ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಕಾರಣ ತಿಳಿಸಿದ ಮನೋಜ್ ತಿವಾರಿ!
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ಬಗ್ಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಕಾರಣವೇನೆಂದು ರಿವೀಲ್ ಮಾಡಿದ್ದಾರೆ.

ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿ ಬಗ್ಗೆ ಮನೋಜ್ ತಿವಾರಿ ಅಭಿಪ್ರಾಯ.

ನವದೆಹಲಿ: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ವೇಳೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಹಲವು ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ವಿರಾಟ್ ಕೊಹ್ಲಿ ಇನ್ನೂ ಐದು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕಿತ್ತು ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದೀಗ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ (Manoj Tiwary) ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿಯ ಅಗತ್ಯವಿರಲಿಲ್ಲ. ಈ ಕಾರಣದಿಂದಲೇ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆಂದು ಹೇಳಿದ್ದಾರೆ.
2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ದಿಲ್ಲಿ ತಂಡದ ಪರ ವಿರಾಟ್ ಕೊಹ್ಲಿ ಆಡಿದ್ದರು. ಆ ಮೂಲಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಆಡಬಹುದೆಂದು ಭಾವಿಸಲಾಗಿತ್ತು. ಆದರೆ, ಮಾಜಿ ನಾಯಕ 2025ರ ಐಪಿಎಲ್ ಟೂರ್ನಿಯ ವೇಳೆ ದೀರ್ಘಾವಧಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ತಾವು ಏಕೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು ಎಂಬ ಬಗ್ಗೆ ರಿವೀಲ್ ಮಾಡಿರಲಿಲ್ಲ. ಇದೀಗ ಮನೋಜ್ ತಿವಾರಿ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ʻಎಂಎಸ್ ಧೋನಿ ತನ್ನ ನೆಚ್ಚಿನ ಆಟಗಾರರಿಗೆ ಮಾತ್ರ ಬೆಂಬಲ ನೀಡಿದ್ದರುʼ: ಮನೋಜ್ ತಿವಾರಿ ಗಂಭೀರ ಆರೋಪ!
"ಏನಾಯಿತು ಎಂದು ನನಗೆ ತಿಳಿದಿಲ್ಲ. ತೆರೆಮರೆಯ ಕಥೆ ಏನು? ಟೀಮ್ ಇಂಡಿಯಾದಲ್ಲಿ ತಾನು ಬೇಕಾಗಿದ್ದೇನೆ ಎಂದು ಅವರಿಗೆ (ವಿರಾಟ್ ಕೊಹ್ಲಿ) ಅನಿಸುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಮಾತ್ರ ಇದಕ್ಕೆ ಉತ್ತರ ಹೇಳಬೇಕು. ಅವರು ಹೊರಬಂದು ಸಾರ್ವಜನಿಕ ವೇದಿಕೆಯಲ್ಲಿ ಈ ವಿಷಯವನ್ನು ಎಂದಿಗೂ ಹೇಳುವುದಿಲ್ಲ ಏಕೆಂದರೆ ಅವರು ಆ ರೀತಿ ವ್ಯಕ್ತಿಯಾಗಿದ್ದಾರೆ. ಅವರು ಉತ್ತಮ ವ್ಯಕ್ತಿಯಾಗಿ ವಿಕಸನಗೊಂಡಿದ್ದಾರೆ. ದೇವರು ಅವರಿಗೆ ಕೊಟ್ಟಿರುವದರಿಂದ ಅವರು ತುಂಬಾ ಸಂತೋಷವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಆಧ್ಯಾತ್ಮಿಕರೂ ಆಗುತ್ತಿದ್ದಾರೆ. ಯಾರಾದರೂ ಆಧ್ಯಾತ್ಮಿಕರಾದಾಗ, ಅವರು ಈ ಎಲ್ಲಾ ವಿಷಯಗಳನ್ನು ಬದಿಗಿಟ್ಟು ವರ್ತಮಾನದ ಮೇಲೆ ಕೇಂದ್ರೀಕರಿಸುತ್ತಾರೆ. ಅವರು ಭೂತಕಾಲದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಅವರು ಮನುಷ್ಯನಾಗಿ ವಿಕಸನಗೊಂಡಿದ್ದಾರೆ; ಅವರು ಮುಂದೆ ಬಂದು ತೆರೆಮರೆಯಲ್ಲಿ ಏನಾಯಿತು ಎಂದು ಎಂದಿಗೂ ಹೇಳುವುದಿಲ್ಲ ಎಂದು ನಾನು ಭಾವಿಸುತ್ತೇನೆ, ”ಎಂದು ತಿವಾರಿ ಕ್ರಿಕ್‌ಟ್ರ್ಯಾಕರ್‌ಗೆ ತಿಳಿಸಿದ್ದಾರೆ.
