ಭಾರತದಲ್ಲಿ ಸಾಕುಪ್ರಾಣಿಗಳ ಸಾಕಣೆಯಲ್ಲಿ ಚಾಂಪಿಯನ್ ಆಗುವುದಕ್ಕಾಗಿ ಶುಭ್‌ಮನ್ ಗಿಲ್ ಜೊತೆಗೆ ಒಪ್ಪಂದ ಮಾಡಿಕೊಂಡ ಬೌಲರ್ಸ್
ಅಲ್ಲಾನಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿ. (ಎಸಿಪಿಎಲ್) ಸಂಸ್ಥೆಯ ಸಾಕು ಪ್ರಾಣಿ ಆಹಾರ ವಿಭಾಗ ವಾಗಿರುವ ಅಲ್ಲಾನಾ ಪೆಟ್ ಸೊಲ್ಯೂಶನ್ಸ್ (ಎಪಿಎಸ್) ಅಡಿಯಲ್ಲಿರುವ ಭಾರತದ ಅತ್ಯಂತ ವಿಶ್ವಾ ಸಾರ್ಹ ಶ್ವಾನ ಪೌಷ್ಠಿಕಾಂಶ ಬ್ರ್ಯಾಂಡ್ ಬೌಲರ್ಸ್ ಈಗ ಕ್ರಿಕೆಟ್ ಐಕಾನ್ ಶುಭ್‌ಮನ್ ಗಿಲ್ ಅವರನ್ನು ಬ್ರ್ಯಾಂಡ್ ಅಬಾಸಿಡರ್ ಆಗಿ ನೇಮಿಸಿದ್ದು, ಸಾಕುಪ್ರಾಣಿಗಳು ಮತ್ತು ಅದರ ಮಾಲೀಕರ ಮಧ್ಯದ ಬಾಂಧವ್ಯವನ್ನು ಇನ್ನಷ್ಟು ಬಲವಾಗಿಸುತ್ತಿದೆ.

-

ಪ್ರತಿ ಬ್ಯಾಟ್ಸ್‌ಮನ್‌ಗೂ ಬೌಲರ್ ಬೇಕಿರುತ್ತದೆ ಎಂಬ ಘೋಷವಾಕ್ಯವು ಕ್ರಿಕೆಟ್ ಹಾಗೂ ಸಾಕುಪ್ರಾಣಿ ಆರೈಕೆಯ ಮಧ್ಯೆ ಇರುವ ಬಾಂಧವ್ಯವನ್ನು ಸೂಚಿಸುತ್ತದೆ
ಅಲ್ಲಾನಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿ. (ಎಸಿಪಿಎಲ್) ಸಂಸ್ಥೆಯ ಸಾಕು ಪ್ರಾಣಿ ಆಹಾರ ವಿಭಾಗ ವಾಗಿರುವ ಅಲ್ಲಾನಾ ಪೆಟ್ ಸೊಲ್ಯೂಶನ್ಸ್ (ಎಪಿಎಸ್) ಅಡಿಯಲ್ಲಿರುವ ಭಾರತದ ಅತ್ಯಂತ ವಿಶ್ವಾಸಾರ್ಹ ಶ್ವಾನ ಪೌಷ್ಠಿಕಾಂಶ ಬ್ರ್ಯಾಂಡ್ ಬೌಲರ್ಸ್ ಈಗ ಕ್ರಿಕೆಟ್ ಐಕಾನ್ ಶುಭ್‌ಮನ್ ಗಿಲ್ ಅವರನ್ನು ಬ್ರ್ಯಾಂಡ್ ಅಬಾಸಿಡರ್ ಆಗಿ ನೇಮಿಸಿದ್ದು, ಸಾಕುಪ್ರಾಣಿಗಳು ಮತ್ತು ಅದರ ಮಾಲೀಕರ ಮಧ್ಯದ ಬಾಂಧವ್ಯವನ್ನು ಇನ್ನಷ್ಟು ಬಲವಾಗಿಸುತ್ತಿದೆ. ಕ್ರಿಕೆಟ್ ಮತ್ತು ಸಾಕುಪ್ರಾಣಿ ಆರೈಕೆಯ ಮಧ್ಯೆ ಒಂದು ಹೃದಯಪೂರ್ವಕವಾದ ಸಂಬಂಧ ಇದೆ ಎಂಬುದನ್ನು ಈ ಅಭಿಯಾನವು ಒತ್ತಿ ಹೇಳುತ್ತದೆ. ಪ್ರತಿ ಬ್ಯಾಟ್ಸ್‌ಮನ್‌ಗೂ ಗೆಲ್ಲುವುದಕ್ಕೆ ಒಬ್ಬ ಬೌಲರ್ ಬೇಕಾಗುತ್ತದೆ.
