ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬುಚಿ ಬಾಬು ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಶತಕ ಸಿಡಿಸಿದ ಋತುರಾಜ್‌ ಗಾಯಕ್ವಾಡ್‌!

ಮುಂಬರುವ 2025ರ ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದಲ್ಲಿ ಚನ್ನೈ ಸೂಪರ್‌ ಕಿಂಗ್ಸ್‌ ನಾಯಕ ಋತುರಾಜ್‌ ಗಾಯಕ್ವಾಡ್‌ಗೆ ಅವಕಾಶ ನೀಡಲಾಗಿಲ್ಲ. ಆದರೆ, ಇದೀಗ ನಡೆಯುತ್ತಿರುವ ಬುಚಿ ಬಾಬು ಟ್ರೋಫಿ ಆಹ್ವಾನಿತ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡದ ಪರ ಋತುರಾಜ್‌ ಗಾಯಕ್ವಾಡ್‌ ಶತಕ ಬಾರಿಸಿ ಬಿಸಿಸಿಐ ಆಯ್ಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಬುಚಿ ಬಾಬು ಟೂರ್ನಿಯ ಪಂದ್ಯದಲ್ಲಿ ಶತಕ ಸಿಡಿಸಿದ ಋತುರಾಜ್‌ ಗಾಯಕ್ವಾಡ್‌.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಬುಚಿ ಬಾಬು ಟ್ರೋಫಿ (Buchi Babu Trophy) ಆಹ್ವಾನಿತ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ವಿರುದ್ದದ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಅವರು ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಮುಂಬರುವ ಏಷ್ಯಾ ಕಪ್‌ (Asia Cup 2025) ಟೂರ್ನಿಯ ಭಾರತ ತಂಡಕ್ಕೆ ಆಯ್ಕೆ ಮಾಡದ ಬಿಸಿಸಿಐ ಆಯ್ಕೆದಾರರಿಗೆ ಬಲಗೈ ಬ್ಯಾಟ್ಸ್‌ಮನ್‌ ತಮ್ಮ ಬ್ಯಾಟ್‌ ಮೂಲಕವೇ ತಿರುಗೇಟು ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ಭಾರತ ತಂಡದಿಂದ ಗಾಯಕ್ವಾಡ್‌ ಹೊರಗೆ ಉಳಿದಿದ್ದರು. ಇದೀಗ ಅವರು 133 ರನ್‌ಗಳನ್ನು ಗಳಿಸಿ ದೇಶಿ ಆವೃತ್ತಿಯನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಋತುರಾಜ್‌ ಗಾಯಕ್ವಾಡ್‌, ಹಿಮಾಚಲ ಪ್ರದೇಶ ತಂಡದ ಬೌಲರ್‌ಗಳ ಎದುರು ಅದ್ಭುತವಾಗಿ ಬ್ಯಾಟ್‌ ಮಾಡಿದರು. ಅವರು 144 ಎಸೆತಗಳಲ್ಲಿ 133 ರನ್‌ಗಳನ್ನು ಕಲೆ ಹಾಕಿದರು. ತಮ್ಮ ಈ ಇನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್‌ ಹಾಗೂ 10 ಬೌಂಡರಿಗಳನ್ನು ಬಾರಿಸಿದ್ದಾರೆ. ಗಾಯಕ್ವಾಡ್‌ ಅವರ ಜೊತೆಗೆ ಅರ್ಷಿನ್‌ ಕುಲಕರ್ಣಿ ಅವರು 190 ಎಸೆತಗಳಲ್ಲಿ 146 ರನ್‌ಗಳನ್ನು ಕಲೆ ಹಾಕಿದ್ದರು.

ʻಯಾರ ಸಹಾನುಭೂತಿಯೂ ನನಗೆ ಬೇಡʼ: ಶತಕ ಸಿಡಿಸಿ ರೊಚ್ಚಿಗೆದ್ದ ಪೃಥ್ವಿ ಶಾ!

