ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI: ʻನ್ಯೂಜಿಲೆಂಡ್‌ ತೋರಿದ್ದ ಪ್ರದರ್ಶನವನ್ನು ಮುಂದುವರಿಸುತ್ತೇವೆʼ-ರಾಸ್ಟನ್‌ ಚೇಸ್‌!

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್‌ 2 ರಂದು ಅಹಮದಾಬಾದ್‌ನಲ್ಲಿ ಮೊದಲನೇ ಟೆಸ್ಟ್‌ ಆರಂಭವಾಗಲಿದೆ. ಈ ಪಂದ್ಯದ ನಿಮಿತ್ತ ಮಾತನಾಡಿದ ವಿಂಡೀಸ್‌ ನಾಯಕ ರಾಸ್ಟನ್‌ ಚೇಸ್‌, ನ್ಯೂಜಿಲೆಂಡ್‌ ತಂಡದಂತೆ ನಾವು ಕೂಡ ಭಾರತವನ್ನು ಸೋಲಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

ಭಾರತ ತಂಡವನ್ನು ಸೋಲಿಸಲು ಪ್ರಯತ್ನಿಸುತ್ತೇವೆಂದು ರಾಸ್ಟನ್‌ ಚೇಸ್‌ ಹೇಳಿದ್ದಾರೆ.

ಅಹಮದಾಬಾದ್‌: ಭಾರತ ಹಾಗೂ ವೆಸ್ಟ್‌ ಇಂಡೀಸ್‌ (IND vs WI) ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಗುರುವಾರದಿಂದ ಆರಂಭವಾಗಲಿದೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೊದಲನೇ ಟೆಸ್ಟ್‌ ಪಂದ್ಯ ಜರುಗಲಿದೆ. ಈ ಪಂದ್ಯದ ನಿಮಿತ್ತ ಪ್ರವಾಸಿ ವೆಸ್ಟ್‌ ಇಂಡೀಸ್‌ ತಂಡದ ನಾಯಕ ರಾಸ್ಟನ್‌ ಚೇಸ್‌ (Roston Chase) ಮಾತನಾಡಿದ್ದಾರೆ. ಭಾರತ ತಂಡ ಬಲಿಷ್ಠವಾಗಿದ್ದು, ಸೋಲಿಸುವುದು ಸುಲಭವಲ್ಲ. ಆದರೆ, ನ್ಯೂಜಿಲೆಂಡ್‌ (New Zealand) ರೀತಿ ನಾವು ಕೂಡ ಭಾರತವನ್ನು ಮಣಿಸಲು ಪ್ರಯತ್ನಿಸುತ್ತೇವಂದು ಭರವಸೆಯನ್ನು ನೀಡಿದ್ದಾರೆ.

ಕಳೆದ ವರ್ಷದ ಅಂತ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಾದಾಟ ನಡೆಸಿದ್ದವು. ಈ ಸರಣಿಯಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯದಲ್ಲಿಯೂ ಗೆಲ್ಲಲು ಸಾಧ್ಯವಾಗಿಲ್ಲ. ನ್ಯೂಜಿಲೆಂಡ್‌ ತಂಡ ಮೂರೂ ಪಂದ್ಯಗಳನ್ನು ಗೆದ್ದು ಟೆಸ್ಟ್‌ ಸರಣಿಯಲ್ಲಿ ಭಾರತದ ನೆಲದಲ್ಲಿ 3-0 ಅಂತರದಲ್ಲಿ ಇದೇ ಮೊದಲ ಬಾರಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ಇದೀಗ ರಾಸ್ಟನ್‌ ಚೇಸ್‌, ನ್ಯೂಜಿಲೆಂಡ್‌ ಹೇಗೆ ಇಲ್ಲಿ ಪ್ರದರ್ಶನವನ್ನು ತೋರಿದೆ ಎಂದು ಅವಲೋಕಿಸಿದ್ದೇನೆ. ಅದೇ ರೀತಿ ಆಟವನ್ನು ನಾವು ಪ್ರತಿ ಬಿಂಬಿಸಲು ಪ್ರಯತ್ನಿಸುತ್ತೇವೆಂದು ತಿಳಿಸಿದ್ದಾರೆ.

ಮೊದಲನೇ ಟೆಸ್ಟ್‌ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಸ್ಟನ್‌ ಚೇಸ್‌, "ಖಚಿತವಾಗಿಯೂ ಪ್ರಸ್ತುತ ನಾವು ಟೆಸ್ಟ್‌ ಕ್ರಿಕೆಟ್‌ ಸ್ಥಾನಮಾನದಲ್ಲಿ ನಾವು ಒಳ್ಳೆಯ ಸ್ಥಾನದಲ್ಲಿಲ್ಲ ಹಾಗೂ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದ್ದೇವೆ ಹಾಗೂ ಇದನ್ನು ನಾವು ಹಿಂದಕ್ಕೆ ತಳ್ಳುತ್ತೇವೆ," ಎಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತರಬೇತಿಯ ಬಳಿಕ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

IND vs WI: ಜೈಸ್ವಾಲ್‌-ರಾಹುಲ್‌ ಓಪನರ್ಸ್‌! ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ

