ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ವಾಷಿಂಗ್ಟನ್‌ ಸುಂದರ್‌? ಸಿಎಸ್‌ಕೆ ಮಹತ್ವದ ನಡೆ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಿವೃತ್ತಿಯ ನಂತರ ರವಿಚಂದ್ರನ್ ಅಶ್ವಿನ್ ಅವರ ಸ್ಥಾನವನ್ನು ತುಂಬಲು ಚೆನ್ನೈ ಸೂಪರ್ ಕಿಂಗ್ಸ್, ವಾಷಿಂಗ್ಟನ್ ಸುಂದರ್ ಮೇಲೆ ಕಣ್ಣಿಟ್ಟಿದೆ. ಸುಂದರ್ ಅವರನ್ನು ಟ್ರೇಡ್‌ ಡೀಲ್‌ ಮಾಡಿಕೊಳ್ಳಲು ಗುಜರಾತ್ ಟೈಟನ್ಸ್ ತಂಡ ಸಿದ್ಧರಾಗಿದೆ ಎಂದು ವರದಿಯಾಗಿದೆ. ಸಿಎಸ್‌ಕೆ ಇದೀಗ ಸ್ಥಳೀಯ ಆಟಗಾರನನ್ನು ಖರೀದಿಸಲು ಎದುರು ನೋಡುತ್ತಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ವಾಷಿಂಗ್ಟನ್‌ ಸುಂದರ್‌ ಸೇರ್ಪಡ ಸಾಧ್ಯತೆ.

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡ (Chennai Super Kings), ಮುಂದಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (IPL 2025) ಮುಂದಿನ ಋತುವಿಗೆ ರವಿಚಂದ್ರನ್ ಅಶ್ವಿನ್ (R Ashwin) ಬದಲಿ ಆಟಗಾರನನ್ನು ಹುಡುಕುತ್ತಿದೆ. ಒಂಬತ್ತು ವರ್ಷಗಳ ನಂತರ ಸಿಎಸ್‌ಕೆಗೆ ಮರಳಿದ್ದ ಅಶ್ವಿನ್ ಕಳೆದ ಋತುವಿನಲ್ಲಿ ಒಂಬತ್ತು ಪಂದ್ಯಗಳನ್ನು ಆಡಿದ್ದು, ಏಳು ವಿಕೆಟ್‌ಗಳನ್ನು ಪಡೆದಿದ್ದರು. ಅಶ್ವಿನ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಒಪ್ಪಂದದ ವರದಿಗಳಿದ್ದವು, ಆದರೆ ಐಪಿಎಲ್‌ನಿಂದ ನಿವೃತ್ತಿ ಹೊಂದುವ ಅಶ್ವಿನ್ ನಿರ್ಧಾರವು ಈ ಊಹಾಪೋಹಗಳಿಗೆ ಅಂತ್ಯ ಹಾಡಿದೆ. ಅಶ್ವಿನ್ ನಿರ್ಗಮನದೊಂದಿಗೆ, ಸಿಎಸ್‌ಕೆಗೆ ಈಗ ಉತ್ತಮ ಬದಲಿ ಆಟಗಾರನ ಅಗತ್ಯವಿದೆ.

ತಮಿಳು ಸಮಯಂ ವರದಿಯ ಪ್ರಕಾರ, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮೇಲೆ ಸಿಎಸ್‌ಕೆ ಕಣ್ಣಿಟ್ಟಿದ್ದು, ಗುಜರಾತ್ ಟೈಟನ್ಸ್‌ನೊಂದಿಗೆ ಸಂಭಾವ್ಯ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಪ್ರಾರಂಭಿಸಿದೆ. ಗುಜರಾತ್ ಟೈಟನ್ಸ್ ಯಾವುದೇ ಷರತ್ತುಗಳಿಲ್ಲದೆ ಸುಂದರ್ ಅವರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ ಎಂದು ವರದಿ ಹೇಳುತ್ತಿದೆ. ಅವರ ಉತ್ತಮ ಫಾರ್ಮ್ ಹೊರತಾಗಿಯೂ, ಕಳೆದ ಋತುವಿನಲ್ಲಿ ಸುಂದರ್ ಗುಜರಾತ್‌ನ ಪ್ಲೇಯಿಂಗ್ XI ನಲ್ಲಿ ನಿಯಮಿತ ಸ್ಥಾನ ಪಡೆದಿರಲಿಲ್ಲ. ಅವರು ಕೇವಲ ಆರು ಪಂದ್ಯಗಳನ್ನು ಆಡಿ ಎರಡು ವಿಕೆಟ್‌ಗಳನ್ನು ಪಡೆದಿದ್ದರು ಮತ್ತು 166.25 ಸ್ಟ್ರೈಕ್ ರೇಟ್‌ನಲ್ಲಿ 133 ರನ್‌ಗಳನ್ನು ಗಳಿಸಿದ್ದರು. ಗುಜರಾತ್ ಅವರನ್ನು ₹3.2 ಕೋಟಿ ರೂ. ಗೆ ಖರೀದಿಸಿತ್ತು ಮತ್ತು ಸಿಎಸ್‌ಕೆ ಕೂಡ ಅದೇ ಬೆಲೆಗೆ ಅವರನ್ನು ಪಡೆಯುವ ಭರವಸೆಯಲ್ಲಿದೆ.

