ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PAK vs SL: ಮೊದಲನೇ ಒಡಿಐನಲ್ಲಿಯೂ ವಿಫಲ, ವಿರಾಟ್‌ ಕೊಹ್ಲಿಯ ಅನಗತ್ಯ ದಾಖಲೆ ಸರಿಗಟ್ಟಿದ ಬಾಬರ್‌ ಆಝಮ್‌!

ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಝಮ್‌ ಅವರ ಕಳಪೆ ಫಾರ್ಮ್ ಮುಂದುವರಿದಿದೆ. ಶ್ರೀಲಂಕಾ ವಿರುದ್ದದ ಮೊದಲನೇ ಏಕದಿನ ಪಂದ್ಯದಲ್ಲಿಯೂ ವಿಫಲರಾದರು. ಬಾಬರ್‌ ಆಝಮ್‌ ಶತಕ ಗಳಿಸಿ 83 ಇನಿಂಗ್ಸ್‌ಗಳು ಕಳೆದಿವೆ. ಆ ಮೂಲಕ ವಿರಾಟ್‌ ಕೊಹ್ಲಿಯ ಅನಗತ್ಯ ದಾಖಲೆಯನ್ನು ಬಾಬರ್‌ ಆಝಮ್‌ ಸರಿಗಟ್ಟಿದ್ದಾರೆ.

ವಿರಾಟ್‌ ಕೊಹ್ಲಿರ ಅನಗತ್ಯ ದಾಖಲೆಯನ್ನು ಸರಿಗಟ್ಟಿದ ಬಾಬರ್‌ ಆಝಮ್‌.

ನವದೆಹಲಿ: ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಝಮ್ (Babar Azam) ಅವರ ಬ್ಯಾಟಿಂಗ್‌ ವೈಫಲ್ಯ ಮುಂದುವರಿದಿದೆ. ಟೆಸ್ಟ್‌ನಲ್ಲಿ ವೈಫಲ್ಯ, ಟಿ20ಐ ತಂಡದಿಂದ ಹೊರಗೆ ಮತ್ತು ಇದೀಗ ಏಕದಿನ ಕ್ರಿಕೆಟ್‌ನಲ್ಲಿಯೂ ಅವರ ಕಳಪೆ ಫಾರ್ಮ್‌ ಮುಂದುವರಿದಿದೆ. ಪಾಕಿಸ್ತಾನ ತಂಡದ ಮೂರೂ ಸ್ವರೂಪದಲ್ಲಿಯೂ ಬಾಬರ್ ಆಝಮ್‌ (Babar Azam) ಅದ್ಭುತ ಆಟಗಾರ ಹಾಗೂ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಗೂ (Virat Kohli) ಅವರನ್ನು ಹೋಲಿಕೆ ಮಾಡಲಾಗಿದೆ. ಇದೀಗ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ವಿಫಲರಾಗಿದ್ದಾರೆ ಹಾಗೂ ದೊಡ್ಡ ಇನಿಂಗ್ಸ್‌ ಎಡವಿದ್ದಾರೆ. ಆ ಮೂಲಕ ವಿರಾಟ್‌ ಕೊಹ್ಲಿಯ ಅನಗತ್ಯ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ರಾವಲ್ಪಿಂಡಿಯಲ್ಲಿ ಮಂಗಳವಾರ ನಡೆದಿದ್ದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಬರ್ ಆಝಮ್‌ ನಿರಾಶೆ ಮೂಡಿಸಿದರು. 51 ಎಸೆತಗಳಲ್ಲಿ ಅವರು 56.86 ಸ್ಟ್ರೈಕ್ ರೇಟ್‌ನೊಂದಿಗೆ ಕೇವಲ 29 ರನ್ ಗಳಿಸಿದರು. ವಾನಿಂದು ಹಸರಂಗ ಅವರ ಗೂಗ್ಲಿಯನ್ನು ಅರಿಯುವಲ್ಲಿ ವಿಫಲರಾಗಿ ವಿಕೆಟ್‌ ಒಪ್ಪಿಸಿದರು. ಹಸರಂಗ ಅವರ ಚೆಂಡು ಬಾಬರ್ ಆಝಮ್‌ ಅವರ ಬ್ಯಾಟ್ ಮತ್ತು ಪ್ಯಾಡ್ ನಡುವೆ ಹೋಗಿ ಸ್ಟಂಪ್‌ಗಳನ್ನು ಬಡೆಯಿತು. ಬಾಬರ್ ಆಝಮ್ ಡ್ರೈವ್ ಮಾಡಲು ಪ್ರಯತ್ನಿಸುತ್ತಿದ್ದರು, ಆದರೆ ಚೆಂಡು ಅವರ ಬ್ಯಾಟ್ ಮತ್ತು ಪ್ಯಾಡ್ ನಡುವೆ ಹೋಗಿ ಸ್ಟಂಪ್‌ಗಳನ್ನು ಹೊಡೆಯಿತು.

IND vs SA: ಅಂದು ಆಡಲ್ಲ ಎಂದಿದ್ದೇ ಮೊಹಮ್ಮದ್‌ ಶಮಿಗೆ ಮುಳುವಾಯಿತೆ? ಬಿಸಿಸಿಐ ಅಧಿಕಾರಿ ಹೇಳಿದ್ದಿದು!

ಇದು ಅವರ ಸತತ 33ನೇ ಏಕದಿನ ಪಂದ್ಯವಾಗಿದ್ದು, ಇದರಲ್ಲಿ ಅವರು ಶತಕ ಗಳಿಸಲು ವಿಫಲರಾಗಿದ್ದಾರೆ. 2023ರ ಸೆಪ್ಟೆಂಬರ್‌ನಿಂದ ಅವರ ಸರಾಸರಿ ಕೇವಲ 33.73ಕ್ಕೆ ಕುಸಿದಿದೆ. ಏಕದಿನ ಪಂದ್ಯಗಳಲ್ಲಿ ಮಾತ್ರವಲ್ಲ, ಒಟ್ಟಾರೆಯಾಗಿ ಬಲಗೈ ಬ್ಯಾಟ್ಸ್‌ಮನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 83 ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿಲ್ಲ. ಅವರ ಕೊನೆಯ ಶತಕ 2023ರ ಆಗಸ್ಟ್ 30 ರಂದು ಮೂಡಿ ಬಂದಿತ್ತು. 2023 ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಅವರು ನೇಪಾಳ ವಿರುದ್ಧ ಶತಕ ಬಾರಿಸಿದ್ದರು. ಆ ಮೂಲಕ ವಿರಾಟ್‌ ಕೊಹ್ಲಿಯ ಅನಗತ್ಯ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿರಾಟ್‌ ಕೊಹ್ಲಿ 2019ರಲ್ಲಿ ಶತಕ ಗಳಿಸಿದ ಬಳಿಕ 2022ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಶತಕ ಬಾರಿಸಿದ್ದರು. ಆ ಮೂಲಕ 83 ಇನಿಂಗ್ಸ್‌ಗಳಲ್ಲಿ ಶತಕ ವಂಚಿತರಾಗಿದ್ದರು.



ಶತಕ ಗಳಿಸದೆ ಅತಿ ಹೆಚ್ಚು ಇನಿಂಗ್ಸ್‌ಗಳನ್ನು ಆಡಿದ ಆಟಗಾರರು

ಸನತ್ ಜಯಸೂರ್ಯ (ಶ್ರೀಲಂಕಾ) - 88 ಇನಿಂಗ್ಸ್‌ಗಳು

ವಿರಾಟ್ ಕೊಹ್ಲಿ (ಭಾರತ) - 83 ಇನಿಂಗ್ಸ್‌ಗಳು

ಬಾಬರ್ ಆಝಮ್ (ಪಾಕಿಸ್ತಾನ) - 83 ಇನಿಂಗ್ಸ್‌ಗಳು

ಶಿವನಾರಾಯಣ್ ಚಂದ್ರಪಾಲ್ (ವೆಸ್ಟ್ ಇಂಡೀಸ್) - 78 ಇನಿಂಗ್ಸ್‌ಗಳು

31ರ ವಯಸ್ಸಿನ ಬ್ಯಾಟ್ಸ್‌ಮನ್ ಕೊನೆಯ ಆರು ಏಕದಿನ ಸ್ಕೋರ್‌ಗಳು 29, 27, 11, 7, 9 ಮತ್ತು 0 ಆಗಿವೆ. 2025ರಲ್ಲಿ 15 ಏಕದಿನ ಪಂದ್ಯಗಳಲ್ಲಿ ಅವರ ಸರಾಸರಿ 27.20ರ ಆಗಿದೆ. ನ್ಯೂಜಿಲೆಂಡ್‌ನ ವಿಲ್ ಯಂಗ್ (21.85) ನಂತರ, ಈ ವರ್ಷ 15 ಅಥವಾ ಅದಕ್ಕಿಂತ ಹೆಚ್ಚು ಏಕದಿನ ಇನಿಂಗ್ಸ್‌ಗಳನ್ನು ಆಡಿದ ಎಲ್ಲಾ ಬ್ಯಾಟ್ಸ್‌ಮನ್‌ಗಳಲ್ಲಿ ಇದು ಎರಡನೇ ಅತ್ಯಂತ ಕಡಿಮೆ ಸರಾಸರಿಯಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ಬಾಬರ್ ಅವರ ಪ್ರದರ್ಶನವೂ ಕಳವಳಕಾರಿಯಾಗಿದೆ. 2023ರ ಆರಂಭದಿಂದ ಅವರು 15 ಟೆಸ್ಟ್‌ಗಳಲ್ಲಿ ಕೇವಲ 24.86ರ ಸರಾಸರಿಯನ್ನು ಹೊಂದಿದ್ದಾರೆ. ಸುಮಾರು 10 ತಿಂಗಳ ಕಾಲ ತಂಡದಿಂದ ಹೊರಗುಳಿದ ನಂತರ ಅವರನ್ನು ಟಿ20ಐ ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ.