ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Duleep Trophy 2025: ಮೊದಲ ಸೆಮಿಫೈನಲ್‌ನಲ್ಲಿ 197 ರನ್‌ ಗಳಿಸಿದ ಎನ್ ಜಗದೀಸನ್‌!

ದಕ್ಷಿಣ ವಲಯವು ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರ ವಲಯದ ವಿರುದ್ಧ ಬೃಹತ್ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿದೆ. 197 ರನ್‌ಗಳ ಅಮೋಘ ಇನಿಂಗ್ಸ್‌ ಆಡಿದ ಎನ್‌ ಜಗದೀಸನ್‌ ದ್ವಿಶತಕದಂಚಿನಲ್ಲಿ ವಿಕೆಟ್‌ ಒಪ್ಪಿಸಿದರು. ಇತ್ತ ತೀವ್ರ ಹಿನ್ನಡೆ ಅನುಭವಿಸುತ್ತಿರುವ ಉತ್ತರ ವಲಯವು ಮೂರನೇ ದಿನದಾಟದಲ್ಲಿ ಕಮ್‌ಬ್ಯಾಕ್‌ ಮಡುಲು ಎದುರು ನೋಡುತ್ತಿದೆ.‌

ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ 197 ರನ್‌ ಗಳಿಸಿದ ಎನ್‌ ಜಗದೀಸನ್‌.

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ದುಲೀಪ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ವಲಯ ಮತ್ತು ಉತ್ತರ ವಲಯ ತಂಡಗಳು (South Zone vs North Zone) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ದಕ್ಷಿಣ ವಲಯ ತಂಡ, ಎನ್‌ ಜಗದೀಸನ್‌ ಅವರ ಅಬ್ಬರದ ಬ್ಯಾಟಿಂಗ್‌ ಬಲದಿಂದ ದೊಡ್ಡ ಮೊತ್ತವನ್ನು ಕಲೆ ಹಾಕಿದೆ. ಎರಡನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ವಲಯ ತಂಡ, 169.2 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 536 ರನ್‌ಗಳನ್ನು ಕಲೆ ಹಾಕಿದೆ. ಇನ್ನು ಉತ್ತರ ವಲಯ ಮೂರನೇ ದಿನ ಪ್ರಥಮ ಇನಿಂಗ್ಸ್‌ ಆರಂಭಿಸಬೇಕಾಗಿದೆ.

ಇಲ್ಲಿನ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಮೊದಲನೇ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯದ ಪರ ಇನಿಂಗ್ಸ್‌ ಆರಂಭಿಸಿದ್ದ ಎನ್‌ ಜಗದೀಸನ್‌ ಅವರು ಮೊದಲನೇ ದಿನ ಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದರು. ಅದರಂತೆ ಎರಡನೇ ದಿನ ಕೂಡ ಅದೇ ಬ್ಯಾಟಿಂಗ್‌ ಲಯವನ್ನು ಮುಂದುವರಿಸಿದರು. ಅವರು ಒಟ್ಟು 352 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 16 ಬೌಂಡರಿಗಳೊಂದಿಗೆ 197 ರನ್‌ ಗಳಿಸಿದ್ದರು. ಇನ್ನೇನು ದ್ವಿಶತ ಸಿಡಿಸುವುದು ಗ್ಯಾರೆಂಟಿ ಎಂದು ಭಾವಿಸಲಾಗಿತ್ತು. ಆದರೆ, ಅನಗತ್ಯವಾಗಿ ರನ್‌ ಕದಿಯಲು ಹೋಗಿ ರನ್‌ಔಟ್‌ ಆದರು. ಆ ಮೂಲಕ ಕೇವಲ ಮೂರು ರನ್‌ಗಳಿಂದ ದ್ವಿಶತಕ ವಂಚಿತರಾದರು. ಇವರ ಭರ್ಜರಿ ಬ್ಯಾಟಿಂಗ್‌ ಬಲದಿಂದ ದಕ್ಷಿಣ ವಲಯ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿತು.

Asia Cup 2025: ಶ್ರೀಲಂಕಾ ತಂಡದ ವೀಕ್ನೆಸ್‌ ಬಹಿರಂಗಪಡಿಸಿದ ಆಕಾಶ್‌ ಚೋಪ್ರಾ!

