IND vs WI: ಮೊದಲನೇ ಟೆಸ್ಟ್‌ಗೂ ಮುನ್ನ ಗಾಯಕ್ಕೆ ತುತ್ತಾದ ವಾಷಿಂಗ್ಟನ್ ಸುಂದರ್?
ಭಾರತ ತಂಡ ತವರಿನಲ್ಲಿ ಅಕ್ಟೋಬರ್ 2 ರಂದು ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಅಭ್ಯಾಸ ನಡೆಸುತ್ತಿದೆ. ಇದರ ನಡುವೆ ಅಭ್ಯಾಸದ ವೇಳೆ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಕ್ಕೆ ತುತ್ತಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲನೇ ಟೆಸ್ಟ್‌ಗೆ ಅವರ ಲಭ್ಯತೆ ಬಗ್ಗೆ ಸ್ಪಷ್ಟತೆ ಇಲ್ಲ.

ಮೊದಲನೇ ಟೆಸ್ಟ್‌ಗೂ ಮುನ್ನ ಗಾಯಕ್ಕೆ ತುತ್ತಾದ ವಾಷಿಂಗ್ಟನ್ ಸುಂದರ್. -

ಬರಹ: ಕೆ ಎನ್ ರಂಗು, ಚಿತ್ರದುರ್ಗ
ಅಹಮದಾಬಾದ್: ಏಷ್ಯಾ ಕಪ್ ಬಳಿಕ ಭಾರತ ತಂಡ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ (IND vs WI) ಅಭ್ಯಾಸ ಆರಂಭಿಸಿದೆ. ಅಕ್ಟೋಬರ್ 2 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ಇದರ ನಡುವೆ ಅಭ್ಯಾಸದ ವೇಳೆ ಟೀಮ್ ಇಂಡಿಯಾ (India) ಪ್ರಮುಖ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಗಾಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಸ್ಪಿನ್ ಆಲ್‌ರೌಂಡರ್ ಬೆರಳಿಗೆ ಗಾಯ ಮಾಡಿಕೊಂಡಿರುವುದು ಕಳವಳಕಾರಿ ಸಂಗತಿಯಾಗಿದೆ. ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನೆಚ್ಚಿನ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅದ್ಭುತ ಲಯದಲ್ಲಿದ್ದಾರೆ. ಒಂದು ವೇಳೆ ಗಂಭೀರ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಗುಳಿದರೆ ನಿಜಕ್ಕೂ ಗಿಲ್ ಪಡೆಗೆ ಆಘಾತಕಾರಿ ಎನ್ನಬಹುದು.
ಸುದ್ದಿ ಮಾಧ್ಯಮವೊಂದರ ವರದಿಯ ಪ್ರಕಾರ ವಾಷಿಂಗ್ಟನ್ ಸುಂದರ್ ಬೆರಳಿಗೆ ಗಾಯವಾದ ಕಾರಣ ಅವರು ಅಭ್ಯಾಸದ ವೇಳೆ ಮೈದಾನದಿಂದ ಹೊರನಡೆದರು. ಆ ವೇಳೆ ಅವರ ಜೊತೆ ನಾಯಕ ಗಿಲ್, ಮೊಹಮ್ಮದ್ ಸಿರಾಜ್, ನಿತೀಶ್ ಕುಮರ್ ರೆಡ್ಡಿ, ರವೀಂದ್ರ ಜಡೇಜಾ ಸೇರಿದಂತೆ ಇತರ ಆಟಗಾರರು ಚರ್ಚಿಸುತ್ತಿರುವುದು ಕಂಡು ಬಂದಿದೆ. ಆದರೆ ಗಾಯದ ಪ್ರಮಾಣದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎನ್ನಲಾಗಿದೆ.
IND vs PAK: ಐಸಿಸಿ ಟೂರ್ನಿಗಳಿಂದ ಬ್ಯಾನ್ ಮಾಡಬೇಕೆಂದ ಪಾಕ್ ಮಾಜಿ ನಾಯಕ ರಶೀದ್ ಲತಿಫ್!
