ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿ, ಮಖಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಈ ರಾಶಿಯವರಿಗೆ ಕಷ್ಟಕರವಾದ ದಿನ. ಪಂಚಮದಲ್ಲಿ ಕೇತುವಿನ ನಕ್ಷತ್ರ ಚಂದ್ರ ಇರುವುದರಿಂದ ನಿಷ್ಠುರತೆ ಹೆಚ್ಚಾಗಿ ಇರುತ್ತದೆ. ಬೇರೆಯವರ ಜೊತೆ ಹೆಚ್ಚು ಕಟುವಾಗಿ ಮಾತನಾಡಿ ಕೆಟ್ಟವರಾಗುತ್ತೀರಿ. ಅದೆಲ್ಲವನ್ನು ನೀವು ತಡೆಯಬೇಕಾಗುತ್ತದೆ. ಹಾಗಾಗಿ ಬೇರೆಯವರ ಜೊತೆ ವಿನಯತೆಯಿಂದ ವರ್ತಿಸಿ
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಆಸ್ತಿ- ಪಾಸ್ತಿ ಕೋರ್ಟ್ ಕೆಲಸಗಳಲ್ಲಿ ಸ್ವಲ್ಪ ಕಷ್ಟ ಕರವಾದ ದಿನ ಆಗಲಿದೆ. ಮನೆಯ ಕೆಲವೊಂದು ವಿಚಾರದಲ್ಲಿ ತಾಯಿಯ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ವಹಿಸಬೇಕಾಗುತ್ತದೆ..
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅತ್ಯುತ್ತಮವಾದ ದಿನವಾಗಲಿದೆ. ಮಾರ್ಕೆಟಿಂಗ್, ಸೇಲ್ಸ್ ವ್ಯವಹಾರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ದಿನವಾಗಲಿದೆ. ಬಂಧು- ಬಾಂಧವರ ಸಮ್ಮಿಲನ ಕೂಡ ಸಾಧ್ಯವಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರು ಸಂಸಾರದ ಬಗ್ಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗುತ್ತದೆ. ನೀವು ಯಾರ ಜೊತೆ ವಾಸ ಮಾಡುತ್ತೀರಿ ಅಂತವರ ಜೊತೆ ಹೆಚ್ಚಿನ ಕಾಳಜಿಯನ್ನು ನೀವು ವಹಿಸ ಬೇಕಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ನಿಮ್ಮ ರಾಶಿಯಲ್ಲೇ ಚಂದ್ರ ಇರುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ.ಆದರೂ ನಿಮ್ಮ ಬಗ್ಗೆ ಕೆಟ್ಟ ವಿಚಾರಗಳನ್ನು ಮಾತನಾಡುವವರ ಬಗ್ಗೆ ಉತ್ತರ ನೀಡಲು ಇಂದು ಹೋಗುವುದು ಸರಿಯಲ್ಲ. ಉತ್ತಮವಾದ ದಿನ ನಿಮ್ಮದು ಆಗಲಿದೆ
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಚಂದ್ರ ನಿಮ್ಮ ವ್ಯಯ ಸ್ಥಾನದಲ್ಲಿ ಇರುವುದರಿಂದ ಹಣ ವ್ಯಯವಾಗುವ ಸಾಧ್ಯತೆ ಇರುತ್ತದೆ. ಬಂಧು ಮಿತ್ರರ ನಡುವೆ ಸ್ವಲ್ಪ ಮನಸ್ತಾಪಗಳು ಉಂಟಾಗ ಬಹುದು. ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ಅವಶ್ಯಕವಾಗಿ ಇರುತ್ತದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮವಾದ ದಿನ ವಾಗಲಿದೆ. ಮನಸ್ಸಿಗೆ ನೆಮ್ಮದಿ ಇರಲಿದ್ದು ಮಿತ್ರರಿಂದ,ಗುಂಪು ವ್ಯವಹಾರದಿಂದ ಧನ ಆಗಮನ ಮತ್ತು ಸುಖ ಪ್ರಾಪ್ತಿಯಾಗುತ್ತದೆ. ಎಲ್ಲ ಕೆಲಸ ಕಾರ್ಯದಲ್ಲೂ ಇಷ್ಟಾರ್ಥ ಸಿದ್ದಿಯಾಗಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಾರ್ಯ ಕ್ಷೇತ್ರದ ಜವಾಬ್ದಾರಿ ಗಳು ಹೆಚ್ಚಾಗಿ ಇರುತ್ತವೆ. ಇಂದು ಹೆಚ್ಚಿನ ಕೆಲಸಗಳನ್ನು ನೀವು ಮಾಡಲೇ ಬೇಕಾಗುತ್ತದೆ. ನಿಗದಿತ ಸಮಯಕ್ಕೆ ಎಲ್ಲ ಕೆಲಸ ಕಾರ್ಯ ಗಳನ್ನು ಮಾಡಿದರೆ ಯಾವುದೇ ತೊಂದರೆ ಯಾಗುವುದಿಲ್ಲ.
