ನವದೆಹಲಿ: ತಮಿಳುನಾಡು ವಿರುದ್ಧದ 2025-26ರ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ತನ್ನ ಪಂದ್ಯದಲ್ಲಿ ಜಾರ್ಖಂಡ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Kishan Ishan) ಬಾರಿಸಿದ್ದಾರೆ. ಆ ಮೂಲಕ ಬಿಸಿಸಿಐ ಆಯ್ಕೆದಾರರಿಗೆ ಸಂದೇಶವನ್ನು ರವಾನಿಸಿದ್ದಾರೆ. ಮತ್ತೊಂದು ಕಡೆ ಬಂಗಾಳ ಪರ ಉತ್ತರಾಖಂಡ ವಿರುದ್ಧ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಉತ್ತಮ ಲಯವನ್ನು ಕಂಡುಕೊಂಡಿದ್ದಾರೆ. ಈ ಇಬ್ಬರೂ ಆಟಗಾರರು ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಹಾದಿಯಲ್ಲಿದ್ದಾರೆ.
ಬುಧವಾರ ತಮಿಳುನಾಡು ವಿರುದ್ದದ ಪಂದ್ಯದಲ್ಲಿ ಇಶಾನ್ ಕಿಶನ್ 183 ಎಸೆತಗಳಲ್ಲಿ ಅಜೇಯ 125 ರನ್‌ಗಳನ್ನು ಕಲೆ ಹಾಕಿದ್ದು, ಎರಡನೇ ದಿನ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ ತಂಡ ಒಂದು ಹಂತದಲ್ಲಿ 79 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಇಶಾನ್ ಕಿಶನ್ ಅತ್ಯುತ್ತಮ ಬ್ಯಾಟ್ ಮಾಡಿ ಶತಕವನ್ನು ಬಾರಿಸಿದರು. ಆಕ್ರಮಣಕಾರಿಯಾಗಿ ಬ್ಯಾಟ್ ಮಾಡದೆ, ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್ ಮಾಡಿ ಮೂರಂಕಿ ವೈಯಕ್ತಿಕ ಮೊತ್ತವನ್ನು ದಾಟಿದರು. ಆ ಮೂಲಕ ಮೊದಲನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 307 ರನ್‌ಗಳನ್ನು ಕಲೆ ಹಾಕಿದೆ.
KAR vs SAU: ಕರ್ನಾಟಕ ತಂಡಕ್ಕೆ ಕರುಣ್, ಪಡಿಕ್ಕಲ್ ಅರ್ಧಶತಕಗಳ ಬಲ!
ತಮಿಳುನಾಡು ತಂಡದ ಪರ ಗುರ್ಜಪನೀತ್ ಸಿಂಗ್ ಅವರು ಮಾರಕ ದಾಳಿ ನಡೆಸಿ ಹೊಸ ಚೆಂಡಿನಲ್ಲಿ ಮೂರು ನಿರ್ಣಾಯಕ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಡಿ ಟಿ ಚಂದ್ರಶೇಖರ್ ಅವರು ರಣಜಿ ಟ್ರೋಫಿ ಕಮ್‌ಬ್ಯಾಕ್ ಪಂದ್ಯದಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಇಶಾನ್ ಕಿಶನ್ ಅವರ ಜೊತೆ ಸಹಿಲ್ ರಾಜ್, 105 ಎಸೆತಗಳಲ್ಲಿ ಅಜೇಯ 64 ರನ್‌ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೂರು ವಿಕೆಟ್ ಕಿತ್ತ ಮೊಹಮ್ಮದ್ ಶಮಿ
ಇನ್ನು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಬಂಗಾಳ ತಂಡದ ವೇಗಿ ಮೊಹಮ್ಮದ್ ಶಮಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆರಂಭದಲ್ಲಿ ತಮ್ಮ ಫಾರ್ಮ್ ಕಂಡುಕೊಳ್ಳಲು ಶಮಿ ಪರದಾಡುತ್ತಿದ್ದರು. ಆದರೆ, ಕೊನೆಯ ಹಂತದಲ್ಲಿ ಲಯಕ್ಕೆ ಮರಳುವ ಮೂಲಕ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಉತ್ತರಾಖಂಡ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 213 ರನ್‌ಗಳಿಗೆ ಆಲ್‌ಔಟ್ ಆಯಿತು.
KAR vs SAU: ಕರ್ನಾಟಕ ತಂಡಕ್ಕೆ ಕರುಣ್, ಪಡಿಕ್ಕಲ್ ಅರ್ಧಶತಕಗಳ ಬಲ!
ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಬಂಗಾಳ ತಂಡ, ಮೊದಲನೇ ಎಸೆತದಲ್ಲಿಯೇ ನಾಯಕ ಅಭಿಮನ್ಯು ಈಶ್ವರನ್ ಅವರ ವಿಕೆಟ್ ಅನ್ನು ಕಳೆದುಕೊಂಡಿತು. ಮೊದಲನೇ ದಿನದಾಟದ ಅಂತ್ಯಕ್ಕೆ ಬಂಗಾಳ ತಂಡ, ಐದು ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 8 ರನ್ ಗಳಿಸಿದೆ. ಸುದೀಪ್ ಚಟರ್ಜಿ ಹಾಗೂ ಸುದೀಪ್ ಕುಮಾರ್ ಘರಾಮಿ
ಆತಿಥೇಯರು ಐದು ಓವರ್‌ಗಳ ನಂತರ 1 ವಿಕೆಟ್‌ಗೆ 8 ರನ್ ಗಳಿಸಿ ದಿನದಾಟವನ್ನು ಕೊನೆಗೊಳಿಸಿದರು, ಸುದೀಪ್ ಚಟರ್ಜಿ (1*) ಮತ್ತು ಸುದೀಪ್ ಕುಮಾರ್ ಘರಾಮಿ (7*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.