ಏಷ್ಯಾ ಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡವನ್ನು ಹೆಸರಿಸಿದ ವೀರೇಂದ್ರ ಸೆಹ್ವಾಗ್!
2025ರ ಏಷ್ಯಾ ಕಪ್ ಟೂರ್ನಿಯು ಸೆಪ್ಟಂಬರ್ 9 ರಂದು ಯುಎಇ ಆತಿಥ್ಯದಲ್ಲಿ ಆರಂಭವಾಗಲಿದೆ. ಈ ಬಾರಿ ಯಾವ ತಂಡ ಪ್ರಶಸ್ತಿ ಗೆಲ್ಲಬಹುದೆಂದು ಹಲವು ಮಾಜಿ ಆಟಗಾರರು ತಮ್ಮ ಭವಿಷ್ಯವನ್ನು ನುಡಿದಿದ್ದಾರೆ. ಅದರಂತೆ ಭಾರತದ ಮಾಜಿ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕೂಡ ಈ ಬಾರಿ ಕಪ್ ಗೆಲ್ಲುವ ತಂಡವನ್ನು ಆರಿಸಿದ್ದಾರೆ.

ಏಷ್ಯಾ ಕಪ್ ಗೆಲ್ಲುವ ತಂಡವನ್ನು ಹೆಸರಿಸಿದ ವೀರೇಂದ್ರ ಸೆಹ್ವಾಗ್.

ನವದೆಹಲಿ: ಬಹುನಿರೀಕ್ಷಿತ 2025ರ ಏಷ್ಯಾ ಕಪ್ ( Asia Cup 2025) ಟೂರ್ನಿಯು ಸೆಪ್ಟಂಬರ್ 9 ರಂದು ಯುಎಇ ಆತಿಥ್ಯದಲ್ಲಿ ಆರಂಭವಾಗಲಿದೆ. ಈ ಟೂರ್ನಿಗಾಗಿ 15 ಸದಸ್ಯರ ಭಾರತ ತಂಡವನ್ನು (India) ಬಿಸಿಸಿಐ ಪ್ರಕಟಿಸಿದೆ. ಈ ಬಾರಿ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ (Suryakumar Yadav) ಮುನ್ನಡೆಸಲಿದ್ದಾರೆ. ಅಂದ ಹಾಗೆ ಈ ಬಾರಿ ಯಾವ ತಂಡ ಪ್ರಶಸ್ತಿಯನ್ನು ಗೆಲ್ಲಲಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ಭಾರತದ ಮಾಜಿ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ (Virender Sehwag) ಅವರು ಕೂಡ ತಮ್ಮದೇ ಆದ ಭವಿಷ್ಯವನ್ನು ನುಡಿದಿದ್ದಾರೆ.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಟಿ20 ತಂಡದ ನಾಯಕನಾಗಿ ರೋಹಿತ್ ಶರ್ಮಾ ಅವರ ಸ್ಥಾನವನ್ನು ಸೂರ್ಯಕುಮಾರ್ ಯಾದವ್ ಅಲಂಕರಿಸಿದ್ದರು. ಭಾರತ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್‌ಗೆ ಏಷ್ಯಾ ಕಪ್ ಮೊದಲನೇ ಟೂರ್ನಿಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ಭಾರತ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಲು ಎದುರು ನೋಡುತ್ತಿದ್ದಾರೆ. ಮುಂಬೈ ಬ್ಯಾಟ್ಸ್‌ಮನ್ ನಾಯಕತ್ವದಲ್ಲಿ ಭಾರತ ಆಡಿದ ಐದು ಸರಣಿಗಳಲ್ಲಿ ನಾಲ್ಕರಲ್ಲಿ ಗೆಲುವು ಪಡೆದಿದೆ.
