ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಗಾಯವಾಗಿದೆ ಎಂದರೂ ಎಂಎಸ್‌ ಧೋನಿ ಬಿಟ್ಟಿರಲಿಲ್ಲʼ: ಅಚ್ಚರಿ ಹೇಳಿಕೆ ನೀಡಿದ ಇಶಾಂತ್‌ ಶರ್ಮಾ!

2010ರ ಆಸ್ಟ್ರೇಲಿಯಾ ವಿರುದ್ಧದ ಮೊಹಾಲಿ ಟೆಸ್ಟ್‌ ಬಗ್ಗೆ ಮಾತನಾಡಿದ ಇಶಾಂತ್‌ ಶರ್ಮಾ, ಆ ಪಂದ್ಯದ ವೇಳೆ ಮೊಣಕಾಲು ನೋವು ಇತ್ತು. ಹಾಗಾಗಿ ನನ್ನ ಬದಲಿಗೆ ಜಹೀರ್‌ ಖಾನ್‌ ಅವರನ್ನು ತಂಡಕ್ಕೆ ಕಳುಹಿಸುವಂತೆ ಎಂ ಎಸ್‌ ಧೋನಿ ಅವರಿಗೆ ಮನವಿ ಮಾಡಿದ್ದೆ. ಆದರೆ ಧೋನಿಯವರು ನೀವು ತಂಡದಲ್ಲಿ ಇರಲೇಬೇಕೆಂದು ಒತ್ತಾಯಿಸಿದ್ದರು ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.

2010ರ ಮೊಹಾಲಿ ಟೆಸ್ಟ್‌ನಲ್ಲಿ ನಡೆದಿದ್ದ ಘಟನೆ ನೆನೆದ ಇಶಾಂತ್‌ ಶರ್ಮಾ!

2010ರ ಘಟನೆಯನ್ನು ಸ್ಮರಿಸಿದ ಇಶಾಂತ್‌ ಶರ್ಮಾ.

Profile Ramesh Kote Aug 14, 2025 8:10 PM

ನವದೆಹಲಿ: ಭಾರತ ತಂಡದ ಮಾಜಿ ವೇಗದ ಬೌಲರ್‌ ಇಶಾಂತ್‌ ಶರ್ಮಾ (Ishant Sharma) ತಮ್ಮ 2010ರ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಮೊಹಾಲಿ ಟೆಸ್ಟ್‌ ಪಂದ್ಯದಲ್ಲಿನ (IND vs AUS) ಆಸಕ್ತದಾಯಕ ಅಂಶವನ್ನು ರಿವೀಲ್ ಮಾಡಿದ್ದಾರೆ. ಬಹಳ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ (India) ಒಂದು ವಿಕೆಟ್‌ನಿಂದ ಗೆದ್ದು ಬೀಗಿತ್ತು. ಇನ್ನೂ ವಿಶೇಷವೆಂದರೆ ಭಾರತ ತಂಡದ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌, ರಾಹುಲ್‌ ದ್ರಾವಿಡ್‌, ಗೌತಮ್‌ ಗಂಭಿರ್‌, ಸುರೇಶ್‌ ರೈನಾ ಅದ್ಭುತ ಪ್ರದರ್ಶನ ತೋರಿ ತಂಡದ ಗೆಲುವಿಗೆ ನೆರವು ನೀಡಿದ್ದರು. ಈ ಪಂದ್ಯದ ಬಗ್ಗೆ ಮಾತನಾಡಿದ ಇಶಾಂತ್‌ ಶರ್ಮಾ, ಆ ಪಂದ್ಯದ ವೇಳೆ ಮೊಣಕಾಲು ನೋವು ಇತ್ತು. ಹಾಗಾಗಿ ನನ್ನ ಬದಲಿಗೆ ಜಹೀರ್‌ ಖಾನ್‌ ಅವರನ್ನು ತಂಡಕ್ಕೆ ಕಳುಹಿಸುವಂತೆ ಎಂಎಸ್‌ ಧೋನಿ ಅವರಿಗೆ ಮನವಿ ಮಾಡಿದ್ದೆ. ಆದರೆ ಧೋನಿಯವರು ನೀವು ತಂಡದಲ್ಲಿ ಇರಲೇಬೇಕೆಂದು ಒತ್ತಾಯಿಸಿದ್ದರು ಎಂಬ ಅಂಶವನ್ನು ರಿವೀಲ್‌ ಮಾಡಿದ್ದಾರೆ.

ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ಮಾತನಾಡಿದ ಇಶಾಂತ್‌ ಶರ್ಮಾ "ಆ ಪಂದ್ಯದಲ್ಲಿ ನಾನು ಮೊಣಕಾಲು ನೋವಿನಿಂದ ಬಳಲುತ್ತಿದ್ದೆ. ಪ್ರತೀ ಸೆಷನ್‌ನಲ್ಲಿಯೂ ನಾನು ಇಂಜೆಕ್ಷನ್‌ ತೆಗೆದುಕೊಂಡಿದ್ದೆ. ನನ್ನನ್ನು ನೈಟ್‌ ವಾಚ್‌ಮ್ಯಾನ್‌ ಆಗಿ ಒಳಗೆ ಹೋಗಲು ಕೇಳಲಾಯಿತು. ನಾನು ಎಂಎಸ್‌ ಧೋನಿಗೆ ನನ್ನ ಕಾಲುಗಳಲ್ಲಿ ನೋವು ಇದೆ ಎಂದು ಹೇಳಿದ್ದೆ. ದಯವಿಟ್ಟು ಜಹೀರ್‌ ಖಾನ್‌ ಅವರನ್ನು ಕಳುಹಿಸಿ ಎಂದು ಹೇಳಿದ್ದೆ. ಆದರೆ, ಅವರು (ಎಂಎಸ್‌ ಧೋನಿ) ನೀವು ಹೋಗಿ ಬ್ಯಾಟ್‌ ಮಾಡಿ ಎಂದು ಸೂಚಿಸಿದ್ದರು. ನಾನು ಅದರ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಆದರೆ ಅದು ನಿಜವಾಗಿಯೂ ನೋವುಂಟು ಮಾಡಿತ್ತು. ಏಕೆಂದರೆ ನಾನು ಇಂಜೆಕ್ಷನ್‌ ತೆಗೆದುಕೊಂಡು ಬೌಲ್‌ ಮಾಡಿ ದ್ವಿತೀಯ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ ಪಡೆದಿದ್ದೆ. ನಂತರ ಅವರು ನನ್ನ ಮಾತನ್ನು ಒಪ್ಪಿಕೊಂಡರು," ಎಂದು ಇಶಾಂತ್‌ ಶರ್ಮಾ ತಿಳಿಸಿದ್ದಾರೆ.

IND vs ENG: ಅರ್ಷದೀಪ್‌ ಸಿಂಗ್‌ ಬದಲು ಅನ್ಶುಲ್‌ ಕಾಂಬೋಜ್‌ಗೆ ಸ್ಥಾನ ನೀಡಿದ್ದೇಕೆ? ಅರುಣ್‌ ಲಾಲ್‌ ಪ್ರಶ್ನೆ!

ಅಂದಿನ ಮುಖ್ಯ ಕೋಚ್‌ ಗ್ಯಾರಿ ಕರ್ಸ್ಟನ್‌ ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ಮಾಡುವಂತೆ ಪ್ರೋತ್ಸಾಹಿಸಿದ್ದ ಘಟನೆಯನ್ನು ಮೆಲುಕು ಹಾಕಿದ ಇಶಾಂತ್‌ ಶರ್ಮಾ, "ಪಂದ್ಯದ ಒಂದು ದಿನಕ್ಕೂ ಮುನ್ನ, ಐಚ್ಛಿಕ ಅಭ್ಯಾಸ ಅವಧಿ ಇತ್ತು. ನಾನು ಮಧ್ಯದಲ್ಲಿ ಸ್ವಲ್ಪ ಬೌಲಿಂಗ್ ಅಭ್ಯಾಸ ನಡೆಸಿದ್ದೆ. ನೆಟ್‌ ಅಭ್ಯಾಸ ಮುಗಿಯಿತು ಮತ್ತು ನಾವು ಹೊರಡಲು ಸಿದ್ಧರಾಗುತ್ತಿದ್ದೆವು. ಗ್ಯಾರಿ ಕರ್ಸ್ಟನ್ ನನ್ನ ಬಳಿಗೆ ಬಂದು, ನೀನು ಬ್ಯಾಟಿಂಗ್‌ಗಾಗಿ ಏಕೆ ಬರಬಾರದು? ಎಂದು ಕೇಳಿದರು. ನಾನು ಸುಸ್ತಾಗಿದ್ದೇನೆ ಎಂದು ಹೇಳಿದೆ. ಅವರು, ಪ್ಯಾಡ್ ಅಪ್ ಮಾಡಿ ಬಾ ಎಂದು ಹೇಳಿದರು. ತಂಡದ ಬಸ್ ಹೊರಟುಹೋಯಿತು ಮತ್ತು ಎಲ್ಲವೂ ಮುಗಿದಿತ್ತು. ಗ್ಯಾರಿ ಕರ್ಸ್ಟನ್ ಮತ್ತು ಪ್ಯಾಡಿ ಅಪ್ಟನ್‌, ನನ್ನನ್ನು ಒಂದು ಗಂಟೆ ಬ್ಯಾಟಿಂಗ್ ನಡೆಸಲು ಒತ್ತಾಯಿಸಿದ್ದರು. ಕೆಳ ಕ್ರಮಾಂಕದಿಂದ ಬರುವ ರನ್‌ಗಳು ಯಾವಾಗಲೂ ತಂಡಗಳು ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ ಎಂದು ಕರ್ಸ್ಟನ್ ಯಾವಾಗಲೂ ಹೇಳುತ್ತಿದ್ದರು. ನನ್ನನ್ನು ಒಂದು ಗಂಟೆ ಬ್ಯಾಟ್‌ ಮಾಡಿಸಿದ ನಂತರ ಅವರು, ಈಗ ನಾನು ತೃಪ್ತಿ ಹೊಂದಿದ್ದೇನೆ. ನಿಮ್ಮ ಬಗ್ಗೆ ನನಗೆ ತಿಳಿದಿಲ್ಲ," ಎಂದು ಇಶಾಂತ್‌ ಶರ್ಮಾ ಹೇಳಿದ್ದಾರೆ.

