ನವದೆಹಲಿ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಮಾಜಿ ನಾಯಕ ಕೇನ್ ವಿಲಿಯಮ್ಸನ್ (Kane Williamson) ಅವರು ವೆಸ್ಟ್ ಇಂಡೀಸ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯಿಂದ (NZ vs WI) ಹೊರಗುಳಿಯಲು ನಿರ್ಧರಿಸಿದ್ದಾರೆ. ಮುಂದಿನ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್ (WTC 2025-27) ನಿಮಿತ್ತ ಟೆಸ್ಟ್ ಕ್ರಿಕೆಟ್ ಕಡೆಗೆ ಹೆಚ್ಚಿನ ಗಮನ ಹರಿಸಲು ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ನವೆಂಬರ್ 16 ರಂದು ಕ್ರೈಸ್ಟ್ ಚರ್ಚ್‌ನಲ್ಲಿ ಮೊದಲನೇ ಪಂದ್ಯದ ಮೂಲಕ ಏಕದಿನ ಸರಣಿ ಆರಂಭವಾಗಲಿದೆ. ಮಿಚೆಲ್ ಸ್ಯಾಂಟ್ನರ್ ಅವರು ಕಿವೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿಯನ್ನು ಗೆದ್ದಿದ್ದ ಅನುಭವಿ ಹಾಗೂ ಯುವ ಆಟಗಾರರನ್ನು ಕೂಡ ಈ ಸರಣಿಗೂ ಪರಿಗಣಿಸಲಾಗಿದೆ.
ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರು ನ್ಯೂಜಿಲೆಂಡ್ ತಂಡಕ್ಕೆ ಮರಳಿದ್ದಾರೆ. ಗಾಯದ ಕಾರಣ ಫಿನ್ ಆಲೆನ್ ಹಾಗೂ ಲಾಕಿ ಫರ್ಗ್ಯೂಸನ್ ಅವರು ವಿಂಡೀಸ್ ಏಕದಿನ ಸರಣಿಯ ಆಯ್ಕೆಗೆ ಅಲಭ್ಯರಾಗಿದ್ದಾರೆ. ವೆಸ್ಟ್ ಇಂಡೀಸ್ ಏಕದಿನ ಸರಣಿಗೆ ಆಯ್ಕೆ ಮಾಡಿರುವ ಸಂಯೋಜನೆಯ ಬಗ್ಗೆ ಹೆಡ್ ಕೋಚ್ ರಾಬ್ ವಾಲ್ಟರ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. "ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ನಾವು ಜಾಸ್ತಿ ಬಾಕ್ಸ್‌ಗಳನ್ನು ಟಿಕ್ ಮಾಡಿರಲಿಲ್ಲ. ಆದರೆ, ವಿಶ್ವದ ಅತ್ಯಂತ ಹೆಚ್ಚಿನ ವೇಗ ಹಾಗೂ ಬೌನ್ಸರ್ ಹೊಂದಿರುವ ಪಿಚ್‌ಗಳಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲು ಎದುರಾಗಲಿದೆ," ಎಂದು ಹೇಳಿದ್ದಾರೆ.
IND vs AUS 5th T20I: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
"ಅವರು ಅಲ್ಪಾವಧಿಯಲ್ಲಿಯೇ ತಂಡಕ್ಕೆ ಬಂದು ಆ ಮಟ್ಟದಲ್ಲಿ ಪ್ರದರ್ಶನ ನೀಡುವುದನ್ನು ನೋಡುವುದು ಸಂತೋಷ ತಂದಿದೆ. ಗುಂಪಿನಿಂದ ದೂರವಿದ್ದು ಅವರು ಮಾಡುತ್ತಿರುವ ಕಠಿಣ ಪರಿಶ್ರಮಕ್ಕೆ ಇದು ಸಾಕ್ಷಿಯಾಗಿದೆ," ಎಂದು ಹೇಳಿದ ಅವರು, "ಅವಕಾಶ ಸಿಕ್ಕಾಗ ಕಷ್ಟಪಟ್ಟು ಕೆಲಸ ಮಾಡುವ ಮತ್ತು ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಪ್ರತಿಫಲ ನೀಡುತ್ತಲೇ ಇರುವುದು ಅದ್ಭುತವಾಗಿದೆ ಮತ್ತು ಮತ್ತೊಂದು ಪ್ರಮುಖ ಸರಣಿಯಲ್ಲಿ ಅವರು ನಮಗೆ ದೊಡ್ಡ ಆಸ್ತಿಯಾಗುತ್ತಾರೆ ಎಂದು ನಮಗೆ ತಿಳಿದಿದೆ," ಎಂದು ತಿಳಿಸಿದ್ದಾರೆ.
