ನವದೆಹಲಿ: ಸೆಪ್ಟಂಬರ್ 10 ರಂದು ಭಾರತ ತಂಡ ಯುಎಇ ವಿರುದ್ಧ ಕಾದಾಟ (IND vs UAE) ನಡೆಸುವ ಮೂಲಕ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಅಂದ ಹಾಗೆ ಶುಭಮನ್ ಗಿಲ್ ಉಪ ನಾಯಕನಾಗಿ ಭಾರತ ಟಿ20 ತಂಡಕ್ಕೆ ಮರಳಿದ ಬಳಿಕ ಸಂಜು ಸ್ಯಾಮ್ಸನ್‌ಗೆ (Sanju Samson) ಆರಂಭಿಕ ಸ್ಥಾನವನ್ನು ನೀಡುವುದು ಅನುಮಾನ ಎನ್ನಲಾಗುತ್ತಿದೆ. ಆದರೆ, ಮಾಜಿ ಕ್ರಿಕೆಟಿಗ ಡಬ್ಲ್ಯುವಿ ರಾಮನ್ ಅವರು ಈ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಸಂಜು ಸ್ಯಾಮ್ಸನ್‌ಗೆ ಅಗ್ರ ಮೂರು ಕ್ರಮಾಂಕಗಳಲ್ಲಿ ಸ್ಥಾನವನ್ನು ನೀಡಬೇಕು, ಇಲ್ಲವಾದಲ್ಲಿ ಅವರನ್ನು 5 ಅಥವಾ 6ನೇ ಕ್ರಮಾಂಕದಲ್ಲಿ ಆಡಿಸುವುದು ಯಾವುದೇ ಪ್ರಯೋಜನವಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದರೆ, ಎರಡನೇ ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾ ಆಡಲಿದ್ದಾರೆ. ಅಂದ ಹಾಗೆ ಸಂಜು ಸ್ಯಾಮ್ಸನ್‌ಗೆ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡುವ ಬಗ್ಗೆ ಇನ್ನೂಯಾವುದೇ ಸ್ಪಷ್ಟತೆ ಇಲ್ಲ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಡಬ್ಲ್ಯುವಿ ರಾಮನ್, ಸಂಜು ಸ್ಯಾಮ್ಸನ್ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.
Asia Cup 2025 Weather Report: ಭಾರತ vs ಯುಎಇ ಪಂದ್ಯಕ್ಕೆ ಮಳೆ ಕಾಟ ಇದೆಯಾ?
"ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಸಂಜು ಸ್ಯಾಮ್ಸನ್ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ನನ್ನ ಪ್ರಕಾರ ಅವರಿಗೆ ತಂಡದ ಪ್ಲೇಯಿಂಗ್ Xiನಲ್ಲಿ ಅವಕಾಶವನ್ನು ನೀಡಬೇಕಾಗಿದೆ. ಪ್ಲೇಯಿಂಗ್ XIನಲ್ಲಿ ಅವರು ಯಾವ ಕ್ರಮಾಂಕದಲ್ಲಿ ಆಡಬೇಕು? ಅವರು 5 ಅಥವಾ 6 ಅಥವಾ ಫಿನಿಷರ್ ಆಗಿ ಆಡಿದರೆ ತಂಡಕ್ಕೆ ಯಾವುದೇ ಯಾವುದೇ ಪ್ರಯೋಜನವಾಗುವುದಿಲ್ಲ. ಸಂಜು ಸ್ಯಾಮ್ಸನ್ ಅಗ್ರ ಮೂರು ಕ್ರಮಾಂಕಗಳಲ್ಲಿ ಬ್ಯಾಟ್ ಮಾಡಬೇಕಾದ ಅಗತ್ಯವಿದೆ. ಇವರು ಅಗ್ರ ಮೂರು ಕ್ರಮಾಂಕಗಳಲ್ಲಿ ಬ್ಯಾಟ್ ಮಾಡಿದರೆ, ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲಿದೆ. ಬ್ಯಾಟ್‌ಗೆ ಚೆಂಡು ಚೆನ್ನಾಗಿ ಬರುತ್ತಿದ್ದರೆ, ಅವರು ದೊಡ್ಡ-ದೊಡ್ಡ ಹೊಡೆತಗಳನ್ನು ಆಡಲಿದ್ದಾರೆ. ಇವರು ಅಗ್ರ ಮೂರು ಕ್ರಮಾಂಕಗಳಲ್ಲಿ ಆಡಿದರೆ, ತಂಡಕ್ಕೆ ಲಾಭವಾಗಲಿದೆ," ಎಂದು ಡಬ್ಲ್ಯುವಿ ರಾಮನ್ ತಿಳಿಸಿದ್ದಾರೆ.
ಭಾರತ ತಂಡದ ಪ್ಲೇಯಿಂಗ್ XIನಲ್ಲಿ ರಿಂಕು ಸಿಂಗ್ ಹಾಗೂ ತಿಲಕ ವರ್ಮಾ ಅವರ ನಡುವೆ ಒಬ್ಬರನ್ನು ಆಯ್ಕೆ ಮಾಡುವುದು ಗೌತಮ್ ಗಂಭೀರ್ ಮಾರ್ಗದರ್ಶನದ ಟೀಮ್ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆ ನೋವಾಗಿದೆ. 2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ವಿಭಿನ್ನ ಕಂಡೀಷನ್ಸ್‌ನಲ್ಲಿ ಆಡಲಿದೆ. ಈ ಹಿನ್ನೆಲೆಯಲ್ಲಿ ಕಂಡೀಷನ್ಸ್ ನೋಡಿಕೊಂಡು ಈ ಇಬ್ಬರನ್ನು ಆಯ್ಕೆ ಮಾಡಬಹುದು.
IND vs UAE: ಏಷ್ಯಾ ಕಪ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
"ಸಂಜು ಸ್ಯಾಮ್ಸನ್‌ಗೆ ಅಗ್ರ ಮೂರರಲ್ಲಿ ಅವಕಾಶವನ್ನು ನೀಡಿದರೆ, ತಿಲಕ್ ವರ್ಮಾ ಹಾಗೂ ರಿಂಕು ಸಿಂಗ್ ಅವರ ನಡುವೆ ಪೈಪೋಟಿ ನಡೆಯಲಿದೆ. ಇವರಲ್ಲಿ ಯಾರು ಪ್ಲೇಯಿಂಗ್ xiನಲ್ಲಿ ಆಡಬೇಕು? ಇವರು ಯಾವ ಕ್ರಮಾಂಕದಲ್ಲಿ ಆಡಬೇಕು? ಗೌತಮ್ ಗಂಭೀರ್ ಅವರ ಟೀಮ್ ಮ್ಯಾನೇಜ್‌ಮೆಂಟ್‌ಗೆ ಇದು ದೊಡ್ಡ ತಲೆ ನೋವಾಗಿದೆ. ಟೀಮ್ ಮ್ಯಾನೇಜ್‌ಮೆಂಟ್‌ಗೆ ಇದು ಒಳ್ಳೆಯ ತಲೆ ನೋವಾಗಿದೆ. ನೀವು ತಂಡವನ್ನು ಒಮ್ಮೆ ನೋಡಿದರೆ, ನಿಮಗೆ ಇಲ್ಲಿ ಜಾಸ್ತಿ ಅಂತರ ಸಿಗುವುದಿಲ್ಲ. ಕಂಡೀಷನ್ಸ್ ಹೊರತಾಗಿಯೂ ಭಾರತ ತಂಡ ಅತ್ಯುತ್ತಮ ಪ್ಲೇಯಿಂಗ್ xiಅನ್ನು ಕಟ್ಟ ಬಹುದಾಗಿದೆ. ಆ ಮೂಲಕ ಈ ತಂಡ ಕಂಡೀಷನ್ಸ್ ಹೇಗಿದ್ದರೂ ಅತ್ಯುತ್ತಮ ಪ್ರದರ್ಶನವನ್ನು ತೋರಲಿದೆ," ಎಂದು ಡಬ್ಲ್ಯುವಿ ರಾಮನ್ ತಿಳಿಸಿದ್ದಾರೆ.