ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ರ‍್ಯಾಗಿಂಗ್ ಎಂಬ ಪೆಡಂಭೂತ

ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಿರುವವರು, ಅದರಲ್ಲೂ ನಿರ್ದಿಷ್ಟ ವಾಗಿ ವೈದ್ಯಕೀಯ, ಎಂಜಿನಿಯರಿಂಗ್‌ನಂಥ ಉನ್ನತ ವ್ಯಾಸಂಗಕ್ಕೆ ಒಡ್ಡಿಕೊಂಡಿರುವವರು ಒಂದಿ ಷ್ಟು ಹೆಚ್ಚುವರಿ ಒತ್ತಡಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಮನೆಯಿಂದ ಮತ್ತು ಮನೆಯವರ ಒಡನಾಟ ದಿಂದ ದೂರವಿದ್ದು ಹೀಗೆ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆಯ ಬೇಕಾಗಿ ಬರುವಾಗಲೇ ಅಂಥ ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ ನೆಲೆಯಲ್ಲಿ ಒಂದಷ್ಟು ಒತ್ತಡಗಳು ಅಥವಾ ತಲ್ಲಣ ಗಳು ಇರುತ್ತವೆ.

ರ‍್ಯಾಗಿಂಗ್ ಎಂಬ ಪೆಡಂಭೂತ

Ashok Nayak Ashok Nayak Jul 21, 2025 1:06 PM

ಪಶ್ಚಿಮ ಬಂಗಾಳದ ಐಐಟಿ ಖರಗ್‌ಪುರ ವಿದ್ಯಾರ್ಥಿ ನಿಲಯದ ಕೊಠಡಿಯೊಂದರಲ್ಲಿ 21ರ ಹರೆಯದ ವಿದ್ಯಾರ್ಥಿಯೊಬ್ಬ ರ‍್ಯಾಗಿಂಗ್ ಕಿರಿಕಿರಿಗೆ ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯನ್ನು ನೀವು ಈಗಾಗಲೇ ಓದಿದ್ದೀರಿ. ಕಳೆದ ಮೂರು ವರ್ಷಗಳಲ್ಲಿ ಐಐಟಿ ಖರಗ್ ಪುರದಲ್ಲಿ ಇದು ಏಳನೇ ಆತ್ಮಹತ್ಯೆ ಪ್ರಕರಣವಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ರ‍್ಯಾಗಿಂಗ್ ಪಿಡುಗನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟವರನ್ನು ಶಿಕ್ಷೆಗೆ ಗುರಿಪಡಿಸಬೇಕಾದ ಅಗತ್ಯವಿದೆ.

ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಿರುವವರು, ಅದರಲ್ಲೂ ನಿರ್ದಿಷ್ಟ ವಾಗಿ ವೈದ್ಯಕೀಯ, ಎಂಜಿನಿಯರಿಂಗ್‌ನಂಥ ಉನ್ನತ ವ್ಯಾಸಂಗಕ್ಕೆ ಒಡ್ಡಿಕೊಂಡಿರುವವರು ಒಂದಿ ಷ್ಟು ಹೆಚ್ಚುವರಿ ಒತ್ತಡಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಮನೆಯಿಂದ ಮತ್ತು ಮನೆಯವರ ಒಡನಾಟದಿಂದ ದೂರವಿದ್ದು ಹೀಗೆ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆಯ ಬೇಕಾಗಿ ಬರುವಾ ಗಲೇ ಅಂಥ ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ ನೆಲೆಯಲ್ಲಿ ಒಂದಷ್ಟು ಒತ್ತಡಗಳು ಅಥವಾ ತಲ್ಲಣ ಗಳು ಇರುತ್ತವೆ.

ಇದನ್ನೂ ಓದಿ: Vishwavani Editorial: ಅಕ್ರಮವಾಸಿಗಳನ್ನು ಒಕ್ಕಲೆಬ್ಬಿಸಿ

ಜತೆಗೆ, ಹೆಚ್ಚು ಹಣ ಖರ್ಚುಮಾಡಿ ಇಂಥ ಉನ್ನತ ಶಿಕ್ಷಣಕ್ಕೆ ಸೇರಿಕೊಂಡವರಲ್ಲಿ, ಅದಕ್ಕೆ ತಕ್ಕಂತೆ ಫಲಿತಾಂಶವನ್ನು ತಂದುಕೊಟ್ಟು, ತರುವಾಯದಲ್ಲಿ ಉದ್ಯೋಗಕ್ಕೆ ಸೇರಿ, ಹೆತ್ತವರ ಆರ್ಥಿಕ ಹೊರೆಯನ್ನು ತಗ್ಗಿಸಬೇಕಾದ ಅನಿವಾರ್ಯತೆಯೂ ಇರುತ್ತದೆ. ವೈದ್ಯಕೀಯ ಮತ್ತು ಎಂಜಿನಿಯ ರಿಂಗ್‌ನಂಥ ಉನ್ನತ ಶಿಕ್ಷಣದ ಪಠ್ಯಕ್ರಮವು ನಿರೀಕ್ಷಿಸುವ ಅಧ್ಯಯನ-ಬದ್ಧತೆಯನ್ನು ಯಥೋಚಿತ ವಾಗಿ ನೆರವೇರಿಸಬೇಕಾದ ಒತ್ತಡವೂ ಅಲ್ಲಿ ಸೇರಿಕೊಂಡಿರುತ್ತದೆ.

ಇಂಥ ಭಾರಗಳನ್ನು ತಡೆದುಕೊಳ್ಳಲಾಗದವರು, ಖಿನ್ನತೆಗೆ ಒಳಗಾಗುತ್ತಿರುವ ಪ್ರಕರಣಗಳು ದೇಶದ ವಿವಿಧೆಡೆ ವರದಿಯಾಗುತ್ತಿವೆ. ಪರಿಸ್ಥಿತಿ ಹೀಗಿರುವಾಗ, ಇಂಥ ಸಂಕಷ್ಟಗಳ ಪಟ್ಟಿಗೆ ರ‍್ಯಾಗಿಂಗ್ ಎಂಬ ಕಿರಿಕಿರಿಯೂ ಸೇರಿಕೊಂಡುಬಿಟ್ಟರೆ, ಆಶ್ರಿತ ವಿದ್ಯಾರ್ಥಿಗಳು ರಕ್ಷಣೆಗಾಗಿ ಯಾರ ಮೊರೆಹೋಗಬೇಕು? ಎಂಬುದು ಪ್ರಶ್ನೆ. ಹದಿಹರೆಯದ ಸಹಜ ಸ್ವಭಾವಕ್ಕೆ ತಕ್ಕಂತೆ ಚುರುಕಾಗಿ ಓಡಾಡಿಕೊಂಡು, ನಳನಳಿಸುತ್ತಾ, ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಇಂಥ ಹೂವುಗಳು, ವಿವಿಧ ಒತ್ತಡಗಳಿಂದಾಗಿ ಚಿಕ್ಕ ವಯಸ್ಸಿನಲ್ಲೇ ಹೀಗೆ ಮುರುಟಿಹೋಗುವುದು ನಿಜಕ್ಕೂ ನೋವಿನ ಸಂಗತಿ. ಆದ್ದರಿಂದ, ರ‍್ಯಾಗಿಂಗ್ ಪಿಡುಗಿಗೆ ಆಳುಗರು ಮದ್ದು ಅರೆಯಲೇಬೇಕಿದೆ.