"ವೆಸ್ಟ್ ಇಂಡೀಸ್ ತಂಡದ ಆಟಗಾರರೆಲ್ಲರೂ ಅಪಾಯಕಾರಿ ಆಟಗಾರರು ಹಾಗೂ ಮ್ಯಾಚ್ ವಿಲ್ಲರ್‌ಗಳು. ಅವರು ಯಾವುದೇ ಸ್ವರೂಪದ ಪಂದ್ಯವನ್ನು ಬದಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಈ ಸರಣಿಯಲ್ಲಿ ನಮಗೆ ಕಠಿಣ ಪೈಪೋಟಿ ಎದುರಾಗಲಿದೆ," ಎಂದು ರಾಬ್ ವಾಲ್ಟರ್ ತಿಳಿಸಿದ್ದಾರೆ.
IND vs AUS 4th T20: ಕಳಪೆ ಬ್ಯಾಟಿಂಗ್‌ಗೆ ಬೆಲೆ ತೆತ್ತ ಆಸ್ಟ್ರೇಲಿಯಾ; 4ನೇ ಟಿ20 ಗೆದ್ದ ಭಾರತ
ನವೆಂಬರ್ 16 ರಂದು ಕ್ರೈಸ್ಟ್ ಚರ್ಚ್‌ನಲ್ಲಿ ಮೊದಲನೇ ಪಂದ್ಯ, ನವೆಂಬರ್ 19 ರಂದು ನೇಪಿಯರ್‌ನಲ್ಲಿ ಎರಡನೇ ಪಂದ್ಯ ಹಾಗೂ ನವೆಂಬರ್ 22 ರಂದು ಹ್ಯಾಮಿಲ್ಟನ್‌ನಲ್ಲಿ ಮೂರನೇ ಪಂದ್ಯ ನಡೆಯಲಿದೆ. ಮುಂದಿನ ಐಸಿಸಿ ಟೂರ್ನಿಗೆ ಬಲಿಷ್ಠ ತಂಡವನ್ನು ಕಟ್ಟಲು ಈ ಸರಣಿ ನೆರವಾಗಲಿದೆ. "ಏಕದಿನ ಸರಣಿಯಲ್ಲಿ ಸುಧಾರಣೆ ಹಾಗೂ ಬೆಳವಣಿಗೆ ಸಾಧಿಸಲು ಈ ಸರಣಿ ನಮ್ಮ ಪಾಲಿಗೆ ಕೀ ಆಗಲಿದೆ. ಹಾಗಾಗಿ ಈ ಸರಣಿಯನ್ನು ಆಡಲು ಎದುರು ನೋಡುತ್ತಿದ್ದೇವೆ," ಎಂದು ರಾಬ್ ವಾಲ್ಟರ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕಲ್ ಬ್ರೇಸ್‌ವೆಲ್, ಮಾರ್ಕ್ ಚಾಂಪ್ಮನ್,ಡೆವೋನ್ ಕಾನ್ವೆ, ಜಾಕೋಬ್ ದಫಿ, ಝ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲೇಥಮ್, ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ, ನೇಥನ್ ಸ್ಮಿತ್, ಬ್ಲೈರ್ ಟಿಕ್ನರ್ ಹಾಗೂ ವಿಲ್ ಯಂಗ್