ಗಂಭೀರ ಗಾಯವಾದರೆ ಇನ್ನು ಬದಲಿ ಬ್ಯಾಟರ್, ಬೌಲರ್ ಕಣಕ್ಕೆ!
injury replacement substitute: ಹೊಸ ನಿಯಮದ ಪ್ರಕಾರ ಆಟಗಾರ ಪಂದ್ಯದ ವೇಳೆ, ಮೈದಾನದಲ್ಲಿ ಗಾಯಗೊಂಡರೆ ಮಾತ್ರ ಈ ನಿಯಮ ನಿಯಮ ಅನ್ವಯವಾಗಲಿದೆ. ಗಾಯಗೊಂಡ ಆಟಗಾರನ ಬಗ್ಗೆ ಅಂಪೈರ್‌ಗಳು ಮ್ಯಾಚ್ ರೆಫ್ರಿ, ವೈದ್ಯರಿಗೆ ಮಾಹಿತಿ ನೀಡಬೇಕು. ಅವರು ಪರಿಶೀಲನೆ ನಡೆಸುತ್ತಾರೆ. ಆಟಗಾರ ಆಡುವುದು ಸೂಕ್ತವಲ್ಲ ಎಂದು ಪರಿಗಣಿಸಿದರೆ ಬೇರೊಬ್ಬ ಆಟಗಾರನನ್ನು ಆಡಲು ಅವಕಾಶ ಕೊಡುತ್ತಾರೆ.


ಮುಂಬಯಿ: ದೇಶೀಯ ಕ್ರಿಕೆಟ್‌ನಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿರುವ ಬಿಸಿಸಿಐ(BCCI) ಇದೀಗ ಮತ್ತೊಂದು ಹೊಸ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ. 2025-26ರ ಋತುವಿನ ಟೂರ್ನಿಯಲ್ಲಿ ದೇಸಿ ಕ್ರಿಕೆಟ್ ಟೂರ್ನಿಯ ಬಹು ದಿನಗಳ ಪಂದ್ಯಗಳಲ್ಲಿ(multi-day competitions) ಯಾವುದೇ ಆಟಗಾರ ಗಂಭೀರವಾಗಿ ಗಾಯಗೊಂಡರೆ ಅವರ ಬದಲು ಬೇರೊಬ್ಬ ಬ್ಯಾಟರ್, ಬೌಲರ್ ಕಣಕ್ಕಿಳಿಯಲು ಅವಕಾಶ ನೀಡಲಿದೆ. ಈ ಬಗ್ಗೆ ಅಹಮದಾಬಾದ್‌ನಲ್ಲಿ ನಡೆದ ಅಂಪೈರ್‌ಗಳ ಸೆಮಿನಾರ್‌ನಲ್ಲಿ ವಿವರಣೆ ನೀಡಲಾಗಿದೆ. ಮುಂದಿನ ಋತುವಿನಲ್ಲಿ ಜಾರಿಗೆ ಬರಲಿದೆ.
ಹೌದು ಈವರೆಗೂ ಪಂದ್ಯದ ವೇಳೆ ತಲೆಗೆ ಪೆಟ್ಟು ಬಿದ್ದು(ಕನ್ಕಶನ್ ಸಬ್‌ಸ್ಟಿಟ್ಯೂಟ್) ಆಟಗಾರ ಹೊರಗುಳಿದರೆ ಮಾತ್ರ ಬೇರೊಬ್ಬ ಆಟಗಾರನಿಗೆ ಬ್ಯಾಟಿಂಗ್ ಅಥವಾ ಬೌಲಿಂಗ್ ಅವಕಾಶವಿತ್ತು. ತಲೆ ಹೊರತು ಬೇರೆ ರೀತಿಯ ಗಾಯವಾಗಿ ಆಟಗಾರ ಪಂದ್ಯದಿಂದ ಹೊರಬಿದ್ದರೂ ಬದಲಿ ಆಟಗಾರನಿಗೆ ಕೇವಲ ಫೀಲ್ಡಿಂಗ್‌ಗೆ ಅವಕಾಶ ನೀಡಲಾಗುತ್ತಿತ್ತು.
ಆದರೆ ಇನ್ನು ಮುಂದೆ ದೇಸಿ ಕ್ರಿಕೆಟ್‌ನ ಬಹು ದಿನಗಳ (ರಣಜಿ ಟ್ರೋಫಿ, ಸಿ.ಕೆ.ನಾಯ್ಡು ಅಂಡರ್-19) ಟೂರ್ನಿಗಳಲ್ಲಿ ಆಟಗಾರನಿಗೆ ಗಂಭೀರ ಗಾಯ ಅಂದರೆ ಮೂಳೆ ಮುರಿತ, ಇನ್ನಿತರ ಗಾಯವಾದರೆ ಬೇರೊಬ್ಬ ಆಟಗಾರನಿಗೆ ಬ್ಯಾಟಿಂಗ್, ಬೌಲಿಂಗ್ ಅವಕಾಶ ಸಿಗಲಿದೆ. ಈ ನಿಯಮ ಮುಷ್ತಾಕ್ ಅಲಿ ಟಿ20, ವಿಜಯ್ ಹಜಾರೆ ಏಕದಿನದಲ್ಲಿ ಸದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ.
ಹೊಸ ನಿಯಮದಲ್ಲೇನಿದೆ?
ಹೊಸ ನಿಯಮದ ಪ್ರಕಾರ ಆಟಗಾರ ಪಂದ್ಯದ ವೇಳೆ, ಮೈದಾನದಲ್ಲಿ ಗಾಯಗೊಂಡರೆ ಮಾತ್ರ ಈ ನಿಯಮ ನಿಯಮ ಅನ್ವಯವಾಗಲಿದೆ. ಗಾಯಗೊಂಡ ಆಟಗಾರನ ಬಗ್ಗೆ ಅಂಪೈರ್‌ಗಳು ಮ್ಯಾಚ್ ರೆಫ್ರಿ, ವೈದ್ಯರಿಗೆ ಮಾಹಿತಿ ನೀಡಬೇಕು. ಅವರು ಪರಿಶೀಲನೆ ನಡೆಸುತ್ತಾರೆ. ಆಟಗಾರ ಆಡುವುದು ಸೂಕ್ತವಲ್ಲ ಎಂದು ಪರಿಗಣಿಸಿದರೆ ಬೇರೊಬ್ಬ ಆಟಗಾರನನ್ನು ಆಡಲು ಅವಕಾಶ ಕೊಡುತ್ತಾರೆ. ಗಾಯಾಳು ಆಟಗಾರನಿಗೆ ಆ ಪಂದ್ಯದಲ್ಲಿ ಮುಂದುವರಿಯಲು ಮತ್ತೆ ಅವಕಾಶವಿರುವುದಿಲ್ಲ. ಬದಲಿ ಆಟಗಾರರ ಪಟ್ಟಿಯನ್ನು ತಂಡ ಟಾಸ್ ವೇಳೆ ನೀಡಬೇಕಾಗುತ್ತದೆ. ವರದಿಗಳ ಪ್ರಕಾರ, ಮುಂದಿನ ಐಪಿಎಲ್‌ನಲ್ಲೂ ಈ ನಿಯಮವನ್ನು ಜಾರಿಗೊಳಿಸಲು ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ BCCI Revenue: ಬರೋಬ್ಬರಿ 9,741.7 ಕೋಟಿ ರೂ. ಆದಾಯ ಗಳಿಸಿದ ಬಿಸಿಸಿಐ; ಐಪಿಎಲ್ ಗಳಿಕೆಯೇ ಸಿಂಹಪಾಲು