ಬರಹ: ಕೆ. ಎನ್. ರಂಗು, ಚಿತ್ರದುರ್ಗ
ನವದೆಹಲಿ: ದಕ್ಷಿಣ ಆಫ್ರಿಕಾದ ಪ್ರಮುಖ ಟಿ-20 ಲೀಗ್ SA-20ರ ಹರಾಜು (SA-T20 League Auction) ಪ್ರಕ್ರಿಯೆ ಸೆಪ್ಟೆಂಬರ್ 9 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಿತು. ಈ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಯುವ ಸೆನ್ಸೇಷನಲ್ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ (Dewald Brewis) ದಾಖಲೆಯ ಮೊತ್ತಕ್ಕೆ ಮಾರಾಟವಾಗಿದ್ದಾರೆ. ದಕ್ಷಿಣ ಆಫ್ರಿಕಾ-20 ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಮರಾಟವಾದ ಬ್ರೆವಿಸ್ 16.5 ಕೋಟಿ ರೂ ಗಳಿಗೆ ಪ್ರಿಟೋರಿಯಾ ಕ್ಯಾಪಿಟಲ್ಸ್ (Pretoria Capital) ತಂಡದ ಪಾಲಾಗಿದ್ದಾರೆ. ಆ ಮೂಲಕ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎಂದೆನಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ಬ್ರೇವಿಸ್ ಅವರ ಸಾಧನೆ ಉತ್ತಮವಾಗಿದ್ದು, ಪ್ರಸ್ತುತ ಟಿ-20 ಕ್ರಿಕೆಟ್‌ನಲ್ಲಿ ಅತ್ಯಂತ ಬೇಡಿಕೆಯ ಆಟಗಾರರಾಗಿದ್ದಾರೆ. ಇನ್ನೂ ಹರಾಜಿನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಜೋಬರ್ಗ್ ಸೂಪರ್ ಕಿಂಗ್ಸ್ ತಂಡಗಳು ಪೈಪೋಟಿಯ ಮೇಲೆ ಬಿಡ್ ಮಾಡಿದವು. ಆದರೆ ಕೊನೆ ಕ್ಷಣದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಯುವ ಆಟಗಾರನನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ಇನ್ನೂ ಈ ಬಗ್ಗೆ ಮಾತನಾಡಿರುವ, ಪ್ರಿಟೋರಿಯ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ರೇವಿಸ್ ಖರೀದಿಸಿರುವ ಕುರಿತು ಹರ್ಷ ವ್ಯಕ್ತಪಡಿಸಿದ್ದು, ಯುವ ಆಟಗಾರನ ಸಾಧನೆಯನ್ನು ಶ್ಲಾಘಿಸಿದ್ದಾರೆ.
IPL 2025: ಎಂಎಸ್ ಧೋನಿಯ ನಿಜ ಸ್ವರೂಪವನ್ನು ರಿವೀಲ್ ಮಾಡಿದ ಡೆವಾಲ್ಡ್ ಬ್ರೆವಿಸ್!
ಸಂತಸ ವ್ಯಕ್ತಪಡಿಸಿದ ಸೌರವ್ ಗಂಗೂಲಿ
ಹರಾಜು ಪ್ರಕ್ರಿಯೆ ಮುಗಿದ ಬಳಿಕ ಮಾತನಾಡಿದ ಗಂಗೂಲಿ, "ನಾವು ತುಂಬಾ ಸಂತೋಷವಾಗಿದ್ದೇವೆ, ಅವರು ತುಂಬಾ ಒಳ್ಳೆಯ ಆಟಗಾರ ಎಂದು ನಾನು ಭಾವಿಸುತ್ತೇನೆ. ಸ್ಪಷ್ಟವಾಗಿ 16.5 ಮಿಲಿಯನ್ ಆಟಗಾರರು ಅದನ್ನು ನೋಡುವ ವಿಧಾನದ ಇನ್ನೊಂದು ಬದಿಯಾಗಿದೆ, ಆದರೆ ನಮ್ಮ ಪಿಚ್, ನಮ್ಮ ಮೈದಾನ, ಪ್ರಿಟೋರಿಯಾದಲ್ಲಿ ಗುಣಮಟ್ಟದ ವಿಷಯದಲ್ಲಿ, ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾವು ಇಲ್ಲಿಯವರೆಗೆ (ಭವಿಷ್ಯದಲ್ಲಿ ಅವರನ್ನು ನಾಯಕನನ್ನಾಗಿ ಮಾಡುವ ಬಗ್ಗೆ) ಈ ಬಗ್ಗೆ ಯೋಚಿಸಿಲ್ಲ. ಅವರು ಅದ್ಭುತ ಪ್ರತಿಭೆ, ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನೀವು ನೋಡಿದಂತೆ ಕಳೆದ ಒಂದೂವರೆ ವರ್ಷಗಳಲ್ಲಿ ಅವರ ಆಟ ನಿಜವಾಗಿಯೂ ಮುಂದುವರಿದಿದೆ," ಎಂದು ಗಂಗೂಲಿ ತಿಳಿಸಿದ್ದಾರೆ.
