ಕ್ಯಾನ್‌ಬೆರಾ: ವಿಶ್ವದ ಎರಡು ಬಲಿಷ್ಠ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ(IND vs AUS Live Streaming) ನಡುವಿನ ಮೊದಲ ಟಿ20 ಪಂದ್ಯಕ್ಕೆ ಮನುಕಾ ಓವಲ್ ಸ್ಟೇಡಿಯಂ ಸಜ್ಜಾಗಿ ನಿಂತಿದೆ. ಇಂದು(ಬುಧವಾರ) ಮಧ್ಯಾಹ್ನ ಆರಂಭಗೊಳ್ಳಲಿರುವ ತೀವ್ರ ಪೈಪೋಟಿಯ ಪಂದ್ಯ ಕಣ್ತುಂಬಿಕೊಳ್ಳಲು ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಪಂದ್ಯದ ಹಮಾವಾನ ಮುನ್ಸೂಚನೆ(IND vs AUS Live Streaming) ಹೇಗಿದೆ ಎಂಬ ವರದಿ ಇಲ್ಲಿದೆ.
ಹವಾಮಾನ ವರದಿ
ಅಕ್ಯೂವೆದರ್ ಪ್ರಕಾರ, ಕ್ಯಾನ್‌ಬೆರಾದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಆದರೆ ಪಂದ್ಯ ಆರಂಭವಾಗುವ ಹೊತ್ತಿಗೆ, ಮಳೆ ಬೀಳುವ ಸಾಧ್ಯತೆಗಳು ಗಣನೀಯವಾಗಿ ಕಡಿಮೆ ಇದೆ. ಸ್ಥಳೀಯ ಸಮಯ(ಆಸ್ಟ್ರೇಲಿಯಾ) ಸಂಜೆ 6 ರಿಂದ 7 ಗಂಟೆಯ ನಡುವೆ, ಮಳೆ ಬೀಳುವ ಸಾಧ್ಯತೆ ಶೇ. 16 ರಿಂದ 20 ರವರೆಗೆ ಇರುತ್ತದೆ. ರಾತ್ರಿಯಾಗುತ್ತಿದ್ದಂತೆ ಮಳೆ ಬೀಳುವ ಸಾಧ್ಯತೆ ಶೇ. 7 ಕ್ಕೆ ಇಳಿಯಲಿದೆ. ತಾಪಮಾನವು ಸುಮಾರು 14 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರುತ್ತದೆ, ಸುಮಾರು ಶೇ. 80 ರಷ್ಟು ಮೋಡ ಕವಿದ ವಾತಾವರಣವಿರುತ್ತದೆ ಎಂದು ಅಕ್ಯೂವೆದರ್ ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ IND-W vs AUS-W: ನಿಧಾನಗತಿಯ ಬೌಲಿಂಗ್; ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಶೇಕಡಾ 10 ರಷ್ಟು ದಂಡ
ಸಣ್ಣ ಪ್ರಮಾಣದ ಮಳೆಯಿಂದ ಪಂದ್ಯಕ್ಕೆ ಅಡಚಣೆ ಉಂಟಾಗಬಹುದಾದರೂ, ಪಂದ್ಯ ಸಂಪೂರ್ಣವಾಗಿ ರದ್ದಾಗುವ ಸಾಧ್ಯತೆ ಕಡಿಮೆ. ಆದಾಗ್ಯೂ, ಮಳೆ ನಿರೀಕ್ಷೆಗಿಂತ ಹೆಚ್ಚು ಕಾಲ ಮುಂದುವರಿದರೆ, ಕಡಿಮೆ ಓವರ್‌ಗಳ ಪಂದ್ಯ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಬಲಾಬಲ
ಉಭಯ ತಂಡಗಳ ಇತ್ತೀಚಿನ ಪ್ರದರ್ಶನ ನೋಡುವುದಾದರೆ, ಭಾರತ ತಂಡವು ತಾನು ಆಡಿರುವ ಕಳೆದ ಹತ್ತು ಪಂದ್ಯಗಳಲ್ಲಿ 8ರಲ್ಲಿ ಜಯಿಸಿದೆ. ಒಂದು ಟೈ ಆಗಿದೆ. ಇನ್ನೊಂದರಲ್ಲಿ ಸೋತಿತ್ತು. ಆಸ್ಟ್ರೇಲಿಯಾ ಕೂಡ ಇತ್ತೀಚೆಗೆ ಆಡಿದ ಹತ್ತು ಪಂದ್ಯಗಳಲ್ಲಿ ಒಂದರಲ್ಲಿ ಸೋತಿತ್ತು. ಇನ್ನೊಂದು ಪಂದ್ಯ ಮಳೆಗೆ ರದ್ದಾಗಿತ್ತು.