"ವಾಷಿಂಗ್ಟನ್ ಸುಂದರ್ ದೀರ್ಘ ಸಮಯದ ತನಕ ಬೌಲ್ ಮಾಡಿದ್ದರು. ಆದರೆ ಅವರು ಅನಾರೋಗ್ಯದಲ್ಲಿ ಇರುವಂತೆ ತೋರುತ್ತಿತ್ತು ಮತ್ತು ತಂದಡ ವೈದ್ಯರ ಬಳಿ ತಮ್ಮ ಕೈಗೆ ವಾಷಿಂಗ್ಟನ್ ಸುಂದರ್ ಹೆಚ್ಚುವರಿ ಟೇಪ್ ಕೇಳಿದರು," ಎಂದು ಹೇಳಲಾಗಿದೆ. ಹಾಗಾಗಿ ಸ್ಪಿನ್ ಆಲ್‌ರೌಂಡರ್ ಒಂದು ವೇಳೆ ತಂಡದಿಂದ ಹೊರಗುಳಿದರೆ ಅವರ ಸ್ಥಾನ ತುಂಬುವವರು ಯಾರು ಎನ್ನುವ ಗೊಂದಲ ಇದೀಗ ಶುರುವಾಗಿದೆ.
IND vs PAK: ಪಾಕಿಸ್ತಾನಕ್ಕೆ ಮುಖಭಂಗ, 9ನೇ ಏಷ್ಯಾ ಕಪ್ ಗೆದ್ದು ಸಂಭ್ರಮಿಸಿದ ಭಾರತ!
ಹ್ಯಾಂಪ್‌ಶೈರ್ ಪಂದ್ಯದಲ್ಲಿ ಆಡಿದ್ದ ವಾಷಿಂಗ್ಟನ್
ಇಂಗ್ಲೆಂಡ್ ಪ್ರವಾಸದ ಬಳಿಕ 2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ವಾಷಿಂಗ್ಟನ್ ಸುಂದರ್ ಹೆಚ್ಚುವರಿ ಆಟಗಾರಾಗಿದ್ದರು. ಈ ಸಣ್ಣ ಬಿಡುವಿನಲ್ಲಿ ತವರಿನ ಸರಣಿಗೆ ಸಿದ್ದವಾಗಲು ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಹ್ಯಾಂಪ್‌ಶೈರ್ ಜೊತೆಗೆ ಕಾಣಿಸಿಕೊಂಡಿದ್ದರು. ಈ ವೇಳೆ ಸುಂದರ್ ಸೋಮರ್‌ಸೆಟ್ ಮತ್ತು ಸರ್ರೆ ವಿರುದ್ಧ 2 ಪಂದ್ಯಗಳನ್ನಾಡಿ 4 ವಿಕೆಟ್ ಕಬಳಿಸಿದ್ದರು. ಬ್ಯಾಟಿಂಗ್‌ನಲ್ಲೂ ಕೂಡ ಒಂದು ಅರ್ಧಶತಕ ಸೇರಿದಂತೆ ಒಟ್ಟು 136 ರನ್ ಕಲೆ ಹಾಕಿದ್ದರು. ಹಾಗಾಗಿ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಉತ್ತಮ ಫಾರ್ಮ್ ಮುಂದುವರಿಸುವ ನಿರೀಕ್ಷೆಯಲ್ಲಿದ್ದ ಸ್ಪಿನ್ ಆಲ್‌ರೌಂಡರ್ ಗಾಯಕ್ಕೆ ತುತ್ತಾಗಿರುವುದು ಕಳವಳಕಾರಿ ಸಂಗತಿ ಎನ್ನಬಹುದು.
ಮೊದಲನೇ ಟೆಸ್ಟ್‌ಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್,ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಕುಲ್ದೀಪ್ ಯಾದವ್, ಎನ್ ಜಗದೀಶನ್