ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BAN vs SL: ಬಾಂಗ್ಲಾದೇಶ ವಿರುದ್ಧ ಸತತ ಎರಡನೇ ಶತಕ ಬಾರಿಸಿದ ಪಥುಮ್‌ ನಿಸಾಂಕ!

ಕೊಲಂಬೊದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಥುಮ್ ನಿಸಾಂಕ ಅವರ ಅಜೇಯ 146 ರನ್‌ಗಳ ಶತಕದ ನೆರವಿನಿಂದ ಶ್ರೀಲಂಕಾ ತಂಡ ಎರಡನೇ ದಿನ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ. ತೈಜುಲ್ ಇಸ್ಲಾಂ ಅವರ ಬೌಲಿಂಗ್ ಹೊರತಾಗಿಯೂ, ನಿಸಾಂಕ ಮತ್ತು ಚಾಂಡಿಮಲ್ ಅವರ ಜೊತೆಯಾಟದ ಬಲದಿಂದ ಎರಡನೇ ದಿನ ಲಂಕಾ ತಂಡ ಮೇಲುಗೈ ಸಾಧಿಸಿದೆ.

ಬಾಂಗ್ಲಾದೇಶ ವಿರುದ್ಧ ಸತತ ಎರಡನೇ ಶತಕ ಬಾರಿಸಿದ ಪಥುಮ್‌ ನಿಸಾಂಕ!

ಸತತ ಎರಡನೇ ಶತಕವನ್ನು ಸಿಡಿಸಿದ ಪಥುಮ್‌ ನಿಸಾಂಕ.

Profile Ramesh Kote Jun 26, 2025 11:02 PM

ಕೊಲಂಬೊ: ಬಾಂಗ್ಲಾದೇಶ ವಿರುದ್ಧ ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ(BAN vs SL) ಶ್ರೀಲಂಕಾದ ಬ್ಯಾಟ್ಸ್‌ಮನ್ ಪಥುಮ್ (Pathum Nissanka) ನಿಸಾಂಕ ಅದ್ಭುತ ಶತಕವನ್ನು ಸಿಡಿಸಿದ್ದಾರೆ. ಪಂದ್ಯದ ಎರಡನೇ ದಿನದಂದು ನಿಸಾಂಕ ಶ್ರೀಲಂಕಾ (Sri lanka) ಪರ ಅದ್ಭುತ ಇನಿಂಗ್ಸ್‌ ಆಡಿದರು. ಎರಡನೇ ದಿನದಾಟದ ಅಂತ್ಯಕ್ಕೆ ನಿಸಾಂಕ 146 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದಾರೆ. ಆ ಮೂಲಕ ಆತಿಥೇಯ ತಂಡ, ಎರಡನೇ ಟೆಸ್ಟ್‌ ಪಂದ್ಯದಲ್ಲಿ ತನ್ನ ಹಿಡಿತವನ್ನು ಸಾಧಿಸಿದೆ. ಎರಡನೇ ದಿನದ ಆಟದ ಅಂತ್ಯದ ವೇಳೆಗೆ ಶ್ರೀಲಂಕಾ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 290 ರನ್ ಗಳಿಸಿದೆ ಮತ್ತು ಬಾಂಗ್ಲಾದೇಶ ತಂಡಕ್ಕಿಂತ 43 ರನ್‌ಗಳ ಮುನ್ನಡೆ ಸಾಧಿಸಿದೆ. ಪಥುಮ್‌ನಿಸಾಂಕ ಅವರ ಜೊತೆ ಪ್ರಭಾತ್ ಜಯಸೂರ್ಯ 5 ರನ್‌ ಗಳಿಸಿದ್ದು ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮುನ್ನ ಬ್ಯಾಟಿಂಗ್‌ನಲ್ಲಿ ತೈಜುಲ್ ಇಸ್ಲಾಂ ಅವರ ಪ್ರಮುಖ ಕೊಡುಗೆಯೊಂದಿಗೆ ಬಾಂಗ್ಲಾದೇಶ ಪ್ರಥಮ ಇನಿಂಗ್ಸ್‌ನಲ್ಲಿ 247 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಸೋನು ದಿನುಷಾ ಅವರ ಎಸೆತದಲ್ಲಿ ಶಾಟ್ ಆಡಲು ಪ್ರಯತ್ನಿಸಿ ಲಾಂಗ್ ಆನ್‌ನಲ್ಲಿ ಕ್ಯಾಚ್ ಕೊಟ್ಟು ತಮ್ಮ 33 ರನ್‌ಗಳ ಹೋರಾಟದ ಇನಿಂಗ್ಸ್‌ ಅನ್ನು ಮುಗಿಸಿದರು. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎಡಗೈ ಸ್ಪಿನ್ನರ್ ಸೋನು ದಿನುಷಾ ಆತಿಥೇಯರ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಅವರು 9.3 ಓವರ್‌ಗಳಲ್ಲಿ 22 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಅವರಲ್ಲದೆ, ಅಸಿತಾ ಫೆರ್ನಾಂಡೊ ಕೂಡ ಇಬಾದತ್ ಹುಸೇನ್ ಎಲ್‌ಬಿಡಬ್ಲ್ಯೂ ಔಟ್ ಮಾಡುವ ಮೂಲಕ ತಮ್ಮ ಮೂರನೇ ವಿಕೆಟ್ ಪಡೆದರು ಮತ್ತು 18 ಓವರ್‌ಗಳಲ್ಲಿ 51 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು.

