ಬೆಂಗಳೂರು: ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಷಷ್ಠಿ ತಿಥಿ, ಜೇಷ್ಠ ನಕ್ಷತ್ರದ ಸೆಪ್ಟೆಂಬರ್ 28ನೇ ತಾರೀಕಿನ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಇಂದು ಜೇಷ್ಠ ನಕ್ಷತ್ರ ಇದ್ದು ಇದರ ಅಧಿಪತಿ ಬುಧ. ಆದ್ದರಿಂದ ಎಲ್ಲ ರಾಶಿಯವರಿಗೂ ಅತೀ ಹೆಚ್ಚಾಗಿ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮೇಷ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಪ್ರೀತಿ ಪಾತ್ರರಿಂದ ಯಾವುದೇ ರೀತಿಯ ಸಹಕಾರ ನಿಮಗೆ ಸಿಗುವುದಿಲ್ಲ. ಮುಖ್ಯವಾದ ಯಾವುದೇ ನಿರ್ಧಾರವನ್ನು ಇಂದು ಮಾಡಲು ಹೋಗಬೇಡಿ. ಹಾಗಾಗಿ ಧ್ಯಾನಾದಿಗಳನ್ನು ಮಾಡುವ ಮೂಲಕ ಸಮಯ ಕಳೆದರೆ ಉತ್ತಮ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಅತ್ಯುತ್ತಮ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ನಿಮ್ಮ ಪ್ರೀತಿಪಾತ್ರರು ಇಂದು ಮಾತಿನ ಚಾಕಚಾಕ್ಯತೆಯಿಂದ ನಿಮ್ಮನ್ನು ರಂಜಿಸಲಿದ್ದಾರೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಅತ್ಯುತ್ತಮ ದಿನವಾಗಿದೆ. ನಿಮ್ಮ ಎಲ್ಲ ವ್ಯವಹಾರದಲ್ಲೂ ಜಯವಾಗಲಿದ್ದು ಶತ್ರು ನಾಶ ಆಗಲಿದೆ. ಎಲ್ಲದರಲ್ಲೂ ನಿಮಗೆ ಜಯವಾಗಲಿದೆ. ಆದರೆ ನಿಮ್ಮ ಪಾಡಿಗೆ ನಿಮ್ಮ ಕೆಲಸ ಕಾರ್ಯವನ್ನು ಮಾಡಿಕೊಳ್ಳಬೇಕು.
ಕಟಕ ರಾಶಿ: ಕಟಕ ರಾಶಿಯವರಿಗೆ ಸ್ವಲ್ಪ ಕ್ಷಿಷ್ಟದ ದಿನವಾಗಲಿದೆ. ದಾಂಪತ್ಯ, ಪ್ರೇಮ, ಪ್ರೀತಿ ಪ್ರಕರಣದಲ್ಲಿ ಸ್ವಲ್ಪ ತೊಂದರೆ ಕಾಡಬಹುದು. ಮಕ್ಕಳ ವಿಚಾರದಲ್ಲಿ ಪೋಷಕರಿಗೆ ನೆಮ್ಮದಿ ಇರುವುದಿಲ್ಲ. ಬಿಸೆನೆಸ್ ವ್ಯವಹಾರದಲ್ಲೂ ಕಷ್ಟದ ದಿನವಾಗಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ನಾನಾ ರೀತಿಯ ಯೋಚನೆಗಳು ಇಂದು ಕಾಡುತ್ತವೆ. ಅಮ್ಮನ ಆರೋಗ್ಯ ಬಗ್ಗೆ,ಅಮ್ಮನ ಮಾನಸಿಕ ಸ್ಥಿತಿ ಬಗ್ಗೆ ಯೋಚನೆಗಳು ಇರುತ್ತವೆ. ಆಸ್ತಿ- ಪಾಸ್ತಿ, ಮನೆ ನಿರ್ಮಾಣ ಬಗ್ಗೆ ಅನೇಕ ಯೋಚನೆ ಉಂಟಾಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಅತ್ಯುತ್ತಮ ದಿನ. ಎಲ್ಲ ಕೆಲಸದಲ್ಲೂ ಜಯ ಉಂಟಾಗುತ್ತದೆ. ಎಲ್ಲ ಕಡೆಯಲ್ಲೂ ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಕಾಣುತ್ತೀರಿ. ಬಂಧು ಮಿತ್ರರಿಂದ ಬಹಳಷ್ಟು ಅಕ್ಕರೆ ನಿಮಗೆ ಸಿಗುತ್ತದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಹಣಕಾಸಿನ ವಿಚಾರ,ಆಸ್ತಿ ಪಾಸ್ತಿ ವಿಚಾರ, ಕುಟುಂಬದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಸಂಸಾರದ ಆರ್ಥಿಕ ಸುಭದ್ರತೆಯ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಉತ್ತಮ ದಿನವಾಗಿದೆ. ಹಿಂದಿನ ದಿನಗಳಲ್ಲಿ ಇದ್ದ ಕ್ಷೇಷ ಎಲ್ಲವೂ ಮಾಯವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಉತ್ತಮ ಮಾರ್ಗದರ್ಶನ ಕೂಡ ಪ್ರಾಪ್ತಿಯಾಗುತ್ತದೆ.
