ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Duleep Trophy ಟೂರ್ನಿಯಲ್ಲಿ ಭರ್ಜರಿ ಶತಕ ಬಾರಿಸಿದ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ರಜತ್‌ ಪಾಟಿದಾರ್‌ ಪ್ರಸ್ತುತ ನಡೆಯುತ್ತಿರುವ ದುಲೀಪ್‌ ಟ್ರೋಫಿ ಟೂರ್ನಿಯ ನಾರ್ಥ್‌ ಈಸ್ಟ್‌ ಝೋನ್‌ ಹಾಗೂ ಸೆಂಟ್ರಲ್‌ ಝೋನ್‌ ನಡುವಣ ಪಂದ್ಯದಲ್ಲಿ ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಅವರು ಪಂದ್ಯದ ಮೊದಲನೇ ದಿನ 96 ಎಸೆತಗಳಲ್ಲಿ 125 ರನ್‌ಗಳನ್ನು ಬಾರಿಸಿದ್ದಾರೆ.

ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಶತಕ ಬಾರಿಸಿದ ಆರ್‌ಸಿಬಿ ಕ್ಯಾಪ್ಟನ್‌.

ಬೆಂಗಳೂರು: ಇಲ್ಲಿನ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಮೈದಾನದಲ್ಲಿ ನಡೆಯುತ್ತಿರುವ ನಾರ್ಥ್‌ ಈಸ್ಟ್‌ ಝೋನ್‌ ವಿರುದ್ಧದ 2025ರ ದುಲೀಪ್‌ ಟ್ರೋಫಿ Duleep Trophy 2025) ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೆಂಟ್ರಲ್‌ ಝೋನ್‌ ತಂಡದ ನಾಯಕ ರಜತ್‌ ಪಾಟಿದಾರ್‌ (Rajat Patidar) ಅವರು ಭರ್ಜರಿ ಶತಕವನ್ನು ಬಾರಿಸಿದ್ದಾರೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಕ್ಕೆ ತಮ್ಮ ನಾಯಕತ್ವದಲ್ಲಿ ರಜತ್‌ ಪಾಟಿದಾರ್‌ ಚೊಚ್ಚಲ ಐಪಿಎಲ್‌ ಕಪ್‌ ಗೆದ್ದುಕೊಟ್ಟಿದ್ದರು. ಇದೀಗ ಅದೇ ಲಯವನ್ನು ದುಲೀಪ್‌ ಟ್ರೋಫಿ ಟೂರ್ನಿಯಲ್ಲಿಯೂ ಮುಂದುವರಿಸಿದ್ದಾರೆ.

ಗುರುವಾರ ಆರಂಭವಾಗಿದ್ದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಸೆಂಟ್ರಲ್‌ ಝೋನ್‌ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ರಜತ್‌ ಪಾಟಿದಾರ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನವನ್ನು ತನ್ನತ್ತ ಸೆಳೆದರು. ತಮ್ಮ ಸ್ಪೋಟಕ ಬ್ಯಾಟಿಂಗ್‌ ಶೈಲಿಯಲ್ಲಿ ಬೌಲರ್‌ಗಳನ್ನು ದಂಡಿಸಿದರು. ಅವರು ಆಡಿದ 96 ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್‌ ಹಾಗೂ 21 ಮನಮೋಹಕ ಬೌಂಡರಿಗಳ ಮೂಲಕ 125 ರನ್‌ಗಳನ್ನು ಕಲೆ ಹಾಕಿದ್ದಾರೆ. ನಂತರ ವಿಕೆಟ್‌ ಒಪ್ಪಿಸಿದರು.

ಆರ್‌ಸಿಬಿ ಮಾಜಿ ವೇಗಿಗೆ ಸತತ ಬೌಂಡರಿಗಳನ್ನು ಬಾರಿಸಿದ ವೀರೇಂದ್ರ ಸೆಹ್ವಾಗ್‌ ಪುತ್ರ ಆರ್ಯವೀರ್‌!

