Azmatullah Omarzai: ಸ್ಫೋಟಕ ಅರ್ಧಶತಕ ಸಿಡಿಸಿ ಸೂರ್ಯಕುಮಾರ್ ದಾಖಲೆ ಮುರಿದ ಒಮರ್ಜಾಯ್
20 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಒಮರ್ಜಾಯ್, T20 ಏಷ್ಯಾ ಕಪ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎನಿಸಿದರು. ಇದಕ್ಕೂ ಮುನ್ನ ಈ ದಾಖಲೆ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿತ್ತು. 2022ರ ಏಷ್ಯಾ ಕಪ್‌ನಲ್ಲಿ ಸೂರ್ಯ ಹಾಂಗ್ ಕಾಂಗ್ ವಿರುದ್ಧ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

-

ಅಬುಧಾಬಿ: ಏಷ್ಯಾಕಪ್ ಟಿ20(Asia Cup 2025 ) ಟೂರ್ನಿಯಲ್ಲಿ ಅಫ್ಘಾನಿಸ್ತಾನ ಶುಭಾರಂಭ ಮಾಡಿದೆ. ಮಂಗಳವಾರ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ ಹಾಂಕಾಂಗ್(India vs United Arab Emirates) ವಿರುದ್ಧ 94 ರನ್‌ಗಳ ಗೆಲುವು ಸಾಧಿಸಿತು. ಇದೇ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿದ್ದ ಅಜ್ಮತುಲ್ಲಾ ಒಮರ್ಜಾಯ್(Azmatullah Omarzai) ಅವರು ಸೂರ್ಯಕುಮಾರ್ ದಾಖಲೆಯೊಂದನ್ನು ಮುರಿದಿದ್ದಾರೆ.
20 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಒಮರ್ಜಾಯ್, T20 ಏಷ್ಯಾ ಕಪ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎನಿಸಿದರು. ಇದಕ್ಕೂ ಮುನ್ನ ಈ ದಾಖಲೆ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿತ್ತು. 2022ರ ಏಷ್ಯಾ ಕಪ್‌ನಲ್ಲಿ ಸೂರ್ಯ ಹಾಂಗ್ ಕಾಂಗ್ ವಿರುದ್ಧ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.
ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡ ನಿಧಾನ ಆರಂಭ ಪಡೆದರೂ, ಸ್ಲಾಗ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಮೊದಲ 15 ಓವರಲ್ಲಿ 110 ರನ್ ಗಳಿಸಿದ್ದ ಅಫ್ಘಾನಿಸ್ತಾನ ಕೊನೆ 5 ಓವರಲ್ಲಿ 78 ರನ್ ಚಚ್ಚಿತು. ಆರಂಭಿಕ ಬ್ಯಾಟರ್ ಸೆದಿಕುಲ್ಹಾ ಅಟಲ್ ಔಟಾಗದೆ 73, ಅಜ್ಮತುಲ್ಲಾ ಒಮರ್ಜಾಯ್ ಕೊನೆಯಲ್ಲಿ ಕೇವಲ 21 ಎಸೆತದಲ್ಲಿ 53 ರನ್ ಸಿಡಿಸಿದರು. ಮೊಹಮ್ಮದ್ ನಬಿ 33 ರನ್ ಸಿಡಿಸಿದರು. ಅಂತಿಮವಾಗಿ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 188 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.
ಇದನ್ನೂ ಓದಿ Asia Cup 2025: ಯುಎಇ ವಿರುದ್ದದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ಕೆ ಶ್ರೀಕಾಂತ್!
ಬೃಹತ್ ಗುರಿ ಬೆನ್ನತ್ತಿದ ಹಾಂಕಾಂಗ್ 22 ರನ್‌ಗೆ 4 ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಸೋಲನ್ನು ಖಚಿತಪಡಿಸಿಕೊಂಡಿತು. ಅಂತಿಮವಾಗಿ 9 ವಿಕೆಟ್‌ಗೆ 94 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯದಲ್ಲಿ ಉಭಯ ತಂಡಗಳು ಸೇರಿ ಒಟ್ಟು 8 ಕ್ಯಾಚ್‌ಗಳನ್ನು ಕೈಚೆಲ್ಲಿತು.