IPL 2026: ಐಪಿಎಲ್ 2026 ಹರಾಜಿಗೂ ಮುನ್ನ ಧೋನಿಯನ್ನು ಬಿಡುಗಡೆ ಮಾಡಲು ಮುಂದಾದ ಸಿಎಸ್‌ಕೆ

ಸಿಎಸ್‌ಕೆ ಈಗ ಯುವ ಮತ್ತು ದೀರ್ಘಕಾಲೀನ ತಂಡವನ್ನು ನಿರ್ಮಿಸುವತ್ತ ಗಮನ ಹರಿಸಿದೆ. ರಾಹುಲ್ ತ್ರಿಪಾಠಿ, ವಿಜಯ್ ಶಂಕರ್, ದೀಪಕ್ ಹೂಡಾ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಅನುಭವಿ ಆಟಗಾರರೊಂದಿಗೆ ಅವರು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಅವರು ನಿರೀಕ್ಷೆಗೆ ತಕ್ಕಂತೆ ಉತ್ತಮ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದರು. ಇದು ಅಭಿಮಾನಿಗಳಲ್ಲಿ ನಿರಾಶೆಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಮುಂಬರುವ ಮಿನಿ-ಹರಾಜಿಗೂ ಮುನ್ನ ಕಳಪೆ ಪ್ರದರ್ಶನ ನೀಡಿದ್ದ ಹಲವು ಹಿರಿಯ ಆಟಗಾರರನ್ನು ಬಿಡುಗಡೆ ಮಾಡಲು ಚೆನ್ನೈ ಫ್ರಾಂಚೈಸಿ ನಿರ್ಧರಿಸಿದೆ. ಅಶ್ವಿನ್ ತಂಡದಿಂದ ಅಧಿಕೃತವಾಗಿ ಬಿಡುಗಡೆಯಾಗುವ ಮೊದಲೇ ನಿವೃತ್ತರಾಗಿದ್ದರು.

IND vs AUS: ಎರಡನೇ ಒಡಿಐನಲ್ಲಿ ರೋಹಿತ್‌, ಕೊಹ್ಲಿ ಫಾರ್ಮ್‌ಗೆ ಮರಳಲಿದ್ದಾರೆಂದ ರಿಕಿ ಪಾಂಟಿಂಗ್‌!

ಸಿಎಸ್‌ಕೆ ಯಾವಾಗಲೂ ಅನುಭವಿ ಆಟಗಾರರನ್ನು ಅವಲಂಬಿಸಿದೆ ಮತ್ತು ಅನುಭವಿಗಳ ಸುತ್ತಲೂ ತನ್ನ ಪ್ರಮುಖ ತಂಡವನ್ನು ನಿರ್ಮಿಸಿದೆ. ಆದಾಗ್ಯೂ, ಅಂಬಾಟಿ ರಾಯುಡು, ಸುರೇಶ್ ರೈನಾ ಮತ್ತು ಡ್ವೇನ್ ಬ್ರಾವೋ ಅವರಂತಹ ಪ್ರಮುಖ ಆಟಗಾರರು 2021ರ ನಂತರ ನಿವೃತ್ತರಾಗಿದದ್ರು. ಇದಾದ ಬಳಿಕ ಸಿಎಸ್‌ಕೆಯ ಹಳೆಯ ತಂತ್ರವು ಇದೀಗ ಕೆಲಸ ಮಾಡುತ್ತಿಲ್ಲ. ಯುವ ಪ್ರತಿಭೆಗಳಲ್ಲಿ ಹೂಡಿಕೆ ಮಾಡುವ ಬದಲು, ಫ್ರಾಂಚೈಸಿ ರಾಬಿನ್ ಉತ್ತಪ್ಪ ಮತ್ತು ಅಜಿಂಕ್ಯ ರಹಾನೆ ಅವರಂತಹ ಅನುಭವಿ ಹೆಸರುಗಳಿಗೆ ಅವಕಾಶಗಳನ್ನು ನೀಡಿತ್ತು. ಆದರೆ ಈ ವಿಧಾನವು ಸ್ಥಿರವಾಗಿ ಯಶಸ್ವಿಯಾಗಿಲ್ಲ. ಆದ್ದರಿಂದ, ಸುಂದರ್ ಅವರಂತಹ ಆಟಗಾರರಲ್ಲಿ ಹೂಡಿಕೆ ಮಾಡುವುದು ಚೆನ್ನೈಗೆ ತಂತ್ರ ಬದಲಾಯಿಸುವ ಅಂಶವೆಂದು ಸಾಬೀತುಪಡಿಸಬಹುದು.