ಅಭಿಷೇಕ್-ಗಿಲ್ ಓಪನರ್ಸ್? 2025ರ ಏಷ್ಯಾ ಕಪ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಮುಂಬರುವ ಏಷ್ಯಾ ಕಪ್ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಆಗಸ್ಟ್ 19 ರಂದು ಪ್ರಕಟಿಸಿದೆ. ಶುಭಮನ್ ಗಿಲ್ ಭಾರತ ತಂಡಕ್ಕೆ ಮರಳಿದ್ದಾರೆ. ಆದರೆ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ ಹಾಗೂ ಮೊಹಮ್ಮದ್ ಸಿರಾಜ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.

ಏಷ್ಯಾ ಕಪ್ ಟೂರ್ನಿಯ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್ (Asia Cup 2025) ಕ್ರಿಕೆಟ್ ಟೂರ್ನಿಗೆ ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಆಗಸ್ಟ್ 19 ರಂದು ಮಂಗಳವಾರ 15 ಸದಸ್ಯರ ಭಾರತ ತಂಡವನ್ನು (India's Squad for Asia Cup) ಪ್ರಕಟಿಸಿದೆ. ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ (Shubman Gill) ಹಾಗೂ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಕೂಡ ಸ್ಥಾನವನ್ನು ಪಡೆದಿದ್ದಾರೆ. ಗಿಲ್ ಆಗಮನದಿಂದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಆರಂಭಿಕ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿ ಸಾಧಾರಣ ಪ್ರದರ್ಶನವನ್ನು ತೋರಿದ್ದರ ಹೊರತಾಗಿಯೂ ರಿಂಕು ಸಿಂಗ್, ಶಿವಂ ದುವೆ ಹಾಗೂ ಹರ್ಷಿತ್ ರಾಣಾಗೆ ಏಷ್ಯಾ ಕಪ್ ಭಾರತ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಇನ್ನು ಭಾರತ ತಂಡಕ್ಕೆ ಇದೀಗ ದೊಡ್ಡ ತಲೆ ನೋವಾಗಿರುವ ಸಂಗತಿಯೆಂದರೆ ವಿಕೆಟ್ ಕೀಪರ್ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಅಥವಾ ಜಿತೇಶ್ ಶರ್ಮಾ ಅವರಲ್ಲಿ ಯಾರನ್ನು ಆಡಿಸಬೇಕೆಂಬುದು. ಗಿಲ್ ಉಪ ನಾಯಕನಾಗಿರುವ ಕಾರಣ, ಅಭಿಷೇಕ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇದರ ಪರಿಣಾಮ ಭಾರತದ ಪ್ಲೇಯಿಂಗ್ XIನಿಂದ ಸಂಜು ಸ್ಯಾಮ್ಸನ್ ಹೊರಬೀಳಬಹುದು.
Asia Cup 2025: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಗಿಲ್‌ಗೆ ಉಪನಾಯಕನ ಪಟ್ಟ
ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಅಕ್ಷರ್ ಪಟೇಲ್ ಸ್ಪಿನ್ ಆಲ್‌ರೌಂಡರ್ ಆಗಿ ಆಡಲಿದ್ದು, ಎರಡನೇ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಅವರ ನಡುವೆ ಯಾರು ಆಡಲಿದಾರೆಂಬುದು ಪ್ರಶ್ನೆಯಾಗಿದೆ. ಇನ್ನು ಶುಭಮನ್ ಗಿಲ್ ಉಪ ನಾಯಕನಾಗಿರುವ ಕಾರಣ ಬೆಂಚ್ ಕಾಯಿಸಲು ಸಾಧ್ಯವಿಲ್ಲ. ಹಾಗಾಗಿ ಅವರನ್ನು ಅಭಿಷೇಕ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಬಹುದು. ಸಂಜು ಸ್ಯಾಮ್ಸನ್ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸಬಹುದು. ಇಲ್ಲವಾದಲ್ಲಿ 2025ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮ್ಯಾಚ್ ಫಿನಿಷರ್ ಆಗಿ ಸಕ್ಸಸ್ ಆಗಿದ್ದರು. ಅಂದ ಹಾಗೆ ಮ್ಯಾಚ್ ಫಿನಿಷರ್ ಆಟಗಾರನನ್ನು ಬಯಸಿದರೆ ಜಿತೇಶ್‌ಗೆ ಫೈನಲ್ ಟಿಕೆಟ್ ನೀಡಬಹುದು.
🚨 A look at #TeamIndia's squad for #AsiaCup 2025 🔽 pic.twitter.com/3VppXYQ5SO
— BCCI (@BCCI) August 19, 2025
ಇನ್ನು ಪೂರ್ಣ ಪ್ರಮಾಣದ ವೇಗದ ಬೌಲರ್‌ಗಳಾಗಿ ಅರ್ಷದೀಪ್ ಸಿಂಗ್ ಹಾಗೂ ಜಸ್‌ಪ್ರೀತ್ ಬುಮ್ರಾ ಆಡಿದರೆ, ಇವರಿಗೆ ಮೂರನೇ ವೇಗಿಯಾಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಾಥ್ ನೀಡಲಿದ್ದಾರೆ. ಯುಎಇ ಕಂಡೀಷನ್ಸ್ ಸ್ಪಿನ್ ಸ್ನೇಹಿಯಾಗಿರುವ ಕಾರಣ ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್‌ಗೆ ಸ್ಥಾನ ನೀಡುವ ಸಾಧ್ಯತೆ ಇದೆ.
Asia Cup 2025: ಭಾರತ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆಯದ ಟಾಪ್ 5 ಆಟಗಾರರು!
2025ರ ಏಷ್ಯಾ ಕಪ್ ಟೂರ್ನಿಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ
1. ಅಭಿಷೇಕ್ ಶರ್ಮಾ (ಓಪನರ್)
2. ಶುಭಮನ್ ಗಿಲ್ (ಓಪನರ್, ಉಪ ನಾಯಕ)
3. ತಿಲಕ್ ವರ್ಮಾ (ಬ್ಯಾಟ್ಸ್‌ಮನ್)
4. ಸೂರ್ಯಕುಮಾರ್ ಯಾದವ್ (ನಾಯಕ, ಬ್ಯಾಟ್ಸ್‌ಮನ್)
5. ಸಂಜು ಸ್ಯಾಮ್ಸನ್/ ಜಿತೇಶ್ ಶರ್ಮಾ (ವಿಕೆಟ್ ಕೀಪರ್, ಬ್ಯಾಟ್ಸ್‌ಮನ್)
6. ಹಾರ್ದಿಕ್ ಪಾಂಡ್ಯ (ಆಲ್‌ರೌಂಡರ್)
7. ಅಕ್ಷರ್ ಪಟೇಲ್ (ಆಲ್‌ರೌಂಡರ್)(
8. ಕುಲ್‌ದೀಪ್ ಯಾದವ್ (ಸ್ಪಿನ್ನರ್)
9. ಅರ್ಷದೀಪ್ ಸಿಂಗ್ (ವೇಗದ ಬೌಲರ್)
10. ಜಸ್‌ಪ್ರೀತ್ ಬುಮ್ರಾ (ವೇಗದ ಬೌಲರ್)
11. ವರುಣ್ ಚಕ್ರವರ್ತಿ (ಸ್ಪಿನ್ನರ್)