ಹಾಗೆಯೇ, ಪ್ರತಿ ಸಾಕುಪ್ರಾಣಿಗೂ ಸರಿಯಾದ ಪೌಷ್ಠಿಕಾಂಶ, ಚಾಂಪಿಯನ್‌ಶಿಪ್ ಮತ್ತು ಪ್ರೀತಿಯನ್ನು ತೋರಿಸಲು ಒಬ್ಬ ಪೋಷಕ ಬೇಕಾಗುತ್ತಾನೆ. ಪ್ರತಿ ಸಾಕುಪ್ರಾಣಿಯೂ ಅಗತ್ಯವಿರುವ ಪೌಷ್ಠಿಕಾಂಶವನ್ನು ಪಡೆಯುತ್ತದೆ ಎಂಬುದನ್ನು ಬೌಲರ್ಸ್ ಖಾತ್ರಿಪಡಿಸುತ್ತದೆ. ಈ ಅಭಿಯಾನ ದಲ್ಲಿ ಶುಭ್‌ಮನ್ ಗಿಲ್ ಅವರನ್ನು ಒಂದು ವಿಶಿಷ್ಟ ಪಾತ್ರದಲ್ಲಿ ತೋರಿಸಲಾಗುತ್ತದೆ. ಇಲ್ಲಿ ಬ್ಯಾಟ್ಸ್‌ಮನ್ ಆಗಿ ಅಲ್ಲ, ಬದಲಿಗೆ ಬೌಲರ್ ಆಗಿ ಅವರು ಕಾಣಿಸಿಕೊಳ್ಳುತ್ತಾರೆ.
ಇದನ್ನೂ ಓದಿ: Vishweshwar Bhat Column: ಫೋನೆಟಿಕ್ ಅಲ್ಫಾಬೆಟ್ ಅಂದರೇನು ?
ಹೇಗೆ ಸಾಕುಪ್ರಾಣಿಗಳು ತಮ್ಮ ಪಾಲಕರ ಪ್ರೀತಿ ಮತ್ತು ಆರೈಕೆಯಿಂದಾಗಿ ಬೌಲ್ಡ್ ಆಗಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಬೌಲರ್ ಮತ್ತು ಬ್ಯಾಟ್ಸ್‌ಮನ್ ಮಧ್ಯೆ ಕ್ರಿಕೆಟ್‌ನಲ್ಲಿ ಇರುವ ಬಾಂಧವ್ಯವನ್ನು ಒಂದು ರೂಪಕವಾಗಿ ಬಳಸಿಕೊಂಡು, ಶ್ವಾನಗಳು ಮತ್ತು ಅದರ ಕುಟುಂಬದ ಜೊತೆಗೆ ಇರುವ ಬಾಂಧವ್ಯವನ್ನು ತಿಳಿಸಿ ಹೇಳುತ್ತದೆ. ಒಂದು ಆಟವನ್ನು ಪೂರ್ತಿಗೊಳಿಸಲು ಪ್ರತಿ ಬ್ಯಾಟ್ಸ್‌ಮನ್‌ಗೂ ಒಬ್ಬ ಬೌಲರ್ ಬೇಕಿರುವ ಹಾಗೆಯೇ, ಪ್ರತಿ ಶ್ವಾನಕ್ಕೂ ಸರಿಯಾದ ಪೌಷ್ಠಿಕಾಂಶ, ಆರೈಕೆ ಮತ್ತು ಚಾಂಪಿಯನ್‌ಶಿಪ್‌ಗೆ ಸರಿಯಾದ ಪಾಲಕರು ಬೇಕು. ಶುಭ್‌ಮನ್ ಗಿಲ್ ಅವರ ಜೊತೆಗಿನ ಈ ಪಾಲುದಾರಿಕೆಯ ಅಡಿಯಲ್ಲಿ ಹಲವು ಅಭಿಯಾನಗಳನ್ನು ಮುಂದಿನ ತಿಂಗಳಿನಿಂದ ಆರಂಭಿಸಿ ಹೊಸ ವರ್ಷದವರೆಗೆ ನಡೆಸಲಾಗುತ್ತದೆ.