ಬುಚಿ ಬಾಬು ಟ್ರೋಫಿ ಟೂರ್ನಿಯ ಕೇವಲ ಒಂದೇ ಒಂದು ಪಂದ್ಯಕ್ಕೆ ಮಾತ್ರ ಋತುರಾಜ್‌ ಗಾಯಕ್ವಾಡ್‌ ಲಭ್ಯರಾಗಿದ್ದಾರೆ. ಏಕೆಂದರೆ ಅವರು ದುಲೀಪ್‌ ಟ್ರೋಫಿ ಟೂರ್ನಿಯನ್ನು ಆಡಲು ತೆರಳಲಿದ್ದಾರೆ. ಅವರು ಶಾರ್ದುಲ್‌ ಠಾಕೂರ್‌ ಅವರ ನಾಯಕತ್ವದ ಪಶ್ಚಿಮ ವಲಯ ತಂಡದ ಪರ ಆಡಲಿದ್ದಾರೆ. ಅಂದ ಹಾಗೆ ಕಳೆದ ಪಂದ್ಯದಲ್ಲಿ ಪೃಥ್ವಿ ಶಾ ಕೂಡ ಶತಕವನ್ನು ಸಿಡಿಸಿದ್ದರು. ಈ ಪಂದ್ಯದಲ್ಲಿ ಗಾಯಕ್ವಾಡ್‌ ಆಡಿರಲಿಲ್ಲ.

ಭಾರತ ಎ ಪರ ಆಡಲಿರುವ ಋತುರಾಜ್‌ ಗಾಯಕ್ವಾಡ್‌

ಆಸ್ಟ್ರೇಲಿಯಾ ಎ ವಿರುದ್ಧದ ಸರಣಿ ಆಡುವ ಭಾರತ ಎ ತಂಡದಲ್ಲಿ ಋತುರಾಜ್‌ ಗಾಯಕ್ವಾಡ್‌ ಆಡಬಹುದು. ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳು ಎರಡು ಅನಧಿಕೃತ ಟೆಸ್ಟ್‌ ಪಂದ್ಯಗಳು ಹಾಗೂ ಮೂರು ಅನಿಧಿಕೃತ ಏಕದಿನ ಪಂದ್ಯಗಳನ್ನು ಆಡಲಿದೆ. ಕಳೆದ ಇಂಗ್ಲೆಂಡ್‌ ಎ ವಿರುದ್ದದ್ದ ಅನಧಿಕೃತ ಟೆಸ್ಟ್‌ ಸರಣಿಯಲ್ಲಿಯ ಭಾರತ ಎ ತಂಡದಲ್ಲಿದ್ದರು. ಆದರೆ, ಅವರು ಒಂದೇ ಒಂದು ಪಂದ್ಯದಲ್ಲಿಯೂ ಆಡಿಲ್ಲ. ಇಂಗ್ಲೆಂಡ್‌ ಟೆಸ್ಟ್‌ ಸರಣಿಗೂ ಮುನ್ನ ಅವರು ಇಂಟರ್‌ ಸ್ಕ್ವಾಟ್‌ ಪಂದ್ಯದಲ್ಲಿ ಆಡಿದ್ದರು.

ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಕಾರಣ ತಿಳಿಸಿದ ಮನೋಜ್‌ ತಿವಾರಿ!

ಮುಂಬರುವ ಋತುವಿನಲ್ಲಿ ಸಾಕಷ್ಟು ರನ್ ಗಳಿಸಿ ಟೀಮ್ ಇಂಡಿಯಾಕ್ಕೆ ಪ್ರವೇಶಿಸುವ ಗುರಿಯನ್ನು ಋತುರಾಜ್ ಗಾಯಕ್ವಾಡ್‌ ಹೊಂದಿದ್ದಾರೆ. 2021 ರಲ್ಲಿ ಪದಾರ್ಪಣೆ ಮಾಡಿದ ನಂತರ ಅವರು 6 ಏಕದಿನ ಮತ್ತು 23 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್ ತಂಡದ ಭಾಗವಾಗಿದ್ದಾರೆ ಆದರೆ, ಪ್ಲೇಯಿಂಗ್‌ XIನಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ.

ಋತುರಾಜ್ ಗಾಯಕ್ವಾಡ್‌ ಆರು ಏಕದಿನ ಪಂದ್ಯಗಳಲ್ಲಿ 115 ರನ್ ಗಳಿಸಿದ್ದಾರೆ ಮತ್ತು ಅವರ ಗರಿಷ್ಠ ಸ್ಕೋರ್ 71 ಆಗಿದೆ. ಅವರು ಚುಟುಕು ಸ್ವರೂಪದಲ್ಲಿ 20 ಇನಿಂಗ್ಸ್‌ಗಳಲ್ಲಿ 633 ರನ್ ಗಳಿಸಿದ್ದಾರೆ. ಅವರ ಪಟ್ಟಿಯಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ. ಅವರು 2023ರ ಏಷ್ಯನ್ ಕ್ರೀಡಾಕೂಟದಲ್ಲಿ ತಂಡವನ್ನು ಚಿನ್ನದ ಪದಕ ಗೆಲ್ಲುವಲ್ಲಿ ನಾಯಕತ್ವ ವಹಿಸಿದ್ದರು.