ಇದನ್ನು ಓದಿ:Vastu Tips: ಸಕಾರಾತ್ಮಕತೆಯನ್ನು ಹೆಚ್ಚಿಸಲು ಅಧ್ಯಯನ ಕೊಠಡಿಯಲ್ಲಿ ಇರಲಿ ಈ ವಸ್ತುಗಳು
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಭಾಗ್ಯೋದಯವಾದ ದಿನ ವಾಗುತ್ತದೆ. ಹಿರಿಯರ ಭಗವಂತನ ಆಶೀರ್ವಾದ ಇಲ್ಲದೆ ಯಾವುದೇ ಕೆಲಸ ಕಾರ್ಯಗಳು ಆಗುವುದಿಲ್ಲ. ಆದ್ದರಿಂದ ಒಳ್ಳೆಯ ಧರ್ಮ ಕೆಲಸ ಕಾರ್ಯಗಳನ್ನು ಮಾಡುವ ದಿನ ನಿಮ್ಮದಾಗುತ್ತದೆ
ಮಕರ ರಾಶಿ: ಮಕರ ರಾಶಿ ಅವರಿಗೆ ಇಂದು ಕಷ್ಟಕರವಾದ ದಿನವಾಗುತ್ತದೆ.ನಿಮ್ಮ ಪ್ರೀತಿ ಪಾತ್ರರ ಯಾವುದೇ ಸಹಕಾರ ನಿಮಗೆ ಸಿಗುವುದಿಲ್ಲ. ಆದ್ದರಿಂದ ಮನಸ್ಸಿಗೆ ಸ್ವಲ್ಪ ಕ್ಷೇಷ ಉಂಟಾಗಬಹುದು..
ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಉತ್ತಮವಾಗಲಿದ್ದು ಅತ್ಯುತ್ತಮವಾದ ದಿನ ವಾಗುತ್ತದೆ. ಎಲ್ಲ ರೀತಿಯಿಂದಲೂ ನಿಮಗೆ ಸಹಕಾರ ಸಿಗುತ್ತದೆ. ಬೇರೆಯವರ ಸಹಾಯಕ್ಕೆ ನೀವು ಕೃತಜ್ಞತೆ ವಹಿಸಿದ್ದರೆ ಇನ್ನು ಹೆಚ್ಚಿನ ಖುಷಿ ಪಡೆಯಬಹುದು
ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಸಾಮಾಜಿಕ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಮನಸ್ಸಿಗೆ ನೆಮ್ಮದಿ ಇದ್ದು ಎಲ್ಲ ಕಡೆ ಜಯ ಪ್ರಾಪ್ತಿಯಾಗುತ್ತದೆ. ದಿನ ನಿತ್ಯ ಎಲ್ಲ ರಾಶಿಯವರು ಧ್ಯಾನ, ಶ್ಲೋಕ ಪಠಣ ಮಾಡುವ ಅಭ್ಯಾಸ ಮಾಡಿಕೊಂಡರೆ ಉತ್ತಮ ದಿನವಾಗುತ್ತದೆ.