ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಸಿಸಿ ಪಿಚ್‌ ರೇಟಿಂಗ್‌: ಲೀಡ್ಸ್‌ ಅತ್ಯುತ್ತಮ, ಉಳಿದವು ತೃಪ್ತಿಕರ

ICC Pitch Ratings: ಲಾರ್ಡ್ಸ್ ಪಿಚ್ 'ವೆರಿ ಗುಡ್' ರೇಟಿಂಗ್ ಪಡೆಯದಿರುವುದು ಅಚ್ಚರಿ ಮೂಡಿಸಿದೆ. ಐತಿಹಾಸಿಕ ಮೈದಾನವು ಬ್ಯಾಟ್ ಮತ್ತು ಬಾಲ್ ನಡುವೆ ಹೆಚ್ಚು ಸಮತೋಲಿತ ಹೋರಾಟದೊಂದಿಗೆ ರೋಮಾಂಚಕ ಸ್ಪರ್ಧೆಯನ್ನು ನೀಡಿತ್ತು. 195 ರನ್‌ಗಳನ್ನು ಬೆನ್ನಟ್ಟಿದ ಭಾರತ, ಅಂತಿಮ ಇನ್ನಿಂಗ್ಸ್‌ನಲ್ಲಿ ಕೇವಲ 22 ರನ್‌ಗಳ ಅಂತರದಿಂದ ಸೋತಿತ್ತು. ಆದರೂ ಇಲ್ಲಿನ ಪಿಚ್‌ಗೆ ತೃಪ್ತಿಕರ ರೇಟಿಂಗ್‌ ನೀಡಲಾಗಿದೆ.

ಐಸಿಸಿ ಪಿಚ್‌ ರೇಟಿಂಗ್‌: ಲೀಡ್ಸ್‌ ಅತ್ಯುತ್ತಮ, ಉಳಿದವು ತೃಪ್ತಿಕರ

Abhilash BC Abhilash BC Aug 8, 2025 3:35 PM

ದುಬೈ: ಇಂಗ್ಲೆಂಡ್‌-ಭಾರತ ನಡುವಿನ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ(Anderson–Tendulkar Trophy) ಸರಣಿಯ ಮೊದಲ ನಾಲ್ಕು ಪಂದ್ಯದ ಪಿಚ್‌ಗಳ ಐಸಿಸಿ ರೇಟಿಂಗ್‌(ICC Pitch Ratings) ಪ್ರಕಟಗೊಂಡಿದೆ. ಲೀಡ್ಸ್‌ನ ಹೆಡಿಂಗ್ಲೆ ಮಾತ್ರ ವೆರಿ ಗುಡ್‌ ರೇಟಿಂಗ್‌ ಪಡೆದಿದ್ದು, ಉಳಿದಂತೆ ಮೂರು ಪಂದ್ಯಗಳ ಪಿಚ್‌ಗೆ ತೃಪ್ತಿಕರ ರೇಟಿಂಗ್‌ ನೀಡಲಾಗಿದೆ. ಅವುಗಳೆಂದರೆ, ಎಡ್ಜ್‌ಬಾಸ್ಟನ್‌, ಲಾರ್ಡ್ಸ್‌ ಮತ್ತು ಓಲ್ಡ್‌ ಟ್ರಾಫರ್ಡ್‌.

ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಅಂತಿಮ ಇನ್ನಿಂಗ್ಸ್‌ನಲ್ಲಿ 373 ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆದ್ದಿತು. ಲೀಡ್ಸ್‌ನ ಪಿಚ್ ಕ್ರಮೇಣ ನಿಧಾನಗೊಂಡು ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಯಿತು. ಎರಡನೇ ಟೆಸ್ಟ್‌ನಲ್ಲಿ ಭಾರತ 587 ಮತ್ತು 427 ಸ್ಕೋರ್‌ಗಳನ್ನು ಗಳಿಸುವ ಮೂಲಕ ಪ್ರಾಬಲ್ಯ ಸಾಧಿಸಿತು. ಅಂತಿಮವಾಗಿ 336 ರನ್‌ಗಳಿಂದ ಜಯಗಳಿಸಿತ್ತು.

