ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜಯನಗರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ ಉತ್ಸವ; ‘ಲಕ್ಷ ಪುಷ್ಪಾರ್ಚನೆ’ಯಲ್ಲಿ ಸಹಸ್ರಾರು ಭಕ್ತರು ಭಾಗಿ

ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ 431ನೇ ವರ್ಧಂತಿ ಉತ್ಸವದ (ಜನ್ಮದಿನೋತ್ಸವ) ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣದೊಂದಿಗೆ ಫಲಪಂಚಾಮೃತ ಅಭಿಷೇಕ ಮತ್ತು "ಲಕ್ಷ ಪುಷ್ಪಾರ್ಚನೆ" ನೆರವೇರಿತು.

ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದಲ್ಲಿ ಲಕ್ಷ ಪುಷ್ಪಾರ್ಚನೆ.

ಬೆಂಗಳೂರು, ಫೆ.25: ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ 431ನೇ ವರ್ಧಂತಿ ಉತ್ಸವದ (ಜನ್ಮದಿನೋತ್ಸವ) ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣದೊಂದಿಗೆ ಫಲಪಂಚಾಮೃತ ಅಭಿಷೇಕ ನೆರವೇರಿತು.

ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅಪೇಕ್ಷೆಯ ಮೇರೆಗೆ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಗುರುರಾಯರ ಸನ್ನಿಧಿಗೆ ಆಗಮಿಸಿ ಸಂಸ್ಥಾನ ಪೂಜೆಯನ್ನು ನೆರವೇರಿಸಿ, "ಲೋಕ ಕಲ್ಯಾಣ" ಕ್ಕಾಗಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ "ಲಕ್ಷ ಪುಷ್ಪಾರ್ಚನೆ" ಯನ್ನು ನೆರವೇರಿಸಿದರು.

Sri Raghavendra Swamy 431st vardhanti

ಪರಮಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್.ಕೆ. ವಾದೀಂದ್ರ ಆಚಾರ್ಯರು ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಪುಷ್ಪವೃಷ್ಠಿಯೊಂದಿಗೆ ಫಲ ಸಮರ್ಪಣೆಯನ್ನು ಸಮರ್ಪಿಸಿದರು ಎಂದು ನಂದಕಿಶೋರ್ ಆಚಾರ್ಯ ತಿಳಿಸಿದ್ದಾರೆ.

ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ (ಜನ್ಮದಿನೋತ್ಸವ) ದ ಅಂಗವಾಗಿ ವಿಶೇಷವಾಗಿ ವಿದ್ಯುತ್ ದ್ವೀಪ, ಪುಷ್ಪಗಳಿಂದ ಅಲಂಕಾರ ಹಾಗೂ ವಿಶೇಷ ಉತ್ಸವ ಮತ್ತು ರಾಯರ ಸನ್ನಿಧಿಗೆ ಆಗಮಿಸಿದ ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವು ನೆರವೇರಿತು. ಈ ಉತ್ಸವದಲ್ಲಿ ಭಕ್ತರು, ಸೇವಾ ಕರ್ತೃಗಳು, ಗಣ್ಯ ವ್ಯಕ್ತಿಗಳು, ಚಿತ್ರನಟ- ನಟಿಯರು, ಕಲಾವಿದರು ಸನ್ನಿಧಿಗೆ ಆಗಮಿಸಿ ಫಲ ಮಂತ್ರಾಕ್ಷತೆಯೊಂದಿಗೆ ಗುರುರಾಯರ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿ, ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

Astro Tips: ಸಂಜೆ ದೀಪಾರಾಧನೆ ವೇಳೆ ಈ 4 ಮಂತ್ರ ಪಠಿಸಿದ್ರೆ ಮನೆಯಲ್ಲಿ ಸಂತೋಷ, ಅದೃಷ್ಟ ಹೆಚ್ಚಾಗುತ್ತದೆ

ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಆರ್.ಕೆ. ವಾದೀಂದ್ರ ಆಚಾರ್ಯ, ಮಠದ ಧರ್ಮಾಧಿಕಾರಿ ಶ್ರೀ ಕೃಷ್ಣ ಗುಂಡಾಚಾರ್ಯ, ಪುರೋಹಿತ ನಂದಕಿಶೋರ್ ಆಚಾರ್ಯ, ಅರ್ಚಕರಾದ ರಾಮಚಂದ್ರಾಚಾರ್ಯ, ಕೃಷ್ಣಾಚಾರ್ಯ ಹಾಗೂ ಶ್ರೀಮಠದ ಸಿಬ್ಬಂದಿ, ಸ್ವಯಂಸೇವಕರು, ಭಕ್ತರು ಭಾಗವಹಿಸಿ ಶ್ರೀ ಗುರುರಾಯರಿಗೆ ಸೇವೆಯನ್ನು ಸಲ್ಲಿಸಿದರು.