ಭಾರತದ ಎಲ್ಲೆಡೆ ಇರುವ ಸಾಕುಪ್ರಾಣಿಗಳ ಪೋಷಕರಿಗೆ ಒಂದು ವಿಶಿಷ್ಟ ಡಿಜಿಟಲ್ ಅನುಭವವನ್ನು ನಾವು ಒದಗಿಸುತ್ತೇವೆ. ಅಷ್ಟೇ ಅಲ್ಲ, ಆಕರ್ಷಕ ಪ್ರಾದೇಶಿಕ ಸಂಪರ್ಕ ಕಾರ್ಯಕ್ರಮಗಳು ಹಾಗೂ ವಿಶಿಷ್ಟ ಸ್ಫರ್ಧೆಗಳನ್ನು ಆಯೋಜಿಸಲಾಗಿದ್ದು, ಶುಭ್‌ಮನ್ ಗಿಲ್ ಅವರು ಸಹಿ ಮಾಡಿದ ಎಕ್ಸ್‌ಕ್ಲೂಸಿವ್ ಸಾಮಗ್ರಿಗಳನ್ನು ಪಡೆಯಬಹುದಾಗಿದೆ. ಈ ಅಭಿಯಾನದ ಅಡಿಯಲ್ಲಿ ಅಮೋಘ ವಾದ ವೀಡಿಯೋಗಳನ್ನೂ ಬಿಡುಗಡೆ ಮಾಡಲಾಗುತ್ತಿದ್ದು, ಮುಂದಿನ ತಿಂಗಳಿನಿಂದ ಇಡೀ ವರ್ಷದವರೆಗೆ ಅವು ಪ್ರಸಾರವಾಗಲಿವೆ.
ಒಒಎಚ್, ರೇಡಿಯೋ ಸಹಭಾಗಿತ್ವಗಳು, ಆರ್‌ಡಬ್ಲ್ಯೂಎಗಳ ಜೊತೆಗೆ ಸ್ಯಾಂಪ್ಲಿಂಗ್, ಕ್ರಿಕೆಟ್ ಟೂರ್ನಮೆಂಟ್‌ಗಳು ಮತ್ತು ಸಿನಿಮಾ ಜಾಹೀರಾತುಗಳನ್ನು ಕೂಡಾ ಈ ಅಭಿಯಾನದ ಅಡಿಯಲ್ಲಿ ನಡೆಸಲಾಗುತ್ತದೆ. ಪ್ರತಿ ಸಾಕುಪ್ರಾಣಿಗೂ ಸರಿಯಾದ ಪ್ರಮಾಣದ ಪೌಷ್ಠಿಕಾಂಶ ಬೇಕು ಎಂಬುದನ್ನು ಈ ಅಭಿಯಾನದ ಅಡಿಯಲ್ಲಿ ನಾವು ಒತ್ತಿ ಹೇಳಲಿದ್ದೇವೆ.
ಅಲ್ಲಾನಾ ಪೆಟ್ ಸೊಲ್ಯೂಶನ್ಸ್ ಎಸಿಪಿಎಲ್‌ನ ಬ್ಯುಸಿನೆಸ್ ಹೆಡ್ ನಿತಿನ್ ಕುಲಕರ್ಣಿ ಮಾತನಾಡಿ “ಭಾರತದಲ್ಲಿ ಸಾಕುಪ್ರಾಣಿ ಆರೈಕೆ ಹಾಗೂ ಗುಣಮಟ್ಟದ ಸಾಕುಪ್ರಾಣಿ ಪೌಷ್ಠಿಕಾಂಶ ವಿಭಾಗದಲ್ಲಿ ಬೌಲರ್ಸ್ ಹೆಸರನ್ನು ಮನೆಮಾತಾಗಿಸುವ ನಿಟ್ಟಿನಲ್ಲಿ ಶುಭ್‌ಮನ್ ಗಿಲ್ ಅವರ ಜೊತೆಗಿನ ನಮ್ಮ ಪಾಲುದಾರಿಕೆಯು ಒಂದು ಮಹತ್ವದ ಮೈಲಿಗಲ್ಲಾಗಿದೆ. ಮೆಟ್ರೋಗಳು ಹಾಗೂ ಸಣ್ಣ ನಗರಗಳಲ್ಲಿ ಸಾಕುಪ್ರಾಣಿ ಮಾಲೀಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶುಭ್‌ಮನ್ ಅವರ ಪ್ರಭಾವ ಮತ್ತು ಜನರಲ್ಲಿ ಅವರ ಬಗ್ಗೆ ಇರುವ ಕುತೂಹಲವು ನಮ್ಮ ಬ್ರ್ಯಾಂಡ್‌ಗೆ ಹೊಂದಿಕೆಯಾಗುತ್ತದೆ.
ನಾವು ಪ್ರೀಮಿಯಂ ಬ್ರ್ಯಾಂಡ್ ಆಗುವ, ವಿಜ್ಞಾನ ಆಧರಿತ ಪೌಷ್ಠಿಕಾಂಶವು ಎಲ್ಲರಿಗೂ ತಲುಪಬೇಕು ಎಂಬ ಗುರಿ ಹಾಗೂ ಸಾಕುಪ್ರಾಣಿಯ ಪಾಲಕರಿಗೆ ಕೈಗೆಟಕುವ ದರದಲ್ಲಿ ಪ್ರಾಣಿ ಆಹಾರ ಸಿಗಬೇಕು ಎಂಬ ಗುರಿಯನ್ನು ಬ್ರ್ಯಾಂಡ್ ಹೊಂದಿದ್ದು, ಈ ಅಭಿಯಾನವು ಇದಕ್ಕೆ ಪೂರಕವಾಗಿದೆ. ಶಿಸ್ತು, ಕಾರ್ಯಕ್ಷಮತೆ ಮತ್ತು ಪರಿಣಿತಿಗೆ ಅವರು ಅಪಾರ ಮಹತ್ವವನ್ನು ನೀಡುತ್ತಿದ್ದು, ಬೌಲರ್ಸ್ ಕೂಡಾ ಇದೇ ತತ್ವವನ್ನು ಅಳವಡಿಸಿಕೊಂಡಿದೆ ಮತ್ತು ಪ್ರತಿ ಉತ್ಪನ್ನವು ಗುಣಮಟ್ಟ, ಸುರಕ್ಷತೆ ಮತ್ತು ಶ್ವಾನಗಳ ಯೋಗಕ್ಷೇಮಕ್ಕೆ ನಮ್ಮ ಬದ್ಧತೆಯನ್ನು ಪ್ರತಿಫಲಿಸುತ್ತದೆ” ಎಂದು ಹೇಳಿದರು.
ಹೊಸ ಕಾಲದ, ಜೆನ್ ಝೀ ಮತ್ತು ಮಿಲೆನಿಯಲ್ಸ್ ಸಾಕುಪ್ರಾಣಿ ಮಾಲೀಕರ ನಿರೀಕ್ಷೆಗೆ ಶುಭ್‌ಮನ್ ಗಿಲ್ ಉತ್ತಮವಾಗಿ ಹೊಂದಿಕೆಯಾಗುತ್ತಾರೆ. ಈ ಹೊಸ ಕಾಲದ ಸಾಕುಪ್ರಾಣಿ ಮಾಲೀಕರು ಆರೋಗ್ಯ, ಜೀವನಶೈಲಿ ಮತ್ತು ಮಾಹಿತಿಯುತ ಆಯ್ಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಪ್ರೀಮಿಯಂ ಪೌಷ್ಠಿಕಾಂಶ ಹಾಗೂ ಸಾಕುಪ್ರಾಣಿ ಆರೈಕೆಯ ಮಧ್ಯೆ ಉತ್ತಮ ಸಂಬಂಧವನ್ನು ನಿರ್ಮಿಸುವ ನಿಟ್ಟಿನಲ್ಲಿ ಬೌಲರ್ಸ್ ನಡೆಸುತ್ತಿರುವ ಪ್ರಯತ್ನಕ್ಕೆ ಈ ಪಾಲುದಾರಿಕೆಯು ಇನ್ನಷ್ಟು ಇಂಬು ನೀಡುತ್ತದೆ.
