2025ರ ಏಷ್ಯಾ ಕಪ್ ಟೂರ್ನಿಗೆ ಅಫಘಾನಿಸ್ತಾನ ಪ್ರಾಥಮಿಕ ತಂಡ ಪ್ರಕಟ!
Afghanistan preliminary squad: ಮುಂಬರುವ 2025ರ ಏಷ್ಯಾ ಕಪ್ ಹಾಗೂ ತ್ರಿಕೋನ ಸರಣಿಗೆ 22 ಸದಸ್ಯರ ಅಫಘಾನಿಸ್ತಾನ ತಂಡವನ್ನು ಪ್ರಕಟಿಸಿದೆ. ಸೆಪ್ಟಂಬರ್ 9 ರಿಂದ 28ರವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಯುಎಇ ಹಾಗೂ ಪಾಕಿಸ್ತಾನ ನಡುವಣ ತ್ರಿಕೋನ ಸರಣಿ ನಡೆಯಲಿದೆ.

ಅಘಘಾನಿಸ್ತಾನ ಪ್ರಾಥಮಿಕ ತಂಡ ಪ್ರಕಟ.

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್ ಟೂರ್ನಿ(Asia Cup 2025) ಹಾಗೂ ಯುಎಇ ಮತ್ತು ಪಾಕಿಸ್ತಾನ ನಡವಣ ತ್ರಿಕೋನ ಸರಣಿಗೆ 22 ಸದಸ್ಯರ ಅಫಘಾನಿಸ್ತಾನ (Afghanistan) ತಂಡವನ್ನು ಪ್ರಕಟಿಸಲಾಗಿದೆ. ಏಷ್ಯಾ ಕಪ್ ಟೂರ್ನಿಯು ಯುಎಇಯಲ್ಲಿ ಸೆಪ್ಟಂಬರ್ 9 ರಿಂದ 22ರವರೆಗೆ ನಡೆಯಲಿದೆ. ತ್ರಿಕೋನ ಸರಣಿಯಲ್ಲಿ ಯುಎಇ ಹಾಗೂ ಪಾಕಿಸ್ತಾನ ನಡುವೆ ನಡೆಯಲಿದೆ. ತರಬೇತಿ ಶಿಬಿರದಲ್ಲಿ ಆಟಗಾರರ ಫಿಟ್‌ನೆಸ್ ಹಾಗೂ ಪ್ರದರ್ಶನವನ್ನು ಆಧರಿಸಿದ ಅಂತಿಮವಾಗಿ 15 ಸದಸ್ಯರ ಅಫಘಾನಿಸ್ತಾನ ತಂಡವನ್ನು ಪ್ರಕಟಿಸಲಾಗುತ್ತದೆ.
ಯುವ ಸ್ಪಿನ್ನರ್ ಎಎಂ ಘಝಂಫರ್ ಅವರು ಗಾಯದಿಂದ ಸಂಪೂರ್ಣ ಗುಣಮುಖರಾಗಿ ಇದೀಗ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಅವರು ಎಲ್4 ಫ್ರಾಕ್ಚರ್ ಗಾಯಕ್ಕೆ ತುತ್ತಾಗಿ ದೀರ್ಘಾವಧಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇತ್ತೀಚೆಗೆ ಅವರು ದೇಶಿ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದರು ಹಾಗೂ ಗಮನಾರ್ಹ ಪ್ರದರ್ಶನವನ್ನು ತೋರಿದ್ದರು.
2025ರ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಡರ್ಬಿಶೈರ್ ತಂಡದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದರು. ಅವರು ಆಡಿದ್ದ 14 ಪಂದ್ಯಗಳಿಂದ 07.05ರ ಎಕಾನಮಿ ರೇಟ್‌ನಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದರು. ಯಾರ್ಕಶೈರ್ ವಿರುದ್ಧ ಹೆಡಿಂಗ್ಲೆಯಲ್ಲಿ ಅವರು ಗಮನಾರ್ಹ ಪ್ರದರ್ಶನವನ್ನು ತೋರಿದ್ದರು. ಅವರು ಈ ಪಂದ್ಯದಲ್ಲಿ ಬೌಲ್ ಮಾಡಿದ್ದ 4 ಓವರ್‌ಗಳಲ್ಲಿ ಎರಡು ಮೇಡಿನ್‌ನೊಂದಿಗೆ ಕೇವಲ 5 ರನ್ ನೀಡಿ ಎರಡು ವಿಕೆಟ್ ಕಿತ್ತಿದ್ದರು.
IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್ ಬುಮ್ರಾಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ!
