ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೆಂಟ್ರಲ್‌ ಡೆಲ್ಲಿ ಕಿಂಗ್ಸ್‌ ವಿರುದ್ಧ ಡೆಲ್ಲಿ ಪ್ರೀಮಿಯರ್‌ ಲೀಗ್‌ ಮುಡಿಗೇರಿಸಿಕೊಂಡ ವೆಸ್ಟ್‌ ಡೆಲ್ಲಿ ಲಯನ್ಸ್‌!

ನಿತೀಶ್‌ ರಾಣಾ ಅವರ ನಾಯಕತ್ವದ ವೆಸ್ಟ್‌ ಡೆಲ್ಲಿ ಲಯನ್ಸ್‌ ತಂಡ 2025ರ ಡೆಲ್ಲಿ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಯಿತು. ಫೈನಲ್‌ ಪಂದ್ಯದಲ್ಲಿ ಸೆಂಟ್ರಲ್‌ ಡೆಲ್ಲಿ ಕಿಂಗ್ಸ್‌ ವಿರುದ್ಧ ಗೆಲುವು ಪಡೆಯುವ ಮೂಲಕ ವೆಸ್ಟ್‌ ಡೆಲ್ಲಿ ಲಯನ್ಸ್‌ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ನಿತೀಶ್‌ ರಾಣಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಡೆಲ್ಲಿ ಪ್ರೀಮಿಯರ್‌ ಲೀಗ್‌ನಲ್ಲಿ ವೆಸ್ಟ್‌ ಡೆಲ್ಲಿ ಲಯನ್ಸ್‌ ಚಾಂಪಿಯನ್‌.

ನವದೆಹಲಿ: ನಿತೀಶ್‌ ರಾಣಾ (79 ರನ್‌) ಅವರ ಮ್ಯಾಚ್‌ ವಿನ್ನಿಂಗ್‌ ಬ್ಯಾಟಿಂಗ್‌ ಪ್ರದರ್ಶನದ ಸಹಾಯದಿಂದ ವೆಸ್ಟ್‌ ಡೆಲ್ಲಿ ಲಯನ್ಸ್‌ (west Delhi Lions) ತಂಡ, 2025ರ ಡೆಲ್ಲಿ ಪ್ರೀಮಿಯರ್‌ ಲೀಗ್‌ ಟೂರ್ನಿಯ (DPL 2025) ಫೈನಲ್‌ ಪಂದ್ಯದಲ್ಲಿ ಸೆಂಟ್ರಲ್‌ ಡೆಲ್ಲಿ ಕಿಂಗ್ಸ್‌ (Central Delhi Kings) ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ವೆಸ್ಟ್‌ ಡೆಲ್ಲಿ ತಂಡದ ಪರ ನಿತೀಶ್‌ ರಾಣಾ (Nitish Rana) ಅವರ ಜೊತೆ ಕೈ ಜೋಡಿಸಿದ್ದ ಹೃತಿಕ್‌ ಶೋಕಿನ್‌ ಅವರು ಕೂಡ 27 ಎಸೆತಗಳಲ್ಲಿ 42 ರನ್‌ಗಳನ್ನು ಬಾರಿಸಿದ್ದರು. ನಿರ್ಣಾಯಕ ಅರ್ಧಶತಕ ಸಿಡಿಸಿ ವೆಸ್ಟ್‌ ಡೆಲ್ಲಿ ಲಯನ್ಸ್‌ ತಂಡದ ಗೆಲುವಿಗೆ ನೆರವು ನೀಡಿದ ನಿತೀಶ್‌ ರಾಣಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಸೆಂಟ್ರಲ್‌ ಡೆಲ್ಲಿ ಕಿಂಗ್ಸ್‌ ನೀಡಿದ್ದ 174 ರನ್‌ಗಳ ಗುರಿಯನ್ನು ಹಿಂಬಾಲಿಸಿದ ವೆಸ್ಟ್‌ ಡೆಲ್ಲಿಗೆ ಉತ್ತಮ ಆರಂಭ ಸಿಗಲಿಲ್ಲ. ಸಿಮ್ರಾನ್‌ಜೀತ್‌ ಸಿಂಗ್‌ ಹಾಗೂ ಅರುಣ್‌ ಪುಂಡಿರ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ ಐದು ಓವರ್‌ಗಳ ಒಳಗಾಗಿ ವೆಸ್ಟ್‌ ಡೆಲ್ಲಿ ತಂಡ ಕೇವಲ 48 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆ ಮೂಲಕ ನಿತೀಶ್‌ ರಾಣಾ ಅವರ ತಂಡಕ್ಕೆ ಒತ್ತಡ ಉಂಟಾಗಿತ್ತು.

DPL 2025: ದಿಗ್ವೇಶ್‌ ರಾಥಿ ಅವರ ಜತೆಗಿನ ಕಿರಿಕ್‌ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್‌ ರಾಣಾ!

ಈ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಿತೀಶ್‌ ರಾಣಾ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಏಕಾಂಗಿ ಹೋರಾಟ ನಡೆಸಿದರು. ಕಳೆದ ಪಂದ್ಯದಲ್ಲಿ ದಿಗ್ವೀಶ್‌ ರಾಥಿ ಅವರ ವಿರುದ್ದ ಕಿರಿಕ್‌ ಮಾಡಿಕೊಂಡಿದ್ದ ನಿತೀಶ್‌, ಮಯಾಂಕ್‌ ಗುಸೇನ್‌ (15) ಅವರ ಜೊತೆಗೆ 42 ರನ್‌ಗಳ ಜೊತೆಯಾಟವನ್ನು ಆಡಿದರು. ನಂತರ ಹೃತಿಕ್‌ ಶೋಕಿನ್‌ ಅವರ ಜೊತೆಯೂ 85 ರನ್‌ಗಳ ನಿರ್ಣಾಐತಕ ಜೊತೆಯಾಟವನ್ನು ಆಡಿದರು. ನಿತೀಶ್‌ ರಾಣಾಗೆ ಸಾಥ್‌ ನೀಡಿದ್ದ ಶೋಕಿನ್‌ ಕೇವಲ 27ಎಸೆತಗಳಲ್ಲಿ ಅಜೇಯ 42 ರನ್‌ ಸಿಡಿಸಿದ್ದರು.



ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಿತೀಶ್‌ ರಾಣಾ

ಇನ್ನು ನಾಯಕನ ಆಟವನ್ನು ಪ್ರದರ್ಶಿಸಿದ ನಿತೀಶ್‌ ರಾಣಾ, 49 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 79 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ವೆಸ್ಟ್‌ ಡೆಲ್ಲಿ ಲಯನ್ಸ್‌ ತಂಡವನ್ನು ಗೆಲ್ಲಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸೆಂಟ್ರಲ್‌ ಡೆಲ್ಲಿ ಪರ ಸಿಮ್ರಾನ್‌ಜೀತ್‌ ಎರಡು ವಿಕೆಟ್‌ ಕಿತ್ತರು.



173 ರನ್‌ ಕಲೆ ಹಾಕಿದ ಸೆಂಟ್ರಲ್‌ ಡೆಲ್ಲಿ

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ಸೆಟ್ರಲ್‌ ಡೆಲ್ಲಿ ಕಿಂಗ್ಸ್‌ ತಂಡ ಯುಗಲ್‌ ಸೈನಿ ಹಾಗೂ ಪ್ರಾಂಶು ವಿಜಯರನ್‌ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 173 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ವೆಸ್ಟ್‌ ಡೆಲ್ಲಿಗೆ 174 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.

ಸೆಂಟ್ರಲ್‌ ಡೆಲ್ಲಿಗೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ವೆಸ್ಟ್‌ ಡೆಲ್ಲಿ ಲಯನ್ಸ್‌ ತಂಡದ ಶಿಸ್ತುಬದ್ದ ಬೌಲಿಂಗ್‌ ದಾಳಿಯಿಂದ ಸೆಂಟ್ರಲ್‌ ಡೆಲ್ಲಿ ತಂಡ 78 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಮೂಲಕ ವೆಸ್ಟ್‌ ಡೆಲ್ಲಿ ಕಡಿಮೆ ಮೊತ್ತಕ್ಕೆ ಆಲ್‌ಔಟ್‌ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಯುಗಲ್‌ ಸೈನಿ 48 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 65 ರನ್‌ಗಳನ್ನು ಕಲೆ ಹಾಕಿದರು. ಇನ್ನು ಕೊನೆಯಲ್ಲಿ ಪ್ರಾಂಶು ವಿಜಯರನ್‌ ಅವರು ಕೇವಲ 24 ಎಸೆತಗಳಲ್ಲಿ ಅಜೇಯ 50 ರನ್‌ಗಳನ್ನು ಸಿಡಿಸಿದರು.