ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಭಾರತ ತಂಡದಲ್ಲಿರುವ ಮೌಲ್ಯಯುತ ಆಟಗಾರನನ್ನು ಹೆಸರಿಸಿದ ಅಜಿಂಕ್ಯಾ ರಹಾನೆ!

ಈ ಬಾರಿ ಏಷ್ಯಾಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಬೌಲಿಂಗ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಅವರನ್ನು ಅಜಿಂಕ್ಯಾ ರಹಾನೆ ಹಾಡಿ ಹೊಗಳಿದ್ದಾರೆ. ಅಕ್ಷರ್‌ ಒಬ್ಬ ಉತ್ತಮ ಆಟಗಾರ ಮತ್ತು ಅವರು ಭಾರತ ತಂಡದ ಅಸಾಧಾರಣ ಪ್ರತಿಭೆ ಎಂದು ಬಣ್ಣಿಸಿದ್ದಾರೆ.

ಭಾರತ ತಂಡದಲ್ಲಿರುವ ಮೌಲ್ಯಯುವ ಆಟಗಾರನನ್ನು ಹೆಸರಿಸಿದ ರಹಾನೆ!

ಅಕ್ಷರ್‌ ಪಟೇಲ್‌ಗೆ ಅಜಿಂಕ್ಯ ರಹಾನೆ ಗುಣಗಾನ. -

Profile Ramesh Kote Sep 5, 2025 7:30 PM

ದುಬೈ: ಪ್ರಸ್ತುತ ಭಾರತ ತಂಡದ ಆಲ್‌ರೌಂಡ್‌ ವಿಭಾಗ ಸಧೃಢವಾಗಿ ಕಾಣುತ್ತಿದೆ. ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಈಗಾಗಲೇ ಮುಂಬರುವ ಏಷ್ಯಾ ಕಪ್‌ ಟೂರ್ನಿಗೆ (Asia Cup 2025) ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಬ್ಯಾಟಿಂಗ್, ಬೌಲಿಂಗ್‌ ಮತ್ತು ಆಲ್‌ರೌಂಡ್‌ ವಿಭಾಗ ಅದ್ಭುತವಾಗಿ ಕಾಣಿಸುತ್ತಿದೆ. ಸದ್ಯದ ಮಟ್ಟಿಗೆ ಆಲ್‌ರೌಂಡರ್‌ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಆಟಗಾರರ ಪಟ್ಟಿಯಲ್ಲಿ ಅಕ್ಷರ್‌ ಪಟೇಲ್‌ (Axar Patel) ಹೆಸರು ಕೂಡ ಒಂದಾಗಿದೆ. ಕಳೆದ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಅಕ್ಷರ್‌ ಪಟೇಲ್‌ ಮುನ್ನಡೆಸಿದ್ದರು. ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡರಲ್ಲೂ ಅದ್ಭುತ ಕಾರ್ಯಕ್ಷಮತೆ ಹೊಂದಿರುವ ಅಕ್ಷರ್‌ ಪಟೇಲ್‌, ಸದ್ಯ ಟೀಂ ಇಂಡಿಯಾದ ಪ್ರಮುಖ ಆಲ್‌ರೌಂಡರ್‌ ಆಗಿದ್ದಾರೆ. ಈ ಮಧ್ಯೆ ಭಾರತದ ಮಾಜಿ ಆಟಗಾರ ಅಜಿಂಕ್ಯ ರಹಾನೆ (Ajinkya Rahane), ಅಕ್ಷರ್‌ ಪಟೇಲ್‌ ಅವರು ಭಾರತ ತಂಡದ ಅಸಾಧರಣ ಪ್ರತಿಭೆ ಎಂದು ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ. ಕಳೆದ ಕೆಲವು ವರ್ಷಗಳು ಅಕ್ಷರ್ ಪಟೇಲ್ ಒಬ್ಬ ಉತ್ತಮ ಆಟಗಾರನೆಂದು ತಮ್ಮನ್ನು‌ ತಾನು ಗುರಿತಿಸಿಕೊಂಡಿದ್ದಾರೆ. ಬ್ಯಾಟಿಂಗ್‌ ಜೊತೆಗೆ ಅಕ್ಷರ್‌ ಪಟೇಲ್‌ ಎಲ್ಲಾ ಹಂತಗಳಲ್ಲಿ ಬೌಲ್‌ ಮಾಡಲು ಸಮರ್ಥರು ಎಂದು ಬಣ್ಣಿಸಿದ್ದಾರೆ.

ಈ ಕುರಿತು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಅಜಿಂಕ್ಯ ರಹಾನೆ, "ಅವರು ತುಂಬಾ ಕಡಿಮೆ ರೇಟಿಂಗ್ ಪಡೆದ ಆಟಗಾರ ಎಂದು ನಾನು ಭಾವಿಸುತ್ತೇನೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಅವರು ಆಟಗಾರನಾಗಿ, ಕ್ರಿಕೆಟಿಗನಾಗಿ ಸುಧಾರಿಸಿದ್ದಾರೆ. ಅವರು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಬ್ಯಾಟ್ಸ್‌ಮನ್ ಆಗಿ, ಬೌಲರ್ ಆಗಿ ಅವಕಾಶ ಸಿಕ್ಕಾಗಲೆಲ್ಲಾ ಅವರು ತಂಡಕ್ಕಾಗಿ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಪವರ್‌ಪ್ಲೇನಲ್ಲಿ ಹೊಸ ಚೆಂಡಿನೊಂದಿಗೆ ಬೌಲ್‌ ಮಾಡಬಹುದು, ಅವರು ಮಧ್ಯಮ ಹಂತದಲ್ಲಿಯೂ ಬೌಲ್‌ ಮಾಡಬಹುದು ಮತ್ತು ಅಗತ್ಯವಿದ್ದರೆ, ಅವರು ಡೆತ್ ಓವರ್‌ಗಳಲ್ಲಿ ಬೌಲ್‌ ಮಾಡಬಹುದು," ಎಂದು ಹೇಳಿದ್ದಾರೆ.

