ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women's World Cup: 94 ರನ್‌ ಬಾರಿಸಿ ವಿಶೇಷ ದಾಖಲೆ ಮುರಿದ ರಿಚಾ ಘೋಷ್‌!

ದಕ್ಷಿಣ ಆಫ್ರಿಕಾ ವಿರುದ್ಧ 2025ರ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ 7 ವಿಕೆಟ್‌ ಕಳೆದುಕೊಂಡಿದ್ದ ಭಾರತ ತಂಡವನ್ನು ರಿಚಾ ಘೋಷ್‌ ಸ್ಪೋಟಕ ಅರ್ಧಶತಕದ ಮೂಲಕ ಅಪಾಯದಿಂದ ಪಾರು ಮಾಡಿದ್ದರು. ಅವರು ಆಡಿದ್ದ 77 ಬಾಲ್‌ಗಳಲ್ಲಿ 94 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ.

94 ರನ್‌ ಬಾರಿಸಿ ಭಾರತವನ್ನು ಅಪಾಯದಿಂದ ಪಾರು ಮಾಡಿದ ರಿಚಾ ಘೋಷ್!

77 ಎಸೆತಗಳಲ್ಲಿ 94 ರನ್‌ ಗಳಿಸಿ ಭಾರತವನ್ನು ಕಾಪಾಡಿದ ರಿಚಾ ಘೋಷ್‌. -

Profile Ramesh Kote Oct 9, 2025 10:14 PM

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ (Women World Cup 2025) ಟೂರ್ನಿಯಲ್ಲಿ ಪಂದ್ಯದಲ್ಲಿ ಭಾರತ ತಂಡದ ರಿಚಾ ಘೋಷ್‌ (Richa Gosh) ಅವರು ಸ್ಪೋಟಕ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ 102 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡವನ್ನು (Indian Women Team) ರಿಚಾ ಘೋಷ್‌ ಮೇಲೆತ್ತಿದ್ದರು. ಅವರ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್‌ನಿಂದಾಗಿ ರಿಚಾ ಘೋಷ್‌ ಅವರು ಮಹಿಳಾ ಏಕದಿಕ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ದಾಖಲೆಗಳ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಗುರುವಾರ ವಿಶಾಖಪಟ್ಟಣಂನ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಪ್ರತಿಕಾ ರಾವಲ್‌ (37 ರನ್‌) ಹಾಗೂ ಸ್ಮೃತಿ ಮಂಧಾನಾ (23 ರನ್‌) ಅವರು ಮೊದಲನೇ ವಿಕೆಟ್‌ಗೆ 51 ರನ್‌ ಗಳಿಸಿ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು. ಆದರೆ, ಸ್ಮೃತಿ ಮಂಧಾನಾ ಹಾಗೂ ಹರ್ಲೀನ್‌ ಡಿಯೋಲ್‌ ಅವರು ವಿಕೆಟ್‌ ಒಪ್ಪಿಸಿದ ಬಳಿಕ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಮಕಾಡೆ ಮಲಗಿದರು. ಆ ಮೂಲಕ ತಂಡ ಕೇವಲ 19 ರನ್‌ಗಳ ಅಂತರದಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತ 102 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ʻಅವರನ್ನು ಹೊಂದಿರುವುದು ಅದೃಷ್ಟʼ:ರವೀಂದ್ರ ಜಡೇಜಾ ಬಗ್ಗೆ ಶುಭಮನ್‌ ಗಿಲ್‌ ದೊಡ್ಡ ಹೇಳಿಕೆ!

ಎಂಟನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಚಾ ಘೋಷ್‌ ಸಮಯಕ್ಕೆ ತಕ್ಕಂತೆ ಬ್ಯಾಟ್‌ ಮಾಡಿದರು. ಭಾರತ ತಂಡ ಒಂದು ಹಂತದಲ್ಲಿ 150 ರನ್‌ ಗಳಿಸುವುದೂ ಕಷ್ಟ ಎಂದು ಹೇಳಲಾಗಿತ್ತು. ರಿಚಾ ಘೋಷ್‌ ಅವರು 77 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ 94 ರನ್‌ಗಳನ್ನು ಬಾರಿಸಿದರು. ಆ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಲು ನೆರವು ನೀಡಿದರು. ಅಂದ ಹಾಗೆ ಈ ಇನಿಂಗ್ಸ್‌ ಮೂಲಕ ರಿಚಾ ಘೋಷ್‌ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅದರಲ್ಲಿಯೂ ವಿಶೇಷವಾಗಿ 8ನೇ ವಿಕೆಟ್‌ಗೆ ಸ್ನೇಹಾ ರಾಣಾ ಅವರ ಜೊತೆ ರಿಚಾ ಘೋಷ್‌ 53 ಎಸೆತಗಳಲ್ಲಿ 88 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದ್ದರು. ಇದು ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ಆಯಿತು.

Women's World Cup: ಬೆಲಿಂಡಾ ಕ್ಲಾರ್ಕ್‌ರ ವಿಶ್ವ ದಾಖಲೆ ಮುರಿದ ಸ್ಮೃತಿ ಮಂಧಾನಾ!

ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಎಂಟು ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎಂಬ ದಾಖಲೆಯನ್ನು ರಿಚಾ ಘೋಷ್‌ ಬರೆದಿದ್ದಾರೆ. ಆ ಮೂಲಕ ಭಾರತ ತಂಡದ ಸಹ ಆಟಗಾರ್ತಿ ಪೂಜಾ ವಸ್ತ್ರಾಕರ್‌ ಅವರನ್ನು ಹಿಂದಿಕ್ಕಿದ್ದಾರೆ. ಇವರು 2022ರ ವಿಶ್ವಕಪ್‌ ಟೂರ್ನಿಯಲ್ಲಿ 59 ಎಸೆತಗಳಲ್ಲಿ 67 ರನ್‌ಗಳನ್ನು ಕೆಳ ಕ್ರಮಾಂಕದಲ್ಲಿ ಗಳಿಸಿದ್ದರು.