ಇನ್ನೂ ಜಗದೀಸನ್‌ ಅವರಿಗೆ ಸಾಥ್‌ ನೀಡಿದ ರಿಕಿ ಭುಯಿ ಮತ್ತು ತನಯ್‌ ತ್ಯಾಗರಾಜನ್‌ ಕೂಡ ಉತ್ತರ ವಲಯದ ಬೌಲರ್‌ಗಳ ವಿರುದ್ದ ಆಕ್ರಮಣಶೀಲ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ರಿಕಿ ಭುಯಿ ಅವರು 131 ಎಸೆತಗಳಲ್ಲಿ 54 ರನ್‌ ಗಳಿಸಿದರೆ, ತನಯ್‌ ತ್ಯಾಗರಾಜನ್‌ 116 ಎಸೆತಗಳಲ್ಲಿ 58 ರನ್‌ ಗಳಿಸಿದರು. ಇದಕ್ಕೂ ಮುನ್ನ ಮೊದಲನೇ ದಿನ ಕನ್ನಡಿಗ ದೇವದತ್‌ ಪಡಿಕ್ಕಲ್‌ 57 ರನ್‌ಗಳನ್ನು ಕಲೆ ಹಾಕಿದ್ದರು. ಇನ್ನು ಉತ್ತರ ವಲಯದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ನಿಶಾಂತ್‌ ಸಿಂಧು 125 ರನ್‌ಗಳನ್ನು ನೀಡಿ 5 ವಿಕೆಟ್‌ ಸಾಧನೆ ಮಾಡಿದರು. ಅಂಶುಲ್‌ ಕಾಂಬೋಜ್‌ ಎರಡು ವಿಕೆಟ್‌ ಕಿತ್ತರು. ಪ್ರಸ್ತುತ ದಕ್ಷಿಣ ವಲಯವು ತಮ್ಮ 536 ರನ್‌ಗಳೊಂದಿಗೆ ಸದ್ಯ ಸುಭದ್ರ ಸ್ಥಿತಿಯಲ್ಲಿದೆ.

ಪೂರ್ವ ವಲಯದಿಂದ ಕಠಿಣ ಹೋರಾಟ

ಇನ್ನು ಎರಡನೇ ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಶ್ಚಿಮ ವಲಯ 438 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಇದಕ್ಕೆ ಪ್ರತಿಯಾಗಿ ಪೂರ್ವ ವಲಯ, ಎರಡನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ ನಷ್ಟಕ್ಕೆ 229 ರನ್‌ಗಳನ್ನು ಕಲೆ ಹಾಕಿದೆ. ಇನ್ನು

209 ರನ್‌ಗಳ ಹಿನ್ನಡೆಯಲ್ಲಿದೆ. ಆಯುಷ್‌ ಪಾಂಡೆ 40 ರನ್‌, ದನೇಶ್‌ ಮಾಲೇವರ್‌ 76 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಇದೀಗ ಶುಭಮ್‌ ಶರ್ಮಾ ಹಾಗೂ ರಜತ್‌ ಪಾಟಿದಾರ್‌ ಕ್ರಮವಾಗಿ 60 ಮತ್ತು 47 ರನ್‌ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Asia Cup 2025: ಭಾರತ ತಂಡದಲ್ಲಿರುವ ಮೌಲ್ಯಯುತ ಆಟಗಾರನನ್ನು ಹೆಸರಿಸಿದ ಅಜಿಂಕ್ಯಾ ರಹಾನೆ!

ಎರಡು ದಿನಗಳಲ್ಲಿ ಇಬ್ಬರು ದ್ವಿಶತಕ ವಂಚಿತರು

ದುಲೀಪ್‌ ಟ್ರೋಫಿಯ ಸೆಮಿಫೈನಲ್‌ ಪಂದ್ಯಗಳಲ್ಲಿ ಮೊದಲ ಎರಡು ದಿನಗಳಲ್ಲೇ ಇಬ್ಬರು ಆಟಗಾರರು ದ್ವಿಶತಕ ವಂಚಿತರಾಗಿದ್ದಾರೆ. ಮೊದಲ ದಿನದಾಟದಲ್ಲಿ ಪಶ್ಚಿಮ ವಲಯ ತಂಡದ ಪರ ಆಡುತ್ತಿರುವ ಋತುರಾಜ್ ಗಾಯಕ್ವಾಡ್ 206 ಎಸೆತಗಳಲ್ಲಿ 184 ರನ್‌ ಕಲೆಹಾಕಿ ಔಟಾಗಿ ನಿರಾಶೆಯಿಂದ ಪೆವಿಲಿಯನ್‌ ಕಡೆ ಮುಖ ಮಾಡಿದ್ದರು. ಶುಕ್ರವಾರ ದಕ್ಷಿಣ ವಲಯದ ಪರ ಆಟಗಾರ ಜಗದೀಸನ್‌ 352 ಎಸೆತಗಳಲ್ಲಿ 197 ರನ್‌ ಕಲೆ ಹಾಕಿ ದ್ವಿಶತಕದಂಚಿನಲ್ಲಿ ಮುಗ್ಗರಿಸಿ ಮೈದಾನದಿಂದ ಹೊರನಡೆದರು.

ಬರಹ: ಕೆ. ಎನ್.‌ ರಂಗು, ಚಿತ್ರದುರ್ಗ