ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026: ಮಿನಿ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಬೇಕಾದ ಮೂವರು ಆಟಗಾರರು!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ಸ್ ಬೆಂಗಳೂರು ತಂಡ ನಿರೀಕ್ಷಿತ ಪ್ರದರ್ಶನ ತೋರದ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್, ಮತ್ತು ರಾಸಿಖ್ ದಾರ್ ಸಲಾಮ್‌ ಅವರನ್ನು ಕೈ ಬಿಟ್ಟು, ಬೇರೆ ಮೂವರು ಆಟಗಾರರನ್ನು ಖರೀದಿಸುವ ಸಾಧ್ಯತೆ ಇದೆ.

IPL 2026 Auction: ಆರ್‌ಸಿಬಿ ಕಣ್ಣಿಟ್ಟಿರುವ ಮೂವರು ಆಟಗಾರರು!

ಮಿನಿ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಬಹುದಾದ ಮೂವರು ಆಟಗಾರರು. -

Profile Ramesh Kote Oct 17, 2025 8:42 PM

ಬೆಂಗಳೂರು: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ನಿಮಿತ್ತ ಎಲ್ಲಾ ಫ್ರಾಂಚೈಸಿಗಳು ತಯಾರಿ ನಡೆಸುತ್ತಿವೆ. ಆಟಗಾರರ ಬಿಡುಗಡೆ ಹಾಗೂ ಉಳಿಸಿಕೊಳ್ಳುವ ಪ್ರಕ್ರಿಯೆಯ ಸಂಬಂಧ ಎಲ್ಲಾ ತಂಡಗಳು ಮೌಲ್ಯ ಮಾಪನ ಹಾಗೂ ಮುಂದಿನ ಮಿನಿ ಹರಾಜಿಗೆ ರಣತಂತ್ರವನ್ನು ಮಾಡುತ್ತಿವೆ. 18 ವರ್ಷಗಳ ಬಳಿಕ ಐಪಿಎಲ್‌ ಟ್ರೋಫಿ ಎತ್ತಿ ಹಿಡಿದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB), ಮುಂದಿನ ಮಿನಿ ಹರಾಜಿಗೆ ಸಜ್ಜಾಗುತ್ತಿದೆ. ಕಳೆದ ಆವೃತ್ತಿಯಲ್ಲಿ ವೈಫಲ್ಯ ಅನುಭವಿಸಿದ್ದ ಆಟಗಾರರನ್ನು ಕೈ ಬಿಟ್ಟು, ಹೊಸ ಆಟಗಾರರನ್ನು ಖರೀದಿಸಲು ಯೋಜನೆಯನ್ನು ಹಾಕಿಕೊಂಡಿದೆ.

ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ 8.75 ಕೋಟಿ ರೂ. ಗಳಿಗೆ ಖರೀದಿಸಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. 10 ಪಂದ್ಯಗಳಿಂದ ಅವರು ಕೇವಲ 112 ರನ್ ಗಳಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನು 6 ಕೋಟಿಗೆ ಆರ್‌ಸಿಬಿ ತಂಡ ಸೇರಿಕೊಂಡಿದ್ದ ರಸಿಖ್ ದಾರ್ ಸಲಾಂ ಬೌಲಿಂಗ್‌ನಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಫ್ರಾಂಚೈಸಿ ಈ ಇಬ್ಬರನ್ನು ರಿಲೀಸ್‌ ಮಾಡುವ ಸಾಧ್ಯತೆ ಇದೆ.

IPL's valuation drop: ಐಪಿಎಲ್​ ಬ್ರ್ಯಾಂಡ್​ ಮೌಲ್ಯ ಭಾರೀ ಕುಸಿತ; 2 ವರ್ಷದಲ್ಲಿ 16,400 ಕೋಟಿ ಇಳಿಕೆ

ಮಿನಿ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಬಹುದಾದ ಮೂವರು ಆಟಗಾರರು

1.ಗುಡಕೇಶ್‌ ಮೋಟಿ (ವೆಸ್ಟ್‌ ಇಂಡೀಸ್‌)

ವೆಸ್ಟ್‌ ಇಂಡೀಸ್‌ ತಂಡದ ಉದಯೋನ್ಮಕ ಎಡಗೈ ಸ್ಪಿನ್ನರ್‌ ಗುಡಕೇಶ್‌ ಮೋಟಿ ಅವರು ಭರವಸೆ ಮೂಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಹಾಗೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅನುಭವನ್ನು ಹೊಂದಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಆರ್‌ಸಿಬಿ ತಂಡಕ್ಕೆ ಇವರ ಬೌಲಿಂಗ್‌ ಕೌಶಲ ಸೂಕ್ತವಾಗಬಹುದು. ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌ ಕೌಶಲವನ್ನು ಕೂಡ ಅವರು ಹೊಂದಿದ್ದಾರೆ. ಡೆತ್‌ ಓವರ್‌ಗಳಲ್ಲಿ ಅವರು ತಂಡಕ್ಕೆ ನಿರ್ಣಾಯಕ ರನ್‌ಗಳ ಕೊಡುಗೆಯನ್ನು ನೀಡಬಹುದು.

