ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ನಾಳೆಯಿಂದ ಏಷ್ಯಾಕಪ್‌ ಕ್ರಿಕೆಟ್‌; ಪ್ರಶಸ್ತಿಗಾಗಿ 8 ತಂಡಗಳ ಕಾದಾಟ

8 ತಂಡಗಳು ಸೆಣಸಲಿವೆ. ಇವನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಭಾಗಿಸಲಾಗಿದೆ. ಗುಂಪು 'ಎ'ನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ಒಮಾನ್. ಗುಂಪು 'ಬಿ'ಯಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್‌ಕಾಂಗ್‌ ತಂಡಗಳು ಕಾಣಿಸಿಕೊಂಡಿದೆ. ಮಂಗಳವಾರ ನಡೆಯುವ ಉದ್ಘಾಟನ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್ ಮುಖಾಮುಖಿಯಾಗಲಿವೆ.

ಏಷ್ಯಾಕಪ್‌ ವೇಳಾಪಟ್ಟಿ, ಪ್ರಸಾರ, ಸಮಯ, ಚಾಂಪಿಯನ್ಸ್‌ಗಳ ಪಟ್ಟಿ ಇಲ್ಲಿದೆ

-

Abhilash BC Abhilash BC Sep 8, 2025 5:00 PM

ದುಬೈ: ಬಹು ನಿರೀಕ್ಷೆಯ 17ನೇ ಆವೃತ್ತಿಯ ಏಷ್ಯಾ ಕಪ್‌(Asia Cup 2025) ಕ್ರಿಕೆಟ್‌ ಪಂದ್ಯಾವಳಿ ಮಂಗಳವಾರ(ಸೆ.9) ಅರಬ್‌ ನಾಡಲ್ಲಿ ಆರಂಭಗೊಳ್ಳಲಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್​ಗೆ ಪೂರ್ವಸಿದ್ಧತೆಯಾಗಿ ಈ ಬಾರಿ ಟೂರ್ನಿ ಚುಟುಕು ಕ್ರಿಕೆಟ್​ ಮಾದರಿಯಲ್ಲಿ ನಡೆಯಲಿದೆ. ಸೋನಿ ಸ್ಪೋರ್ಟ್ಸ್​ನಲ್ಲಿ ಎಲ್ಲ ಪಂದ್ಯಗಳು ನೇರಪ್ರಸಾರ ಕಾಣಲಿವೆ. ಎಲ್ಲ ಪಂದ್ಯಗಳು ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿವೆ. ಪಂದ್ಯಗಳು ಭಾರತೀಯ ಕಾಲಮಾನದಂತೆ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

ಒಟ್ಟು 8 ತಂಡಗಳು ಸೆಣಸಲಿವೆ. ಇವನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಭಾಗಿಸಲಾಗಿದೆ. ಗುಂಪು 'ಎ'ನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ಒಮಾನ್. ಗುಂಪು 'ಬಿ'ಯಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್‌ಕಾಂಗ್‌ ತಂಡಗಳು ಕಾಣಿಸಿಕೊಂಡಿದೆ. ಮಂಗಳವಾರ ನಡೆಯುವ ಉದ್ಘಾಟನ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್ ಮುಖಾಮುಖಿಯಾಗಲಿವೆ.