"ಕಳೆದ ವರ್ಷ ನ್ಯೂಜಿಲೆಂಡ್‌ ತಂಡ, ಭಾರತದ ಎದುರು ಪ್ರಾಬಲ್ಯ ಸಾಧಿಸಿತ್ತು, ಅದರಿಂದ ಕಲಿಯಲು ನಾವು ನಿಜವಾಗಿಯೂ ಪ್ರಯತ್ನಿಸುತ್ತಿದ್ದೇವೆ. ಅಂದು ಅವರು ಏನು ಮಾಡಿದ್ದರು, ಅದನ್ನು ನಾವು ಹಿಂಬಾಲಿಸಲು ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿ ಒಳ್ಳೆಯ ಕ್ರಿಕೆಟ್‌ ಆಡಿ, ಸ್ಪರ್ಧೆಯನ್ನು ಮಾಡುತ್ತೇವೆ ಹಾಗೂ ಈ ಸರಣಿಯನ್ನು ಗೆಲ್ಲಲು ಪ್ರಯತ್ನಿಸುತ್ತೇವೆ," ಎಂದು ವಿಂಡೀಸ್‌ ಕಪ್ತಾನ ಭರವಸೆ ನೀಡಿದ್ದಾರೆ.

"ನ್ಯೂಜಿಲೆಂಡ್ ಸರಣಿಯ ದೃಶ್ಯಗಳನ್ನು ವಿಶ್ಲೇಷಕರು ನಮಗೆ ಕಳುಹಿಸಿದ್ದಾರೆ ಮತ್ತು ನಾವು ನಿರ್ಣಾಯಕ ಅಂಶಗಳನ್ನು ವಲಯೀಕರಿಸಿದ್ದೇವೆ. ನಾನು ಮೊದಲು ಭಾರತದಲ್ಲಿ ಆಡಿದ್ದೇನೆ ಮತ್ತು ಅಲ್ಲಿನ ಸ್ಪಿನ್ ಸ್ನೇಹಿ ಪರಿಸ್ಥಿತಿಗಳು ನನಗೆ ತಿಳಿದಿವೆ. ಹೆಚ್ಚಾಗಿ, ಸ್ಪಿನ್ನರ್‌ಗಳು ಹೆಚ್ಚಿನ ಓವರ್‌ಗಳನ್ನು ಬೌಲ್ ಮಾಡಬೇಕಾಗಬಹುದು ಮತ್ತು ನಾವು ಕೆಲಸ ಮಾಡುತ್ತಿದ್ದೇವೆ," ಎಂದಿದ್ದಾರೆ.

IND vs WI: ಮೊದಲನೇ ಟೆಸ್ಟ್‌ಗೂ ಮುನ್ನ ಗಾಯಕ್ಕೆ ತುತ್ತಾದ ವಾಷಿಂಗ್ಟನ್ ಸುಂದರ್?

"ಭಾರತ ಮುಖ್ಯವಾಗಿ ಸ್ಪಿನ್‌ ಮೂಲದ ದೇಶವಾಗಿದೆ ಆದರೆ, ನಾನು ನಿನ್ನೆ (ಮಂಗಳವಾರ) ಪಿಚ್‌ ಅನ್ನು ನೋಡಿದ್ದೇನೆ ಹಾಗೂ ಇಲ್ಲಿನ ಪಿಚ್‌ ಸ್ವಲ್ಪ ಹಸಿರಿನಿಂದ ಕೂಡಿದೆ. ಆದರೆ, ಅಂಗಣದಲ್ಲಿ ಏನು ನಡೆಯಬಹುದು ಎಂದು ನನಗೆ ಖಚಿತವಾಗಿ ಗೊತ್ತಿಲ್ಲ," ಎದು ರಾಸ್ಟನ್‌ ಚೇಸ್‌ ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಸೆಷನ್‌ನಲ್ಲಿ ಹೆಚ್ಚಿನ ವಿಕೆಟ್‌ಗಳನ್ನು ಕಬಳಿಸಿದ ಖಾರಿ ಪಿಯರ್‌ ಬಗ್ಗೆಯೂ ವಿಂಡೀಸ್‌ ಕ್ಯಾಪ್ಟನ್‌ ಮಾತನಾಡಿದ್ದಾರೆ. "ಅವರು ತುಂಬಾ ಪ್ರಬುದ್ಧ ವ್ಯಕ್ತಿ. ಅವರು ಬಹಳಷ್ಟು ಕ್ರಿಕೆಟ್ ಆಡಿದ್ದಾರೆ, ಮುಖ್ಯವಾಗಿ ಬಿಳಿ ಚೆಂಡಿನ ಆಟ, ಆದರೆ ಅವರು ಯಾವುದೇ ಸ್ವರೂಪದ ಆಟಕ್ಕೆ ಹೊಂದಿಕೊಳ್ಳಬಲ್ಲರು," ಎಂದ ಚೇಸ್, "ಆಶಾದಾಯಕವಾಗಿ, ನಾಳೆ (ಗುರುವಾರ) ಅವರಿಗೆ ಅವಕಾಶ ಸಿಕ್ಕರೆ, ಅವರು ತ್ವರಿತವಾಗಿ ಪರಿಣಾಮ ಬೀರಬಹುದು," ಎಂದು ಹೇಳಿದ್ದಾರೆ.