ಗೌತಮ್ ಗಂಭೀರ್ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ಸೌರವ್ ಗಂಗೂಲಿ ಮುಂದಿನ ಹೆಡ್ ಕೋಚ್?
ವಿರಾಟ್ ಕೊಹ್ಲಿಗೆ ಇನ್ನು 3-4 ವರ್ಷಗಳು ಇದ್ದವು: ಮನೋಜ್ ತಿವಾರಿ
ವಿರಾಟ್ ಕೊಹ್ಲಿಯ ನಿರ್ಧಾರದಿಂದ ಎಲ್ಲರಿಗೂ ಆಘಾತವಾಗಿದೆ. ನನಗೂ ಕೂಡ ಅದೇ ರೀತಿ ಆಯಿತು. ಏಕೆಂದರೆ ಅವರಿಗೆ 3-4 ವರ್ಷ ಆಡುವುದು ಬಾಕಿ ಇತ್ತು ಎಂದು ಮನೋಜ್ ತಿವಾರಿ ತಿಳಿಸಿದ್ದಾರೆ.
"ಅವರು ಇನ್ನೂ ಮೂರು ವರ್ಷ ಮತ್ತು ನಾಲ್ಕು ವರ್ಷಗಳ ಕಾಲ ಸುಲಭವಾಗಿ ಆಡಬಹುದಿತ್ತು. ನಾನು ಸೇರಿದಂತೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಇದು ತುಂಬಾ ಆಶ್ಚರ್ಯಕರ ಮತ್ತು ಆಘಾತಕಾರಿಯಾಗಿತ್ತು, ಏಕೆಂದರೆ ಅವರು ದೈಹಿಕವಾಗಿ ತುಂಬಾ ಸದೃಢರಾಗಿದ್ದಾರೆ ಮತ್ತು ಇಂಗ್ಲೆಂಡ್ ಸರಣಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂದು ನಮಗೆಲ್ಲರಿಗೂ ತಿಳಿದಿತ್ತು. ಆದರೆ ಕ್ರಿಕೆಟ್ ಪ್ರೇಮಿಯಾಗಿ, ಟೀಮ್ ಇಂಡಿಯಾದ ಸುತ್ತ ನಡೆಯುತ್ತಿರುವ ವಿಷಯಗಳು, ಸ್ವಲ್ಪ ತಿಳಿದಿರುವ ನಮ್ಮಂತಹ ಕ್ರಿಕೆಟಿಗರಿಗೆ, ತೆರೆಮರೆಯಲ್ಲಿ ಏನು ನಡೆಯುತ್ತಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ಆಡುತ್ತಿದ್ದ ವಾತಾವರಣ ಅವರಿಗೆ ಇಷ್ಟವಾಗಲಿಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Sachin Tendulkar: ಪುತ್ರ ಅರ್ಜುನ್ ನಿಶ್ಚಿತಾರ್ಥವನ್ನು ಖಚಿತಪಡಿಸಿದ ಸಚಿನ್ ತೆಂಡೂಲ್ಕರ್
ವಿರಾಟ್ ಕೊಹ್ಲಿ 123 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ನಿವೃತ್ತರಾಗಿದ್ದಾರೆ ಮತ್ತು 46.85ರ ಸರಾಸರಿಯಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳೊಂದಿಗೆ 9230 ರನ್ ಗಳಿಸಿದ್ದಾರೆ. ಅವರು 68 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಅವರು 40ರಲ್ಲಿ ಗೆಲುವು ಪಡೆದಿದ್ದರೆ, 17 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಇದರ ನಡುವೆ ಕೊಹ್ಲಿ ಮುಂದಿನ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಮತ್ತೆ ತಂಡಕ್ಕೆ ಮರಳಲಿದ್ದಾರೆ. ಅವರು ಕೊನೆಯದಾಗಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ತೋರಿದ್ದರು.