ಇದಕ್ಕೂ ಮುನ್ನ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ದಾನೀಶ್‌ ಮಾಲೆವರ್‌ ಅವರು ಕೂಡ ಮೊದಲನೇ ದಿನ ತಮ್ಮ ಬ್ಯಾಟಿಂಗ್‌ನಲ್ಲಿ ಗಮನವನ್ನುಸೆಳೆದರು. ಇವರು ಮೊದಲನೇ ದಿನದಾಟದ ಅಂತ್ಯಕ್ಕೆ 219 ಎಸೆತಗಳಲ್ಲಿ ಅಜೇಯ 198 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ದ್ವಿಶತಕದ ಸನಿಹದಲ್ಲಿದ್ದಾರೆ. ಇವರು ತಮ್ಮ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್‌ ಹಾಗೂ ಬರೋಬ್ಬರಿ 35 ಬೌಂಡರಿಗಳನ್ನು ಬಾರಿಸಿದ್ದಾರೆ. ಆ ಮೂಲಕ ಕೇಂದ್ರ ವಲಯ ಆರಂಭಿಕ ದಿನದ ಅಂತ್ಯಕ್ಕೆ 77 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 432 ರನ್‌ಗಳನ್ನು ಕಲೆ ಹಾಕಿದೆ.



ಮೊಹಮ್ಮದ್‌ ಶಮಿ ಅದ್ಭುತ ಕಮ್‌ಬ್ಯಾಕ್‌

ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಹಿರಿಯ ವೇಗಿ ಮೊಹಮ್ಮದ್ ಶಮಿ ಪೂರ್ವ ವಲಯದ ಪರವಾಗಿ ಉತ್ತರ ವಲಯದ ವಿರುದ್ಧದ ಪಂದ್ಯದಲ್ಲಿ ಶಿಸ್ತುಬದ್ದ ಬೌಲಿಂಗ್‌ ಮೂಲಕ ಸ್ಪರ್ಧಾತ್ಮ ಕ್ರಿಕೆಟ್‌ಗೆ ಭರ್ಜರಿ ಕಮ್‌ಬ್ಯಾಕ್‌ ಮಾಡಿದ್ದಾರೆ.

ಕೊಹ್ಲಿ, ರೋಹಿತ್‌, ಪೂಜಾರಾಗೆ ವಿದಾಯದ ಪಂದ್ಯ ನೀಡಬೇಕೆಂದ ಶ್ರೀಕಾಂತ್!

17 ಓವರ್‌ಗಳನ್ನು ಬೌಲ್‌ ಮಾಡಿದ ಶಮಿ, ತಮ್ಮ ಮೂರನೇ ಸ್ಪೆಲ್‌ನಲ್ಲಿ ಸಲೀಲ್ ಲೋಟ್ರಾ ಅವರನ್ನು 14 ರನ್‌ಗಳಿಗೆ ಔಟ್ ಮಾಡಿದರು. ಅವರು ತಮ್ಮ ಆರಂಭಿಕ ಸ್ಪೆಲ್‌ಗಳಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದಂತೆ ಕಂಡರೂ ದಿನ ಕಳೆದಂತೆ ಅವರ ಲಯದಲ್ಲಿ ಸುಧಾರಣೆ ಕಂಡಿತು. ಆ ಮೂಲಕ ಭವಸೆಯನ್ನು ಮೂಡಿಸಿದ್ದಾರೆ.

ಮೊದಲ ದಿನದಾಂತ್ಯಕ್ಕೆ ಉತ್ತರ ವಲಯ 6 ವಿಕೆಟ್‌ ನಷ್ಟಕ್ಕೆ 308 ರನ್‌ಗಳನ್ನು ಕಲೆ ಹಾಕಿದೆ. ಉತ್ತರ ವಲಯದ ಪರ ಆಯುಷ್ ಬದೋನಿ 60 ಎಸೆತಗಳಲ್ಲಿ 63 ರನ್ ಗಳಿಸಿ ತಂಡಕ್ಕೆ ಉತ್ತಮ ಪ್ರದರ್ಶನವನ್ನು ನೀಡಿದರು. ಹಲವು ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭವನ್ನು ಪಡೆದರೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು.