ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI: ಭಾರತ ವಿರುದ್ದದ ಟೆಸ್ಟ್‌ ಸರಣಿಯಿಂದ ಶಮರ್‌ ಜೋಸೆಫ್‌ ಔಟ್‌!

Shamar Joseph Injury: ಭಾರತ ವಿರುದ್ದದ ಟೆಸ್ಟ್‌ ಸರಣಿಯ ಆರಂಭಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ಗೆ ಭಾರಿ ಹಿನ್ನಡೆಯಾಗಿದೆ. ವೇಗದ ಬೌಲರ್‌ ಶಮರ್‌ ಜೋಸೆಫ್‌ ಅವರು ಗಾಯದ ಕಾರಣ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಿಂದ ಹೊರ ನಡೆದಿದ್ದಾರೆ. ಜೋಹಾನ್‌ ಲೇನ್‌ ವಿಂಡೀಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಭಾರತ ವಿರುದ್ಧದ ಟೆಸ್ಟ್‌ ಸರಣಿಯಿಂದ ಶಮರ್‌ ಜೋಸೆಫ್‌ ಔಟ್‌!

ಭಾರತ ವಿರುದ್ಧದ ಟೆಸ್ಟ್‌ ಸರಣಿಯಿಂದ ಶಮರ್‌ ಜೋಸೆಫ್‌ ಔಟ್‌. -

Profile Ramesh Kote Sep 26, 2025 3:31 PM

ನವದೆಹಲಿ: ಗಾಯದಿಂದಾಗಿ ವೆಸ್ಟ್‌ ಇಂಡೀಸ್‌ ತಂಡದ ವೇಗದ ಬೌಲರ್‌ ಶಮರ್‌ ಜೋಸೆಫ್‌ (Shamar Joseph) ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಿಂದ (IND vs WI) ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಟೆಸ್ಟ್‌ ಸರಣಿಗೂ ಮುನ್ನ ಪ್ರವಾಸಿ ವಿಂಡೀಸ್‌ಗೆ (west Indies) ಭಾರಿ ಹಿನ್ನಡೆಯಾಗಿದೆ. ಗಾಯಾಳು ಶಮರ್‌ ಜೋಸೆಫ್‌ ಅವರ ಸ್ಥಾನಕ್ಕೆ ಆಲ್‌ರೌಂಡರ್‌ ಜೋಹಾನ್‌ ಲೇನ್‌ ಅವರಿಗೆ ಟೆಸ್ಟ್‌ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಅಕ್ಟೋಬರ್‌ 2 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯದ ಮೂಲಕ ಟೆಸ್ಟ್‌ ಸರಣಿ ಆರಂಭವಾಗಲಿದೆ.

ಭಾರತ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಶಮರ್‌ ಜೋಸೆಫ್‌ ಅವರು ವೆಸ್ಟ್‌ ಇಂಡೀಸ್‌ ತಂಡಕ್ಕೆ ಕೀ ಬೌಲರ್‌ ಆಗಿದ್ದಾರೆ. ಇದೀಗ ಅವರು ಗಾಯದಿಂದ ಹೊರ ನಡೆದಿರುವುದರಿಂದ ವೆಸ್ಟ್‌ ಇಂಡೀಸ್‌ಗೆ ಭಾರಿ ಹಿನ್ನಡೆಯನ್ನು ತಂದೊಡ್ಡಬಹುದು. ಶಮರ್‌ ಜೋಸೆಫ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ, ಅವರು ಇಲ್ಲಿಯವರೆಗೂ ಆಡಿದ ಮೂರು ಟೆಸ್ಟ್‌ ಪಂದ್ಯಗಳಿಂದ 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ವರ್ಷ ಅತಿ ಹೆಚ್ಚು ಐದು ವಿಕೆಟ್‌ ಸಾಧನೆ ಮಾಡಿದ ಬೌಲರ್‌ಗಳ ಪೈಕಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.

ಅಕ್ಟೋಬರ್ 18 ರಂದು ಪ್ರಾರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಮುಂಚಿತವಾಗಿ ಶಮರ್ ಜೋಸೆಫ್‌ ಅವರನ್ನು ಮರು ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಇದು ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಅಷ್ಟೇ ಪಂದ್ಯಗಳ ಟಿ20ಐ ಸರಣಿ ಇದಾಗಿದೆ.