"ಅವರು ಆಟ ಬದಲಾಯಿಸುವ ವ್ಯಕ್ತಿ ಮತ್ತು ಟಿ20 ಕ್ರಿಕೆಟ್‌ನಲ್ಲಿ ನಿಮಗೆ ಬೇಕಾಗಿರುವುದು ಅದೇ. ನಮ್ಮಲ್ಲಿ ರಸೆಲ್, ಋದರ್ಫೋರ್ಡ್ ಇದ್ದಾರೆ, ಅವರು ನಿಜವಾಗಿಯೂ ಅವರ ಸಾಲಿಗೆ ಸೇರುವಂತ ಆಟಗಾರರಾಗಿದ್ದಾರೆ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ಎಂದಿಗೂ ಪ್ರದರ್ಶನವನ್ನು ಹಣಕ್ಕೆ ಹೋಲಿಕೆ ಮಾಡುವುದಿಲ್ಲ. 16.5 ಮಿಲಿಯನ್ ಅನ್ನು ಬದಿಗಿಟ್ಟು ಮತ್ತು ಅವರು ಒಬ್ಬ ಉತ್ತಮ ಪ್ರತಿಭೆ ಎಂದು ನಾನು ಭಾವಿಸುತ್ತೇನೆ. ಅವರು ಸ್ಪಿನ್ ಅನ್ನು ಚೆನ್ನಾಗಿ ಆಡುತ್ತಾರೆ, ಅದು ಬಹಳ ಮುಖ್ಯ ಮತ್ತು ಎಲ್ಲವನ್ನೂ ಕಾದು ನೋಡುತ್ತೇನೆ," ಎಂದು ವಿವರಿಸಿದ್ದಾರೆ.
ʻಸಿಎಸ್‌ಕೆ ತಂಡ ಅದೃಷ್ಟ ಮಾಡಿದೆʼ: ಶತಕ ಸಿಡಿಸಿದ ಡೆವಾಲ್ಡ್ ಬ್ರೆವಿಸ್‌ಗೆ ಎಬಿಡಿ ಶ್ಲಾಘನೆ!
ಕಳೆದ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಬ್ರೆವಿಸ್
ಕಳೆದ ಆವೃತ್ತಿಯಲ್ಲಿ ಎಂಐ ಕೇಪ್ ಟೌನ್ ಪರ ಕಣಕ್ಕಿಳಿದಿದ್ದ ಬ್ರೆವಿಸ್ ತಂಡ ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಳ್ಳಲು ಮಹತ್ವದ ಪಾತ್ರ ವಹಿಸಿದ್ದರು. 48.5ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದ ಅವರು, 184.18 ರ ಸ್ಟ್ರೈಕ್ ರೇಟ್‌ನಲ್ಲಿ 291ರನ್ ಕಲೆಹಾಕಿ ಎಲ್ಲರ ಗಮನ ಸೆಳೆದಿದ್ದರು.
ಹರಾಜಿನಲ್ಲಿ ಟಾಪ್-5 ದುಬಾರಿ ಆಟಗಾರರು
SA-20 ಹರಾಜಿನಲ್ಲಿ ಡೆವಾಲ್ಡ್ ಬ್ರೆವಿಸ್ ನಂತರ ಎರಡನೆಯ ದೊಡ್ಡ ಮೊತ್ತಕ್ಕೆ ಆಲ್‌ರೌಂಡರ್ ಏಡೆನ್ ಮಾರ್ಕ್ರಮ್ ಡರ್ಬನ್ ಸೂಪರ್ ಜಯಂಟ್ಸ್ ತಂಡಕ್ಕೆ 14 ಮಿಲಿಯನ್‌ಗೆ ಮಾರಾಟವಾದರು. ಬಳಿಕ 9 ಮಿಲಿಯನ್‌ಗೆ ವಿಯನ್ ಮುಲ್ಡರ್ ಜೋಬರ್ಗ್ ಸೂಪರ್ ಕಿಂಗ್ಸ್ ಪಾಲಾದರು. ನಾಲ್ಕನೇದಾಗಿ ಮ್ಯಾಥ್ಯೂ ಬ್ರಿಟ್ಜ್‌ಕೆ 6.1 ಮಿಲಿಯನ್‌ಗೆ ಸನ್‌ರೈಸರ್ಸ್ ಈಸ್ಟರ್ನ್ ಕೇಪ್‌ಗೆ ಮಾರಾಟವಾದರು. ಅಂತಿಮವಾಗಿ ರಾಸ್ಸಿ ವಾನ್ ಡೆರ್ ಡುಸೆನ್ ಅವರನ್ನು ಎಂಐ ಕೇಪ್ ತಂಡ 5.2 ಮಿಲಿಯನ್‌ಗೆ ಖರೀದಿಸಿತು.
ಈ ಹಿಂದೆ ಬ್ರೆವಿಸ್ ಮತ್ತು ಮಾರ್ಕ್ರಮ್‌ಗಿಂತಲೂ ಮುಂಚಿತವಾಗಿ SA-20 ಇತಿಹಾಸದಲ್ಲಿ ಟ್ರಿಸ್ಟನ್ ಸ್ಟಬ್ಸ್ 2023ರ ಟೂರ್ನಿಯಲ್ಲಿ 9.2 ಮಿಲಿಯನ್‌ಗೆ ಮಾರಾಟವಾಗಿ ಅತ್ಯಂತ ದುಬಾರಿ ಆಟಗಾರರಾಗಿದ್ದರು.