ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿಗೆ (IND vs WI) ಭಾರತ ತಂಡವನ್ನು (India's Test Squad) ಪ್ರಕಟಿಸಲಾಗಿದೆ. ತಂಡಕ್ಕೆ ಹಲವು ಬಲಿಷ್ಠ ಆಟಗಾರರನ್ನು ಸೇರಿಸಲಾಗಿದೆ. ಆದಾಗ್ಯೂ, ಸರ್ಫರಾಜ್ ಖಾನ್ (Safaraz Khan) ಅವರನ್ನು ಮತ್ತೊಮ್ಮೆ 15 ಸದಸ್ಯರ ತಂಡದಿಂದ ಹೊರಗಿಡಲಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ರನ್ ಗಳಿಸಿದ ಸರ್ಫರಾಜ್ ಖಾನ್ ಅವರಿಗೆ 2024ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಯಲ್ಲಿ ಭಾರತ ಪರ ಟೆಸ್ಟ್ ಕ್ರಿಕೆಟ್ ಆಡಲು ಅವಕಾಶ ನೀಡಲಾಗಿತ್ತು.
ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಅವರು 17 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ ಅವರು ಇನ್ನೂ ತಂಡಕ್ಕೆ ಸೇರಿಕೊಂಡಿಲ್ಲ. ಇದದೀಗ ಅವರನ್ನು ಮತ್ತೊಮ್ಮೆ ಕೈಬಿಡಲಾಗಿದೆ. ಸರ್ಫರಾಜ್ ಖಾನ್ ಅವರು ಗಾಯಗೊಂಡಿದ್ದಾರೆ, ಅದಕ್ಕಾಗಿಯೇ ಅವರನ್ನು ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿಲ್ಲ ಎಂದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಮುಂಬೈ ಬ್ಯಾಟ್ಸ್‌ಮನ್ ಅಕ್ಟೋಬರ್ 15 ರೊಳಗೆ ರಣಜಿ ಟ್ರೋಫಿಗೆ ಮರಳಬಹುದು.
IND vs PAK: 'ಎಲ್' ಕೈ ಸನ್ನೆಯಿಂದ ಸಂಭ್ರಮಿಸಲು ಕಾರಣ ಬಹಿರಂಗಪಡಿಸಿದ ಅಭಿಷೇಕ್ ಶರ್ಮಾ!
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಸರ್ಫರಾಝ್
ಭಾರತ ತಂಡಕ್ಕೆ ಆಯ್ಕೆಯಾಗದ ನಂತರ ಸರ್ಫರಾಜ್ ಖಾನ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರು ಪೋಸ್ಟ್‌ನಲ್ಲಿ ಎರಡು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊಗಳಲ್ಲಿ ಸರ್ಫರಾಜ್ ವೇಗವಾಗಿ ಓಡುತ್ತಿರುವುದು ಕಂಡುಬರುತ್ತದೆ. ಸರ್ಫರಾಜ್ ಸಾಕಷ್ಟು ಫಿಟ್ ಆಗಿದ್ದಾರೆ ಮತ್ತು ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ ಎಂಬುದು ವಿಡಿಯೊದಿಂದ ಸ್ಪಷ್ಟವಾಗುತ್ತದೆ.
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗುಳಿದ ನಂತರ, ಸರ್ಫರಾಜ್ ಮೇ ತಿಂಗಳಲ್ಲಿ ಟೆಸ್ಟ್ ತಂಡಕ್ಕೆ ಮರಳಲು ತಯಾರಿ ಆರಂಭಿಸಿದ್ದರು. ಆದಾಗ್ಯೂ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ನಂತರ ಬುಚ್ಚಿ ಬಾಬು ಆಹ್ವಾನಿತ ಟೂರ್ನಿಯಲ್ಲಿ ಅವರು ಆಡಿದ್ದರು. ನಂತರ ಅವರು ದುಲೀಪ್ ಟ್ರೋಫಿಯಲ್ಲಿ ಭಾಗವಹಿಸಲು ನಿರ್ಧರಿಸಿದ್ದರು.
IND vs WI: ಭಾರತ ವಿರುದ್ದದ ಟೆಸ್ಟ್ ಸರಣಿಯಿಂದ ಶಮರ್ ಜೋಸೆಫ್ ಔಟ್!
ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ (ವಿ.ಕೀ), ರವೀಂದ್ರ ಜಡೇಜಾ (ಉಪ ನಾಯಕ), ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಎನ್ ಜಗದೀಸನ್ (ವಿ.ಕೀ), ಮೊಹಮ್ಮದ್. ಸಿರಾಜ್, ಪ್ರಸಿಧ್ ಕೃಷ್ಣ ಮತ್ತು ಕುಲ್‌ದೀಪ್ ಯಾದವ್.