ವೆಸ್ಟ್‌ ಇಂಡೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟ; ಕರುಣ್‌ಗೆ ಕರುಣೆ ತೋರದ ಆಯ್ಕೆ ಸಮಿತಿ

"ಜೋಹಾನ್‌ ಲೇನ್‌ ಅವರು ಭಾರತ ವಿರುದ್ದದ ಟೆಸ್ಟ್‌ ಸರಣಿಯ ವೆಸ್ಟ್‌ ಇಂಡೀಸ್‌ ತಂಡದಲ್ಲಿ ಗಾಯಾಳು ಶಮರ್‌ ಜೋಸೆಫ್‌ ಅವರ ಸ್ಥಾನವನ್ನು ತುಂಬಿದ್ದಾರೆ. ಗಾಯದ ಕಾರಣ ಶಮರ್‌ ಜೋಸೆಫ್‌ ಅವರು ಟೆಸ್ಟ್‌ ಸರಣಿಯಿಂದ ಹೊರ ನಡೆದಿದ್ದಾರೆ. ಆದರೆ, ಬಾಂಗ್ಲಾದೇಶ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗೂ ಮುನ್ನ ವೇಗಿಯನ್ನು ಮರು ಮೌಲ್ಯಮಾಪನ ಮಾಡಲಾಗುತ್ತದೆ," ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಜೋಹಾನ್‌ ಲೇಯ್ನ್ ಅವರು ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 19 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 32 ಇನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕಗಳೊಂದಿಗೆ 495 ರನ್ ಗಳಿಸಿದ್ದಾರೆ. ಆದಾಗ್ಯೂ, ಚೆಂಡಿನೊಂದಿಗೆ ಅವರ ಮರಳುವಿಕೆ ಸರಣಿಯಲ್ಲಿ ವೆಸ್ಟ್ ಇಂಡೀಸ್‌ಗೆ ಅಮೂಲ್ಯವಾದ ಆಯ್ಕೆಯಾಗಿದೆ. ಲೇಯ್ನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ ಇದುವರೆಗೆ 22.88ರ ಸರಾಸರಿಯಲ್ಲಿ 66 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ನಾಲ್ಕು ಬಾರಿ ಐದು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

Asia Cup 2025: ʻನಿಮ್ಮ ಮಾತು ತಪ್ಪುʼ-ಮೊಹಮ್ಮದ್‌ ಕೈಫ್‌ಗೆ ಜಸ್‌ಪ್ರೀತ್‌ ತಿರುಗೇಟು!

ಭಾರತ ವಿರುದ್ಧದ ಸರಣಿಯ ಎರಡು ಟೆಸ್ಟ್‌ ಪಂದ್ಯಗಳು ಕ್ರಮವಾಗಿ ಅಹಮದಾಬಾದ್ ಮತ್ತು ದೆಹಲಿಯಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಅಕ್ಟೋಬರ್ 10 ರಂದು ದೆಹಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಟೆಸ್ಟ್‌ ಸರಣಿಗೆ ಬಿಸಿಸಿಐ ಭಾರತ ಬಲಿಷ್ಠಬಲಿಷ್ಠ ತಂಡವನ್ನು ಪ್ರಕಟಿಸಿದ್ದು, ಕರುಣ್ ನಾಯರ್, ಅಭಿಮನ್ಯು ಈಶ್ವರನ್ ಅವರಂತಹ ಆಟಗಾರರು ತಂಡದಿಂದ ಕೈ ಬಿಡಲಾಗಿದೆ. ಅಕ್ಷರ್ ಪಟೇಲ್ ಮತ್ತು ದೇವದತ್ ಪಡಿಕ್ಕಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ (ವಿ.ಕೀ), ರವೀಂದ್ರ ಜಡೇಜಾ (ಉಪ ನಾಯಕ), ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಎನ್ ಜಗದೀಸನ್ (ವಿ.ಕೀ), ಮೊಹಮ್ಮದ್. ಸಿರಾಜ್, ಪ್ರಸಿಧ್‌ ಕೃಷ್ಣ ಮತ್ತು ಕುಲ್‌ದೀಪ್ ಯಾದವ್.