ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಮ್ಮ ನೆಚ್ಚಿನ ಸಾರ್ವಕಾಲಿಕ ಐವರು ಭಾರತೀಯ ಒಡಿಐ ಕ್ರಿಕೆಟಿಗರನ್ನು ಆರಿಸಿದ ರವಿ ಶಾಸ್ತ್ರಿ!

ಭಾರತ ತಂಡದ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಅವರು ತಮ್ಮ ನೆಚ್ಚಿನ ಸಾರ್ವಕಾಲಿಕ ಐವರು ಭಾರತೀಯ ಒಡಿಐ ಕ್ರಿಕೆಟಿಗರನ್ನು ಆಯ್ಕೆ ಮಾಡಿದ್ದಾರೆ. ವಿರಾಟ್‌ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌, ಕಪಿಲ್‌ ದೇವ್‌, ಎಂಎಸ್‌ ಧೋನಿ ಹಾಗೂ ರೋಹಿತ್‌ ಶರ್ಮಾ ಅವರನ್ನು ಆರಿಸಿದ್ದಾರೆ.

ತಮ್ಮ ನೆಚ್ಚಿನ ಐವರು ಸಾರ್ವಕಾಲಿಕ ಶ್ರೇಷ್ಢ ಒಡಿಐ ಕ್ರಿಕೆಟಿಗರನ್ನು ಆರಿಸಿದ ರವಿ ಶಾಸ್ತ್ರಿ.

ನವದೆಹಲಿ: ಪ್ರಸ್ತುತ ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಮೊದಲನೇ ಪಂದ್ಯದಲ್ಲಿ ಟೀಮ್‌‌ ಇಂಡಿಯಾ ಸೋಲು ಅನುಭವಿಸಿತ್ತು. ಇದೀಗ ಎರಡನೇ ಪಂದ್ಯವನ್ನು ಏಕದಿನ ಸರಣಿಯಲ್ಲಿ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದೆ. ಅಂದ ಹಾಗೆ ಎರಡನೇ ಏಕದಿನ ಪಂದ್ಯದ ಸಮಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ರವಿ ಶಾಸ್ತ್ರಿ (Ravi Shastri), ತಮ್ಮ ನೆಚ್ಚಿನ ಐವರು ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಒಡಿಐ ಕ್ರಿಕೆಟಿಗರನ್ನು ಆಯ್ಕೆ ಮಾಡಿದ್ದಾರೆ. ರವಿ ಶಾಸ್ತ್ರಿ ತಮ್ಮ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಆಡಿದ ಸಾಕಷ್ಟು ಆಟಗಾರರನ್ನು ನೋಡಿದ್ದಾರೆ. ಅದರಂತೆ ಅವರು ತಮ್ಮ ನೆಚ್ಚಿನ ಐವರು ಆಟಗಾರರು ಯಾರೆಂದು ರಿವೀಲ್‌ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ ಮತ್ತು ಏಕದಿನ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಐದು ಆಟಗಾರರನ್ನು ಶಾಸ್ತ್ರಿ ಆಯ್ಕೆ ಮಾಡಿದ್ದಾರೆ. ಅವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಸೇರಿದ್ದಾರೆ. ಭಾರತದ ಐತಿಹಾಸಿಕ 1983ರ ವಿಶ್ವಕಪ್ ಗೆಲುವಿನ ಸಮಯದಲ್ಲಿ ಕಪಿಲ್‌ ದೇವ್ ಅವರ ಅಡಿಯಲ್ಲಿ ಶಾಸ್ತ್ರಿ ಆಡಿದ್ದಾರೆ ಮತ್ತು ನಂತರ ಕೊಹ್ಲಿ, ಧೋನಿ ಮತ್ತು ರೋಹಿತ್‌ರಂತಹ ದಂತಕಥೆಗಳಿಗೆ ತರಬೇತಿ ನೀಡಿದ್ದಾರೆ. ಅವರು ವೀಕ್ಷಕ ವಿವರಣೆ ಮತ್ತು ಮಾರ್ಗದರ್ಶನದ ಮೂಲಕ ತೆಂಡೂಲ್ಕರ್ ಅವರೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದಾರೆ. ರವಿ ಶಾಸ್ತ್ರಿ ಆಯ್ಕೆ ಮಾಡಿದ ಪ್ರತಿಯೊಬ್ಬ ಆಟಗಾರರು ದಶಕಗಳಿಂದ ಭಾರತದ ಏಕದಿನ ಯಶಸ್ಸಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ.

IND vs AUS: ಭಾರತ ಏಕದಿನ ತಂಡದಲ್ಲಿ ರೋಹಿತ್‌ ಶರ್ಮಾ ಸ್ಥಾನಕ್ಕೆ ಆಪತ್ತು?