ಘಝನ್‌ಫರ್ 2025ರ ಶಪಗೀಜಾ ಕ್ರಿಕೆಟ್ ಲೀಗ್‌ನಲ್ಲಿ ಬ್ಯಾಂಡ್-ಎ-ಅಮೀರ್ ಡ್ರಾಗನ್ಸ್ ಅನ್ನು ಪ್ರತಿನಿಧಿಸಿದರು ಮತ್ತು ಆರು ಪಂದ್ಯಗಳಲ್ಲಿ 8.66ರ ಎಕಾನಮಿಯಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದರು. ಅವರ ಮರಳುವಿಕೆಯು ಅಫಘಾನಿಸ್ತಾನ ತಂಡದ ಸ್ಪಿನ್ ವಿಭಾಗವನ್ನು ಬಲಪಡಿಸುತ್ತದೆ. ಇದರಲ್ಲಿ ಈಗಾಗಲೇ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಮತ್ತು ನೂರ್ ಅಹ್ಮದ್ ಇದ್ದಾರೆ.
"ತ್ರಿಕೋನ ಸರಣಿ ಮತ್ತು ಏಷ್ಯಾ ಕಪ್‌ಗೆ ಮುಂಚಿತವಾಗಿ ಪೂರ್ವಸಿದ್ಧತಾ ಶಿಬಿರಕ್ಕಾಗಿ ನಾವು ಪ್ರಾಥಮಿಕ ತಂಡವನ್ನು ಘೋಷಿಸಿದ್ದೇವೆ, ಹೊಸದಾಗಿ ಸೇರ್ಪಡೆಗೊಂಡ ಆಟಗಾರರನ್ನು ತರಬೇತಿ ಮತ್ತು ಪೂರ್ವಸಿದ್ಧತಾ ಶಿಬಿರದ ಸಮಯದಲ್ಲಿ ಕೋಚಿಂಗ್ ಸಿಬ್ಬಂದಿ ಮತ್ತು ನಾಯಕ ಇಬ್ಬರೂ ಪರಿಶೀಲಿಸುತ್ತಾರೆ," ಎಂದು ಎಸಿಬಿ ಆಯ್ಕೆ ಸಮಿತಿ ಸದಸ್ಯ ಮಿರ್ ಮುಬಾರಿಜ್ ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.
ACB Names Preliminary Squad for Preparation Camp in UAE
— Afghanistan Cricket Board (@ACBofficials) August 4, 2025
Afghanistan Cricket Board's National Selection Committee has finalized a 22-member preliminary squad that will feature in a two-week training and preparation camp ahead of their upcoming Tri-Nation Series and the ACC Men's… pic.twitter.com/kkZEML1Zqs
ಏಷ್ಯಾ ಕಪ್ ಹಾಗೂ ತ್ರಿಕೋನ ಸರಣಿಗೆ ಅಫಘಾನಿಸ್ತಾನ ಪೂರ್ವಭಾವಿ ತಂಡ
ರಹಮಾನುಲ್ಲಾ ಗುರ್ಬಝ್ (ವಿ.ಕೀ), ಸೆಡಿಖುಲ್ಹಾ ಅಟಲ್, ವಾಫಿಉಲ್ಲಾ ಟಾರ್ಖಿಲ್, ಇಬ್ರಾಹಿಂ ಝರ್ಡಾನ್, ಡಾರ್ವಿಸ್ ರಸೋಲಿ, ಮೊಹಮ್ಮದ್ ಇಶಾಖ್, ರಶೀದ್ ಖಾನ್ (ನಾಯಕ), ಮೊಹಮ್ಮದ್ ನಬಿ, ನಂಗ್ಯಾಲ್ ಖರೋಟಿ, ಶರಫುದಿನ್ ಅಶ್ರಫ್, ಕರಿಮ್ ಜನತ್, ಅಝಮತ್‌ವುಲ್ಲಾ ಒಮರ್ಜಾಯ್, ಗುಲ್ಬದಿನ್ ನೂಬ್, ಮುಜೀಬ್ ಉರ್ ರೆಹಮಾನ್, ಎಎಂ ಗಝಂಪರ್, ನೂರ್ ಅಹ್ಮದ್, ಫಝಲಕ್ ಫಾರೂಕಿ, ನವೀನ್ ಉಲ್ ಹಕ್, ಫಾರಿಖ್ ಮಲಿಕ್, ಸಲೀಮ್ ಸಫಿ, ಅಬ್ದುಲ್ಲಾ ಅಹ್ಮದಜಾಯ್, ಬಶೀರ್ ಅಹ್ಮದ್