ. ಮಾಧ್ಯಮದಲ್ಲಿ ಕೆಲಸ ಮಾಡುವವರು ಹುಷಾರಾಗಿರಬೇಕು. ನಿಮ್ಮ ಮಾತುಗಳಿಂದ ನಿಮಗೆ ಸಮಸ್ಯೆ ತರಬಹುದು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಬಹಳ ಉತ್ತಮ ಭವಿಷ್ಯ ಗೋಚರವಾಗಲಿದೆ. ಮನೆಯಲ್ಲಿ ಸಂತೋಷ, ಮನಸ್ಸಿಗೆ ತೃಪ್ತಿ ಸಿಗಲಿದೆ. ದಾಂಪತ್ಯ ಜೀವನದಲ್ಲೂ ಇರುವವರಿಗೂ ನೆಮ್ಮದಿ ಸಿಗಲಿದೆ. ಇಂದು ನಿಮ್ಮ ಆರ್ಥಿಕ ಸುಭದ್ರತೆ ಕೂಡ ಚೆನ್ನಾಗಿ ಇರಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ನಿಮ್ಮ ರಾಶಿಯಲ್ಲೇ ಬುಧ ಬರುವುದರಿಂದ ನಿಮಗೆ ಕಷ್ಟದ ದಿನ ಆಗಲಿದೆ. ನೀವು ಹೇಳಿದ ಮಾತನ್ನು ಇತರರು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ಮನಸ್ಸಿನ ನೆಮ್ಮದಿ ಬಹಳಷ್ಟು ಕೆಡಲಿದ್ದು ಇಂದು ಮಾತು ಕಡಿಮೆ ಮಾಡಿದರೆ ನಿಮಗೆ ಒಳಿತಾಗಲಿದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಈ ದಿನ ಅಷ್ಟು ಅನುಕೂಲವಾಗಿಲ್ಲ. ಮುಖ್ಯವಾದ ಸ್ನೇಹ, ಪ್ರೀತಿ ಪಾತ್ರದಲ್ಲಿ ಒಡಕು ಉಂಟಾಗುವ ಸಾಧ್ಯತೆ ಇದೆ. ಅದೇ ರೀತಿ ನಿಮ್ಮ ಮಾತಿನಿಂದ ನಿಮಗೆ ತೊಂದರೆ ಉಂಟಾಗಬಹುದು. ಈ ಸಮಸ್ಯೆಗಳೇ ನಿಮಗೆ ಬಹಳಷ್ಟು ತೀಕ್ಷ್ಣವಾಗಿ ಕಾಡಬಹುದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ, ಎಲ್ಲ ರೀತಿಯಲ್ಲೂ ಸಹಕಾರ ಪ್ರಾಪ್ತಿಯಾಗುತ್ತದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು, ಉತ್ತಮ ಗಣ್ಯ ವ್ಯಕ್ತಿಗಳ ಪರಿಚಯ ನಿಮಗೆ ಆಗಲಿದೆ. ರಾಜಕೀಯದಲ್ಲಿ ಇರುವವರಿಗೆ ಬಹಳ ಉತ್ತಮ ಗೋಚರ ಪ್ರಾಪ್ತಿ ಯಾಗುತ್ತದೆ.

ಇದನ್ನು ಓದಿ:Vastu tips: ದೇವರ ಕೋಣೆಯಲ್ಲಿ ಧಾರ್ಮಿಕ ಗ್ರಂಥಗಳನ್ನು ಇಡಬಹುದೇ?

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಈ ದಿನ ಬಹಳ ಉತ್ತಮವಾಗಿರಲಿದೆ. ನಿಮ್ಮ ಮಾತಿನ ಚಾಕಚಕ್ಯತೆಯಿಂದ ನೀವು ಎಲ್ಲವನ್ನೂ ಗೆಲ್ಲುತ್ತೀರಿ. ಅದೇ ರೀತಿ ಕಾರ್ಯ ಕ್ಷೇತ್ರದಲ್ಲಿ ಕೂಡ ಬಹಳಷ್ಟು ಯಶಸ್ಸು ಸಿಗಲಿದೆ. ಅದರ ಜತೆ ಕಾರ್ಯ ಕ್ಷೇತ್ರದಲ್ಲಿ ಬಹಳಷ್ಟು ಕಷ್ಟ ಕೂಡ ಬರಬಹುದು. ಜಾಗರೂಕತೆಯಿಂದ ಕೆಲಸ ಮಾಡಿದರೆ ಉತ್ತಮ.

ಮಕರ ರಾಶಿ: ಮಕರ ರಾಶಿಯವರಿಗೆ ಈ ದಿನ ಸ್ವಲ್ಪ ಕಷ್ಟ ಎದುರಾಗಲಿದೆ. ನಿಮ್ಮ ಮಾತುಗಳಿಂದ ತೊಂದರೆಗಳಿಗೆ ಸಿಲುಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರರ ಜತೆ ಉತ್ತಮ ರೀತಿಯಲ್ಲಿ ಇರಲು ಪ್ರಯತ್ನ ಮಾಡಿ.

ಕುಂಭರಾಶಿ: ಕುಂಭ ರಾಶಿಯವರಿಗೆ ಈ ದಿನ ಉತ್ತಮ ಭವಿಷ್ಯ ಗೋಚರವಾಗಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹಿಂದಿನ ಕೆಲವು ದಿನಗಳಲ್ಲಿ ದಾಂಪತ್ಯ, ಮಿತೃತ್ವಗಳಲ್ಲಿ ಒಡಕು ಉಂಟಾಗುತ್ತಿತ್ತು‌. ಈಗ ಅದಕ್ಕೆಲ್ಲ ಪರಿಹಾರ ಸಿಗಲಿದೆ. ಸಂಸಾರದಲ್ಲೂ ನೆಮ್ಮದಿ ಸಿಗಲಿದೆ.

ಮೀನ ರಾಶಿ: ಮೀನ ರಾಶಿಯವರಿಗೆ ಈ ದಿನ ಮುಖ್ಯವಾದ ವಿಚಾರಕ್ಕೆ ಸ್ವಲ್ಪ ಕ್ಷೇಶ ಉಂಟಾಗಬಹುದು. ಬಿಸಿನೆಸ್, ವ್ಯವಹಾರದಲ್ಲೂ ಕಷ್ಟವಾಗಬಹುದು‌. ಮಿತೃತ್ವ, ಪ್ರೀತಿ ಪಾತ್ರರ ಜತೆ ಕಲಹ ಉಂಟಾಗಬಹುದು‌. ಅಕ್ಟೋಬರ್‌ನಲ್ಲಿ ಗುರುಬಲ ಬರಲಿರುವುದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ. ವಿವೇಕವಾಗಿ ಎಲ್ಲರ ಜತೆ ಮಾತನಾಡಲು ಕಲಿಯಿರಿ.