IND vs AUS: ಆಲೌಟ್‌ನಿಂದ ಪಾರಾದ ಭಾರತ; ಆಸೀಸ್‌ಗೆ 265 ಗೆಲುವಿನ ಗುರಿ
AUS vs IND second ODI: ವೈಯಕ್ತಿಕ ಕಾರಣದಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಸ್ಪಿನ್ನರ್ ಆ್ಯಡಂ ಝಂಪಾ ಈ ಪಂದ್ಯದಲ್ಲಿ ಆಡಲಿಳಿದರು. ಅಮೋಘ ಬೌಲಿಂಗ್ ಮೂಲಕ 4 ವಿಕೆಟ್ ಕಿತ್ತರು. ಉಳಿದಂತೆ ಜೇವಿಯರ್ ಬಾರ್ಟ್ಲೆಟ್ 3 ಮತ್ತು ಮಿಚೆಲ್ ಸ್ಟಾರ್ 2 ವಿಕೆಟ್ ಕೆಡವಿದರು.

-

ಅಡಿಲೇಡ್: ಮಾಜಿ ನಾಯಕ ರೋಹಿತ್ ಶರ್ಮ(73) ಮತ್ತು ಉಪನಾಯಕ ಶ್ರೇಯಸ್ ಅಯ್ಯರ್(61) ಅವರ ಅರ್ಧಶತಕ ನೆರವು ಪಡೆದ ಭಾರತ ತಂಡ, ಆಸ್ಟ್ರೇಲಿಯಾ(IND vs AUS) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ 264 ರನ್ ಬಾರಿಸಿ ಸವಾಲೊಡ್ಡಿದೆ. ಆತಿಥೇಯ ಆಸೀಸ್ ಗೆಲುವಿಗೆ 265 ರನ್ ಬಾರಿಸಬೇಕಿದೆ.
ಅಡಿಲೇಡ್ ಓವಲ್ ಮೈದಾನದಲ್ಲಿ ಟಾಸ್ ಸೋತ ಭಾರತ ಬ್ಯಾಟಿಂಗ್ ಆಹ್ವಾನ ಪಡೆಯಿತು. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಂತೆ ಈ ಪಂದ್ಯದಲ್ಲಿಯೂ ಭಾರತ ಆರಂಭಿಕ ಆಘಾತ ಎದುರಿಸಿತು. ನಾಯಕ ಶುಭಮನ್ ಗಿಲ್(9), ಬಳಿಕ ಬಂದ ವಿರಾಟ್ ಕೊಹ್ಲಿ(0) ಬ್ಯಾಕ್‌ಟು ಬ್ಯಾಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ಸತತವಾಗಿ ಶೂನ್ಯ ಸುತ್ತಿದ್ದರು.
17 ರನ್‌ಗೆ ಎರಡು ವಿಕೆಟ್ ಉರುಳಿಸಿಕೊಂಡ ಭಾರತಕ್ಕೆ ರೋಹಿತ್ ಶರ್ಮ ಮತ್ತು ಶ್ರೇಯಸ್ ಅಯ್ಯರ್ ತಾಳ್ಮೆಯುತ ಬ್ಯಾಟಿಂಗ್ ಮೂಲಕ ನೆರವಾದರು. ಉಭಯ ಆಟಗಾರರು ಆಸೀಸ್ ದಾಳಿಯನ್ನು ಕೆಲ ಕಾಲ ಸಮರ್ಥವಾಗಿ ಎದುರಿಸಿ ಮೂರನೇ ವಿಕೆಟ್‌ಗೆ ಅತ್ಯಮೂಲ್ಯ 118 ರನ್ ಒಟ್ಟುಗೂಡಿಸಿದರು.
ಬಿಸಿಸಿಐ ಟ್ವೀಟ್
Innings Break!
— BCCI (@BCCI) October 23, 2025
A 118-run partnership between Rohit Sharma and Shreyas Iyer propels #TeamIndia to a total of 264/9.
Scorecard - https://t.co/q4oFmXx6kr #TeamIndia #AUSvIND #2ndODI pic.twitter.com/o5dN2FGhtA
ರೋಹಿತ್ 7 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 73 ರನ್ ಗಳಿಸಿ ಮಿಚೆಲ್ ಸ್ಟಾರ್ಟ್‌ಗೆ ವಿಕೆಟ್ ಒಪ್ಪಿಸಿದರೆ, ಶ್ರೇಯಸ್ ಅಯ್ಯರ್ 7 ಬೌಂಡರಿ ಸಹಾಯದಿಂದ 61 ರನ್ ಗಳಿಸಿದರು. ಇವರ ವಿಕೆಟ್ ಝಂಪಾ ಪಾಲಾಯಿತು. ಉಭಯ ಆಟಗಾರರ ವಿಕೆಟ್ ಪತನದ ಬಳಿಕ ಭಾರತ ಮತ್ತೆ ಕುಸಿತ ಕಂಡಿತು. ರಾಹುಲ್(11), ವಾಷಿಂಗಷ್ಟನ್ ಸುಂದರ್ (12), ನಿತೀಶ್ ಕುಮಾರ್ ರೆಡ್ಡಿ(8) ಪೆವಿಲಿಯನ್ ಪರೇಡ್ ನಡೆಸಿದರು. ಆದರೆ ಮತ್ತೊಂದು ತುದಿಯಲ್ಲಿ ಅಕ್ಷರ್ ಪಟೇಲ್ ಬಿರುಸಿನ ಬ್ಯಾಟಿಂಗ್ ಮೂಲಕ 44 ರನ್ ಬಾರಿಸಿದರು. ವೇಗಿ ಹರ್ಷಿತ್ ರಾಣ ಅಜೇಯ 24 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು.
ಇದನ್ನೂ ಓದಿ Virat Kohli: ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸತತ ಶೂನ್ಯ ಸುತ್ತಿದ ಕೊಹ್ಲಿ
ವೈಯಕ್ತಿಕ ಕಾರಣದಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಸ್ಪಿನ್ನರ್ ಆ್ಯಡಂ ಝಂಪಾ ಈ ಪಂದ್ಯದಲ್ಲಿ ಆಡಲಿಳಿದರು. ಅಮೋಘ ಬೌಲಿಂಗ್ ಮೂಲಕ 4 ವಿಕೆಟ್ ಕಿತ್ತರು. ಉಳಿದಂತೆ ಜೇವಿಯರ್ ಬಾರ್ಟ್ಲೆಟ್ 3 ಮತ್ತು ಮಿಚೆಲ್ ಸ್ಟಾರ್ 2 ವಿಕೆಟ್ ಕೆಡವಿದರು.