"ಹೌದು, ನಾನು ವಿರಾಟ್‌ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌, ಕಪಿಲ್‌ ದೇವ್‌, ಎಂಎಸ್‌ ಧೋನಿ, ರೋಹಿತ್‌ ಶರ್ಮಾ ಅವರನ್ನು ಆಯ್ಕೆ ಮಾಡುತ್ತೇನೆ. ನಿಮಗೆ ಗೊತ್ತಾ, ಈ ಆಟಗಾರರು, ಹೆಚ್ಚೂ-ಕಡಿಮೆ ತಮ್ಮ ವೃತ್ತಿಜೀವನದ ಕೊನೆಯ ಹಂತಕ್ಕೆ ಬರುತ್ತಿದ್ದಾರೆ. ಈ ಆಟಗಾರರಲ್ಲಿ ಕೆಲವರು ಒಂದು ದಶಕ ಆಡಿದರೆ, ಇನ್ನು ಕೆಲವರು ಒಂದೂವರೆ ದಶಕ ಏಕದಿನ ಕ್ರಿಕೆಟ್‌ ಆಡಿದ್ದಾರೆ. ಈ ಆಟಗಾರರನ್ನು ಆಯ್ಕೆ ಮಾಡುವುದು ಕಠಿಣ ಸಂಗತಿಯಾಗಿದೆ. ನೀವು ಒಮ್ಮೆ ಹಿಂದಕ್ಕೆ ನೋಡಿದರೆ, ಸಾಕಷ್ಟು ಅತ್ಯುತ್ತಮ ಆಟಗಾರರು ಇದ್ದಾರೆ. ಆದರೆ, ನಾನು ಆರಿಸಿದ ಆಟಗಾರರು ಅಸಾಧಾರಣರಾಗಿದ್ದಾರೆ. ಅವರು ವಿಶ್ವಕಪ್ ಗೆದ್ದ ನಾಯಕರಿಗೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ, ಅವರು ಕೂಡ ವಿಶ್ವಕಪ್ ಗೆದ್ದಿದ್ದಾರೆ. ರೋಹಿತ್ ಶರ್ಮಾ ಅವರನ್ನು ಹೊರತುಪಡಿಸಿ, ಆ ಪಟ್ಟಿಯಲ್ಲಿರುವ ಎಲ್ಲರೂ ವಿಶ್ವಕಪ್ ವಿಜೇತರು. ನೀವು ರೋಹಿತ್ ಶರ್ಮಾ ಅವರನ್ನು ಮೂರು ದ್ವಿಶತಕಗಳಿಂದ, 11,000 ಕ್ಕೂ ಹೆಚ್ಚು ರನ್‌ಗಳಿಂದ ತಂಡದಿಂದ ಹೊರದಬ್ಬಲು ಸಾಧ್ಯವಿಲ್ಲ. ಅವರು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರೆಲ್ಲರೂ, ಅವರ ನಿಗದಿತ ದಿನದಂದು, ನಿಜವಾದ ಪಂದ್ಯ ವಿಜೇತರು," ಎಂದು ಅವರು ಶ್ಲಾಘಿಸಿದ್ದಾರೆ.

IND vs AUS: ಆಲೌಟ್‌ನಿಂದ ಪಾರಾದ ಭಾರತ; ಆಸೀಸ್‌ಗೆ 265 ಗೆಲುವಿನ ಗುರಿ

ಸಚಿನ್‌ ತೆಂಡೂಲ್ಕರ್‌ ಅವರು 18,426 ರನ್‌ಗಳ ಮೂಲಕ ಒಡಿಐ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಇನ್ನು ವಿರಾಟ್‌ ಕೊಹ್ಲಿ 51 ಶತಕಗಳ ಮೂಲಕ 14000ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ಕಪಿಲ್‌ ದೇವ್‌ ಅದ್ಭುತ ಆಲ್‌ರೌಂಡರ್‌ ಹಾಗೂ 1983ರ ವಿಶ್ವಕಪ್‌ ವಿಜೇತ ನಾಯಕ. ಆ ಮೂಲಕ ಅವರು ಭಾರತೀಯ ಕ್ರಿಕೆಟ್‌ನ ದಿಕ್ಕನ್ನು ಬದಲಾಯಿಸಿದ್ದಾರೆ. ಎಂಎಸ್‌ ಧೋನಿ 2011ರ ಏಕದಿನ ವಿಶ್ವಕಪ್‌ ವಿಜೇತ ನಾಯಕ ಹಾಗೂ ಅದ್ಭುತ ಮ್ಯಾಚ್‌ ವಿನ್ನರ್‌ ಆಗಿದ್ದಾರೆ. ಇನ್ನು ರೋಹಿತ್‌ ಶರ್ಮಾ ಅವರು ಮೂರು ದ್ವಿಶತಕಗಳು ಹಾಗೂ 11000ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದಾರೆ. ಅವರು ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಒಬ್ಬರು.