ಇದನ್ನು ಓದಿ:Vastu Tips: ವಾಸ್ತು ಪ್ರಕಾರ ಪುಸ್ತಕದ ಕಪಾಟು ಯಾವ ದಿಕ್ಕಿನಲ್ಲಿರಬೇಕು?
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಸ್ವಲ್ಪ ಕಷ್ಟದ ದಿನವಾಗಿದೆ. ಮುಖ್ಯವಾದ ಸಂಬಂಧಗಳಲ್ಲಿ ಒಡಕು ಉಂಟಾಗಬಹುದು. ಮಿತೃತ್ವದಲ್ಲಿ ಏರುಪೇರು ಆಗಬಹುದು, ಮನಸ್ಸಿಗೆ ಅಷ್ಟಾಗಿ ನೆಮ್ಮದಿ ಇರುವುದಿಲ್ಲ. ಯಾವುದೇ ಮುಖ್ಯ ನಿರ್ಧಾರಕ್ಕೂ ಎರಡು ಮೂರು ದಿನ ಕಾದರೆ ಒಳ್ಳೆಯದು.
ಮಕರ ರಾಶಿ: ಮಕರ ರಾಶಿಯವರಿಗೆ ಅತ್ಯುತ್ತಮ ದಿನ. ಇಷ್ಟಾರ್ಥ ಸಿದ್ದಿ, ಮನಸ್ಸಿಗೆ ನೆಮ್ಮದಿ, ಮಿತ್ರರಿಂದ ಗುಂಪು ಕೆಲಸದಿಂದ ಬೇಕಾದುದು ಎಲ್ಲವೂ ಪ್ರಾಪ್ತಿಯಾಗುತ್ತದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗಲಿದೆ. ಮನಸ್ಸಿಗೆ ನೆಮ್ಮದಿ, ಗೌರವ ಪ್ರಾಪ್ತಿಯಾಗುತ್ತದೆ. ಕೆಲಸವನ್ನು ನಿಗದಿತ ಮುಂಚೆಗೆ ಮಾಡಿದರೆ ಪ್ರಶಂಸೆ, ಗೌರವ ಲಭಿಸುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನ ಆಗಲಿದೆ. ಎರಡು ಮೂರು ದಿನಗಳಲ್ಲಿ ಇದ್ದ ಮನಸ್ಸಿನ ಕ್ಷೇಷ ಇವತ್ತು ಬಗೆಹರಿಯಲಿದೆ. ಆದರೂ ಕೂಡ ಭಗವಂತನ ಆಶೀರ್ವಾದ ಇಲ್ಲದೆ ಕೆಲಸ ಕಾರ್ಯಗಳು ಆಗುವುದಿಲ್ಲ. ಹಾಗಾಗಿ ಭಗವಂತನ ಆಶೀರ್ವಾದ ಪಡೆಯಲು ಮರೆಯಬೇಡಿ. ನವರಾತ್ರಿ ಉತ್ಸವದ ಈ ದಿನ ಎಲ್ಲ ರಾಶಿಯವರು ದೇವಿಯ ಆರಾಧನೆ ಮಾಡಿ.