IND vs AUS: ಎರಡನೇ ಒಡಿಐನಲ್ಲಿ ರೋಹಿತ್, ಕೊಹ್ಲಿ ಫಾರ್ಮ್‌ಗೆ ಮರಳಲಿದ್ದಾರೆಂದ ರಿಕಿ ಪಾಂಟಿಂಗ್!
ಮೊದಲನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಬಗ್ಗೆ ಎರಡನೇ ಒಡಿಐ ನಿಮಿತ್ತ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಡಿಲೇಡ್ ಪಂದ್ಯದಲ್ಲಿ ಈ ಇಬ್ಬರೂ ಫಾರ್ಮ್‌ಗೆ ಮರಳಲಿದ್ದಾರೆಂದು ಪಂಟರ್ ಭವಿಷ್ಯ ನುಡಿದಿದ್ದಾರೆ.

ಕೊಹ್ಲಿ-ರೋಹಿತ್‌ಗೆ ರಿಕಿ ಪಾಂಟಿಂಗ್ ಬೆಂಬಲ. -

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ದ ಎರಡನೇ ಏಕದಿನ ಪಂದ್ಯದಲ್ಲಿ (IND vs AUS) ಆಧುನಿಕ ಕ್ರಿಕೆಟ್ ದಿಗ್ಗಜರರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit sharma) ಅವರು ಫಾರ್ಮ್‌ಗೆ ಮರಳಲಿದ್ದಾರೆಂದು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ (Ricky Ponting) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪರ್ತ್‌ನಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಕೊಹ್ಲಿ ಹಾಗೂ ರೋಹಿತ್ ವೈಫಲ್ಯ ಅನುಭವಿಸಿದ್ದರು. ಆ ಮೂಲಕ ದೀರ್ಘಾವಧಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಈ ಇಬ್ಬರೂ ಬೇಸರ ಮೂಡಿಸಿದ್ದರು. ಅಕ್ಟೋಬರ್ 23ರಂದು ಗುರುವಾರ ಎರಡನೇ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಆ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಅವರು ಬಯಸುತ್ತಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಕಳೆದ ಭಾನುವಾರ ಈ ಇಬ್ಬರೂ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಪಂದ್ಯದ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು. ರೋಹಿತ್ ಶರ್ಮಾ 8 ರನ್ ಗಳಿಸಿ ಆಸೀಸ್ ವೇಗದ ಬೌಲಿಂಗ್ ದಾಳಿಯ ಎದುರು ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದರು. ಆದರೆ, ಅವರು ಜಾಶ್ ಹೇಝಲ್‌ವುಡ್‌ಗೆ ವಿಕೆಟ್ ಒಪ್ಪಿಸಿದ್ದರು. ಆದರೆ, ವಿರಾಟ್ ಕೊಹ್ಲಿ,ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಕ್ಯಾಚ್ ಕೊಟ್ಟಿದ್ದರು.
IND vs AUS 2nd ODI: ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾಗೆ ತಿರುಗೇಟು ನೀಡಲು ಭಾರತ ಸಜ್ಜು!
ರೋಹಿತ್-ಕೊಹ್ಲಿಯನ್ನು ಬೆಂಬಲಿಸಿದ ರಿಕಿ ಪಾಯಿಂಟ್
"ನೀವು ಎಂದಿಗೂ ಚಾಂಪಿಯನ್ ಆಟಗಾರರನ್ನು ತಿರಸ್ಕರಿಸಬಹುದು. ಈ ಇಬ್ಬರು ಅತ್ಯುತ್ತಮ ಆಟಗಾರರಲ್ಲಿ ಮತ್ತು ವಿರಾಟ್ ನಾನು ನೋಡಿದ ಅತ್ಯುತ್ತಮ 50 ಓವರ್ ಆಟಗಾರ ಎಂದು ನಾನು ಮೊದಲೇ ಹೇಳಿದ್ದರೂ, ನೀವು ಅವರನ್ನು ತಿರಸ್ಕರಿಸಬಾರದು," ಎಂದು ರಿಕಿ ಪಾಂಟಿಂಗ್ ಐಸಿಸಿ ರಿವ್ಯೂ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ.
"ಅವರು ತಮ್ಮ ತಂಡಕ್ಕೆ ಕೊಡುಗೆ ನೀಡಲು ಮತ್ತು ಪಂದ್ಯಗಳನ್ನು ಗೆಲ್ಲಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ ಮತ್ತು ಅವರು ಈ ರೀತಿಯ ಪ್ರದರ್ಶನವನ್ನು ತೋರಿದರೆ ಅವರು 2027ರಲ್ಲಿ ಏಕದಿನ ವಿಶ್ವಕಪ್ ತಂಡದಲ್ಲಿ ಇರುತ್ತಾರೆ. ಆ ಇಬ್ಬರೂ ವ್ಯಕ್ತಿಗಳು ಬೇಗನೆ ಮತ್ತೆ ತಂಡಕ್ಕೆ ಮರಳುವುದನ್ನು ನಾನು ನಿರೀಕ್ಷಿಸುತ್ತೇನೆ," ಎಂದು ತಿಳಿಸಿದ್ದಾರೆ.
IND vs AUS: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯ ಬಗ್ಗೆ ಆರೋನ್ ಫಿಂಚ್ ದೊಡ್ಡ ಹೇಳಿಕೆ!
"ಅಡಿಲೇಡ್ ಬ್ಯಾಟಿಂಗ್ ನಡೆಸಲು ಮತ್ತು ಕ್ರಿಕೆಟ್ ಆಡಲು ಉತ್ತಮ ಸ್ಥಳವಾಗಿದೆ. ಆದರೆ ಅವರು ಇದುವರೆಗೆ ಆಟ ಆಡಿದ ಕೆಲವು ಅತ್ಯುತ್ತಮ ವೈಟ್-ಬಾಲ್ ಬೌಲರ್‌ಗಳನ್ನು ಎದುರಿಸಬೇಕಾಗಿರುವುದರಿಂದ ಅದು ಸುಲಭವಲ್ಲ," ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಹೇಳಿದ್ದಾರೆ.