Asia Cup 2025: ಏಷ್ಯಾಕಪ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್‌ಗಳ ಪಟ್ಟಿ ಹೀಗಿದೆ
ಸೋನಿ ಸ್ಪೋರ್ಟ್ಸ್ ಜತೆ ಮಾತನಾಡಿದ ವೀರೇಂದ್ರ ಸೆಹ್ವಾಗ್, ಭಾರತ ತಂಡ ಯುವ ಹಾಗೂ ಅನುಭವಿ ಆಟಗಾರರ ಮಿಶ್ರಣವಾಗಿದೆ. ಸೂರ್ಯಕುಮಾರ್ ಅವರ ಆಕ್ರಮಣಕಾರಿ ಮನಸ್ಥಿತಿ ಟಿ20 ಮಾದರಿಗೆ ಹೊಂದಿಕೊಳ್ಳುತ್ತದೆ ಹಾಗೂ ನಾಯಕನ ಉದ್ದೇಶವನ್ನು ತಂಡ ಪ್ರತಿಬಿಂಬಿಸಿದರೆ, ಭಾರತ ಪ್ರಶಸ್ತಿಯನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾಜಿ ಆಟಗಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಈ ಭಾರತ ತಂಡ ಯುವ ಮತ್ತು ಅನುಭವದ ಸರಿಯಾದ ಮಿಶ್ರಣವನ್ನು ಹೊಂದಿದೆ ಮತ್ತು ಸೂರ್ಯ ಅವರ ನಿರ್ಭೀತ ನಾಯಕತ್ವದಲ್ಲಿ ಅವರು ಮತ್ತೊಮ್ಮೆ ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸಬಹುದು. ಅವರ ಆಕ್ರಮಣಕಾರಿ ಮನಸ್ಥಿತಿ ಟಿ20 ಸ್ವರೂಪಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಮತ್ತು ತಂಡ ಅದೇ ಉದ್ದೇಶದಿಂದ ಆಡಿದರೆ, ಭಾರತ ತಂಡ ಟ್ರೋಫಿಯನ್ನು ಎತ್ತಿ ಹಿಡಿಯುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ," ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.
Asia Cup 2025: ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಸ್ಪಷ್ಟತೆ ಕೊಟ್ಟ ಕೇಂದ್ರ ಸರ್ಕಾರ!
ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ಸ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೀರೇಂದ್ರ ಸೆಹ್ವಾಗ್ ತಮ್ಮ ಆಡುವ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ನಾವು ಆಡುತ್ತಿದ್ದ ದಿನಗಳಲ್ಲಿ ಅಭಿಮಾನಿಗಳಿಗೆ ಮರೆಯಲಾದ ದಿನವನ್ನು ನೀಡಲು ಯಾವಾಗಲೂ ಪ್ರಯತ್ನ ನಡೆಸುತ್ತಿದ್ದೆವು ಎಂದಿದ್ದಾರೆ.
"ಏಷ್ಯಾ ಕಪ್ ಟೂರ್ನಿ ನನ್ನ ಅತ್ಯಂತ ಪ್ರೀತಿಯ ನೆನಪುಗಳಲ್ಲಿ ಒಂದೇನೆಂದರೆ, ಪಂದ್ಯದ ದಿನಗಳಲ್ಲಿ ಡ್ರೆಸ್ಸಿಂಗ್ ಕೋಣೆಗೆ ನಡೆದು ಮೈದಾನಕ್ಕೆ ಕಾಲಿಡುವ ಮೊದಲೇ ಜೈಕಾರವನ್ನು ಅನುಭವಿಸುವುದು. ನೀವು ಹೊರಗೆ ಘೋಷಣೆಗಳನ್ನು ಕೇಳಬಹುದು, ಪ್ರತಿಯೊಂದು ಮೂಲೆಯಲ್ಲೂ ಶಕ್ತಿಯನ್ನು ಅನುಭವಿಸಬಹುದು. ನನ್ನ ತಂಡದ ಆಟಗಾರರಿಗೆ ನಾನು ಹೇಳಿದ್ದು ನೆನಪಿದೆ - ಇಂದು ನಾವು ಕೇವಲ ಪಂದ್ಯವನ್ನು ಆಡುವುದಿಲ್ಲ, ಅಭಿಮಾನಿಗಳಿಗೆ ಅವರು ಎಂದಿಗೂ ಮರೆಯದ ದಿನವನ್ನು ನೀಡುತ್ತೇವೆ. ಆ ವಿದ್ಯುದ್ದೀಕರಿಸುವ ಶಕ್ತಿ ಮತ್ತು ಆ ಏಕತೆಯೇ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಈ ಅಭಿಯಾನದ ಬಗ್ಗೆ ನಿಖರವಾಗಿ ಹೇಳುತ್ತದೆ. ಆ ಕ್ಷಣಗಳಲ್ಲಿ, ದೇಶಾದ್ಯಂತದ ಪ್ರತಿಯೊಂದು ಹರ್ಷೋದ್ಗಾರ, ಪ್ರತಿ ಚಪ್ಪಾಳೆ ಮತ್ತು ಪ್ರತಿ ಹೃದಯ ಬಡಿತವು ಭಾರತಕ್ಕಾಗಿ ಹೇಗೆ ಬಡಿಯುತ್ತದೆ ಎಂಬುದನ್ನು ಇದು ಸೆರೆಹಿಡಿಯುತ್ತದೆ," ಎಂದು ಸೆಹ್ವಾಗ್ ತಿಳಿಸಿದ್ದಾರೆ.