SL vs BAN: ಶತಕ ಸಿಡಿಸಿ 1000 ಟೆಸ್ಟ್‌ ರನ್‌ಗಳನ್ನು ಪೂರ್ಣಗೊಳಿಸಿದ ಪಥುಮ್‌ ನಿಸಾಂಕ!

ಉತ್ತಮ ಆರಂಭ ಪಡೆದಿದ್ದ ಶ್ರೀಲಂಕಾ

ಬಾಂಗ್ಲಾದೇಶದ 247 ರನ್‌ಗಳ ಇನಿಂಗ್ಸ್‌ಗೆ ಉತ್ತರವಾಗಿ ಶ್ರೀಲಂಕಾ ತಂಡ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಪಥುಮ್ ನಿಸಾಂಕ ಮತ್ತು ಲಹಿರು ಉದಾನ ಮೊದಲ ವಿಕೆಟ್‌ಗೆ 88 ರನ್‌ಗಳನ್ನು ಸೇರಿಸಿದರು. ಇಬ್ಬರೂ ಓವರ್‌ಗೆ 4 ಸರಾಸರಿಯಲ್ಲಿ ರನ್‌ಗಳನ್ನು ಕಲೆ ಹಾಕಿದ್ದರು. ಇದರಿಂದಾಗಿ ಶ್ರೀಲಂಕಾ 21 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 83 ರನ್‌ಗಳೊಂದಿಗೆ ಬೋಜನ ವಿರಾಮಕ್ಕೆ ತೆರಳಿತು. ಬೌಲಿಂಗ್ ಬಗ್ಗೆ ಹೇಳುವುದಾದರೆ, ತೈಜುಲ್ ಇಸ್ಲಾಂ ಬಾಂಗ್ಲಾದೇಶಕ್ಕೆ ಮೊದಲ ಯಶಸ್ಸನ್ನು ತಂದುಕೊಟ್ಟರು. ಉದಾನ (40 ರನ್‌, 65 ಎಸೆತಗಳು) ಅರ್ಧಶತದಂಚಿನಲ್ಲಿ ಇಸ್ಲಾಂಗೆ ಎಲ್‌ಬಿಡಬ್ಯು ಆದರು.



ನಿಸಾಂಕ- ಚಾಂಡಿಮಲ್ ಜುಗಲ್‌ಬಂದಿ

ನಿಸಾಂಕ ಮತ್ತು ದಿನೇಶ್ ಚಾಂಡಿಮಾಲ್ ಬಾಂಗ್ಲಾದೇಶದ ಬೌಲರ್‌ಗಳ ವಿರುದ್ಧ ನಿರ್ಭಯವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ನಿಸಾಂಕ ಅವರು ಈ ಸರಣಿಯಲ್ಲಿನ ಎರಡನೇ ಹಾಗೂ ವೃತ್ತಿ ಜೀವನದ ನಾಲ್ಕನೇ ಶತಕವನ್ನು ಪೂರೈಸಿದರು. ಇದರ ಜೊತೆಗೆ, ಚಾಂಡಿಮಾಲ್ ಕೂಡ ಶತಕದ ಸಮೀಪದಲ್ಲಿದ್ದರು. ಆದರೆ ದುರದೃಷ್ಟವಶಾತ್ ದಿನದ ಆಟದ ಮುಗಿಯುವುದಕ್ಕೂ ಮುನ್ನ ನಯೀಮ್ ಹಸನ್‌ಗೆ ಔಟ್‌ ಆದರು. ಆ ಮೂಲಕ ಅವಎಉ 17ನೇ ಟೆಸ್ಟ್ ಶತಕವನ್ನು ತಪ್ಪಿಸಿಕೊಂಡರು. ನಿಸಾಂಕ ಮತ್ತು ಚಾಂಡಿಮಲ್ ಎರಡನೇ ವಿಕೆಟ್‌ಗೆ 194 ರನ್‌ಗಳ ಜೊತೆಯಾಟವನ್ನು ಆಡಿದರು.