DPL 2025: ದಿಗ್ವೇಶ್ ರಾಥಿ ಅವರ ಜತೆಗಿನ ಕಿರಿಕ್ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್ ರಾಣಾ!
ಪ್ರಸ್ತುತ ನಡೆಯುತ್ತಿರುವ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಿತೀಶ್ ರಾಣಾ ಹಾಗೂ ಸ್ಪಿನ್ನರ್ ದಿಗ್ವೇಶ್ ರಾಥಿ ಅವರ ನಡುವೆ ವಾಗ್ವಾದ ನಡೆದಿತ್ತು. ಈ ಬಗ್ಗೆ ವೆಸ್ಟ್ ಡೆಲ್ಲಿ ಲಯನ್ಸ್ ನಿತೀಶ್ ರಾಣಾ ಅವರು ದಿಗ್ವೀಶ್ ರಾಥಿ ಅವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದಿಗ್ವೇಶ್ ರಾಥಿ ಜೊತೆಗಿನ ಕಿರಿಕ್ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್ ರಾಣಾ. -

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಡೆಲ್ಲಿ ಪ್ರೀಮಿಯರ್ ಲೀಗ್ (DPL 2025) ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ನಾಯಕ ನಿತೀಶ್ ರಾಣಾ (Nitish Rana) ಮತ್ತು ಸೌಥ್ ಡೆಲ್ಲಿ ಸೂಪರ್‌ಸ್ಟಾರ್ಸ್ ಲೆಗ್ ಸ್ಪಿನ್ನರ್ ದಿಗ್ವೇಶ್ ರಾಥಿ (Digvesh Rathi) ನಡುವೆ ತೀವ್ರ ವಾಗ್ವಾದ ನಡೆದಿತ್ತು. ದಿಗ್ವೇಶ್ ಅವರ ಒಂದು ಓವರ್‌ನಲ್ಲಿ ನಿತೀಶ್ ಹಲವು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದ್ದರು, ನಂತರ ಮೈದಾನದಲ್ಲಿ ಈ ಇಬ್ಬರು ಆಟಗಾರರ ನಡುವೆ ವಾಗ್ವಾದ ನಡೆದಿತ್ತು. ವಾದ ಎಷ್ಟು ತೀವ್ರವಾಗಿತ್ತೆಂದರೆ ಸಹ ಆಟಗಾರರು ಮತ್ತು ಅಂಪೈರ್‌ಗಳು ಅವರ ನಡುವೆ ಮಧ್ಯಪ್ರವೇಶಿಸಬೇಕಾಯಿತು. ಆದಾಗ್ಯೂ, ಈಗ ಈ ವಿಷಯದ ಬಗ್ಗೆ ನಿತೀಶ್ ರಾಬಾ ದೊಡ್ಡ ಹೇಳಿಕೆ ನೀಡಿದ್ದಾರೆ.
ಮೈದಾನದಲ್ಲಿ ಇಬ್ಬರ ನಡುವೆ ಏನಾಯಿತು ಎಂದು ನಿತೀಶ್ ರಾಣಾ ಹೇಳಲಿಲ್ಲ. ಆದರೆ ಯಾರಾದರೂ ಅವrನ್ನು ಕೆರಳಿಸಿದರೆ, ಅವರು ಮೌನವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ. "ಇದು ಸರಿ ಅಥವಾ ತಪ್ಪು ವಿಷಯವಲ್ಲ. ಅವರು ತಮ್ಮ ತಂಡಕ್ಕಾಗಿ ಪಂದ್ಯವನ್ನು ಗೆಲ್ಲಲು ಬಂದರು ಮತ್ತು ನಾನು ನನ್ನ ತಂಡಕ್ಕಾಗಿ ಬಂದಿದ್ದೇನೆ. ಆದರೆ ಕ್ರಿಕೆಟ್ ಆಟವನ್ನು ಗೌರವಿಸುವುದು ನನ್ನ ಜವಾಬ್ದಾರಿ ಮತ್ತು ಅದು ಅವರ ಜವಾಬ್ದಾರಿಯೂ ಹೌದು. ಅದನ್ನು ಪ್ರಾರಂಭಿಸಿದವರು ಅವರೇ, ಅದು ಹೇಗೆ ಅಥವಾ ಏನಾಯಿತು ಎಂದು ನಾನು ಹೇಳುವುದಿಲ್ಲ ಏಕೆಂದರೆ ಅದು ತಪ್ಪಾಗುತ್ತದೆ," ಎಂದು ಹೇಳಿದ್ದಾರೆ.
2025ರ ದುಲೀಪ್ ಟ್ರೋಫಿ ಟೂರ್ನಿಯಿಂದ ತಿಲಕ್ ವರ್ಮಾ ಔಟ್! ಇದಕ್ಕೆ ಕಾರಣ ಇಲ್ಲಿದೆ..
"ಆದರೆ ಹೌದು, ಯಾರಾದರೂ ನನ್ನನ್ನು ಕೆರಳಿಸಿದರೆ ಅಥವಾ ನನ್ನ ಮುಖಕ್ಕೆ ಬಂದರೆ, ನಾನು ಸುಮ್ಮನಿರುವುದಿಲ್ಲ ಏಕೆಂದರೆ ನಾನು ಯಾವಾಗಲೂ ಹೀಗೆ ಕ್ರಿಕೆಟ್ ಆಡಿದ್ದೇನೆ. ಯಾರಾದರೂ ನನ್ನನ್ನು ಕೆರಳಿಸಿದರೆ, ನಾನು ಕೂಡ ಕೆರಳುತ್ತೇನೆ. ನನ್ನನ್ನು ಔಟ್ ಮಾಡುತ್ತಾರೆ ಎಂದು ಭಾವಿಸಿದರೆ, ನಾನು ಸಿಕ್ಸರ್‌ಗಳ ಮೂಲಕವೂ ಪ್ರತಿಕ್ರಿಯಿಸುತ್ತೇನೆ. ನಿನ್ನೆ ನಡೆದದ್ದು ಅದಕ್ಕೆ ಒಂದು ಉದಾಹರಣೆಯಾಗಿದೆ," ಎಂದು ತಿಳಿಸಿದ್ದಾರೆ.
