Asia Cup 2025 Weather Report: ಭಾರತ vs ಯುಎಇ ಪಂದ್ಯಕ್ಕೆ ಮಳೆ ಕಾಟ ಇದೆಯಾ?
IND vs UAE Weather Report: 2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಯುಎಇ ನಡುವಣ ಪಂದ್ಯ ಸೆಪ್ಟೆಂಬರ್ 10 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಇಲ್ಲಿನ ಹವಾಮಾನ ಹೇಗಿರುತ್ತದೆ ಎಂದು ಇಲ್ಲಿ ವಿವರಿಸಲಾಗಿದೆ.
 
                                ಭಾರತ vs ಯುಎಇ ಪಂದ್ಯಕ್ಕೆ ಹವಾಮಾನ ವರದಿ. -
 Ramesh Kote
                            
                                Sep 10, 2025 5:06 PM
                                
                                Ramesh Kote
                            
                                Sep 10, 2025 5:06 PM
                            ದುಬೈ: ಬಹುನಿರೀಕ್ಷಿತ 2025ರ ಟಿ20 ಏಷ್ಯಾ ಕಪ್ (Asia Cup 2025) ಟೂರ್ನಿಯು ಆರಂಭವಾಗಿದೆ. ಟೂರ್ನಿಯ ಎರಡನೇ ಪಂದ್ಯ ಭಾರತ ಮತ್ತು ಯುಎಇ (IND vs UAE) ನಡುವೆ ಸೆಪ್ಟೆಂಬರ್ 10 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಟಾಸ್ ಸಮಯ ಸಂಜೆ 7.30 ಕ್ಕೆ ನಿಗದಿಯಾಗಿದೆ. ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಪಂದ್ಯದ ಸಮಯವನ್ನು ಬದಲಾಯಿಸಲಾಗಿತ್ತು. ಇದಕ್ಕೆ ಪ್ರಮುಖ ಕಾರಣ ಹವಾಮಾನ. ಅದರಂತೆ ಭಾರತ ಮತ್ತು ಯುಎಇ ನಡುವಣ ಪಂದ್ಯದ ಸಮಯದಲ್ಲಿ ಹವಾಮಾನ ಹೇಗಿರುತ್ತದೆ (Weather Report) ಎಂದು ಇಲ್ಲಿ ವಿವರಿಸಲಾಗಿದೆ.
ಭಾರತ ಮತ್ತು ಯುಎಇ ನಡುವಿನ ಪಂದ್ಯದ ಸಮಯದಲ್ಲಿ ಮಳೆ ಬೀಳುವ ಸಾಧ್ಯತೆಯೇ ಇಲ್ಲ. ಆದರೆ ಬಿಸಿಲಿನ ಕಾರಣ ಆರ್ದ್ರತೆ ಜಾಸ್ತಿ ಇರಲಿದ್ದು, ಇದು ಆಟಗಾರರಿಗೆ ಕಠಿಣ ಸವಾಲು ಉಂಟಾಗಲಿದೆ. ಟಾಸ್ ಸಮಯದಲ್ಲಿ ದುಬೈನ ತಾಪಮಾನದ ಬಗ್ಗೆ ಹೇಳುವುದಾದರೆ, ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ, ಪಂದ್ಯದ ದಿನ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ.
Asia Cup 2025: ಯುಎಇ ವಿರುದ್ದದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ಕೆ ಶ್ರೀಕಾಂತ್!
ಈ ಹಿನ್ನೆಲೆಯಲ್ಲಿ ಮಳೆಯಿಂದಾಗಿ ಪಂದ್ಯದಲ್ಲಿ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಉಷ್ಣಾಂಶವು ಖಂಡಿತವಾಗಿಯೂ ತೊಂದರೆಯನ್ನು ನೀಡಬಹುದು. ಪಂದ್ಯದ ಸಮಯದಲ್ಲಿ ಸರಾಸರಿ ತಾಪಮಾನವು 35 ಡಿಗ್ರಿಗಳಷ್ಟಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರ ಹೊರತಾಗಿ, ಆರ್ದ್ರತೆಯಿಂದಾಗಿ ಆಟಗಾರರಿಗೆ ಕಷ್ಟವಾಗಬಹುದು.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್/ಜಿತೇಶ್ ಶರ್ಮಾ, ಶುಭಮನ್ ಗಿಲ್ (ಉಪ ನಾಯಕ), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್. ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ
ಯುಎಇ: ಮುಹಮ್ಮದ್ ವಸೀಮ್ (ನಾಯಕ), ಅಲಿಶನ್ ಶರಫು, ಮುಹಮ್ಮದ್ ಝೊಹೈದ್, ರಾಹುಲ್ ಚೋಪ್ರಾ (ವಿ.ಕೀ), ಆಸಿಫ್ ಖಾನ್, ಹರ್ಷಿತ್ ಕೌಶಿಕ್, ಮುಹಮ್ಮದ್ ಫಾರೂಕಿ, ಸಘೀರ್ ಖಾನ್, ಹೈದರ್ ಅಲಿ, ಜುನೈದ್ ಸಿದ್ದಿಕ್, ಮುಹಮ್ಮದ್ ಜವಾದುಲ್ಹಾ
IND vs UAE: ಏಷ್ಯಾ ಕಪ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಪಂದ್ಯದ ವಿವರ
ಭಾರತ vs ಯುಎಇ
2025ರ ಏಷ್ಯಾ ಕಪ್ ಟೂರ್ನಿ
ಎ ಗುಂಪಿನ ಪಂದ್ಯ
ದಿನಾಂಕ: ಸೆಪ್ಟಂಬರ್ 10, 2025
ಸಮಯ: ರಾತ್ರಿ 08: 00ಕ್ಕೆ
ಸ್ಥಳ: ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣ, ದುಬೈ