ಭಾರತೀಯ ಟೆಸ್ಟ್ ಕ್ರಿಕೆಟ್ ಟೀಮ್‌ನ ಸ್ಕಿಪ್ಪರ್ ಶುಭ್‌ಮನ್ ಗಿಲ್ ಮಾತನಾಡಿ “ಉತ್ತಮ ಸಾಧನೆ ಮಾಡಲು ಸೂಕ್ತ ಪೌಷ್ಠಿಕಾಂಶದ ಮೇಲೆ ಅಥ್ಲೀಟ್‌ಗಳು ಭರವಸೆ ಇಡುವ ಹಾಗೆಯೇ, ನಮ್ಮ ಸಾಕುಪ್ರಾಣಿಗಳಿಗೂ ಸಮತೋಲಿತ, ವಿಜ್ಞಾನ ಆಧರಿತ ಆಹಾರವು ಆರೋಗ್ಯಕರ ಹಾಗೂ ಖುಷಿಯಾಗಿ ಜೀವಿಸಲು ಅಗತ್ಯವಿರುತ್ತದೆ. ಭಾರತದಲ್ಲಿ ಸಾಕುಪ್ರಾಣಿಗಳ ಆರೈಕೆಯಲ್ಲಿ ಹೊಸ ಶಕೆಯನ್ನು ಪ್ರೇರೇಪಿಸಲು ಬೌಲರ್ಸ್ ಜೊತೆಗೆ ನಾನು ಪಾಲುದಾರಿಕೆ ಮಾಡಿಕೊಂಡಿರುವ ಬಗ್ಗೆ ಉತ್ಸಾಹವಿದೆ” ಎಂದರು. ಬೌಲರ್ಸ್‌ನಲ್ಲಿ ಶ್ವಾನದ ಮರಿಗಳು, ದೊಡ್ಡ ಶ್ವಾನಗಳು ಮತ್ತು ದೊಡ್ಡ ತಳಿಯ ಶ್ವಾನಗಳಿಗೆ ಅಗತ್ಯವಿರುವ ಒಣ ಹಾಗೂ ದ್ರವ ಆಹಾರದ ವಿವಿಧ ಶ್ರೇಣಿಗಳಿವೆ. ಅಧಿಕ ಪ್ರೊಟೀನ್ ಇರುವ ಜೆರ್ಕಿ ಟ್ರೀಟ್ಸ್, ಮೀಟ್ ಬಾರ್‌ಗಳು ಸೇರಿದಂತೆ ಹಲವು ಕೇರ್ ಮತ್ತು ಟ್ರೀಟ್ ಉತ್ಪನ್ನಗಳೂ ಇವೆ.
ಪ್ರತಿ ಆಹಾರ ಉತ್ಪನ್ನವನ್ನೂ ಪ್ರಾಣಿವೈದ್ಯರು ಹಾಗೂ ನ್ಯೂಟ್ರಿಷನಿಸ್ಟ್‌ಗಳು ಅಭಿವೃದ್ಧಿಪಡಿಸಿದ್ದಾರೆ ಮತ್ತು ಭಾರತದ ಹವಾಮಾನ ಹಾಗೂ ಸಾಕುಪ್ರಾಣಿಗಳ ಅಗತ್ಯಕ್ಕೆ ಅನುಗುಣವಾಗಿದೆ. ಕಚ್ಚಾ ಸಾಮಗ್ರಿ ಖರೀದಿಯಿಂದ ಅಂತಿಮ ಉತ್ಪನ್ವನ್ನು ಪ್ಯಾಕೇಜ್ ಮಾಡುವವರೆಗೆ ಸಂಪೂರ್ಣ ಗುಣಮಟ್ಟ ವನ್ನು ಕಾಯ್ದುಕೊಳ್ಳಲಾಗಿದೆ. ಏಷ್ಯಾದ ಅತಿದೊಡ್ಡ ಆಟೊಮೇಟೆಡ್ ಪೆಟ್ ಫುಡ್ ಪ್ಲಾಂಟ್ ಆಗಿರುವ ತೆಲಂಗಾಣದ ಝಹೀರಾಬಾದ್‌ನ ಘಟಕದಲ್ಲಿ ಎಲ್ಲ ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗಿದೆ.