ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಾಳೆಯಿಂದ ಏಷ್ಯಾ ಕಪ್‌; ಆಫ್ಘಾನ್‌-ಹಾಂಕಾಂಗ್ ಮೊದಲ ಫೈಟ್‌

ರಶೀದ್‌ ಖಾನ್‌ ಪಾಳಯದಲ್ಲಿ ಟಿ20 ಟಿ20 ಟಿ20 ಸ್ಪೆಷಲಿಸ್ಟ್‌ಗಳೇ ತುಂಬಿದ್ದಾರೆ. ಅನುಭವಿ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ ಯಾವುದೇ ಕ್ಷಣದಲ್ಲಿಯೂ ತಂಡಕ್ಕೆ ನೆರವಾಗಬಲ್ಲರು. ನಾಯಕ ರಶೀದ್‌ ಖಾನ್‌ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ನಲ್ಲಿ ಹೆಸರುವಾಸಿ.

ದುಬೈ: 2025ರ ಏಷ್ಯಾಕಪ್ ಆರಂಭವಾಗುವ ಸಮಯ ಬಂದಿದೆ. ಏಷ್ಯಾದ ಅಗ್ರ ತಂಡಗಳು ಪ್ರಶಸ್ತಿಗಾಗಿ ಪರಸ್ಪರ ಪೈಪೋಟಿ ನಡೆಸಲಿವೆ. ಮಂಗಳವಾರ(ಸೆ.9) ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ಕಾದಾಟ ನಡೆಸುವುದರೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ. ಈ ಪಂದ್ಯವು ಗುಂಪು ಬಿ ವಿಭಾಗದಲ್ಲಿ ನಡೆಯಲಿದೆ. ಪಂದ್ಯಕ್ಕೆ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣ ಅಣಿಯಾಗಿದೆ.

ಹಾಂಗ್ ಕಾಂಗ್ ಏಷ್ಯಾಕಪ್‌ನಲ್ಲಿ ಐದನೇ ಬಾರಿಗೆ ಕಾಣಿಸಿಕೊಳ್ಳುತ್ತಿದೆ. ಆದರೆ ಬಲಾಬಲ ನೋಡುವಾಗ ಅಫಘಾನಿಸ್ತಾನ ಬಲಿಷ್ಠವಾಗಿದೆ. ಇತ್ತೀಚೆಗೆ ನಡೆದಿದ್ದ ಟಿ20 ತ್ರಿಕೋನ ಸರಣಿಯಲ್ಲಿ ಆಫ್ಘಾನ್‌ ತಂಡ ಪಾಕಿಸ್ತಾನಕ್ಕೆ ಸೋಲುಣಿಸಿತ್ತು. ಅಲ್ಲದೆ ಕಳೆದೊಂದು ವರ್ಷದಿಂದ ಆಫ್ಘಾನ್‌ ವಿಶ್ವದ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್‌ ನಂತಹ ತಂಡಗಳಿಗೂ ಸೋಲಿನ ರುಚಿ ತೋರಿಸಿತ್ತು. ಹೀಗಾಗಿ ಆಫ್ಘಾನ್‌ ಬಲಿಷ್ಠ ಎನ್ನಲಡ್ಡಿಯಿಲ್ಲ. ಆದರೂ ಎದುರಾಳಿಯನ್ನು ಹಗುರವಾಗಿ ಕಾಣುವಂತಿಲ್ಲ. ಏಕೆಂದರೆ ಹಾಂಗ್ ಕಾಂಗ್ ಎರಡು ಬಾರಿ ಸೋಲಿನ ರುಚಿ ತೋರಿಸಿದ್ದನ್ನು ಮರೆಯುವಂತಿಲ್ಲ. ಉಭಯ ತಂಡಗಳು ಇದುವರೆಗೆ ಟಿ20ಯಲ್ಲಿ 5 ಬಾರಿ ಮುಖಾಮುಖಿಯಾಗಿದ್ದು, ಆಫ್ಘಾನ್‌ 3, ಹಾಂಗ್ ಕಾಂಗ್ 2 ಗೆಲುವಿನ ದಾಖಲೆ ಹೊಂದಿದೆ.

ರಶೀದ್‌ ಖಾನ್‌ ಪಾಳಯದಲ್ಲಿ ಟಿ20 ಟಿ20 ಟಿ20 ಸ್ಪೆಷಲಿಸ್ಟ್‌ಗಳೇ ತುಂಬಿದ್ದಾರೆ. ಅನುಭವಿ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ ಯಾವುದೇ ಕ್ಷಣದಲ್ಲಿಯೂ ತಂಡಕ್ಕೆ ನೆರವಾಗಬಲ್ಲರು. ನಾಯಕ ರಶೀದ್‌ ಖಾನ್‌ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ನಲ್ಲಿ ಹೆಸರುವಾಸಿ.

ಇದನ್ನೂ ಓದಿ Asia Cup 2025: ನಾಳೆಯಿಂದ ಏಷ್ಯಾಕಪ್‌ ಕ್ರಿಕೆಟ್‌; ಪ್ರಶಸ್ತಿಗಾಗಿ 8 ತಂಡಗಳ ಕಾದಾಟ

ಪಿಚ್‌ ರಿಪೋರ್ಟ್‌

ಶೇಖ್ ಜಾಯೆದ್ ಕ್ರೀಡಾಂಗಣವು ನಿಧಾನಗತಿಯ ಮೇಲ್ಮೈ ಹೊಂದಿದ್ದು, ಸ್ಪಿನ್ನರ್‌ಗಳು ಇಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಪರಿಸ್ಥಿತಿ ಕಠಿಣವಾಗಬಹುದು. ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ. ಹೀಗಾಗಿ ಟಾಸ್‌ ಗೆದ್ದ ತಂಡ ಬ್ಯಾಟಿಂಗ್‌ ಆಯ್ದುಕೊಳ್ಳಬಹುದು.

ಸಂಭಾವ್ಯ ಆಡುವ ಬಳಗ

ಅಫಘಾನಿಸ್ತಾನ: ಇಬ್ರಾಹಿಂ ಜದ್ರಾನ್, ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಒಮರ್ಜಾಯ್, ದರ್ವಿಶ್ ರಸೂಲಿ, ಕರೀಂ ಜನತ್, ರಶೀದ್ ಖಾನ್ (ನಾಯಕ), ಮೊಹಮ್ಮದ್ ನಬಿ, ಘಜನ್ಫರ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ.

ಹಾಂಗ್ ಕಾಂಗ್: ಬಾಬರ್ ಹಯಾತ್, ಅಂಶುಮಾನ್ ರಾತ್ (ವಿ.ಕೀ.), ನಿಜಾಕತ್ ಖಾನ್, ಯಾಸಿಮ್ ಮುರ್ತಾಜಾ (ನಾಯಕ), ಜೀಶನ್ ಅಲಿ, ಕಿಂಚಿತ್ ಶಾ, ಕಲ್ಹಾನ್ ಚಲ್ಲು, ಎಹ್ಸಾನ್ ಖಾನ್, ಅತೀಕ್ ಇಕ್ಬಾಲ್, ಆಯುಷ್ ಶುಕ್ಲಾ, ನಸ್ರುಲ್ಲಾ ರಾಣಾ.

ಪ್ರಸಾರ: ಸೋನಿ ಸ್ಪೋರ್ಟ್ಸ್

ಸ್ಥಳ: ಅಬುಧಾಬಿ

ಆರಂಭ: ರಾತ್ರಿ 8:00