Buchi Babu 2025: ಮುಂಬೈ ತೊರೆದು ಮಹಾರಾಷ್ಟ್ರ ಪರ ಆಡಲು ಸಜ್ಜಾದ ಪೃಥ್ವಿ ಶಾ!

"2013ರಲ್ಲಿ ಚಾಂಪಿಯನ್ಸ್ ಟ್ರೋಫಿ ತುಂಬಾ ವಿಶೇಷ ಏಕೆಂದರೆ ನಾನು ಶಸ್ತ್ರಚಿಕಿತ್ಸೆಯ ನಂತರ ಮರಳಿದ್ದೆ. ನಾನು 2012 ರಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ ಮತ್ತು ನಾನು ಉತ್ತಮ ಫಾರ್ಮ್‌ನಲ್ಲಿ ಇರಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಇದು ಸಾಮಾನ್ಯವಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ನನ್ನ ಪಾದದ ಶಸ್ತ್ರಚಿಕಿತ್ಸೆ ಒಂದು ಪ್ರಮುಖ ಶಸ್ತ್ರಚಿಕಿತ್ಸೆಯಾಗಿತ್ತು. ನನಗೆ ಸಾಕಷ್ಟು ಸಮಯವಿರಲಿಲ್ಲ ಏಕೆಂದರೆ ನಾನು ಶಸ್ತ್ರಚಿಕಿತ್ಸೆಗೆ ಒಳಗಾದಾಗ, ನಾನು ಪುನಃಶ್ಚೇತನ ಕಾರ್ಯಕ್ಕೆ ಒಳಗಾಗಿದ್ದೆ. ನಾನು ಫಿಟ್ ಆಗಿದ್ದೆ ಮತ್ತು ಭಾರತೀಯ ತಂಡಕ್ಕೆ ಆಯ್ಕೆಯಾದೆ. ಶಸ್ತ್ರಚಿಕಿತ್ಸೆಯ ನಂತರ ದೇಹವು ಲಯಕ್ಕೆ ಮರಳಲು ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ನಾನು ಸಾಕಷ್ಟು ಪಂದ್ಯಗಳನ್ನು ಆಡಿರಲಿಲ್ಲ," ಎಂದಿದ್ದಾರೆ.

"ಚೆಂಡು ನಾನು ಬಯಸಿದ ರೀತಿಯಲ್ಲಿ ಬೀಳುತ್ತಿರಲಿಲ್ಲ ಹಾಗೂ ನಾನು ಇದರಿಂದ ಹೊರಗೆ ಬರಬೇಕೆಂದು ಬಯಸುತ್ತಿದ್ದೆ. ನಾನು ಬಹಳಷ್ಟು ಹೊತ್ತು ಬೌಲಿಂಗ್ ನಡೆಸುತ್ತಿದ್ದೆ ಮತ್ತು ಡ್ರಿಲ್ಸ್‌ ಕೂಡ ಮಾಡುತ್ತಿದ್ದೆ. ಆದರೆ ಬಹುಶಃ ನನ್ನ ತರಬೇತಿ ವಿಧಾನಗಳು ತಪ್ಪಾಗಿರಬಹುದು. ಅದು ಮತ್ತು ನಾವು ಆಸ್ಟ್ರೇಲಿಯಾದಲ್ಲಿ ಗೆದ್ದ ಸರಣಿ ನನ್ನ ಹೃದಯಕ್ಕೆ ಹತ್ತಿರವಾಯಿತು," ಎಂದು ಇಶಾಂತ್‌ ಶರ್ಮಾ ತಿಳಿಸಿದ್ದಾರೆ.