ಗ್ರೂಪ್‌ ಪಂದ್ಯಗಳ ವೇಳಾಪಟ್ಟಿ

ದಿನಾಂಕ ಪಂದ್ಯ ಸ್ಥಳ ಆರಂಭ
ಸೆ. 9 ಅಫ್ಘಾನಿಸ್ತಾನ-ಹಾಂಕಾಂಗ್ ಅಬುಧಾಬಿ ರಾತ್ರಿ 8:00
ಸೆ.10 ಭಾರತ-ಯುಎಇ ದುಬೈ ರಾತ್ರಿ 8:00
ಸೆ. 11 ಬಾಂಗ್ಲಾದೇಶ-ಹಾಂಕಾಂಗ್​ ಅಬುಧಾಬಿ ರಾತ್ರಿ 8:00
ಸೆ. 12 ಪಾಕಿಸ್ತಾನ-ಓಮನ್ ದುಬೈ ರಾತ್ರಿ 8:00
ಸೆ. 13 ಬಾಂಗ್ಲಾದೇಶ-ಶ್ರೀಲಂಕಾ ಅಬುಧಾಬಿ ರಾತ್ರಿ 8:00
ಸೆ. 14 ಭಾರತ-ಪಾಕಿಸ್ತಾನ ದುಬೈ ರಾತ್ರಿ 8:00
ಸೆ. 15 ಯುಎಇ-ಓಮನ್ ಅಬುಧಾಬಿ ಸಂಜೆ 5.30
ಸೆ. 15 ಶ್ರೀಲಂಕಾ-ಹಾಂಕಾಂಗ್​ ದುಬೈ ರಾತ್ರಿ 8:00
ಸೆ. 16 ಬಾಂಗ್ಲಾದೇಶ-ಅಫ್ಘಾನಿಸ್ತಾನ ಅಬುಧಾಬಿ ರಾತ್ರಿ 8:00
ಸೆ. 17 ಪಾಕಿಸ್ತಾನ-ಯುಎಇ ದುಬೈ ರಾತ್ರಿ 8:00
ಸೆ. 18 ಶ್ರೀಲಂಕಾ-ಅಫ್ಘಾನಿಸ್ತಾನ ಅಬುಧಾಬಿ ರಾತ್ರಿ 8:00
ಸೆ. 19 ಭಾರತ-ಓಮನ್​ ಅಬುಧಾಬಿ ರಾತ್ರಿ 8:00

ಏಷ್ಯಾಕಪ್‌ ಚಾಂಪಿಯನ್ಸ್‌

ವರ್ಷ ಚಾಂಪಿಯನ್‌ ರನ್ನರ್‌ ಅಪ್‌ ಫೈನಲ್‌
1984 ಭಾರತ ಶ್ರೀಲಂಕಾ ಶಾರ್ಜಾ
1986 ಶ್ರೀಲಂಕಾ ಪಾಕಿಸ್ತಾನ ಕೊಲಂಬೊ
1988 ಭಾರತ ಶ್ರೀಲಂಕಾ ಢಾಕಾ
1990 ಭಾರತ ಶ್ರೀಲಂಕಾ ಕೋಲ್ಕತಾ
1995 ಭಾರತ ಶ್ರೀಲಂಕಾ ಶಾರ್ಜಾ
1997 ಶ್ರೀಲಂಕಾ ಭಾರತ ಕೊಲಂಬೊ
2000 ಪಾಕಿಸ್ತಾನ ಶ್ರೀಲಂಕಾ ಢಾಕಾ
2004 ಶ್ರೀಲಂಕಾ ಭಾರತ ಕೊಲಂಬೊ
2008 ಶ್ರೀಲಂಕಾ ಭಾರತ ಕರಾಚಿ
2010 ಭಾರತ ಶ್ರೀಲಂಕಾ ಡಂಬುಲ
2012 ಪಾಕಿಸ್ತಾನ ಬಾಂಗ್ಲಾದೇಶ ಮಿರ್ಪುರ್‌
2014 ಶ್ರೀಲಂಕಾ ಪಾಕಿಸ್ತಾನ ಮಿರ್ಪುರ್‌
2016 ಭಾರತ ಬಾಂಗ್ಲಾದೇಶ ಮಿರ್ಪುರ್‌
2018 ಭಾರತ ಬಾಂಗ್ಲಾದೇಶ ದುಬೈ
2022 ಶ್ರೀಲಂಕಾ ಪಾಕಿಸ್ತಾನ ದುಬೈ
2023 ಭಾರತ ಶ್ರೀಲಂಕಾ ಕೊಲಂಬೊ