ಆಸ್ಟ್ರೇಲಿಯಾ vs ಇಂಗ್ಲೆಂಡ್ ನಡುವೆ ಆಷಸ್ ಟ್ರೋಫಿ ಗೆಲ್ಲುವ ತಂಡವನ್ನು ಆರಿಸಿದ ಗ್ಲೆನ್ ಮೆಗ್ರಾಥ್!
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಮುಂದಿನ ಆಷಸ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಯಾವ ತಂಡ ಪ್ರಶಸ್ತಿ ಗೆಲ್ಲಲಿದೆ ಎಂಬ ಬಗ್ಗೆ ಆಸೀಸ್ ಬೌಲಿಂಗ್ ದಿಗ್ಗಜ ಗ್ಲೆನ್ ಮೆಗ್ರಾಥ್ ಭವಿಷ್ಯ ನುಡಿದಿದ್ದಾರೆ. ಈ ಸರಣಿಯನ್ನು ಆತಿಥೇಯ ಆಸ್ಟ್ರೇಲಿಯಾ ತಂಡ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಷಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ ಗ್ಲೆನ್ ಮೆಗ್ರಾಥ್.

ನವದೆಹಲಿ: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದು ಪಂದ್ಯಗಳ (AUS vs ENG) ಆಷಸ್ ಟ್ರೋಫಿ (Ashes Trophy) ಟೆಸ್ಟ್ ಸರಣಿ ನವೆಂಬರ್21 ರಂದು ಆರಂಭವಾಗಲಿದೆ. ಈ ಟೆಸ್ಟ್ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಆಷಸ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಈ ಬಾರಿ ಯಾವ ತಂಡ ಪ್ರಶಸ್ತಿ ಗೆಲ್ಲಲಿದೆ ಎಂದು ಆಸೀಸ್ ಬೌಲಿಂಗ್ ಗ್ಲೆನ್ ಮೆಗ್ರಾಥ್ (Glenn McGrath) ಭವಿಷ್ಯ ನುಡಿದಿದ್ದಾರೆ. ಆತಿಥೇಯ ಆಸ್ಟ್ರೇಲಿಯಾ ತಂಡ ಈ ಟೆಸ್ಟ್ ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2013-14ರಲ್ಲಿ ಆಸ್ಟ್ರೇಲಿಯಾ ಎಲ್ಲಾ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಆಷಸ್ ಟ್ರೋಫಿಯನ್ನು ಗೆದ್ದಿತ್ತು. 2011ರ ಬಳಿಕ ಇಲ್ಲಿಯವರೆಗೂ ಆಸ್ಟ್ರೇಲಿಯಾದಲ್ಲಿ ಇಂಗ್ಲೆಡ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿಯೂ ಇದೇ ಫಲಿತಾಂಶ ಮೂಡಿ ಬರಲಿದೆ ಎಂದು ಗ್ಲೆನ್ ಮೆಗ್ರಾಥ್ ಭವಿಷ್ಯ ನುಡಿದಿದ್ದಾರೆ. ಆಷಸ್ ಟೆಸ್ಟ್ ಸರಣಿಯು ನವೆಂಬರ್, ಡಿಸೆಂಬರ್ ಹಾಗೂ ಜನವರಿಯಲ್ಲಿ ನಡೆಯಲಿದೆ.
IND vs ENG ಸಂಯೋಜನೆಯ ಪ್ಲೇಯಿಂಗ್ XI ಪ್ರಕಟಿಸಿದ ಆಕಾಶ ಚೋಪ್ರಾ!
ಆಷಸ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿರುವ (157 ವಿಕೆಟ್‌ಗಳ) ಗ್ಲೆನ್ ಮೆಗ್ರಾಥ್, ಈ ಬಾರಿಯೂ ಆಸ್ಟ್ರೇಲಿಯಾ ತಂಡ ಸರಣಿಯನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ. "ನಾನು ಭವಿಷ್ಯ ನಿಡಿಯುವುದು ಬಹಳಾ ಅಪರೂಪ ಅಲ್ಲವೇ? ಬೇರೆಯವರ ರೀತಿ ನಾನು ವಿಭಿನ್ನವಾಗಿ ಮಾಡಲು ಸಾಧ್ಯವಿಲ್ಲ. 5-0 ಅಂತರದಲ್ಲಿ ಟೆಸ್ಟ್ ಸರಣಿಯಲ್ಲಿ ಫಲಿತಾಂಶ ಮೂಡಿಬರಲಿದೆ," ಎಂದು ಹೇಳಿದ್ದಾರೆ ಮೆಗ್ರಾಥ್.
"ನಮ್ಮ ತಂಡದ ಬಗ್ಗೆ ನನಗೆ ತುಂಬಾ ವಿಶ್ವಾಸವಿದೆ. ನಿಮ್ಮ ಬೌಲಿಂಗ್ ವಿಭಾಗದಲ್ಲಿ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜಾಶ್ ಹೇಝಲ್‌ವುಡ್ ಹಾಗೂ ನೇಥನ್ ಲಯಾನ್ ಅವರು ತವರು ಕಂಡೀಷನ್ಸ್‌ನಲ್ಲಿ ಮಿಂಚಲಿದ್ದಾರೆ. ಇವರನ್ನು ಎದುರಿಸುವುದು ತುಂಬಾನೆ ಕಷ್ಟ. ಇನ್ನೊಂದ ಪ್ರಮುಖ ಸಂಗತಿ ಏನೆಂದರೆ, ಇಲ್ಲಿ ಇಂಗ್ಲೆಂಡ್ ತಂಡದ ದಾಖಲೆಗಳು ಉತ್ತವಾಗಿಲ್ಲ. ಈ ಬಾರಿಯಾದರೂ ಇಂಗ್ಲೆಂಡ್ ತಂಡ ಒಂದೇ ಒಂದು ಪಂದ್ಯವನ್ನು ಗೆಲ್ಲಲಿದೆಯಾ ಎಂದು ಕಾದು ನೋಡಬೇಕಾಗಿದೆ," ಎಂದು ಗ್ಲೆನ್ ಮೆಗ್ರಾಥ್ ಹೇಳಿದ್ದಾರೆ.
IND vs ENG: ಜಸ್‌ಪ್ರೀತ್ ಬುಮ್ರಾ ಪ್ರದರ್ಶನದ ಬಗ್ಗೆ ಇರ್ಫಾನ್ ಪಠಾಣ್ ದೊಡ್ಡ ಹೇಳಿಕೆ!
ಆಸ್ಟ್ರೇಲಿಯಾ ಬಲಿಷ್ಠ ಬೌಲಿಂಗ್ ದಾಳಿಯನ್ನು ಹೊಂದಿದ್ದರೂ, ಇಂಗ್ಲೆಂಡ್ ತಂಡ ಜೋ ರೂಟ್ ನೇತೃತ್ವದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ರೂಟ್ ಈಗ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, 13,543 ರನ್‌ಗಳೊಂದಿಗೆ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಗಿಂತ ಹಿಂದಿದ್ದಾರೆ.
"ಈ ಸರಣಿ ರೂಟ್‌ಗೆ ದೊಡ್ಡ ಸರಣಿಯಾಗಲಿದೆ," ಎಂದ ಮೆಗ್ರಾಥ್, "ಆಸ್ಟ್ರೇಲಿಯಾದಲ್ಲಿ ಅವರು (ಇಂಗ್ಲೆಂಡ್) ಎಂದಿಗೂ ಅಷ್ಟು ಚೆನ್ನಾಗಿ ಆಡಿಲ್ಲ, ಅಲ್ಲಿ ಅವರು 100 ರನ್ ಕೂಡ ಗಳಿಸಿಲ್ಲ. ಆದ್ದರಿಂದ ಅವರು ಅಲ್ಲಿಗೆ ಹೋಗಲು ಉತ್ಸುಕರಾಗಿರುತ್ತಾರೆ. ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ," ಎಂದು ಮೆಗ್ರಥ್ ತಿಳಿಸಿದ್ದಾರೆ.
"ಈ ಸರಣಿಯಲ್ಲಿ ಹ್ಯಾರಿ ಬ್ರೂಕ್ ಅವರ ಬ್ಯಾಟಿಂಗ್ ಅನ್ನು ಆನಂದಿಸಬಹುದು. ಅವರು ಇಲ್ಲಿ ಬಂದು ಆಡಿದರೆ, ತಮ್ಮ ತಂಡವನ್ನು ಮುನ್ನಡೆಸುತ್ತಾರೆ. ಹಾಗಾಗಿ ಆಸ್ಟ್ರೇಲಿಯಾ ಬೌಲರ್‌ಗಳು ಇವರನ್ನು ಆದಷ್ಟು ಬೇಗ ಔಟ್ ಮಾಡಬೇಕು. ಬೆನ್ ಡಕೆಟ್ ಆಕ್ರಮಣಕಾರಿ ಓಪನರ್. ಝ್ಯಾಕ್ ಕ್ರಾವ್ಲಿ, ಈ ಹಿಂದಿನಿಂದ ಮುಂದಿನ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಲಿದ್ದಾರೆ,"ಎಂದು ಅವರು ಹೇಳಿದ್ದಾರೆ.