Asia Cup 2025: ಸಂಜು ಸ್ಯಾಮ್ಸನ್‌ಗೆ ಬ್ಯಾಟಿಂಗ್‌ ಕ್ರಮಾಂಕ ಸೂಚಿಸಿದ ಮೊಹಮ್ಮದ್‌ ಕೈಫ್‌!

"ಒಬ್ಬ ನಾಯಕನಾಗಿ, ತಂಡದಲ್ಲಿ ಅಕ್ಷರ್ ಪಟೇಲ್ ಅವರಂತಹ ಆಟಗಾರ ಇದ್ದಾಗ, ನೀವು ಯಾವಾಗಲೂ ಸಂತೋಷವಾಗಿರುತ್ತೀರಿ. ಅವರ ಫೀಲ್ಡಿಂಗ್ ಸಾಮರ್ಥ್ಯವನ್ನೂ ನಾವು ಮರೆಯಬಾರದು ಮತ್ತು ಏಷ್ಯಾ ಕಪ್ ದುಬೈನಲ್ಲಿದೆ. ಹೆಚ್ಚಾಗಿ, ವಿಕೆಟ್‌ಗಳು ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಆದ್ದರಿಂದ, ಅಕ್ಷರ್ ಅವರ ಕೌಶಲ ಮತ್ತು ಅನುಭವವು ತಂಡಕ್ಕೆ ಉಪಯುಕ್ತವಾಗಿರುತ್ತದೆ," ಎಂದು ತಿಳಿಸಿದ್ದಾರೆ.

ಅಕ್ಷರ್‌ ಪಟೇಲ್‌ 2025ರ ಏಷ್ಯಾ ಕಪ್ ಭಾರತದ ತಂಡದ ಭಾಗವಾಗಿದ್ದಾರೆ. ಗಮನಾರ್ಹವಾಗಿ, ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ತವರು ಟಿ20ಐ ಸರಣಿಯಲ್ಲಿ ಅವರು ತಂಡದ ಉಪನಾಯಕರಾಗಿದ್ದರು. ಆದಾಗ್ಯೂ, ಶುಭಮನ್‌ ಗಿಲ್ ತಂಡಕ್ಕೆ ಮರಳಿದ್ದರಿಂದ ಅಕ್ಷರ್‌ ಪಟೇಲ್‌ ಅವರಿಂದ ಉಪ ನಾಯಕನ ಸ್ಥಾನವನ್ನು ಹಿಂಪಡೆಯಲಾಗಿದೆ.

Asia Cup 2025: ಮಲೇಷ್ಯಾ ವಿರುದ್ಧ ಗೆದ್ದು ಫೈನಲ್‌ ರೇಸ್‌ಗೆ ಬಂದ ಭಾರತ ಹಾಕಿ ತಂಡ!

ಹಾರ್ದಿಕ್‌ ಪಾಂಡ್ಯ ಪರ ಬ್ಯಾಟ್‌ ಬೀಸಿದ ರಹಾನೆ

ಮತ್ತೊಬ್ಬ ಟೀಮ್‌ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರು ಮುಂಬರುವ ಏಷ್ಯಾ ಕಪ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಾರೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್‌ ಪಾಂಡ್ಯ ಪರ ಬ್ಯಾಟ್‌ ಬೀಸಿರುವ ರಹಾನೆ,

"ಈ ಏಷ್ಯಾಕಪ್‌ನಲ್ಲಿ ಹಾರ್ದಿಕ್ ಪಾತ್ರ ನಿಜಕ್ಕೂ ಮುಖ್ಯವಾಗಿರುತ್ತದೆ. ಆಲ್‌ರೌಂಡರ್ ಆಗಿ, ಅವರು ಹಿಂದೆ ತಂಡಕ್ಕಾಗಿ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಬ್ಯಾಟ್ಸ್‌ಮನ್ ಆಗಿ 5 ಮತ್ತು 6 ನೇ ಸ್ಥಾನದಲ್ಲಿ ಬಂದು ತಮ್ಮ ಪ್ರಭಾವ ಬೀರುವುದು, ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ರನ್‌ ಗಳಿಸುವುದು, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಅವರು ಆಡುತ್ತಾರೆ. ಅವರು ಎಲ್ಲವನ್ನೂ ಮಾಡಿದ್ದಾರೆ. ಅವರು ಅದನ್ನು ಮತ್ತೆ ಮಾಡಬಹುದು ಎಂದು ನನಗೆ ಖಚಿತವಾಗಿದೆ,"ಎಂದು ಅಜಿಂಕ್ಯ ರಹಾನೆ ತಿಳಿಸಿದ್ದಾರೆ.

2025ರ ಏಷ್ಯಾಕಪ್‌ನಲ್ಲಿ ಭಾರತ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಒಮನ್ ಮತ್ತು ಪಾಕಿಸ್ತಾನದೊಂದಿಗೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ. ಸೆಪ್ಟೆಂಬರ್ 10, ಬುಧವಾರ ದುಬೈನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ತಮ್ಮ ಮೊದಲ ಪಂದ್ಯದಲ್ಲಿ ಯುಎಇಯನ್ನು ಎದುರಿಸಲಿದೆ.