ಲಾರ್ಡ್ಸ್ ಪಿಚ್ 'ವೆರಿ ಗುಡ್' ರೇಟಿಂಗ್ ಪಡೆಯದಿರುವುದು ಅಚ್ಚರಿ ಮೂಡಿಸಿದೆ. ಐತಿಹಾಸಿಕ ಮೈದಾನವು ಬ್ಯಾಟ್ ಮತ್ತು ಬಾಲ್ ನಡುವೆ ಹೆಚ್ಚು ಸಮತೋಲಿತ ಹೋರಾಟದೊಂದಿಗೆ ರೋಮಾಂಚಕ ಸ್ಪರ್ಧೆಯನ್ನು ನೀಡಿತ್ತು. 195 ರನ್‌ಗಳನ್ನು ಬೆನ್ನಟ್ಟಿದ ಭಾರತ, ಅಂತಿಮ ಇನ್ನಿಂಗ್ಸ್‌ನಲ್ಲಿ ಕೇವಲ 22 ರನ್‌ಗಳ ಅಂತರದಿಂದ ಸೋತಿತ್ತು. ಆದರೂ ಇಲ್ಲಿನ ಪಿಚ್‌ಗೆ ತೃಪ್ತಿಕರ ರೇಟಿಂಗ್‌ ನೀಡಲಾಗಿದೆ.

2023 ರ ಆಶಸ್‌ ಸರಣಿಗೆ ಹೋಲಿಸಿದರೆ ಈ ಬಾರಿಯ ಸರಣಿಯ ಪಿಚ್‌ ಉತ್ತಮ ರೇಟಿಂಗ್‌ ಪಡೆದುಕೊಂಡಿದೆ. ಅಂದು ಐದು ಪಂದ್ಯಗಳ ಪಿಚ್‌ಗಳಲ್ಲಿ ಯಾವುದೂ ಕೂಡ 'ವೆರಿ ಗುಡ್' ರೇಟಿಂಗ್ ಪಡೆದಿರಲಿಲ್ಲ. ಕಳೆ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯ 4 ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಿದ್ದ ಪರ್ತ್‌, ಅಡಿಲೇಡ್‌ ಓವಲ್‌, ಗಾಬಾ ಮತ್ತು ಎಂಸಿಜಿಯ ಪಿಚ್‌ಗಳು ವೆರಿ ಗುಡ್‌ ರೇಟಿಂಗ್‌ ಪಡೆದಿತ್ತು. ಸಿಡ್ನಿ ಪಿಚ್‌ಗೆ ತೃಪ್ತಿಕರ ರೇಟಿಂಗ್‌ ನೀಡಲಾಗಿತ್ತು.

2023 ರವರೆಗೆ, ಐಸಿಸಿ ಆರು ಹಂತದ ಪಿಚ್ ರೇಟಿಂಗ್ ವ್ಯವಸ್ಥೆಯನ್ನು ಬಳಸುತ್ತಿತ್ತು. ಅವುಗಳೆಂದರೆ, ವೆರಿ ಗುಡ್, ಗುಡ್, ಆವರೇಜ್, ಬಿಲೋ ಆವರೇಜ್, ಪೂವರ್‌ ಮತ್ತು ಅನ್‌ಫಿಟ್. ಇದೀಗ ಇದನ್ನು ನಾಲ್ಕು ವರ್ಗಗಳಾಗಿ ಸುವ್ಯವಸ್ಥಿತಗೊಳಿಸಲಾಗಿದೆ. ವೆರಿ ಗುಡ್, ತೃಪ್ತಿಕರ, ಅತೃಪ್ತಿಕರ ಮತ್ತು ಅನ್‌ಫಿಟ್ ಎಂದು.

ಇದನ್ನೂ ಓದಿ IND vs ENG 5th Test: ಗೆಲುವು ಕಂಡು ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕುಣಿದು ಕುಪ್ಪಳಿಸಿದ ಕೋಚ್‌ ಗಂಭೀರ್‌; ವಿಡಿಯೊ ವೈರಲ್‌