2.ಸಿಕಂದರ್‌ ರಾಜಾ ( ಜಿಂಬಾಬ್ವೆ)

ಚುಟುಕು ಕ್ರಿಕೆಟ್‌ನಲ್ಲಿನ ಅಪಾರ ಅನುಭವದ ಆಧಾರದ ಮೇಲೆ ಜಿಂಬಾಬ್ವೆ ತಂಡದ ಸಿಕಂದರ್‌ ರಾಜಾ ಅವರು ಆರ್‌ಸಿಬಿ ತಂಡದಲ್ಲಿ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರ ಸ್ಥಾನವನ್ನು ತುಂಬಬಹುದು. ಒಡಿಐ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿರುವ ರಾಜಾ, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಆರ್‌ಸಿಬಿಗೆ ನೆರವು ನೀಡಬಹುದು. ಸ್ಪಿನ್‌ ಬೌಲಿಂಗ್‌ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಮ್ಯಾಚ್‌ ಫಿನಿಷಿಂಸ್‌ ಪಾತ್ರವನ್ನು ನಿರ್ವಹಿಸಬಹುದು. ಆ ಮೂಲಕ ಆರ್‌ಸಿಬಿ ಮೌಲ್ಯಯುತ ಅಸ್ತ್ರವಾಗಲಿದ್ದಾರೆ.

IPL 2026 Auction: ಚೆನ್ನೈ ಸೂಪರ್‌ ಕಿಂಗ್ಸ್‌ ರಿಲೀಸ್‌ ಮಾಡಲಿರುವ ಐವರು ಆಟಗಾರರು!

3.ಸರಂಶ್‌ ಜೈನ್‌

ಮಧ್ಯ ಪ್ರದೇಶ ತಂಡದ ಆಲ್‌ರೌಂಡರ್‌ ಸರಂಶ್‌ ಜೈನ್‌ ಅವರು ಆರ್‌ಸಿಬಿ ತಂಡದಲ್ಲಿ ದೇಶಿ ಆಟಗಾರನ ಸ್ಥಾನಕ್ಕೆ ಸೂಕ್ತವಾಗಬಹುದು. ರಣಜಿ ಟ್ರೋಫಿ, ಇರಾನಿ ಟ್ರೋಫಿ ಹಾಗೂ ದುಲೀಪ್‌ ಟ್ರೋಫಿ ಸೇರಿದಂತೆ ದೇಶಿ ಕ್ರಿಕೆಟ್‌ನಲ್ಲಿ ಸರಂಶ್‌ ಜೈನ್‌ ಅದ್ಭುತ ದಾಖಲೆಗಳನ್ನು ಹೊಂದಿದ್ದಾರೆ. ಕೆಳ ಮಧ್ಯಮ ಕ್ರಮಾಂಕದಲ್ಲಿ ವೇಗವಾಗಿ ರನ್‌ ಗಳಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಆರ್‌ಸಿಬಿಗೆ ಮಧ್ಯಮ ಹಾಗೂ ಡೆತ್‌ ಓವರ್‌ಗಳಲ್ಲಿ ನಿರ್ಣಾಯಕ ರನ್‌ಗಳನ್ನು ಕಲೆ ಹಾಕಬಲ್ಲರು. ಯುಜ್ವೇಂದ್ರ ಚಹಲ್‌ ನಿರ್ಗಮನದ ಬಳಿಕ ಆರ್‌ಸಿಬಿಗೆ ಇನ್ನೂ ಮ್ಯಾಚ್‌ ವಿನ್ನಿಂಗ್‌ ಸ್ಪಿನ್ನರ್‌ ಸಿಕ್ಕಿಲ್ಲ. ಹಾಗಾಗಿ ಸರಂಶ್‌ ಜೈನ್‌ ಅವರನ್ನು ಮುಂದಿನ ಆವೃತ್ತಿಯಲ್ಲಿ ಪ್ರಯತ್ನಿಸಬಹುದು.