ನವದೆಹಲಿ: ಲಖನೌ ಸೂಪರ್ ಜಯಂಟ್ಸ್ ತಂಡ (LSG), 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿತ್ತು. ರಿಷಭ್ ಪಂತ್ (Rishabh Pant) ನಾಯಕತ್ವದಲ್ಲಿ ಆಡಿದ್ದ 14 ಪಂದ್ಯಗಳಲ್ಲಿ ಎಲ್‌ಎಸ್‌ಜಿ ಗೆದ್ದಿದ್ದು 6ರಲ್ಲಿ ಮಾತ್ರ. ಆ ಮೂಲಕ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಇದೀಗ 2026ರ ಐಪಿಎಲ್ ಟೂರ್ನಿಯ ನಿಮಿತ್ತ ಲಖನೌ ಸೂಪರ್ ಜಯಂಟ್ಸ್ ತಯಾರಿಯನ್ನು ನಡೆಸುತ್ತಿದೆ. ಸಹಾಯಕ ಕೋಚ್ ಜಹೀರ್ ಖಾನ್ ಅವರನ್ನು ಬದಲಿಸಲಾಗಿದೆ. ತಾಂತ್ರಿಕ ಸಲಹೆಗಾರ ಸ್ಥಾನಕ್ಕೆ ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ನೇಮಿಸಿದೆ. ಇದರ ಜತೆಗೆ ತಂಡದ ನಾಯಕತ್ವವನ್ನು ಕೂಡ ಬದಲಿಸಲು ಯೋಚಿಸುತ್ತಿದೆ.
27 ಕೋಟಿ ರೂ. ಗಳನ್ನು ಪಡೆಯುವ ಮೂಲಕ ರಿಷಭ್ ಪಂತ್ ಕಳೆದ ಮಗಾ ಹರಾಜಿನಲ್ಲಿ ದಾಖಲೆಯನ್ನು ಬರೆದಿದ್ದರು. ಐಪಿಎಲ್ ಇತಿಹಾಸದಲ್ಲಿಯೇ ಪಂತ್ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಆದರೆ, ಲಖನೌ ಸೂಪರ್ ಜಯಂಟ್ಸ್ ತಂಡದಲ್ಲಿ ನಿರೀಕ್ಷೆಗೆ ತಕ್ಕಂತೆ ಉತ್ತಮ ಪ್ರದರ್ಶನವನ್ನು ತೋರುವಲ್ಲಿ ಪಂತ್ ವಿಫಲರಾಗಿದ್ದರು. ಆಡಿದ್ದ 13 ಇನಿಂಗ್ಸ್‌ಗಳಿಂದ 269 ರನ್‌ಗಳನ್ನು ಕಲೆ ಹಾಕಿದ್ದರು. ಇವರು ಕೇವಲ ಒದೇ ಒಂದು ಶತಕವನ್ನು ಮಾತ್ರ ಬಾರಿಸಿದ್ದರು.
IPL 2026: ಐಪಿಎಲ್ 2026 ಹರಾಜಿಗೂ ಮುನ್ನ ಧೋನಿಯನ್ನು ಬಿಡುಗಡೆ ಮಾಡಲು ಮುಂದಾದ ಸಿಎಸ್‌ಕೆ
ನಾಯಕತ್ವದಲ್ಲಿ ಮಾತ್ರವಲ್ಲದೆ, ಬ್ಯಾಟ್ಸ್‌ಮನ್ ಆಗಿಯೂ ಅವರು ವಿಫಲರಾಗಿದ್ದರು. ಈ ಕಾರಣದಿಂದಲೇ ಲಖನೌ ತಂಡ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಆದರೂ ಮುಂದಿನ ಸೀಸನ್‌ನಲ್ಲಿಯೂ ಇವರೇ ನಾಯಕನ್ನಾಗಿ ಮುಂದುವರಿಯುವ ಸಾಧ್ಯತೆ ಇದೆ. ಒಂದು ಅಂತಾರಾಷ್ಟೀಯ ಕ್ರಿಕೆಟ್‌ನಲ್ಲಿನ ನಾಯಕತ್ವದ ಅನುಭವ ಅಗತ್ಯಬಿದ್ದರೆ, ನಿಕೋಲಸ್ ಪೂರನ್‌ಗೆ ನಾಯಕತ್ವ ನೀಡಿದರೂ ಅಚ್ಚರಿ ಇಲ್ಲ. ಏಕೆಂದರೆ ಭಾರತ ತಂಡಕ್ಕೆ ಪಂತ್ ಕೀ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರು ಒಮ್ಮೆ ಫಾರ್ಮ್‌ಗೆ ಬಂದರೆ, ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.
IPL 2026: ಮಿನಿ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಬೇಕಾದ ಮೂವರು ಆಟಗಾರರು!
ಲಖನೌ ಫ್ರಾಂಚೈಸಿ ಯಾರನು ರಿಲೀಸ್ ಮಾಡಬಹುದು?
ಲಖನೌ ಫ್ರಾಂಚೈಸಿಯು ಆಕಾಶ ದೀಪ್ ಹಾಗೂ ಶಾರ್ದುಲ್ ಠಾಕೂರ್ ಅವರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ. ಆಕಾಶ್ ದೀಪ್‌ಗೆ ಲಖನೌ ತಂಡ, 8 ಕೋಟಿ ರೂ. ಗಳನ್ನು ನೀಡಿತ್ತು, ಆದರೆ ಅವರು ಆರು ಪಂದ್ಯಗಳಿಂದ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರು 12.05ರ ಎಕಾನಮಿ ರೇಟ್‌ನಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.
ಆಕಾಶ ದೀಪ್ ಜೊತೆಗೆ ಶಾರ್ದುಲ್ ಠಾಕೂರ್ ಅವರನ್ನು ಕೂಡ ಬಿಡುಗಡೆ ಮಾಡಬಹುದು. ಗಾಯದ ಕಾರಣ ಮೊಹ್ಸಿನ್ ಖಾನ್ ಕಳೆದ ಟೂರ್ನಿಯಿಂದ ಹೊರಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಇವರ ಸ್ಥಾನಕ್ಕೆ ಶಾರ್ದುಲ್ ಠಾಕೂರ್ ಅವರನ್ನು ಕರೆಸಲಾಗಿತ್ತು. ಆದರೆ, ಮುಂದಿನ ಸೀಸನ್‌ನಲ್ಲಿ ಮೊಹ್ಸಿನ್ ಖಾನ್ ಬಂದರೆ, ಶಾರ್ದುಲ್ ಹೊರ ಬೀಳಬಹುದು.