ದಿಗ್ವೇಶ್ ರಾಥಿ ಅವರೇ ಮೊದಲು ಕೆಣಕಿದ್ದು, ಇದಕ್ಕೆ ನಾನೇ ಪ್ರತಿಕ್ರಿಯಿಸಿದ್ದೇನೆ ಮತ್ತು ನಂತರ ನಾನು ಹಿಂದೆ ಸರಿಯಲಿಲ್ಲ ಎಂದು ಆರೋಪಿಸಿದರು. ರಾಣಾ ಮತ್ತು ರಾಥಿ ಇಬ್ಬರಿಗೂ ಅವರ ಕೃತ್ಯಗಳಿಗಾಗಿ ದಂಡ ವಿಧಿಸಲಾಯಿತು. ರಾಥಿಗೆ ಅವರ ಪಂದ್ಯದ ಶುಲ್ಕದ ಶೇಕಡಾ 80 ರಷ್ಟು ದಂಡ ವಿಧಿಸಲಾಯಿತು, ಆದರೆ ರಾಣಾಗೆ ಶೇಕಡಾ 50 ರಷ್ಟು ದಂಡ ವಿಧಿಸಲಾಗಿತ್ತು.
VIDEO | On his heated exchange with Digvesh Rathi during the Delhi Premier League match between South Delhi Superstarz and West Delhi Lions, cricketer Nitish Rana said:
— Press Trust of India (@PTI_News) August 30, 2025
"It would be very unfair from my side to share only my end of the story. We were both trying to win the match… pic.twitter.com/FP5CzOlgvf
ನಾನು ಯಾವಾಗಲೂ ಪಂದ್ಯಗಳಲ್ಲಿ ಭಾಗವಹಿಸಿದ್ದೇನೆ: ನಿತೀಶ್ ರಾಣಾ
"ಯಾರು ಅದನ್ನು ಪ್ರಾರಂಭಿಸುತ್ತಾರೋ, ಅದನ್ನು ಕೊನೆಗೊಳಿಸುವುದು ಅವರ ಕೈಯಲ್ಲಿದೆ. ನಾನು ಇಲ್ಲಿಯವರೆಗೆ ಅನೇಕ ಜಗಳಗಳಲ್ಲಿ ಭಾಗಿಯಾಗಿದ್ದೇನೆ; ನಾನು ಮಾಡಿಲ್ಲ ಅಂತಲ್ಲ. ಆದರೆ ಇಂದಿನವರೆಗೂ, ನಾನು ಯಾವುದನ್ನೂ ಆರಂಭಿಸಿಲ್ಲ. ಹೌದು, ಯಾರಾದರೂ ನನಗೆ ಮೊದಲು ಏನಾದರೂ ಹೇಳಿದರೆ, ನಾನು ಯಾವಾಗಲೂ ಪ್ರತಿಕ್ರಿಯಿಸುತ್ತೇನೆ ಮತ್ತು ಅದು ನನ್ನ ಮಾರ್ಗ, " ಎಂದು ನಿತೀಶ್ ರಾಣಾ ತಿಳಿಸಿದ್ದಾರೆ.
Things got 𝐡𝐞𝐚𝐭𝐞𝐝 between Digvesh Rathi and Nitish Rana 👀pic.twitter.com/KqIkB6DYCE
— Cricbuzz (@cricbuzz) August 30, 2025
"ನಾನು ಹೀಗೆಯೇ ಬೆಳೆದಿದ್ದೇನೆ. ನನ್ನ ಹೆತ್ತವರು ನನಗೆ ಕಲಿಸಿದ್ದು, ನೀವು ತಪ್ಪಾಗಿಲ್ಲದಿದ್ದರೆ, ನಿಮ್ಮ ಪರವಾಗಿ ನಿಲ್ಲಬೇಕು ಎಂದು, ಮತ್ತು ನಾನು ಮಾಡುವುದೂ ಅದನ್ನೇ, ಮತ್ತು ಭವಿಷ್ಯದಲ್ಲಿಯೂ ನಾನು ಅದನ್ನು ಮಾಡುತ್ತಲೇ ಇರುತ್ತೇನೆ" ಎಂದು ಅವರು ಹೇಳಿದರು.
"ನಾನು ಹೀಗೆ ಬೆಳೆದಿದ್ದೇನೆ. ನೀವು ತಪ್ಪಾಗಿಲ್ಲದಿದ್ದರೆ, ನೀವು ನಿಮ್ಮ ಪರವಾಗಿ ನಿಲ್ಲಬೇಕು ಮತ್ತು ನಾನು ಅದನ್ನೇ ಮಾಡುತ್ತೇನೆ ಮತ್ತು ಭವಿಷ್ಯದಲ್ಲಿ ನಾನು ಅದನ್ನು ಮುಂದುವರಿಸುತ್ತೇನೆ. ನನ್ನ ಪೋಷಕರು ನನಗೇ ಕಲಿಸಿದ್ದಾರೆ," ಎಂದು ನಿತೀಶ್ ರಾಣಾ ತಿಳಿಸಿದ್ದಾರೆ.